ಬೆಂಗಳೂರು: ಎನ್‌ಐಎಯಿಂದ ತಲೆ ತಪ್ಪಿಸಿಕೊಂಡಿದ್ದ ಉಗ್ರ ಶಾರಿಕ್ ಕೇರಳದ ಕಾಡಿನಲ್ಲಿ ಉಗ್ರ ತರಬೇತಿ ಪಡೆದಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಹಿಂದೆ ಸಲೀಂ ಎಂಬಾತನನ್ನೂ ಸಿಸಿಬಿ ಪೊಲೀಸರು ಕೇರಳದ ಕಾಡುಗಳಲ್ಲಿ ಬಂಧಿಸಿ ಕರೆತಂದಿದ್ದರು. ಇದರೊಂದಿಗೆ, ಕೇರಳದ ಕಾಡುಗಳು ಟೆರರಿಸ್ಟ್‌ಗಳ ಅಡ್ಡೆಯಾಗುತ್ತಿದೆಯೇ ಎಂಬ ಶಂಕೆ ಮೂಡಿದೆ.
ಶಾರಿಕ್, ಮಾಝ್ ಕೂಡ ಇದೇ ಕೇರಳದ ಕಾಡುಗಳಲ್ಲಿ ತರಬೇತಿ ಪಡೆದಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ದಕ್ಷಿಣ ಭಾರತದಲ್ಲಿ ನಿರಂತರವಾಗಿ ಆಕ್ಟಿವ್ ಆಗಿರುವ ಶಂಕಿತರಿಗೆ ಕೇರಳದ ಕಾಡುಗಳು ಮೀಟಿಂಗ್ ಪಾಯಿಂಟ್ ಆಗುತ್ತಿವೆ. ಎನ್‌ಐಎ ದಾಳಿ ನಡೆಸಿದಾಗ ಶಾರಿಕ್ ಕೇರಳದಲ್ಲಿ ತಲೆತಪ್ಪಿಸಿಕೊಂಡಿದ್ದ.
ತಂದೆಯ ರಾಷ್ಟ್ರಪ್ರೇಮವನ್ನು ದ್ವೇಷಿಸುತ್ತಿದ್ದ ಶಾರಿಕ್, ಚಿಕ್ಕ ವಯಸ್ಸಿನಲ್ಲೇ ಮತಾಂಧರ ಸ್ನೇಹ ಬೆಳೆಸಿಕೊಂಡಿದ್ದ. ಜಿಹಾದ್‌ಗಾಗಿ ಸಾವನ್ನಪ್ಪಿದರೆ ಜನ್ನತ್ ಸಿಗುತ್ತದೆ ಎಂದು ಉಗ್ರ ಅಬ್ದುಲ್ ಮತೀನ್ ಈತನ ತಲೆ ತುಂಬಿಸಿದ್ದ. ಅಬ್ದುಲ್ ಮತೀನ್‌ನ ನಾಜೂಕು ಮಾತಿಗೆ ಮರುಳಾಗಿದ್ದ ಶಾರಿಕ್ ಗೋಡೆ ಬರಹಗಳನ್ನು ಬರೆದು ವಿಕೃತಿ ಮೆರೆದಿದ್ದ.
ಇತ್ತೀಚೆಗೆ ನಡೆದ ಕೋಮು ಉದ್ವಿಗ್ನತೆಯ ಘಟನೆಗಳು ಶಾರಿಕ್‌ನನ್ನು ಇನ್ನಷ್ಟು ಪ್ರಚೋದಿಸಿದ್ದವು. ನಾರ- ಇ- ತಕ್ಬೀರ್ (ಯಶಸ್ವಿಯಾಗಿ ಬಾ) ಎಂದು ಶಾರಿಕ್‌ಗೆ ಅಬ್ದುಲ್ ಮತೀನ್ ಪ್ರೇರಣೆ ನೀಡಿದ್ದ. ದೊಡ್ಡ ಸ್ಫೋಟ ನಡೆಸಲು ಮೂರು ಲೀಟರ್ ಕುಕ್ಕರ್ ಹಿಡಿದುಕೊಂಡಿದ್ದ ಶಾರಿಕ್ ಬಳಿ ಅಷ್ಟೇ ಪ್ರಮಾಣದ ಸ್ಫೋಟಕಗಳೂ ಇತ್ತು. ಆದ್ರೆ ಬ್ಯಾಟರಿಯ ಪ್ಲಸ್ ಮೈನಸ್ ಸರ್ಕ್ಯೂಟ್ ಕನ್ಪ್ಯೂಸ್ ಆಗಿದ್ದರಿಂದ ನಿಗದಿತ ಸಮಯಕ್ಕಿಂತ ಮುನ್ನವೇ ಬ್ಲಾಸ್ಟ್ ನಡೆದಿತ್ತು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಮೈಸೂರಲ್ಲಿ ಹಿಂದು ಎಂದೇ ಗುರುತಿಸಿಕೊಂಡಿದ್ದ ಶಾರಿಕ್‌ನ ಮುಸ್ಲಿಂ ಫ್ರೆಂಡ್ ಅರೆಸ್ಟ್