Site icon Vistara News

Physical Abuse : 10 ವರ್ಷದ ಅಪ್ರಾಪ್ತೆ ಮೇಲೆ ಎರಗಿದ ಕಾಮುಕ; ಅತ್ಯಾಚಾರದ ವೇಳೆ ಕಿರುಚಾಡಿದ್ದಕ್ಕೆ ಕೊಲೆಗೈದ ಹಂತಕ

Physical abuse

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ (Physical Abuse) ಬಂದಿದೆ. ದುರುಳನೊಬ್ಬ 10 ವರ್ಷ ವಯಸ್ಸಿನ ಅಪ್ರಾಪ್ತೆ ಮೇಲೆ ಅತ್ಯಾಚಾರಗೈದು ಕೊಲೆಗೈದಿದ್ದಾನೆ. ಅತ್ಯಾಚಾರದ ವೇಳೆ ಬಾಲಕಿ ಕಿರಿಚಾಡಿದ್ದಕ್ಕೆ ಆಕೆಯನ್ನು ಕೊಲೆಗೈದು ಕಾಮುಕ ಪರಾರಿ ಆಗಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರ ಹೊರವಲಯದ ಶೇಯೇ ಪ್ರದೇಶದಲ್ಲಿ ಘಟನೆ ನಡೆದಿದೆ.

ಬಾಲಕಿ ತಾಯಿಯ ನಿಕಟ ಸಂಬಂಧಿಯಿಂದಲೇ ಈ ಕೃತ್ಯ ನಡೆದಿದೆ. ಕಾಮುಕ ಕಳೆದ 3 ತಿಂಗಳಿಂದ ಸಂಬಂಧಿಕರ ಮನೆಯಲ್ಲಿ ವಾಸವಿದ್ದ. ಬಾಲಕಿ ಮನೆಯಿಂದ ಕೆಲವೇ ಅಂತರದಲ್ಲಿದ್ದ ಹೊಲದಲ್ಲಿ ಅತ್ಯಾಚಾರವೆಸಗಿ, ಕೊಂದಿದ್ದಾನೆ. ಅರೆಬೆತ್ತಲೆ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿ ಶವ ಕಂಡು ಬೆಚ್ಚಿಬಿದ್ದ ಸ್ಥಳೀಯರು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ನಡೆದು ಐದೇ ಗಂಟೆಗಳಲ್ಲಿ ಆರೋಪಿಯನ್ನು ಕೊಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮುಂದೆ ಆರೋಪಿ ದಿನೇಶಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಹಾಗೂ ಅಪ್ರಾಪ್ತೆಯ ಪೋಷಕರು ಬಿಹಾರ ಮೂಲದವರೆಂಬ ಮಾಹಿತಿ ಇದೆ. ಕೊಲ್ಹಾಪುರದ ಶಿರೋಳಿ ಎಂಐಡಿಸಿ ( MIDC) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case : ಟಿಡಿಪಿ ಶಾಸಕ ಬೆಂಬಲಿಗನ ಕೊಲೆಗೆ ಸ್ಕೆಚ್; ಆಂಧ್ರ ಪೊಲೀಸರಿಂದ ಕರ್ನಾಟಕ ಪೊಲೀಸ್‌ ಅರೆಸ್ಟ್‌!

ನವವಿವಾಹಿತೆಗೆ ವಿಷ ಕುಡಿಸಿದ್ದನಾ ಬಿಜೆಪಿ ಮುಖಂಡ?

ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದ ಮಹಿಳೆ ಯೂಟರ್ನ್ ಹೊಡೆದಿದ್ದಾರೆ. ಬಿಜೆಪಿ ಮುಖಂಡನೊಬ್ಬ ನವವಿವಾಹಿತೆಗೆ ವಿಷ ಕುಡಿಸಿದ ಆರೋಪ ಕೇಳಿ ಬಂದಿದೆ. ಕೀಚಕನೊಬ್ಬ ಮಹಿಳೆಯನ್ನು ಹೆದರಿಸಿ ಬೆದರಿಸಿ ಗಂಡ ಹಾಗೂ ಮಾವನ ಮೇಲೆ ದೂರು ಕೊಡಿಸಿದ್ದ ಎನ್ನಲಾಗಿದೆ.

ತನ್ನ ಮೇಲೆ ಒತ್ತಡ ಹಾಕಿ ಸಂಸಾರಕ್ಕೆ ಸಂಚಕಾರ ತಂದವರ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಪೃಥ್ವಿಸಿಂಗ್ ಹಾಗೂ ಆತನ ಮಗ ಜಶ್ವಿರ್ ಸಿಂಗ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ತನಗೆ ವಿಷ ಕುಡಿಸಿ ಆಸ್ಪತ್ರೆಗೆ ದಾಖಲಿಸಿ ಗಂಡ ಹಾಗೂ ಮಾವನ ವಿರುದ್ಧ ಹೇಳಿಕೆ ಕೊಡುವಂತೆ ಒತ್ತಡ ಹಾಕಿದ್ದರು. ಕೆಲ ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಕನ್ವಿಕಾ ಗೋಡ್ಯಾಲ್ಕರ್ ಎಂಬುವವರು ಪೃಥ್ವಿ ಸಿಂಗ್ ವಿರುದ್ಧ ಆರೋಪಿಸಿದ್ದಾರೆ.

ಈ ಹಿಂದೆ ಗಂಡ ಹಾಗೂ ಮಾವನ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ್ದೆ ಎಂದು ಕನ್ವಿಕಾ ಹೇಳಿಕೆ ನೀಡಿದ್ದರು. ಆಸ್ಪತ್ರೆಯಿಂದ ಹೊರ‌ ಬಂದು ತಿಂಗಳ ಬಳಿಕ ಯೂ ಟರ್ನ್ ಹೊಡೆದ ಕನ್ವಿಕಾ ಗೊಡ್ಯಾಳಕರ್, ಹೆದರಿಸಿ ಗಂಡ ಹಾಗೂ ಮಾವನ ವಿರುದ್ಧ ದೂರು ನೀಡುವ ಹಾಗೆ ಮಾಡಿದ್ದರು. ಬಳಿಕ ತನ್ನ ಮೇಲೆ ಪೃಥ್ವಿ ಸಿಂಗ್ ಮತ್ತು ಆತನ ಮಗ ಜಶ್ವೀರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಆರೋಪಿಸಿದ್ದಾರೆ. ತಡರಾತ್ರಿ ನ್ಯಾಯಕ್ಕಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕನ್ವಿಕಾ ‌ಮೆಟ್ಟಿಲೇರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version