Site icon Vistara News

Physical Assualt: 2 ವರ್ಷದ ಮಗುವನ್ನೇ ಲೈಂಗಿಕ ಕ್ರಿಯೆಗಾಗಿ ಮಾರಲು ಯತ್ನಿಸಿದ್ದ ದುಷ್ಟ ದಂಪತಿ ಬಂಧನ

Physical Assault

ಜಾರ್ಜಿಯಾ: ಎರಡು ವರ್ಷದ ಮಗಳನ್ನು ಲೈಂಗಿಕ ಚಟುವಟಿಕೆಗಾಗಿ (Physical Assualt) ಮಾರಾಟ ಮಾಡಲು ಯತ್ನಿಸಿದ ದುಷ್ಟ ದಂಪತಿಯನ್ನು ಅಮೆರಿಕದಲ್ಲಿ (america) ಜಾರ್ಜಿಯಾದ (Georgia) ಗ್ರೋವ್‌ಟೌನ್ ಪೊಲೀಸರು ಬಂಧಿಸಿದ್ದಾರೆ. ಆಶ್ಲೀ ಕ್ರಾಲಿ (26) ಜೇಮ್ಸ್ ಟ್ರಿಪ್ (29) ಬಂಧಿತರು.

ಕ್ರಾಲಿ ಮತ್ತು ಟ್ರಿಪ್ ತಮ್ಮ 2 ವರ್ಷದ ಮಗಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸಲು ಹಣ ಪಾವತಿಸಲು ಸಿದ್ಧರಿರುವ ಪುರುಷರನ್ನು ಹುಡುಕುತ್ತಿದ್ದರು. ಇದಕ್ಕಾಗಿ ಆನ್‌ಲೈನ್ ಚಾಟ್‌ರೂಮ್ ಅನ್ನು ಬಳಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಕ್ರಾಲಿ ಅಶ್ಲೀಲ ವಿಡಿಯೋಗಳನ್ನು ತಯಾರಿಸಿ ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಇದರಲ್ಲಿ ಕೆಲವು ವಿಡಿಯೋಗಳು ಅಂಬೆಗಾಲಿಡುವ ಮಕ್ಕಳು ಸೇರಿದಂತೆ ಅವರ ಮಕ್ಕಳನ್ನು ಒಳಗೊಂಡಿವೆ. ಟ್ರಿಪ್ ತನ್ನ ಅಪ್ರಾಪ್ತ ವಯಸ್ಸಿನ ಸಂಬಂಧಿಗಳೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕ್ರಾಲಿಯ ಅನುಮತಿಯನ್ನೂ ಪಡೆಯುತ್ತಿದ್ದನು.

ಇದನ್ನೂ ಓದಿ: Physical assualt : ಅಣ್ಣ ಕರೀತಾನೆ ಎಂದು ಹೇಳಿ ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್ ; ನಾಲ್ವರಿಂದ ಸಾಮೂಹಿಕ ಅತ್ಯಾಚಾರ

ಇವರ ಆರೈಕೆಯಲ್ಲಿದ್ದ ಎಲ್ಲಾ ಮಕ್ಕಳನ್ನು ಅವರ ಮನೆಯಿಂದ ಅಧಿಕಾರಿಗಳು ತ್ವರಿತವಾಗಿ ರಕ್ಷಣೆ ಮಾಡಿದ್ದಾರೆ. ಕ್ರಾಲಿ ವಿರುದ್ಧ ಮಕ್ಕಳ ಮೇಲೆ ಕಿರುಕುಳ ಮತ್ತು ಕಂಪ್ಯೂಟರ್ ಅಥವಾ ಎಲೆಕ್ಟ್ರಾನಿಕ್ ಪೋರ್ನೋಗ್ರಫಿ ಮತ್ತು 2007ರ ಮಕ್ಕಳ ಶೋಷಣೆ ಮತ್ತು ತಡೆಗಟ್ಟುವಿಕೆ ಕಾಯಿದೆಯನ್ನು ಉಲ್ಲಂಘಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ. ಟ್ರಿಪ್ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಸದ್ಯ ಇಬ್ಬರನ್ನೂ ಕೊಲಂಬಿಯಾ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ. ತನಿಖೆ ಮುಂದುವರಿಸಲಾಗಿದ್ದು ಹೆಚ್ಚುವರಿ ಆರೋಪಗಳನ್ನು ದಾಖಲಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯ: ಬಾಲಕಿ ಸಾವು

ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ 13 ವರ್ಷದ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ಮೃತಪಟ್ಟಿರುವ ಘಟನೆ ಕಲ್ಬುರ್ಗಿ ನಗರದ ಸಬ್ ಅರ್ಬನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲೈಂಗಿಕ ದೌರ್ಜನ್ಯದಿಂದ ತೀವ್ರ ರಕ್ತಸ್ರಾವ ಉಂಟಾಗಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಜ್ಜಿ ಅಂಗಡಿ ವ್ಯಾಪಾರಿ ಸರ್ಫರಾಜ್ (30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಮನೆಗೆ ಹೋಗಿ ಹೆದರಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ತೀವ್ರ ರಕ್ತ ಸ್ರಾವವಾಗಿ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ದಲಿತ ಸೇನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.

Exit mobile version