ಬೆಂಗಳೂರು: ತಮ್ಮ ಕಾರಲ್ಲೂ ಆರಾಮಾಗಿ ಮಲಗೋ ಹಾಗಿಲ್ವಾ? ಸದ್ಯ ಹೀಗೊಂದು ಪ್ರಶ್ನೆ ಬೆಂಗಳೂರಿಗರನ್ನು ಕಾಡುತ್ತಿದೆ. ಯಾಕೆಂದರೆ ಕಾರಿನಲ್ಲಿ ಮಲಗಿದ್ದವನನ್ನು ಎಚ್ಚರಿಸಿ ಪೊಲೀಸರು ಸುಲಿಗೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ (Robbery Case).
ಸದ್ಯ ತಲಘಟ್ಟಪುರ ಪೊಲೀಸರ ಮೇಲೆ ಇಂತಹ ಗಂಭೀರ ಆರೋಪ ಕೇಳಿ ಬಂದಿದ್ದು, ತನ್ನ ಕಾರು ಪರಿಶೀಲಿಸಿ ಸುಲಿಗೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಏನಿದು ಪ್ರಕರಣ?
ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಕಾರು ನಿಲ್ಲಿಸಿದ ವ್ಯಕ್ತಿಯೊಬ್ಬರು ಅದರಲ್ಲಿ ಮಲಗಿದ್ದರು. ಈ ವೇಳೆ ಕಾರು ತಪಾಸಣೆ ನಡೆಸಬೇಕು ಎಂದು ಪೊಲೀಸ್ ಸಿಬ್ಬಂದಿ ಮಹಾದೇವ್ ನಾಯಕ್ ಹಾಗೂ ಅಂಜನಪ್ಪ ಆ ವ್ಯಕ್ತಿಯನ್ನು ಏಬ್ಬಿಸಿದ್ದರು. ʼʼಬಳಿಕ ಕಾರು ಪರಿಶೀಲಿಸದಾಗ ಇ ಸಿಗರೇಟ್(ವೇಫರ್) ಕಂಡು ಬಂದಿತ್ತು. ಇ ಸಿಗರೇಟು ಇಟ್ಟುಕೊಂಡರೆ ಒಂದು ಲಕ್ಷ ರೂ. ದಂಡ ಕಟ್ಟಬೇಕು ಎಂದು ಪೊಲೀಸ್ ಸಿಬ್ಬಂದಿ ಮಹಾದೇವ್ ನಾಯಕ್ ಹಾಗೂ ಅಂಜನಪ್ಪ ಹೇಳಿದ್ದರುʼʼ ಎಂದು ವ್ಯಕ್ತಿ ಆರೋಪಿಸಿದ್ದಾರೆ.
ʼʼಸ್ಥಳದಲ್ಲೇ 50 ಸಾವಿರ ರೂ. ಕಟ್ಟಿದ್ರೆ ಬಿಟ್ಟು ಬಿಡುತ್ತೇವೆ ಎಂದು ಸಿಬ್ಬಂದಿ ಹೇಳಿದರು. ಸಾಧ್ಯವಿಲ್ಲ ಎಂದಾಗ 50 ರೂ.ಯಿಂದ 10 ಸಾವಿರ ರೂ.ಗೆ ಪೊಲೀಸ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ. ಸದ್ಯ ಕೈಯಲ್ಲಿ ಹಣ ಇಲ್ಲವೆಂದು ಹಣ ಕಟ್ಟಲು ನಿರಾಕರಿಸಿದ್ದೆʼʼ ಎಂದು ಅವರು ಹೇಳಿದ್ದಾರೆ.
ನಂತರ ಪರಿಚಿತರ ಬಳಿಯಿಂದ ಹಣ ಹಾಕಿಸಿಕೊಳ್ಳುವಂತೆಯೂ ಪೊಲೀಸರು ಸಲಹೆ ನೀಡಿದ್ದರಂತೆ. ಈ ವೇಳೆ ಅಂಜನಪ್ಪ ಮತ್ತು ಮಹಾದೇವ್ ನಾಯಕ್ ಮಾತನಾಡಿರುವ ಆಡಿಯೋ ಲಭ್ಯವಾಗಿದೆ. ಸಿದ್ದರಾಜು ಎಂಬುವರೊಂದಿಗೆ ಮಾತನಾಡಿದ್ದ ಪೊಲೀಸರು ಕೊನೆಗೆ ಸದ್ಯ ಐದು ಸಾವಿರ ರೂ. ಕೊಡಿ ಉಳಿದ ಐದು ಸಾವಿರ ರೂ. ಮತ್ತೆ ಪಾವತಿಸುವಂತೆ ಹೇಳಿದ್ದರು. ʼʼಕೊನೆಗೂ ಒಂದು ಸಾವಿರ ರೂ. ಮತ್ತು ಇ ಸಿಗರೇಟ್ ತೆಗೆದುಕೊಂಡ ಪೊಲೀಸರು ಹೊರಟು ಹೋಗಿದ್ದಾರೆ. ಜತೆಗೆ ಸಂಬಳ ಬಂದ ಮೇಲೆ ಹಣ ಕಳಿಸುವಂತೆ ಫೋನ್ ನಂಬರ್ ಕೊಟ್ಟು ಕಳಿಸಿದ್ದಾರೆʼʼ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Assault Case : ಆಫೀಸ್‌ನಲ್ಲಿ ಟಾರ್ಚರ್ ಕೊಟ್ಟ ಮೇಲಾಧಿಕಾರಿಗೆ ಸುಪಾರಿ ಕೊಟ್ಟು ಹೊಡೆಸಿದ್ರು ಸಿಬ್ಬಂದಿ!
ನೀರು ಕೇಳುವ ನೆಪದಲ್ಲಿ ದರೋಡೆ
ತುಮಕೂರು: ಪಿಸ್ತೂಲ್‌ನಿಂದ ಫೈರ್ ಮಾಡಿ ಸುಲಿಗೆಗೆ ಯತ್ನಿಸಿದ ಜಾರ್ಖಂಡ್ ಮೂಲದ ಇಬ್ಬರು ಆರೋಪಿಗಳನ್ನು (Robbery Case) ಪೊಲೀಸರು ಬಂಧಿಸಿದ್ದಾರೆ. ಏಜಾಸ್ ಮಿರ್ದಹ (30), ಸಹಿಬುಲ್ ಅನ್ಸಾರಿ (30) ಬಂಧಿತ ಆರೋಪಿಗಳು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೆಹಳ್ಳಿ ಗ್ರಾಮದಲ್ಲಿ ಗಂಗಣ್ಣ ಎಂಬುವರ ತೋಟದ ಮನೆಯಲ್ಲಿ ಸುಲಿಗೆಗೆ ಮುಂದಾಗಿದ್ದರು. ಕಳೆದ ಮಾ. 26ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡಿಯಲು ನೀರು ಕೇಳುವ ನೆಪದಲ್ಲಿ ಎಂಟ್ರಿ ಕೊಟ್ಟಿದ್ದರು.
ನೀರು ತರಲು ಹೋದಾಗ ಮನೆಯೊಳಗೆ ನುಗ್ಗಿ, ಹಣ ದೋಚಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳನ್ನು ಹಿಡಿಯಲು ಹೋದ ಮನೆ ಮಾಲೀಕ ಗಂಗಣ್ಣನ ಮೇಲೆ ಪಿಸ್ತೂಲ್‌ನಿಂದ ಫೈರ್ ಮಾಡಿ, ಎಸ್ಕೇಪ್ ಆಗಿದ್ದರು. ಈ ವೇಳೆ ಗಂಗಣ್ಣ ಕಾಲಿಗೆ ಪೆಟ್ಟಾಗಿತ್ತು. ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದ ಕುಣಿಗಲ್ ಪೊಲೀಸರು, ದೂರು ದಾಖಲಿಸಿಕೊಂಡು ತನಿಖೆಗಿಳಿದಿದ್ದರು. ಸುಲಿಗೆ ಮಾಡಲು ಯತ್ನಿಸಿದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.