ಬೆಂಗಳೂರು: ಅಶ್ಲೀಲ ವಿಡಿಯೋ (obscene video) ಹಾಗೂ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲಿ ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ಆರೆಸ್ಟ್ ಆಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal revanna Case) ಅವರನ್ನು ಇಂದು ಮೊದಲು ವೈದ್ಯಕೀಯ ಪರೀಕ್ಷೆಗೆ (Medical test) ಒಳಪಡಿಸಲು ಎಸ್‌ಐಟಿ (SIT) ಮುಂದಾಗಿದೆ. ಆರೋಪಿ ತನಿಖೆಗೆ ಸಹಕರಿಸಲು ದೈಹಿಕ- ಮಾನಸಿಕವಾಗಿ ಸಿದ್ಧನಾಗಿದ್ದಾನೆಯೇ ಎಂಬುದನ್ನು ಈ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ.
ಪ್ರಕರಣದ ತನಿಖೆ ಹಾಗೂ ವಿಚಾರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಎಸ್‌ಐಟಿ ನಡೆಸಿದೆ. ಒಂದು ವೇಳೆ, ವಿಡಿಯೋದಲ್ಲಿ ಇರುವಂಥ ಕಾಮಕಾಂಡ ತಾನೇನೂ ಮಾಡಿಲ್ಲ ಎಂದು ಪ್ರಜ್ವಲ್ ಅಫಿಡವಿಟ್ ಸಲ್ಲಿಸಿದರೆ, ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ತಾನು ಅತ್ಯಾಚಾರ ಮಾಡಿಲ್ಲ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆಯೂ ಇರುವುದರಿಂದ, ಮುಂದಿನ ಹಂತದಲ್ಲಿ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆಯನ್ನು ಎಸ್‌ಐಟಿ ಮಾಡಿಸಲಿದೆ.
ನಂತರ ಹಾಸನ ಸಂಸದರ ನಿವಾಸದಲ್ಲಿ ಸಂಗ್ರಹಿಸಲಾದ ಹಾಸಿಗೆ- ಹೊದಿಕೆ ಇತ್ಯಾದಿಗಳಲ್ಲಿ ಕಂಡುಬಂದಿರುವ ಡಿಎನ್‌ಎಗೂ, ಪ್ರಜ್ವಲ್ ಡಿಎನ್‌ಎಗೂ ಮ್ಯಾಚ್ ಮಾಡಲಾಗುತ್ತದೆ. ಒಟ್ಟು ಮೂರು ಹಂತದಲ್ಲಿ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಹಿಂದೆಯೂ ಅನೇಕರಿಗೆ ಅತ್ಯಾಚಾರ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ, ಅಸಾರಾಂ ಬಾಪು ಸೇರಿದಂತೆ ಹಲವರಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.
ಹಾಗಿದ್ರೆ ಹೇಗೆ ನಡೆಯುತ್ತೆ ಪುರುಷತ್ವ ಪರೀಕ್ಷೆ?
ಇದು ಲೈಂಗಿಕ ಸಾಮರ್ಥ್ಯ ಸಾಬೀತು ಪಡಿಸುವ ಪರೀಕ್ಷೆ. ಲೈಂಗಿಕ ಕಿರುಕುಳ, ಅತ್ಯಾಚಾರ ಮುಂತಾದ ದೂರುಗಳು ಕೇಳಿ ಬಂದಾಗ ಆರೋಪಿ ಪುರುಷತ್ವ ಪರೀಕ್ಷೆ ನಡೆಸಲಾಗುತ್ತೆ. ಪ್ರಾಥಮಿಕ ಹಂತದಲ್ಲಿ ಮೂರು ರೀತಿ ಪರೀಕ್ಷೆ ನಡೆಸಲಾಗುತ್ತದೆ.
1) ಪುರುಷರ ಜನನಾಂಗ ನಿಮಿರುವಿಕೆ, ವೀರ್ಯ ವಿಶ್ಲೇಷಣೆ, ಶಿಶ್ನಕ್ಕೆ ಪೂರೈಕೆಯಾಗುವ ರಕ್ತನಾಳಗಳ ಪರೀಕ್ಷೆಯನ್ನು ಮುಖ್ಯವಾಗಿ ನಡೆಸಲಾಗುತ್ತದೆ. ಆಂಡ್ರೋಲಜಿಸ್ಟ್ ಸೇರಿದಂತೆ ನಾಲ್ವರು ತಜ್ಞ ವೈದ್ಯರ ತಂಡ ಈ ಪರೀಕ್ಷೆ ನಡೆಸುತ್ತಾರೆ.
2) ನಂತರ ವೀರ್ಯ ವಿಶ್ಲೇಷಣೆ (A Semen Analysis) ನಡೆಯುತ್ತದೆ. ಪುರುಷನ ವೀರ್ಯ ಮತ್ತು ವೀರ್ಯಾಣುಗಳ ಗುಣಲಕ್ಷಣಗಳ ಮೌಲ್ಯಮಾಪನ ನಡೆಸುವ ಪರೀಕ್ಷೆ ಇದು.
3) ಡಾಪ್ಲರ್ ಅಲ್ಟ್ರಾಸೌಂಡ್ ಪರೀಕ್ಷೆ (Penile Doppler Ultrasound) ನಡೆಯಲಿದೆ. ಆರೋಪಿಯ ಖಾಸಗಿ ಅಂಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗುತ್ತಿದೆಯೆ? ಕ್ತದ ಪ್ರಮಾಣ ಎಷ್ಟಿದೆ? ಎಂಬುದು ತಿಳಿಯುವ ಟೆಸ್ಟ್. ವಯಾಗ್ರಾದಂಥ ಮೆಡಿಸಿನ್ ಸೇವಿಸಿದರೂ ಕೂಡ ಈ ಪರೀಕ್ಷೆಯಲ್ಲಿ ಗೊತ್ತಾಗುತ್ತೆ.
4) Nocturnal Penile Tumescence (NPT) Test. ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುವ ಪರೀಕ್ಷೆ ಇದು. ಆರೋಪಿಯ ಖಾಸಗಿ ಅಂಗ ರಾತ್ರಿ ನಿದ್ರೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸುತ್ತೆ ಎಂದು ಎನ್‌ಪಿಟಿ ಪರೀಕ್ಷೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಈ ಪರೀಕ್ಷೆ ಸಾಮಾನ್ಯವಾಗಿ ಆಸ್ಪತ್ರೆಯ ನಿದ್ರಾ ಪ್ರಯೋಗಶಾಲೆಯಲ್ಲಿ ನಡೆಯುತ್ತದೆ. ಆರೋಪಿಯ ಅರಿವಿಗೆ ಬಾರದಂತೆ ನಡೆಯುವ ಪರೀಕ್ಷೆ ಇದು. ಈ ಮೂರು ಟೆಸ್ಟ್ ಮೂಲಕ ಆರೋಪಿಯ ಪುರುಷತ್ವ ಪರೀಕ್ಷೆ ನಡೆಯುತ್ತವೆ. ಈ ಟೆಸ್ಟ್‌ನ ರಿಪೋರ್ಟ್‌ಗಳು ಅತ್ಯಾಚಾರ ಪ್ರಕರಣದಲ್ಲಿ ಬಹಳ ಮುಖ್ಯವಾಗುತ್ತವೆ.
ಇದನ್ನೂ ಓದಿ: Prajwal Revanna Case: ಮೇ 31ರಂದೇ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲು ಕಾರಣವೇನು? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ