Site icon Vistara News

Murder Case: ಪೂಜೆಗೆಂದು ಕರೆದೊಯ್ದು ಹೆಂಡತಿಯ ಕೊಂದ ಗಂಡ; ಕೊಲೆಯಾದಳೇಕೆ ಚಿಟ್ಟೆ ಟ್ಯಾಟೂ ಚೆಲುವೆ?

ramanagara murder case

ರಾಮನಗರ: ಆಕೆ ತೋಳಿನ ಮೇಲೆ ಚಿಟ್ಟೆ ಟ್ಯಾಟೂ ಧರಿಸಿದ್ದಳು. ಅವಳ ಚೆಲುವು ಕಣ್ಮನ ಸೆಳೆಯುವಂತಿತ್ತು. ಇದೇ ಚೆಲುವೇ ಆಕೆಯ ಸಾವಿಗೆ ಕಾರಣವಾಯಿತಾ? ಮಾಗಡಿ (Magadi news) ತಾಲೂಕಿನಲ್ಲಿ ನಡೆದ ಮಹಿಳೆಯ ಕೊಲೆ (Woman murder case) ಪ್ರಕರಣವೊಂದರ ಶೋಧದಲ್ಲಿ ಪೊಲೀಸರು ಇದೀಗ ಪತ್ನಿಯನ್ನು ಕೊಲೆ ಮಾಡಿದ ಪತಿಯ (husband killed wife) ಬೆನ್ನು ಬಿದ್ದಿದ್ದಾರೆ.

ಪತ್ನಿಯನ್ನು ದೇವಸ್ಥಾನಕ್ಕೆ ಎಂದು ಕರೆದೊಯ್ದ ಪತಿ, ಆಕೆಯನ್ನು ಬೆಟ್ಟದ ಕಾಡಿನೊಳಗೆ ಕರೆದೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ. ಮಾಗಡಿ ತಾಲೂಕಿನ ಊಜಗಲ್ಲು ಬೆಟ್ಟದಲ್ಲಿ ನಿನ್ನೆ ಈ ಕರಾಳ ಕೃತ್ಯ ನಡೆದಿತ್ತು. ದಿವ್ಯಾ (32) ಗಂಡನಿಂದಲೇ ಕೊಲೆಯಾದ ಮಹಿಳೆ. ಉಮೇಶ್ ಪತ್ನಿಯನ್ನು ಹತ್ಯೆಗೈದಿರುವ ಪಾತಕಿ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ವಿಚ್ಛೇದನ ಪಡೆಯಲು ಮುಂದಾಗಿದ್ದರು. ಪತ್ನಿಯ ಸೌಂದರ್ಯದಿಂದಾಗಿ ಆಕೆಯ ಶೀಲದ ಬಗ್ಗೆ ಅನುಮಾನ ಹೊಂದಿದ್ದ ಉಮೇಶ್‌, ಆಕೆಗೆ ಈ ಕಾರಣಕ್ಕಾಗಿ ಸದಾ ಕಿರುಕುಳ ಕೊಡುತ್ತಿದ್ದ. ಇದೇ ಕಾರಣ ಉಲ್ಬಣಿಸಿ ಕಲಹ ಜೋರಾಗಿದ್ದು, ದಿವ್ಯಾ ಈ ಅನುಮಾನ ಪಿಶಾಚಿಯಿಂದ ದೂರವಾಗಲು ನಿರ್ಧರಿಸಿ ಡೈವೋರ್ಸ್‌ ಮೊರೆ ಹೋಗಿದ್ದಳು.

ದಂಪತಿ ನಿನ್ನೆ ಮಾಗಡಿ ಕೋರ್ಟ್‌ಗೆ ಹಾಜರಾಗಿದ್ದರು. ಬಳಿಕ ನಾಟಕವಾಡಿದ್ದ ಉಮೇಶ್‌, ಪತ್ನಿಯನ್ನು ಊಜಗಲ್ಲು ದೇವಸ್ಥಾನಕ್ಕೆ ಕರೆದೊಯ್ದಿದ್ದ. ಊಜಗಲ್ಲು ಬೆಟ್ಟಕ್ಕೆ ಕರೆದೊಯ್ದು, ಅಲ್ಲಿ ಪೂಜೆ ಮಾಡುವ ವೇಳೆ ದಿವ್ಯಾಳನ್ನು ಹತ್ಯೆ ಮಾಡಿದ್ದಾನೆ. ಕೊಂದು ಚೀಲೂರು ಅರಣ್ಯ ಪ್ರದೇಶದಲ್ಲಿ ಶವ ಎಸೆದು ಎಸ್ಕೇಪ್ ಆಗಿದ್ದ.

ಈ ಪ್ರಕರಣದ ಸಂಬಂಧ ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಕೊಲೆಗೆ ಸಹಕರಿಸಿದ ಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತಿ ಉಮೇಶ್ ಹಾಗೂ ಮತ್ತೊಬ್ಬ ಆರೋಪಿಗಾಗಿ ಪೊಲೀಸರ ತಲಾಶೆ ನಡೆದಿದೆ.

ಪ್ರಧಾನಿ ಮೋದಿಯನ್ನು ಟೀಕಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅವಾಚ್ಯವಾಗಿ ಟೀಕಿಸಿದ ವ್ಯಕ್ತಿಯೊಬ್ಬನನ್ನು ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಕೆಎಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ನಡೆದಿದೆ.

ಹದಿನೈದು ಜನರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ. ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದ ಎನ್ನಲಾಗಿದೆ. ಈ ಯುವಕನ ಮೇಲೆ ರೊಚ್ಚಿಗೆದ್ದ ಗುಂಪು ಹಲ್ಲೆ ಮಾಡಿ ಮೋದಿ, ಮೋದಿ ಎಂದು ಕೂಗು ಎಂದು ಬಲವಂತ ಮಾಡಿದೆ. ಆದರೆ ಯುವಕ ಇದಕ್ಕೆ ಒಪ್ಪದಿದ್ದಾಗ ಮತ್ತಷ್ಟು ಹಲ್ಲೆ ಮಾಡಿದೆ.

ಸುಮಾರು ಹದಿನೈದು ಜನರ ಯುವಕರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ. ಮಾತ್ರವಲ್ಲ, ನೀನು ಮೋದಿಗೆ ಬೈಯ್ಯುವ ಹಾಗಿಲ್ಲ, ನೀನು ಸಿದ್ದರಾಮಯ್ಯ ಫಾಲೋವರ್ ಆಗಿದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊ ಎಂದು ಎಚ್ಚರಿಸಿದೆ. ಅಲ್ಲದೆ, ಮೋದಿ ಎಂದು ಹೆಸರು ಹೇಳು ಎಂದು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸದ್ಯ ಯುವಕನನ್ನು ಉಪ್ಪಾರಪೇಟೆ ಉಪ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ‌ಘಟನೆ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಹಲ್ಲೆ ನಡೆಸಿದವರನ್ನು ಪೊಲೀಸರು ಶೋಧಿಸುತ್ತಿದ್ದಾರೆ. ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ: Viral Video: ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ

Exit mobile version