Site icon Vistara News

Road Accident: ಸರಣಿ ಅಪಘಾತ, ಬೈಕ್ ಸವಾರ ಸಾವು; ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

hunsur road accident

ಮೈಸೂರು: ಹುಣಸೂರು ತಾಲೂಕಿನ (Mysore news) ಅರಸು ಕಲ್ಲಳ್ಳಿ ಬಳಿ ನಡೆದ ಸರಣಿ ಅಪಘಾತದಲ್ಲಿ (Road Accident) ಬೈಕ್‌ ಸವಾರರೊಬ್ಬರು (Bike rider) ಸಾವಿಗೀಡಾಗಿದ್ದಾರೆ ಎರಡು ಬಸ್, ಎರಡು ಕಾರುಗಳಿಗೆ ಜಖಂ ಆಗಿದೆ.

ಮೈಸೂರು- ಬಂಟ್ವಾಳ ಹೆದ್ದಾರಿ- 275ರ ಅರಸು ಕಲ್ಲಹಳ್ಳಿ ಗೇಟ್ ಬಳಿಯಲ್ಲಿ ಘಟನೆ ನಡೆದಿದೆ. ಮೈಸೂರು ತಾಲೂಕಿನ ಹೂಟಗಳ್ಳಿಯ ಎಸ್‌ಆರ್‌ಎಸ್ ಕಾಲೋನಿಯ ಲೇಟ್ ಭೈರಪ್ಪ ಪುತ್ರ, ಕೂಲಿ ಕಾರ್ಮಿಕ ಕರಿಯಪ್ಪ (40) ಮೃತರು. ಗ್ರಾಮದ ಹಬ್ಬ ಮುಗಿಸಿ ವಾಪಸ್ ಆಗುವ ವೇಳೆ ನಡೆದ ಅವಘಡದಲ್ಲಿ ಕರಿಯಪ್ಪ ಸ್ಥಳದಲ್ಲೇ ಸಾವಿಗೀಡಾದರು. ಸರಣಿ ಅಪಘಾತದಲ್ಲಿ ಎರಡು ಬಸ್‌ಗಳು ಹಾಗೂ ಎರಡು ಕಾರುಗಳಿಗೆ ಜಖಂ ಆಗಿದ್ದು, ಕೆಲವರಿಗೆ ತರಚಿದ ಗಾಯಗಳಾಗಿವೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿಯಾಗಿ ಪಾದಚಾರಿ ಮೃತ್ಯು, ಸ್ಥಳಿಯರಿಂದ ರಸ್ತೆ ತಡೆ

ದಾವಣಗೆರೆ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ (Car hit) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. (Davanagere news) ಚನ್ನಗಿರಿ ತಾಲೂಕಿನ ಗೆದ್ದಲಹಟ್ಟಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ರಾಜೇಶ್ (45) ಮೃತ ದುರ್ದೈವಿ.

ದಾವಣಗೆರೆ ಹಾಗೂ ಬೀರೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ರಾಜ್ಯ ಹೆದ್ದಾರಿ ಇದ್ದರೂ ಗ್ರಾಮದಲ್ಲಿ ಸ್ಪೀಡ್ ಬ್ರೇಕರ್ಸ್( ಹಂಪ್ಸ್) ಗಳನ್ನು ಹಾಕದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆಕ್ರೋಶಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಾಣಹಾನಿ ಆಗಿದೆ ಎಂದು ಸಿಟ್ಟಿಗೆದ್ದಿರುವ ಜನರು, ರಸ್ತೆ ತಡೆ ನಡೆಸಿ ಸಾವಿಗೆ ನ್ಯಾಯ ಒದಗಿಸಿ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲೇ ನೂರಾರು ಜನರ ಜಮಾವಣೆಯಾಗಿದ್ದು, ಸ್ಥಳಕ್ಕೆ ಸಂತೆಬೆನ್ನೂರು ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

ಲಾರಿ ಟಯರ್‌ ಸ್ಫೋಟ, ಬೆಂಕಿಗೆ ತುತ್ತು

ವಿಜಯನಗರ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ (divider) ಗುದ್ದಿದ ಲಾರಿ ಪಲ್ಟಿಯಾಗಿ ಬೆಂಕಿಗೆ ತುತ್ತಾಗಿ ಭಸ್ಮವಾಗಿದೆ. (Vijayanagar news) ಕೂಡ್ಲಿಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ (national highway) 50ರ ಕಮಲಾಪೂರ ಕ್ರಾಸ್ ಬಳಿ ಅಪಘಾತ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಪೇಟೆ ಕಡೆಗೆ ಬರುತ್ತಿದ್ದ ಲಾರಿಯ ಚಕ್ರಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿವೆ. ಸ್ಪೋಟವಾಗಿ ಡಿವೈಡರ್‌ಗೆ ಗುದ್ದಿದ ಪರಿಣಾಮ ಲಾರಿಗೆ ಬೆಂಕಿ ತಗುಲಿದೆ. ಅದೃಷ್ಟವಶಾತ್ ಲಾರಿ ಡ್ರೈವರ್, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಮಲಾಪುರ ಬಳಿ ಘಟನೆಯಿಂದಾಗಿ ಟ್ರಾಫಿಕ್‌ ಜಾಮ್ ಆಗಿದ್ದು, ಘಟನಾ ಸ್ಥಳಕ್ಕೆ NH ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಕಾನಾಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೆರೆಯಲ್ಲಿ ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ; ವಿಷಪ್ರಾಶನ ಶಂಕೆ

ದಾವಣಗೆರೆ: ಕೆರೆಯಲ್ಲಿ 1 ಲಕ್ಷಕ್ಕೂ ಅಧಿಕ ಮೀನುಗಳ ಮಾರಣ ಹೋಮವಾಗಿರುವ ಘಟನೆ ದಾವಣಗೆರೆ (Davanagere News) ಸಮೀಪದ ಎಲೆಬೇತೂರಿನ ಕೆರೆಯಲ್ಲಿ ನಡೆದಿದೆ. ಅಧಿಕ ಬಿಸಿಲಿನ ತಾಪಕ್ಕೆ ಮೀನುಗಳು ಮೃತಪಟ್ಟಿರಬಹುದಾ ಅಥವಾ ಹಳೇ ವೈಷಮ್ಯದಿಂದ ಯಾರಾದರೂ ಕೆರೆಗೆ ವಿಷ ಬೆರೆಸಿದ್ದರಿಂದ ಮೀನುಗಳು ಸಾವಿಗೀಡಾಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.

ಕೆರೆಯಲ್ಲಿ 1.50 ಲಕ್ಷ ಮೀನುಗಳನ್ನು ಸಾಕಲಾಗಿತ್ತು. ಅದರಲ್ಲಿ 40 ಸಾವಿರ ಮೀನು ಹಿಡಿದು ಮಾರಲಾಗಿತ್ತು. ಇನ್ನುಳಿದ ಸುಮಾರು ಲಕ್ಷಕ್ಕೂ ಅಧಿಕ ಮೀನುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಬರೋಬ್ಬರಿ 5ರಿಂದ 10 ಕೆಜಿ ಇರುವ ಮೀನುಗಳು ಮೃತಪಟ್ಟು, ಕೆರೆಯಲ್ಲಿ ತೇಲುತ್ತಿವೆ. ಸತ್ತ ಮೀನುಗಳನ್ನು ನೋಡಿ ಮೀನು ಸಾಕಾಣಿಕೆದಾರರು ಕಂಗಾಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ | Murder Case: ಪ್ರಿಯತಮನ ಜೊತೆ ಶೋಕಿಗಾಗಿ ಮನೆ ಮಾಲಕಿಯ ಕೊಲೆ ಮಾಡಿದ ಯುವತಿ ಸೆರೆ

Exit mobile version