Robbery Case: ಕಾರು ತಪಾಸಣೆ ನೆಪದಲ್ಲಿ ಸುಲಿಗೆ; ಪೊಲೀಸರ ವಿರುದ್ಧವೇ ಕೇಳಿ ಬಂತು ಗಂಭೀರ ಆರೋಪ - Vistara News

ಕ್ರೈಂ

Robbery Case: ಕಾರು ತಪಾಸಣೆ ನೆಪದಲ್ಲಿ ಸುಲಿಗೆ; ಪೊಲೀಸರ ವಿರುದ್ಧವೇ ಕೇಳಿ ಬಂತು ಗಂಭೀರ ಆರೋಪ

Robbery Case: ಕಾರಿನಲ್ಲಿ ಮಲಗಿದ್ದವನನ್ನು ಎಚ್ಚರಿಸಿ ಪೊಲೀಸರು ಸುಲಿಗೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ತಲಘಟ್ಟಪುರ ಪೊಲೀಸರ ಮೇಲೆ ಇಂತಹ ಗಂಭೀರ ಆರೋಪ ಕೇಳಿ ಬಂದಿದ್ದು, ತನ್ನ ಕಾರು ಪರಿಶೀಲಿಸಿ ಸುಲಿಗೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

VISTARANEWS.COM


on

Robbery Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತಮ್ಮ ಕಾರಲ್ಲೂ ಆರಾಮಾಗಿ ಮಲಗೋ ಹಾಗಿಲ್ವಾ? ಸದ್ಯ ಹೀಗೊಂದು ಪ್ರಶ್ನೆ ಬೆಂಗಳೂರಿಗರನ್ನು ಕಾಡುತ್ತಿದೆ. ಯಾಕೆಂದರೆ ಕಾರಿನಲ್ಲಿ ಮಲಗಿದ್ದವನನ್ನು ಎಚ್ಚರಿಸಿ ಪೊಲೀಸರು ಸುಲಿಗೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ (Robbery Case).

ಸದ್ಯ ತಲಘಟ್ಟಪುರ ಪೊಲೀಸರ ಮೇಲೆ ಇಂತಹ ಗಂಭೀರ ಆರೋಪ ಕೇಳಿ ಬಂದಿದ್ದು, ತನ್ನ ಕಾರು ಪರಿಶೀಲಿಸಿ ಸುಲಿಗೆ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ದೂರಿದ್ದಾರೆ. ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಏನಿದು ಪ್ರಕರಣ?

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಕಾರು ನಿಲ್ಲಿಸಿದ ವ್ಯಕ್ತಿಯೊಬ್ಬರು ಅದರಲ್ಲಿ ಮಲಗಿದ್ದರು. ಈ ವೇಳೆ ಕಾರು ತಪಾಸಣೆ ನಡೆಸಬೇಕು ಎಂದು ಪೊಲೀಸ್ ಸಿಬ್ಬಂದಿ ಮಹಾದೇವ್ ನಾಯಕ್ ಹಾಗೂ ಅಂಜನಪ್ಪ ಆ ವ್ಯಕ್ತಿಯನ್ನು ಏಬ್ಬಿಸಿದ್ದರು. ʼʼಬಳಿಕ ಕಾರು ಪರಿಶೀಲಿಸದಾಗ ಇ ಸಿಗರೇಟ್(ವೇಫರ್) ಕಂಡು ಬಂದಿತ್ತು. ಇ ಸಿಗರೇಟು ಇಟ್ಟುಕೊಂಡರೆ ಒಂದು ಲಕ್ಷ ರೂ. ದಂಡ ಕಟ್ಟಬೇಕು ಎಂದು ಪೊಲೀಸ್ ಸಿಬ್ಬಂದಿ ಮಹಾದೇವ್ ನಾಯಕ್ ಹಾಗೂ ಅಂಜನಪ್ಪ ಹೇಳಿದ್ದರುʼʼ ಎಂದು ವ್ಯಕ್ತಿ ಆರೋಪಿಸಿದ್ದಾರೆ.

ʼʼಸ್ಥಳದಲ್ಲೇ 50 ಸಾವಿರ ರೂ. ಕಟ್ಟಿದ್ರೆ ಬಿಟ್ಟು ಬಿಡುತ್ತೇವೆ ಎಂದು ಸಿಬ್ಬಂದಿ ಹೇಳಿದರು. ಸಾಧ್ಯವಿಲ್ಲ ಎಂದಾಗ 50 ರೂ.ಯಿಂದ 10 ಸಾವಿರ ರೂ.ಗೆ ಪೊಲೀಸ್ ಸಿಬ್ಬಂದಿ ಬೇಡಿಕೆ ಇಟ್ಟಿದ್ದಾರೆ. ಸದ್ಯ ಕೈಯಲ್ಲಿ ಹಣ ಇಲ್ಲವೆಂದು ಹಣ ಕಟ್ಟಲು ನಿರಾಕರಿಸಿದ್ದೆʼʼ ಎಂದು ಅವರು ಹೇಳಿದ್ದಾರೆ.

ನಂತರ ಪರಿಚಿತರ ಬಳಿಯಿಂದ ಹಣ ಹಾಕಿಸಿಕೊಳ್ಳುವಂತೆಯೂ ಪೊಲೀಸರು ಸಲಹೆ ನೀಡಿದ್ದರಂತೆ. ಈ ವೇಳೆ ಅಂಜನಪ್ಪ ಮತ್ತು ಮಹಾದೇವ್ ನಾಯಕ್ ಮಾತನಾಡಿರುವ ಆಡಿಯೋ ಲಭ್ಯವಾಗಿದೆ. ಸಿದ್ದರಾಜು ಎಂಬುವರೊಂದಿಗೆ ಮಾತನಾಡಿದ್ದ ಪೊಲೀಸರು ಕೊನೆಗೆ ಸದ್ಯ ಐದು ಸಾವಿರ ರೂ. ಕೊಡಿ ಉಳಿದ ಐದು ಸಾವಿರ ರೂ. ಮತ್ತೆ ಪಾವತಿಸುವಂತೆ ಹೇಳಿದ್ದರು. ʼʼಕೊನೆಗೂ ಒಂದು ಸಾವಿರ ರೂ. ಮತ್ತು ಇ ಸಿಗರೇಟ್ ತೆಗೆದುಕೊಂಡ ಪೊಲೀಸರು ಹೊರಟು ಹೋಗಿದ್ದಾರೆ. ಜತೆಗೆ ಸಂಬಳ ಬಂದ ಮೇಲೆ ಹಣ ಕಳಿಸುವಂತೆ ಫೋನ್‌ ನಂಬರ್ ಕೊಟ್ಟು ಕಳಿಸಿದ್ದಾರೆʼʼ ಎಂದು ವ್ಯಕ್ತಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Assault Case : ಆಫೀಸ್‌ನಲ್ಲಿ ಟಾರ್ಚರ್‌ ಕೊಟ್ಟ ಮೇಲಾಧಿಕಾರಿಗೆ ಸುಪಾರಿ ಕೊಟ್ಟು ಹೊಡೆಸಿದ್ರು ಸಿಬ್ಬಂದಿ!

ನೀರು ಕೇಳುವ ನೆಪದಲ್ಲಿ ದರೋಡೆ

ತುಮಕೂರು: ಪಿಸ್ತೂಲ್‌ನಿಂದ ಫೈರ್ ಮಾಡಿ ಸುಲಿಗೆಗೆ ಯತ್ನಿಸಿದ ಜಾರ್ಖಂಡ್ ಮೂಲದ ಇಬ್ಬರು ಆರೋಪಿಗಳನ್ನು (Robbery Case) ಪೊಲೀಸರು ಬಂಧಿಸಿದ್ದಾರೆ. ಏಜಾಸ್ ಮಿರ್ದಹ (30), ಸಹಿಬುಲ್ ಅನ್ಸಾರಿ (30) ಬಂಧಿತ ಆರೋಪಿಗಳು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೆಹಳ್ಳಿ ಗ್ರಾಮದಲ್ಲಿ ಗಂಗಣ್ಣ ಎಂಬುವರ ತೋಟದ ಮನೆಯಲ್ಲಿ ಸುಲಿಗೆಗೆ ಮುಂದಾಗಿದ್ದರು. ಕಳೆದ ಮಾ. 26ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಡಿಯಲು ನೀರು ಕೇಳುವ ನೆಪದಲ್ಲಿ ಎಂಟ್ರಿ ಕೊಟ್ಟಿದ್ದರು.

ನೀರು ತರಲು ಹೋದಾಗ ಮನೆಯೊಳಗೆ ನುಗ್ಗಿ, ಹಣ ದೋಚಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳನ್ನು ಹಿಡಿಯಲು ಹೋದ ಮನೆ ಮಾಲೀಕ ಗಂಗಣ್ಣನ ಮೇಲೆ ಪಿಸ್ತೂಲ್‌ನಿಂದ ಫೈರ್ ಮಾಡಿ, ಎಸ್ಕೇಪ್ ಆಗಿದ್ದರು. ಈ ವೇಳೆ ಗಂಗಣ್ಣ ಕಾಲಿಗೆ ಪೆಟ್ಟಾಗಿತ್ತು. ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದ ಕುಣಿಗಲ್ ಪೊಲೀಸರು, ದೂರು ದಾಖಲಿಸಿಕೊಂಡು ತನಿಖೆಗಿಳಿದಿದ್ದರು. ಸುಲಿಗೆ ಮಾಡಲು ಯತ್ನಿಸಿದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Pavithra gowda: ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ; ಆ.22ಕ್ಕೆ ವಿಚಾರಣೆ

Actor Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ಆ.28ರವರೆಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಸ್ತರಿಸಿತ್ತು. ಜೈಲು ಸೇರಿದ ಬರೋಬ್ಬರಿ 72 ದಿನಗಳ ನಂತರ ಇದೀಗ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಪವಿತ್ರಾ ಗೌಡ, ಬರೋಬ್ಬರಿ 72 ದಿನಗಳ ನಂತರ ಇದೀಗ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಕೋರಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​ಗೆ ಪವಿತ್ರಾ ಗೌಡ (Pavithra gowda) ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ಆ.22ಕ್ಕೆ ನಡೆಯಲಿದೆ.

ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್, ಆಗಸ್ಟ್ 22ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಪವಿತ್ರಾ ಗೌಡ ಜತೆ ಮತ್ತೊಬ್ಬ ಆರೋಪಿ ಅನುಕುಮಾರ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್‌ಗೆ (Actor Darshan) ಆ.28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ‌ ಮುಂದುವರಿಸುವಂತೆ ಪೊಲೀಸರು ರಿಮ್ಯಾಂಡ್ ಅರ್ಜಿ‌ ಸಲ್ಲಿಸಿದ್ದರು. ಹೀಗಾಗಿ ಆರೋಪಿಗಳಿಗೆ 24ನೇ ಎಸಿಎಂಎಂ ನ್ಯಾಯಾಲಯದ ಇನ್‌ಚಾರ್ಜ್ ಕೋರ್ಟ್‌, ನ್ಯಾಯಾಂಗ ಬಂಧನವನ್ನು ಆ.14ರಂದು ವಿಸ್ತರಿಸಿತ್ತು

ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ 13 ಹಾಗೂ ತುಮಕೂರು ಜೈಲಿನಿಂದ 4 ಆರೋಪಿಗಳನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಮುಂದೆ ಹಾಜರು ಪಡಿಸಲಾಗಿತ್ತು. ಆದರೆ, ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದರಿಂದ ದರ್ಶನ್ ಗ್ಯಾಂಗ್‌ಗೆ ಸೆರೆವಾಸ ಮುಂದುವರಿದಿದೆ.

ಇದನ್ನೂ ಓದಿ | Actor Darshan: ನಟ ದರ್ಶನ್‌ಗೆ ಮನೆಯೂಟ ನಿರಾಕರಿಸಿದ ಜೈಲಾಧಿಕಾರಿಗಳು; ಕೋರ್ಟ್‌ಗೆ ವರದಿ

ಪಿತ್ರಾರ್ಜಿತ ಆಸ್ತಿಗಾಗಿ ತಾರಕಕ್ಕೇರಿದ ಗಲಾಟೆ; ವ್ಯಕ್ತಿಯ ಕೊಲೆಯಲ್ಲಿ ಅಂತ್ಯ

murder case
murder case

ಚಿಕ್ಕಬಳ್ಳಾಪುರ: ಪಿತ್ರಾರ್ಜಿತ ಆಸ್ತಿಗಾಗಿ ದಾಯಾದಿಗಳ ನಡುವಿನ ಗಲಾಟೆಯೂ ತಾರಕಕ್ಕೇರಿದ್ದು ವ್ಯಕ್ತಿಯ ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಆಸ್ತಿಗಾಗಿ ತಮ್ಮನ ಮಕ್ಕಳಿಂದಲೇ ಅಣ್ಣನ ಕೊಲೆಯಾಗಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ನಡುವನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ನಂಜುಂಡಯ್ಯ (55) ಗಲಾಟೆಯಲ್ಲಿ ಕೊಲೆಯಾದವರು. ಕಲ್ಲು ದೊಣ್ಣೆಗಳಿಂದ ಬಡಿದಾಟದಲ್ಲಿ ತೀವ್ರ ಗಾಯಗೊಂಡಿದ್ದ ನಂಜುಂಡಯ್ಯರನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಂಜುಂಡಯ್ಯ ಮೃತಪಟ್ಟಿದ್ದಾರೆ.

ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಡುವನಹಳ್ಳಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Road Accident : ಸರ್ಜಾಪುರದಲ್ಲಿ ಎದೆ ಝುಲ್‌ ಎನ್ನುವ ಡೆಡ್ಲಿ ಆ್ಯಕ್ಸಿಡೆಂಟ್‌; ಬೈಕ್‌ ಸವಾರ ಬದುಕಿದ್ದೆ ಪವಾಡ

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮಂಡ್ಯದ ಮೊಗರಹಳ್ಳಿ ಬಳಿ ಘಟನೆ ನಡೆದಿದೆ. ಮಂಟಿ ಗ್ರಾಮದ ಅನಿಲ್ (28) ಮೃತ ದುರ್ದೈವಿ. ಮೊಗರಹಳ್ಳಿ ಗ್ರಾಮದ ಸ್ಮಶಾನದ ಬಳಿ ಶವ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ನೇತಾಡುತ್ತಿದ್ದ ಶವ ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರೆಂಟ್‌ ಶಾಕ್‌ಗೆ ಯುವಕ ಬಲಿ

ಕೃಷಿ ಚಟುವಟಿಕೆಯ ವೇಳೆ ಆಕಸ್ಮಿಕ ವಿದ್ಯುತ್‌ ಸ್ಪರ್ಶಿಸಿ ಯುವಕನೊರ್ವ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ‌ ತಾಂವಶಿ ಗ್ರಾಮದಲ್ಲಿ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ದ್ರಾಕ್ಷಿ ತೋಟದಲ್ಲಿ ಪಂಪ್ ಸೆಟ್ ಶುರು ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. ಸಂಗಪ್ಪ ನಾನಪ್ಪ ತಳವಾರ (28) ಮೃತ ದುರ್ದೈವಿ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿದೇಶ

Death Penalty: ಈ 7 ದೇಶಗಳಲ್ಲಿ ಅತ್ಯಾಚಾರ ನಡೆಸಿದರೆ ಮರಣ ದಂಡನೆಯೇ ಶಿಕ್ಷೆ!

ಅತ್ಯಾಚಾರವನ್ನು ಗಂಭೀರ ಪ್ರಕರಣವಾಗಿ ಪರಿಗಣಿಸಲು ದೇಶಾದ್ಯಂತ ಒತ್ತಾಯ ಕೇಳಿ ಬರುತ್ತಲೇ ಇದೆ. ಅದರಲ್ಲೂ ಅಪರಾಧಿಗಳಿಗೆ ಯಾವುದೇ ಮುಲಾಜಿಲ್ಲದೆ ಮರಣದಂಡನೆ ವಿಧಿಸಬೇಕು ಎನ್ನುವ ವರ್ಗವೇ ಇದೆ. ಭಾರತದಲ್ಲಿ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆಯನ್ನು(Death Penalty ) ವಿಧಿಸಲಾಗುತ್ತದೆ. ಆದರೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಅತ್ಯಾಚಾರ ಆರೋಪಿಗಳಿಗೆ ಮರಣದಂಡನೆಯನ್ನೇ ವಿಧಿಸಲಾಗುತ್ತದೆ.

VISTARANEWS.COM


on

By

Death Penalty
Koo

ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು (Physical Abuse) ಹೆಚ್ಚಾಗಿದ್ದರೂ ಆರೋಪಿಗಳಿಗೆ ಶಿಕ್ಷೆ ನೀಡುವಾಗ ಸಾಕಷ್ಟು ವಿಳಂಬವಾಗುತ್ತಿದೆ. ಇಂಥ ಘೋರ ಕೃತ್ಯಕ್ಕೆ ನಮ್ಮಲ್ಲಿ ಮರಣ ದಂಡನೆ ಶಿಕ್ಷೆ ಆಗುವುದೇ ಅಪರೂಪ. ಶಿಕ್ಷೆಯಿಂದ ಪಾರಾಗುವವರೇ ಹೆಚ್ಚು. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಮರಣದಂಡನೆ (Death Penalty) ವಿಧಿಸಲಾಗುತ್ತದೆ. ಆದರೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಅತ್ಯಾಚಾರ ಆರೋಪಿಗಳಿಗೆ (sexualy abuse case) ಮರಣದಂಡನೆಯನ್ನೇ ವಿಧಿಸಲಾಗುತ್ತದೆ.

ಭಾರತೀಯ ನ್ಯಾಯಾಲಯಗಳು ಮರಣದಂಡನೆಯನ್ನು ನೀಡುವಾಗ ಅಪರೂಪದ ಸಂದರ್ಭಗಳ ನಿಯಮವನ್ನು ಅನ್ವಯಿಸುತ್ತವೆ. 2012ರ ಡಿಸೆಂಬರ್‌ನಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು ನಿರ್ಭಯ ಪ್ರಕರಣದಲ್ಲಿ ಅವರ ಮೇಲೆ ನಡೆದ ಮಾರಣಾಂತಿಕ ಸಾಮೂಹಿಕ ಅತ್ಯಾಚಾರದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿತು. ಈ ಅತ್ಯಾಚಾರ ಪ್ರಕರಣ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದ ಅತ್ಯಾಚಾರ ಕಾನೂನುಗಳನ್ನು ಆಮೂಲಾಗ್ರವಾಗಿ ಮರುಪರಿಶೀಲಿಸುವಂತೆ ಮಾಡಿತು.

ಆದರೆ ವಿಶ್ವದ ಏಳು ರಾಷ್ಟ್ರಗಳಲ್ಲಿ ಅತ್ಯಾಚಾರಕ್ಕೆ ಮರಣದಂಡನೆಯನ್ನೇ ಶಿಕ್ಷೆಯಾಗಿ ನೀಡಲಾಗುತ್ತದೆ. ಅವುಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.


ಸೌದಿ ಅರೇಬಿಯಾ

ಸರಣಿ ಅತ್ಯಾಚಾರ ಪ್ರಕರಣಗಳಲ್ಲಿ ಸೌದಿ ಅರೇಬಿಯಾದಲ್ಲಿ ಅತ್ಯಾಚಾರಕ್ಕೆ ಹದ್ ಅಥವಾ ತಝೀರ್ ಹೆಸರಿನಲ್ಲಿ ಮರಣದಂಡನೆಯನ್ನು ವಿಧಿಸಲಾಗುತ್ತದೆ.

Death Penalty
Death Penalty


ಬಾಂಗ್ಲಾದೇಶ

ಅತ್ಯಾಚಾರಕ್ಕೆ ಕಡ್ಡಾಯ ಮರಣದಂಡನೆಯನ್ನು ವಿಧಿಸಲು ಬಾಂಗ್ಲಾದೇಶದಲ್ಲಿ ಸುಪ್ರೀಂ ಕೋರ್ಟ್ 2015ರಲ್ಲಿ ತೀರ್ಪು ನೀಡಿತು. ಆದರೆ ಇಲ್ಲಿ ಮರಣದಂಡನೆಯು ಜೀವಾವಧಿ ಶಿಕ್ಷೆಯ ಜೊತೆಗೆ ಒಂದು ಆಯ್ಕೆಯಾಗಿ ಪರಿಗಣಿಸಬಹುದಾಗಿದೆ. ಇದು ಅಪರಾಧದ ತೀವ್ರತೆಯನ್ನು ಅವಲಂಬಿಸಿರುತ್ತದೆ.


ಜಪಾನ್

ದರೋಡೆ, ಅತ್ಯಾಚಾರದ ಅಪರಾಧಕ್ಕೆ ಇಪ್ಪತ್ತು ವರ್ಷಗಳ ಕಠಿಣ ಶಿಕ್ಷೆ ಅಥವಾ ಮರಣದಂಡನೆಯನ್ನು ವಿಧಿಸಲಾಗುತ್ತದೆ. ಮಾರಣಾಂತಿಕ ಅತ್ಯಾಚಾರವಾಗಿದ್ದರೆ ಮರಣದಂಡನೆಯೇ ಶಿಕ್ಷೆಯಾಗಿದೆ.


ಇರಾನ್

ಇಸ್ಲಾಮಿಕ್ ದಂಡ ಸಂಹಿತೆಯ ಆರ್ಟಿಕಲ್ 224ರ ಅಡಿಯಲ್ಲಿ ಬಲವಂತದಿಂದ ಅತ್ಯಾಚಾರ ನಡೆಸಿದ್ದಕ್ಕೆ ಮಾತ್ರವಲ್ಲ, ವ್ಯಭಿಚಾರ ನಡೆಸಿದರೂ ಮರಣದಂಡನೆಗೆ ಗುರಿಯಾಗಬೇಕಾಗುತ್ತದೆ.


ಪಾಕಿಸ್ತಾನ

ಸಾಮೂಹಿಕ ಅತ್ಯಾಚಾರ, ಮಕ್ಕಳಿಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಮರಣದಂಡನೆ ವಿಧಿಸಲಾಗುತ್ತದೆ. ಮಹಿಳೆಯ ಮೇಲೆ ಹಲ್ಲೆ ಮತ್ತು ಉದ್ದೇಶಪೂರ್ವಕವಾಗಿ ಆಕೆಯ ದೇಹವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರೆ ಮರಣದಂಡನೆ ಶಿಕ್ಷೆ ನೀಡಲಾಗುತ್ತದೆ. 16 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರಕ್ಕೆ ಮರಣದಂಡನೆಯೇ ಶಿಕ್ಷೆಯಾಗಿದೆ.

ಇದನ್ನೂ ಓದಿ: Physical abuse: ಐದು ದಿನಗಳಿಂದ ನಿರಂತರ ಗ್ಯಾಂಗ್‌ರೇಪ್‌; ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಬೆಲ್ಜಿಯಂ ಮಹಿಳೆ ರಸ್ತೆ ಬದಿಯಲ್ಲಿ ಪತ್ತೆ


ಕ್ಯೂಬಾ

ಗಂಭೀರವಾದ ಗಾಯಕ್ಕೆ ಕಾರಣವಾಗುವ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸಲಾಗುತ್ತದೆ. 12 ವರ್ಷದೊಳಗಿನ ಮಗುವಿನ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ನಿರ್ದಾಕ್ಷಿಣ್ಯವಾಗಿ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ.


ಯುನೈಟೆಡ್ ಸ್ಟೇಟ್ಸ್

ಲೂಯಿಸಿಯಾನ ಮತ್ತು ಫ್ಲೋರಿಡಾದಂತಹ ಅಮೆರಿಕದ ಕೆಲವು ರಾಜ್ಯಗಳು ಮಕ್ಕಳ ಅತ್ಯಾಚಾರ ಪ್ರಕರಣಗಳಲ್ಲಿ ಮರಣದಂಡನೆಯನ್ನು ವಿಧಿಸುತ್ತವೆ.

Continue Reading

ಪ್ರಮುಖ ಸುದ್ದಿ

Hoax Bomb Threat: ವೈಟ್ ಫೀಲ್ಡ್‌ನ ಮಾಲ್ ಸೇರಿ‌ ಬೆಂಗಳೂರಿನ ಹಲವು ಮಾಲ್‌ಗಳಿಗೆ ಬಾಂಬ್ ಬೆದರಿಕೆ!

Hoax Bomb Threat: ಬೆಂಗಳೂರಿನ ಮಾಲ್‌ಗೆ ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿದ್ದು, ನೀವು ಯಾರೂ ಬದುಕಲು ಅರ್ಹರಲ್ಲ. ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತೆ ಎಂದು ಸಂದೇಶ ಕಳುಹಿಸಲಾಗಿದೆ.

VISTARANEWS.COM


on

Hoax bomb threat
Koo

ಬೆಂಗಳೂರು: ಮುಂಬೈ, ನೋಯ್ಡಾ, ಗುರುಗ್ರಾಮ, ಚೆನ್ನೈ ಸೇರಿ ದೇಶದ ವಿವಿಧ ನಗರಗಳ ಮಾಲ್‌, ಆಸ್ಪತ್ರಗಳಿಗೆ ಬಾಂಬ್‌ ಬೆದರಿಕೆ ಬಂದ ಬೆನ್ನಲ್ಲೇ ನಗರದ ವೈಟ್‌ಫೀಲ್ಡ್‌ನ ಮಾಲ್ ಸೇರಿ ಹಲವು ಮಾಲ್‌ಗಳಿಗೆ ಸೋಮವಾರ ಬಾಂಬ್ ಬೆದರಿಕೆ (Hoax Bomb Threat) ಸಂದೇಶ ಬಂದಿದೆ. ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಬಂದಿದ್ದು, ನೀವು ಯಾರೂ ಬದುಕಲು ಅರ್ಹರಲ್ಲ. ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆ ಸ್ಫೋಟದ ಬೆನ್ನಲ್ಲೇ ಮಾಲ್‌ಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿರುವುದರಿಂದ ಆತಂಕ ಮೂಡಿಸಿದೆ. “ಕಟ್ಟಡದ ಒಳಗೆ ಬಾಂಬ್ ಇದೆ. ಈ ಕಟ್ಟಡದ ಒಳಗಿರುವ ಎಲ್ಲರ ಜೀವ ರಕ್ತದ ಮಡುವಿನಲ್ಲಿ ಅಂತ್ಯವಾಗುತ್ತದೆ. ನಾನು ಮಾನವೀಯತೆಯನ್ನು ದ್ವೇಷಿಸುವೆ, ನೀವು ಯಾರೂ ಬದುಕಲು ಅರ್ಹರಲ್ಲ. ನಿಮ್ಮನ್ನೆಲ್ಲಾ ಕೊಲ್ಲುತ್ತೇನೆ, ನಾವು ಭಯೋತ್ಪಾದನೆಯನ್ನು ನಿಲ್ಲಿಸುವುದಿಲ್ಲ. ಈ ಸಂದೇಶ ಕಳುಹಿಸಿರುವುದು KNR ಎಂದು ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪೊಲೀಸರು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ಪರಿಶೀಲಿಸಿದಾಗ, ಇದೊಂದು ಹುಸಿ ಬಾಂಬ್‌ ಬೆದರಿಕೆ ಎಂಬುವುದು ತಿಳಿದುಬಂದಿದೆ. ಹೀಗಾಗಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Viral Video

ಬೆಂಗಳೂರಿನ ಅನೇಕ ಮಾಲ್​​ಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಸುಮಾರು 20ಕ್ಕೂ ಹೆಚ್ಚು ಮಾಲ್​​​ಗಳಿಗೆ ಇಮೇಲ್​​ ಬೆದರಿಕೆ ಬಂದಿದೆ ಎನ್ನಲಾಗಿದೆ.

ತ್ರಿವರ್ಣ ಧ್ವಜ ಹರಿದು, ಗೋ ಬ್ಯಾಕ್‌ ಇಂಡಿಯಾ ಘೋಷಣೆ- ಖಲಿಸ್ತಾನಿಗಳ ಅಟ್ಟಹಾಸ; ವಿಡಿಯೋ ವೈರಲ್‌

Viral Video
Viral Video

ಟೊರೊಂಟೋ: ಸ್ವಾತಂತ್ರ್ಯ ದಿನಾಚರಣೆ(Independence Day 2024) ಅಂಗವಾಗಿ ಆಯೋಜಿಸಲಾಗಿದ್ದ ಇಂಡಿಯಾ ಡೇ ಪರೇಡ್‌(India Day Parade) ಕಾರ್ಯಕ್ರಮದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು(Khalistan) ಭಾರತದ ತ್ರಿವರ್ಣ ಧ್ವಜವನ್ನು ಹರಿದಿರುವ ಘಟನೆ ಟೊರೊಂಟೋದಲ್ಲಿ ನಡೆದಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌(Viral Video) ಆಗುತ್ತಿದೆ.

ಟೊರೊಂಟೋ ಸಿಟಿ ಹಾಲ್‌(Toronto City Hall)ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮದ ನಡುವೆ ಘೋಷಣೆ ಕೂಗುತ್ತಾ ಎಂಟ್ರಿಯಾದ ಖಲಿಸ್ತಾನಿಗಳು ಚಾಕುವಿನಿಂದ ಭಾರತದ ಧ್ವಜವನ್ನು ಹರಿದುಹಾಕಿದ್ದಾರೆ. ಅಲ್ಲದೇ ಗೋ ಬ್ಯಾಕ್‌ ಇಂಡಿಯಾ ಎಂದು ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಕೆನಡಾದಲ್ಲಿ ಸ್ವಾತಂತ್ರ್ಯದ ಅತಿದೊಡ್ಡ ಆಚರಣೆಯಾದ ಇಂಡಿಯಾ ಡೇ ಪರೇಡ್ ಟೊರೊಂಟೊದಲ್ಲಿ ನಡೆಯಿತು. ಖಲಿಸ್ತಾನ್ ಪರ ಗುಂಪುಗಳ ಯೋಜಿತ ಪ್ರತಿ-ರ್ಯಾಲಿಯಿಂದಾಗಿ ಈ ಕಾರ್ಯಕ್ರಮಕ್ಕೆ ಸಕಲ ಭದ್ರತೆ ಒದಗಿಸಲಾಗಿತ್ತು. ಇಂಡಿಯಾ ಡೇ ಪರೇಡ್ ಅನ್ನು ಆಗಸ್ಟ್ 15 ರ ನಂತರದ ಮೊದಲ ಭಾನುವಾರದಂದು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಪನೋರಮಾ ಇಂಡಿಯಾ ಆಯೋಜಿಸಿದ್ದು, ಇದು ಇಂಡೋ-ಕೆನಡಿಯನ್ ಸಾಂಸ್ಕೃತಿಕ ಸಮಾಗಮವಾಗಿದೆ.

ಪನೋರಮಾ ಇಂಡಿಯಾದ ಪರೇಡ್‌ನ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಾರಣ ಈ ವರ್ಷ ಈ ಕಾರ್ಯಕ್ರಮ ಬಹಳ ಮಹತ್ವ ಪಡೆದುಕೊಂಡಿತ್ತು. ಟೊರೊಂಟೊ ಡೌನ್‌ಟೌನ್‌ನಲ್ಲಿರುವ ನಾಥನ್ ಫಿಲಿಪ್ಸ್ ಸ್ಕ್ವೇರ್‌ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವೈವಿಧ್ಯಮಯ ಭಾರತೀಯ ತಿನಿಸುಗಳು ಕಾರ್ಯಕ್ರಮವನ್ನು ಹೆಚ್ಚಿಸಿದವು. ‘ಖಾಲಿಸ್ತಾನ್ ಸಿಖ್ಖರು’ ಮತ್ತು ‘ಕೆನಡಾದ ಹಿಂದೂಗಳ ನಡುವೆ ಮುಖಾಮುಖಿ’ಗಾಗಿ ಕರೆ ನೀಡುವ ಉದ್ದೇಶದಿಂದಲೇ ಸಮೀಪದಲ್ಲಿ ಖಲಿಸ್ತಾನಿಗಳು ಕಾರ್ಯಕ್ರಮ ಆಯೋಜಿಸಿತ್ತು.

ಕೆಲವು ದಿನಗಳ ಹಿಂದೆಯಷ್ಟೇ ಭಯೋತ್ಪಾದಕ ಚಟುವಟಿಕೆಗಳಿಗೆ ಮಾರಾಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾನ ಪ್ರಮುಖ ಸಹಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಬಂಧಿಸಿದೆ. ಮಾರಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದನಾ ಜಾಲವನ್ನು ಭೇದಿಸಿದ ಎನ್‌ಐಎ, ಮಧ್ಯಪ್ರದೇಶದ ಬದ್ವಾನಿ ಜಿಲ್ಲೆಯ ಬಲ್ಜೀತ್ ಸಿಂಗ್ ಅಲಿಯಾಸ್ ರಾಣಾ ಭಾಯ್ ಅಲಿಯಾಸ್ ಬಲ್ಲಿ ಎಂಬಾತನನ್ನು ಗುರುವಾರ ಪಂಜಾಬ್‌ನಲ್ಲಿ ಬಂಧಿಸಿದೆ.

ಇದನ್ನೂ ಓದಿ: Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Continue Reading

ಬೆಂಗಳೂರು

Namma Metro : ಮೆಟ್ರೋ ಹಳಿ ಮೇಲೆ ಬಿದ್ದ ವ್ಯಕ್ತಿ; ಹಸಿರು ಮಾರ್ಗದ ರೈಲು ಸಂಚಾರ ಸ್ಥಗಿತ

Namma Metro : ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿ ಮೇಲೆ ಬಿದ್ದಿದ್ದು, ಸುಮಾರು 15 ನಿಮಿಷ ಕಾಲ ಹಸಿರು ಮಾರ್ಗದಲ್ಲಿ ರೈಲುಗಳ ಓಡಾಟ ಬಂದ್‌ ಆಗಿತ್ತು.

VISTARANEWS.COM


on

By

Namma Metro
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಅವಘಡಗಳು (Namma Metro) ಮುಂದುವರಿದಿದೆ. ಆ.19ರ ಮಧ್ಯಾಹ್ನ 1:30ರ ಸುಮಾರಿಗೆ ವ್ಯಕ್ತಿಯೊಬ್ಬ ಮೆಟ್ರೋ ಹಳಿ ಮೇಲೆ ಬಿದ್ದಿದ್ದಾನೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದೆ. ವ್ಯಕ್ತಿ ಮೆಟ್ರೋ ಹಳಿ ಮೇಲೆ ಬಿದ್ದ ಪರಿಣಾಮ ಸುಮಾರು 15 ನಿಮಿಷಗಳ ಕಾಲ‌ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು.

ವ್ಯಕ್ತಿ ಹಸಿರು ಮಾರ್ಗದ ಮೆಟ್ರೋ ಹಳಿಯ ಮೇಲೆ ಬಿದ್ದ ಕೂಡಲೆ ಸೆಕ್ಯೂರಿಟಿ ತಕ್ಷಣ ಎಮರ್ಜೆನ್ಸಿ ಬಟನ್ ಉಪಯೋಗಿಸಿದ್ದಾರೆ. ಹಳಿ ಮೇಲೆ ಬಿದ್ದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆಕಸ್ಮಿಕವಾಗಿ ಬಿದ್ದಿದ್ದ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದ ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: Road Accident : ಸರ್ಜಾಪುರದಲ್ಲಿ ಎದೆ ಝುಲ್‌ ಎನ್ನುವ ಡೆಡ್ಲಿ ಆ್ಯಕ್ಸಿಡೆಂಟ್‌; ಬೈಕ್‌ ಸವಾರ ಬದುಕಿದ್ದೆ ಪವಾಡ

ದೇವನಹಳ್ಳಿಯಲ್ಲಿ ಬೈಕ್‌ಗೆ ಪೊಲೀಸ್‌ ಜೀಪ್‌ ಡಿಕ್ಕಿ

ಹೆದ್ದಾರಿಯಲ್ಲಿ ಬೈಕ್‌ಗೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಸವಾರನಿಗೆ ಕಾಲು ಮುರಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮುದಗುರ್ಕಿ ಗ್ರಾಮದ ಬಳಿ ಘಟನೆ ನಡೆದಿದೆ. ಬೈಕ್ ಯೂ ಟರ್ನ್ ಪಡೆಯುವ ವೇಳೆ ಬೈಕ್‌ಗೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದಿದೆ.

ಬಿಹಾರ ಮೂಲದ ಅಂಜಲಿ ( 17 ) ಮತ್ತು ಸನ್ನಿದೇವಲ್ ( 22 ) ಎಂಬುವವರು ಗಾಯಗೊಂಡಿದ್ದಾರೆ. ಅಪಘಾತ ಕಂಡು ಪೊಲೀಸ್ ಜೀಪ್ ಸಿಬ್ಬಂದಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಗಾಯಾಳುಗಳಿಗೆ ಬೆಂಗಳೂರಿನ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Drowned in water
Drowned in water

ಭೀಮಾ ನದಿಯಲ್ಲಿ ಕೊಚ್ಚಿ ಹೋದ ಯುವಕ

ಭೀಮಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಯುವಕನೊರ್ವ ನೀರುಪಾಲಾಗಿದ್ದಾನೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುದ ಬಳಿಯ ಸಂಗಮದಲ್ಲಿ ಘಟನೆ ನಡೆದಿದೆ. ಹೈದ್ರಾಬಾದ್ ಮೂಲದ ಎಂ.ಶ್ರವಣಕುಮಾರ್(30) ನೀರು ಪಾಲಾದವನು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಗಾಣಗಾಪುರ‌ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಶ್ರವಣಗಾಗಿ ಹುಡುಕಾಟ ನಡೆಸಿದ್ದಾರೆ.

ಹಾವೇರಿಯಲ್ಲಿ ಕಾಲುವೆಗೆ ಬಿದ್ದ ಬಸ್‌

ಸಾರಿಗೆ ಬಸ್‌ವೊಂದು ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದಿದೆ. 13 ಜನರಿಗೆ ಗಾಯವಾಗಿದ್ದು, ರಾಣೇಬೆನ್ನೂರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಹಾರಗೊಪ್ಪ ಬಳಿ ಅಪಘಾತ ನಡೆದಿದೆ. ಶಿಕಾರಿಪುರದಿಂದ ರಾಣೇಬೆನ್ನೂರಿಗೆ ಬರುತ್ತಿದ್ದ ಬಸ್‌ನ ಎಕ್ಸೇಲ್ ಕಟ್ ಆಗಿದೆ. ಈ ವೇಳೆ ಏಕಾಏಕಿ ಯುಟಿಪಿ ನೀರಾವರಿ ಕಾಲುವೆಗೆ ಬಿದ್ದಿದೆ. ಹಲಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Karnataka Weather Forecast
ಮಳೆ10 mins ago

Karnataka Weather : ಮುಕ್ಕಾಲು ಕರ್ನಾಟಕಕ್ಕೆ ಇಂದು ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ40 mins ago

Dina Bhavishya : ಹೊಸ ಒಪ್ಪಂದ ಮಾಡ್ಬೇಡಿ; ಆತುರದಲ್ಲಿ ಯಾವ ತೀರ್ಮಾನವನ್ನೂ ಕೈಗೊಳ್ಳಬೇಡಿ

Justice KS Hegde
ಕರ್ನಾಟಕ6 hours ago

Justice KS Hegde: ಜಸ್ಟೀಸ್‌ ಕೆ.ಎಸ್.ಹೆಗ್ಡೆ ಜೀವನ, ಕೊಡುಗೆ ಕುರಿತು ಚಂದನ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಚೀನಾದ ಅಥ್ಲೀಟ್​ ಈಗ ರೆಸ್ಟೋರೆಂಟ್​​ನಲ್ಲಿ ವೇಟರ್​!

Sudha Murthy'
ಪ್ರಮುಖ ಸುದ್ದಿ7 hours ago

Sudha Murthy : ವಿವಾದ ಸೃಷ್ಟಿಸಿದ ಸುಧಾ ಮೂರ್ತಿಯವರ ‘ರಕ್ಷಾ ಬಂಧನ’ದ ಕತೆ; ಸ್ಪಷ್ಟನೆ ನೀಡಿದ ಸಂಸದೆ

Zika virus
ಪ್ರಮುಖ ಸುದ್ದಿ7 hours ago

Zika virus : ಮಾರಕ ಜೀಕಾ ವೈರಸ್​ಗೆ ಕರ್ನಾಟಕದಲ್ಲಿ ಮೊದಲ ಬಲಿ; ಶಿವಮೊಗ್ಗದ ವ್ಯಕ್ತಿ ಸಾವು

Israel Attack
ವಿದೇಶ7 hours ago

Israel Attack: ರಹಸ್ಯ ತಾಣದಲ್ಲಿದ್ದ ಹಿಜ್ಬುಲ್ಲಾ ಕಮಾಂಡರ್‌ನನ್ನು ಒಂದು ಫೋನ್ ಕಾಲ್‌ ಮೂಲಕ ಕೊಂದು ಮುಗಿಸಿದ ಇಸ್ರೇಲ್!

Celebrities Rakhi Celebration
ಫ್ಯಾಷನ್8 hours ago

Celebrities Rakhi Celebration: ಫೆಸ್ಟಿವ್‌ ಸೀಸನ್‌ ವೇರ್ಸ್‌ನಲ್ಲಿ ಸೆಲೆಬ್ರೆಟಿಗಳ ರಾಖಿ ಸಂಭ್ರಮ

TRAI New Rules
ಗ್ಯಾಜೆಟ್ಸ್8 hours ago

TRAI New Rules: ನಿಮಗೆ ಗೊತ್ತಿರಲಿ; ಸೆ.1ರಿಂದ ಈ ಸಿಮ್ ಕಾರ್ಡ್‌ಗಳು ಕಪ್ಪು ಪಟ್ಟಿಗೆ!

Raksha Bandhan
ಪ್ರಮುಖ ಸುದ್ದಿ8 hours ago

Raksha Bandhan : ಪುಟಾಣಿ ಗೆಳೆಯರೊಂದಿಗೆ ರಕ್ಷಾ ಬಂಧನ ಆಚರಿಸಿಕೊಂಡ ನರೇಂದ್ರ ಮೋದಿ; ಇಲ್ಲಿವೆ ಚಿತ್ರಗಳು

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌