ಮಂಡ್ಯ: ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ (Road Divider) ಕಾರು ಡಿಕ್ಕಿಯಾದ (Car Accident) ಪರಿಣಾಮ ಇಬ್ಬರು ಸಾವಿಗೀಡಾಗಿ, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿರುವ ದುರ್ಘಟನೆ (Road Accident) ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ (Bangalore Mysore Highway) ಘಟಿಸಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯ ನಡುವಿನ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗ್ರಾಮದಲ್ಲಿ ಅಪಘಾತ ನಡೆದಿದೆ. ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಪುತ್ರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಬಗಲಕುಂಟೆ ನಿವಾಸಿಗಳಾದ ಕಲಾ (40), ಪುತ್ರ ದರ್ಶನ್ (21) ಮೃತಪಟ್ಟವರು.
ಕಾರಿನ ಹಿಂಬದಿಯಲ್ಲಿದ್ದ ಪುತ್ರಿ ಮೇಘನ ಹಾಗೂ ಅಳಿಯ ಮಂಜುನಾಥ್ ಅವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಮಿಮ್ಸ್ ಶವಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕ್ಷಣಗಳಿಗೆ ಅಡ್ಡಿಯಾಯ್ತೆಂದು ಪ್ರೇಯಸಿಯ ಮಗುವನ್ನು ಕೊಂದ ದುಷ್ಟ
ಬೆಂಗಳೂರು: ವಿವಾಹಿತೆ ಜತೆಗೆ ಅನೈತಿಕ ಸಂಬಂಧ ಹೊಂದಿದ್ದ ದುಷ್ಟನೊಬ್ಬ ತನ್ನ ಖಾಸಗಿ ಕ್ಷಣಗಳಿಗೆ ಮಗು (3) ಅಡ್ಡಿಯಾಗಿದ್ದಕ್ಕೆ ಕೊಂದು (Murder case) ಹಾಕಿದ್ದಾನೆ. ಮಗುವನ್ನು ಹತ್ಯೆ ಮಾಡಿದ್ದಕ್ಕೇ ಪ್ರಿಯಕರನ ವಿರುದ್ಧವೇ ಪ್ರಿಯತಮೆ ದೂರು ನೀಡಿದ್ದಾಳೆ. ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂರು ವರ್ಷದ ಅಶ್ವಿನ್ ಕೊಲೆಯಾದ ದುರ್ದೈವಿ ಮಗು. ಅಶ್ವಿನ್ ತಾಯಿ ರಮ್ಯಾ ಎಂಬಾಕೆ ನೀಡಿದ ದೂರಿನ ಮೇರೆಗೆ ಪ್ರಿಯಕರ ಮೈಕೆಲ್ ರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅವಿವಾಹಿತನಾಗಿದ್ದ ಮೈಕೆಲ್ ರಾಜ್ ಬೊಮ್ಮನಹಳ್ಳಿಯ ವಿರಾಟ್ ನಗರದ ನಿವಾಸಿ ಆಗಿದ್ದು, ಗ್ಯಾರೇಜ್ ಅಂಗಡಿಯನ್ನು ಇಟ್ಟುಕೊಂಡಿದ್ದ.
ಇದೇ ಏರಿಯಾ ಸಮೀಪದಲ್ಲಿ ರಮ್ಯ ಬಾಡಿಗೆ ಮನೆಯೊಂದರಲ್ಲಿ ವಾಸಿವಿದ್ದಳು. ರಮ್ಯಾ ಆರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದಳು. ಆದರೆ ಒಂದು ವರ್ಷದ ಹಿಂದೆ ದಂಪತಿ ಮಧ್ಯೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಪತಿಯಿಂದ ರಮ್ಯ ದೂರವಾಗಿದ್ದಳು. ಈ ವೇಳೆ ಆರೋಪಿ ಮೈಕೆಲ್ ರಾಜ್‌ನ ಪರಿಚಯವಾಗಿತ್ತು.
ಇದನ್ನೂ ಓದಿ: Fraud Case : ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್ ನಯ ವಂಚಕ; ಡಿಸಿ, ಜಡ್ಜ್ ಹೆಸರು ಬಳಸಿ ಲಕ್ಷ ಲಕ್ಷ ಲೂಟಿ
ಪರಿಚಯವು ಕ್ರಮೇಣ ಇಬ್ಬರ ಸಂಬಂಧ ಆತ್ಮೀಯತೆಗೆ ತಿರುಗಿತ್ತು. ಸ್ನೇಹವು ಪ್ರೀತಿಗೆ ತಿರುಗಿತ್ತು. ಕಳೆದ ಆರೇಳು ತಿಂಗಳಿಂದ ರಮ್ಯಾಳ ಮನೆಗೆ ಮೈಕಲ್ ಬಂದು ಹೋಗುತ್ತಿದ್ದ. ಕಳೆದ ಜುಲೈ 6ರಂದು ಮನೆಗೆ ಬಂದಾಗ ಅಶ್ವಿನ್‌ನನ್ನು ಕಂಡು ಕೋಪಗೊಂಡಿದ್ದ. ತಮ್ಮಿಬ್ಬರ ಸಂಬಂಧಕ್ಕೆ ಮಗು ಅಡ್ಡಿಯಾಗಲಿದೆ ಎಂದು ಭಾವಿಸಿ ಕೆನ್ನೆಗೆ ಹೊಡೆದು, ನಂತರ ಬಾತ್ ರೂಮಿನ ಗೋಡೆಗೆ ತಲೆಯನ್ನು ಗುದ್ದಿಸಿ ಊತ ಬರುವಂತೆ ಮಾಡಿದ್ದ.
ಇದನ್ನು ರಮ್ಯಳಿಗೆ ಹೇಳದೆ ಮಾರೆ ಮಾಚಿ ಕಾಲ್ಕಿತ್ತಿದ್ದ. ಇತ್ತ ಮಗುವಿನ ಮೇಲೆ ಹಲ್ಲೆ ಆಗಿರುವ ವಿಷಯ ರಮ್ಯಾಗೆ ತಿಳಿದಿರಲಿಲ್ಲ. ಅದೇ ದಿನ ರಾತ್ರಿ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಗು ಅಶ್ವಿನ್ ಮೃತಪಟ್ಟಿದೆ.
ಇದನ್ನೂ ಓದಿ: Dengue Fever: ರಾಜ್ಯದಲ್ಲಿ ಶುಕ್ರವಾರ 437 ಮಂದಿಗೆ ಡೆಂಗ್ಯೂ; ಸಕ್ರಿಯ ಪ್ರಕರಣಗಳ ಸಂಖ್ಯೆ 388ಕ್ಕೇರಿಕೆ!