Site icon Vistara News

Missing case: ಒಂದೇ ಕುಟುಂಬದ ಮೂವರು ನಿಗೂಢ ನಾಪತ್ತೆ

missing case davanagere

ದಾವಣಗೆರೆ: ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆಯಾದ (family missing Case) ಘಟನೆ ದಾವಣೆಗೆರೆಯಲ್ಲಿ (Davanagere crime news) ನಡೆದಿದೆ. ನಾಪತ್ತೆಯಾದವರು ದಾವಣಗೆರೆಯ ವಿನೋಬಾ ನಗರದ 7ನೇ ಕ್ರಾಸ್‌ನಲ್ಲಿರುವ ಮನೆಯ ನಿವಾಸಿಗಳಾಗಿದ್ದು, ಇವರ ಪತ್ತೆಗಾಗಿ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪತಿ, ಪತ್ನಿ, ಮಗಳು ನಾಪತ್ತೆಯಾದವರು. ಅಂಜನ್ ಬಾಬು (34) ನಾಗವೇಣಿ (24) ಹಾಗೂ ನಕ್ಷತ್ರ (1) ಏಪ್ರಿಲ್ 12ರಂದು ಮನೆಯಿಂದ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ. ಯಾವ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದಾರೆ ಎನ್ನುವ ನಿಖರ ಕಾರಣ ತಿಳಿದು ಬಂದಿಲ್ಲ. ಬಂಧು ಬಾಂಧವರಿಗೆ ಯಾವುದೇ ಸೂಚನೆ, ಮಾಹಿತಿ ನೀಡಿಲ್ಲ. ಯಾವುದೇ ಪತ್ರ ಬರೆದಿಟ್ಟಿಲ್ಲ. ಹೀಗಾಗಿ ಇವರು ನಿಗೂಡವಾಗಿ ನಾಪತ್ತೆಯಾಗಿರುವ ಪ್ರಕರಣ ಕುತೂಹಲ ಕೆರಳಿಸಿದೆ. ನಾಪತ್ತೆ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲ ವಸೂಲಿಗೆ ಹೆಂಡತಿ- ಮಗನಿಗೆ ಗೃಹಬಂಧನ, ಅವಮಾನದಿಂದ ರೈತ ಆತ್ಮಹತ್ಯೆ, ಎಂಥ ರಾಕ್ಷಸಿ ಇವಳು!

ಬೆಳಗಾವಿ: ರೈತರೊಬ್ಬರು ಮಾಡಿದ ಸಾಲ ಕಟ್ಟಲಿಲ್ಲ (farmer loan) ಎಂದು ಸಾಲ ನೀಡಿದ ಮಹಿಳೆ ಆ ರೈತನ ಪತ್ನಿ ಹಾಗೂ ಪುತ್ರನಿಗೆ ಅನ್ನ ನೀರು ಕೊಡದೆ ಗೃಹಬಂಧನದಲ್ಲಿಟ್ಟ, ಇದರಿಂದ ನೊಂದ ರೈತ ಆತ್ಮಹತ್ಯೆ (farmer suicide, farmer self harming) ಮಾಡಿಕೊಂಡ ಮನ ಕಲಕುವ ಘಟನೆ ಬೆಳಗಾವಿ (belagavi news) ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.

ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಭೀಕರ ಬರಕ್ಕೆ ಕೈಕೊಟ್ಟ ಬೆಳೆಗಳಿಂದಾಗಿ ಉಪಜೀವನಕ್ಕೆ ರೈತ ಸಾಲದ ಮೊರೆ ಹೋಗಿದ್ದರು. ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ ರೈತನ ಪತ್ನಿ, ಪುತ್ರನಿಗೆ ಗೃಹಬಂಧನದ ಶಿಕ್ಷೆಯನ್ನು ಸಾಲ ನೀಡಿದ ಮಹಿಳೆ ವಿಧಿಸಿದ್ದಳು. ಇದರಿಂದ ಮನನೊಂದ ರೈತ ರಾಜು ಖೋತಗಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇಸ್ಲಾಂಪುರ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಹೆಸರಿನ ವಿಕೃತ ಮಹಿಳೆಯಿಂದ ಈ ಕೃತ್ಯ ನಡೆದಿದೆ. ರಾಜು ಖೋತಗಿ ತಮ್ಮ ಜೀವನ ‌ನಿರ್ವಹಣೆಗೆ ಸಿದ್ದವ್ವ ಬಳಿ ಐದು ತಿಂಗಳ ಹಿಂದೆ ಒಂದೂವರೆ ಲಕ್ಷ ರೂ. ಸಾಲ ಪಡೆದಿದ್ದರು. ಪಡೆದಿದ್ದ ಸಾಲಕ್ಕೆ ಪ್ರತಿ ತಿಂಗಳು ಶೇ. 10ರಷ್ಟು ಬಡ್ಡಿ ಸಹ ತುಂಬುತ್ತಿದ್ದರು. ಎರಡು ದಿನಗಳ ಹಿಂದೆ ಏಕಾಏಕಿ ಮನೆಗೆ ಕರೆದು ಕೊಟ್ಟ ಸಾಲ ಮರಳಿಸುವಂತೆ ಸಿದ್ದವ್ವ ತಾಕೀತು ಮಾಡಿದ್ದಾಳೆ. ರಾಜು ಸಾಲ ಮರಳಿಸಲು ಒಂದೆರಡು ದಿನ ಕಾಲಾವಕಾಶ ಕೇಳಿದ್ದರು.

ಇದಕ್ಕೆ ಒಪ್ಪದೇ, ಸಾಲ ಮರಳಿಸುವವರೆಗೂ ಪುತ್ರ ಬಸವರಾಜ ಖೋತಗಿಯನ್ನು ತನ್ನ ಮನೆಯಲ್ಲಿ ಬಿಟ್ಟು ಹೋಗುವಂತೆ ಸಿದ್ದವ್ವ ತಾಕೀತು ಮಾಡಿದ್ದಳು. ಎರಡು ದಿನವಾದರೂ ಪುತ್ರನನ್ನು ಬಿಡದಾಗ ಸಿದ್ದವ್ವಳ ಮನೆಗೆ ಕೇಳಲು ರಾಜು-ದುರ್ಗವ್ವ ಹೋಗಿದ್ದರು. ಈ ವೇಳೆ ಬಸವರಾಜ್‌ನನ್ನು ಬಿಟ್ಟು ರಾಜು ಖೋತಗಿ, ಪತ್ನಿ ದುರ್ಗವ್ವರನ್ನು ಮನೆಯಲ್ಲಿ ಕೂರಿಸಿ ಶಿಕ್ಷೆ ವಿಧಿಸಿದ್ದಾಳೆ. ಮೂವರನ್ನೂ ಹನಿ ನೀರು, ತುತ್ತು ಅನ್ನ ನೀಡದೇ 2 ದಿನ ಗೃಹಬಂಧನದಲ್ಲಿಟ್ಟಿದ್ದಾಳೆ.

ಇದರಿಂದ ಮನನೊಂದು ಮನೆಗೆ ಬಂದ ರಾಜು ಖೋತಗಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೂರು ನೀಡಲು ಹೋದರೆ, ಸಿದ್ದವ್ವಳ ಅನ್ಯಾಯದ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಳ್ಳದೇ ಸತಾಯಿಸಿದ್ದಾರೆ. ಬೆಳಗ್ಗೆಯಿಂದ ಠಾಣೆಯಲ್ಲಿ ಕೂರಿಸಿಕೊಂಡು ರಾತ್ರಿ ವೇಳೆ ದುರ್ಬಲ ಸೆಕ್ಷನ್‌ನಡಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಯಮಕನಮರಡಿ ಠಾಣೆ ಪೊಲೀಸರ ವಿರುದ್ಧ ಪತಿ ಕಳೆದುಕೊಂಡ ದುರ್ಗವ್ವ, ಪೋಷಕರು ಆರೋಪಿಸಿದ್ದಾರೆ.

ಮಂಡ್ಯದಲ್ಲಿ ನಿಲ್ಲದ ಹೆಣ್ಣು ಭ್ರೂಣ ಹತ್ಯೆ; ಗರ್ಭಪಾತ ಮಾಡುವಾಗಲೇ ದಾಳಿ, ಮೂವರ ಅರೆಸ್ಟ್‌!

ಮಂಡ್ಯ: 2023ರ ಡಿಸೆಂಬರ್‌ ತಿಂಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣ (Female Foeticide) ರಾಜ್ಯಾದ್ಯಂತ ಸದ್ದು ಮಾಡಿತ್ತು. ಆದರೆ, ದುಷ್ಕೃತ್ಯಗಳಿಗೆ ಕೇಂದ್ರ ತಾಣವಾಗಿದ್ದ ಮಂಡ್ಯದಲ್ಲಿ ಇನ್ನೂ ಈ ದಂಧೆ ನಿಂತಂತೆ ಕಾಣುತ್ತಿಲ್ಲ. ಪಾಂಡವಪುರದ ಹೆಲ್ತ್ ಕ್ವಾರ್ಟರ್ಸ್‌ನಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿ, ಮೂವರನ್ನು ಬಂಧಿಸಿರುವ ಘಟನೆ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಪಾಂಡವಪುರದ ಹೆಲ್ತ್ ಕ್ವಾರ್ಟರ್ಸ್‌ ಮೇಲೆ ಭಾನುವಾರ ತಡರಾತ್ರಿ ಮಂಡ್ಯ ಡಿಎಚ್‌ಒ ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆಗೆ ಗರ್ಭಪಾತ ಮಾಡಿಸಲು ಗರ್ಭಿಣಿಗೆ ಔಷಧ ನೀಡಲಾಗಿತ್ತು, ಇದರಿಂದ ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಉಳಿಸಲು ಸಾಧ್ಯವಾಗಿಲ್ಲ. ಮೈಸೂರು ಮೂಲದ ಮಹಿಳೆಗೆ ಈಗಾಗಲೇ 2 ಹೆಣ್ಣು ಮಗು ಜನಿಸಿತ್ತು. 3ನೇ ಮಗು ಹೆಣ್ಣು ಮಗು ಎಂದು ತಿಳಿದು ಗರ್ಭಪಾತ ಮಾಡಿಸಿಕೊಳ್ಳಲು ಪಾಂಡವಪುರಕ್ಕೆ ಆಗಮಿಸಿದ್ದರು. ಇದೀಗ ನಾಲ್ಕು ತಿಂಗಳ ಹೆಣ್ಣು ಭ್ರೂಣ ಹತ್ಯೆ ಮಾಡಲಾಗಿದೆ.

ಗರ್ಭಪಾತ ಮಾಡಿಸಿದ ಆನಂದ್ ಮತ್ತು ಅಶ್ವಿನಿ ದಂಪತಿ ಸೇರಿ ಮೂವರನ್ನು ಬಂಧಿಸಲಾಗಿದೆ. ಪಾಂಡವಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಂಪತಿ ಹೊರಗುತ್ತಿಗೆ ನೌಕರರಾಗಿದ್ದಾರೆ. ಅಶ್ವಿನಿ ಡಿ ದರ್ಜೆ ನೌಕರೆಯಾಗಿದ್ದರೆ, ಆನಂದ ಆಂಬ್ಯುಲೆನ್ಸ್ ಚಾಲಕನಾಗಿದ್ದ. ತಾಲುಕು ಆರೋಗ್ಯ ಅಧಿಕಾರಿಗಳ ಕಚೇರಿ ಬಳಿಯ ಮನೆಯಲ್ಲಿ ಕೃತ್ಯ ನಡೆಸುತ್ತಿದ್ದಾಗ ದಂಪತಿಗಳು ಸಿಕ್ಕಿಬಿದ್ದಿದ್ದಾರೆ. ಆರೋಗ್ಯ ಇಲಾಖೆಯಿಂದ ನೀಡಿರುವ ವಸತಿ ಗೃಹದಲ್ಲಿ ಕಳೆದ 9 ವರ್ಷಗಳಿಂದ ದಂಪತಿ ವಾಸವಿದ್ದರು.

ಇದನ್ನೂ ಓದಿ | Marriage Cancel : ಸಿಹಿ ತಿಂಡಿ ಕಿರಿಕ್‌ಗೆ ಮದುವೆ ಮುರಿದ ವರ; ಹೋಗೊಲೋ ಎಂದಳು ವಧು!

ಪ್ರಕರಣದ ಹಿನ್ನೆಲೆಯಲ್ಲಿ ಪಾಂಡವಪುರಕ್ಕೆ ಮಂಡ್ಯ ಡಿಸಿ ಕುಮಾರ್, ಎಸ್.ಪಿ. ಯತೀಶ್ ಅವರು ಸೋಮವಾರ ಬೆಳಗ್ಗೆ ಭೇಟಿ ನೀಡಿ ಭ್ರೂಣ ಹತ್ಯೆ ನಡೆಯುತ್ತಿದ್ದ ಮನೆ ಪರಿಶೀಲನೆ ನಡೆಸಿದ್ದಾರೆ. ಆರೋಗ್ಯ ಇಲಾಖೆಯಿಂದ ನೀಡಲಾಗಿರುವ ವಸತಿ ಗೃಹವನ್ನೇ ಆಸ್ಪತ್ರೆ ಸಿಬ್ಬಂದಿಯಾದ ದಂಪತಿ, ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದಾರೆ.

ಭ್ರೂಣಹತ್ಯೆ ದಂಧೆಯನ್ನು ಸಿಐಡಿಗೆ ಒಪ್ಪಿಸಿದ್ದ ರಾಜ್ಯ ಸರ್ಕಾರ

ರಾಜ್ಯದಲ್ಲಿ 2023ರ ಡಿಸೆಂಬರ್‌ನಲ್ಲಿ ಬೆಳಕಿಗೆ ಬಂದಿದ್ದ ಹೆಣ್ಣ ಭ್ರೂಣ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ (CID Investigation) ರಾಜ್ಯ ಸರ್ಕಾರ ಒಪ್ಪಿಸಿತ್ತು. ರಾಮನಗರ ಮಂಡ್ಯ ಮತ್ತು ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ಭ್ರೂಣ ಹತ್ಯೆ ಜಾಲ ಸಕ್ರಿಯವಾಗಿತ್ತು. ಬೆಂಗಳೂರಿನ ಬೈಯಪ್ಪನಹಳ್ಳಿಯ ಪೊಲೀಸರು ಪ್ರಕರಣ ದಾಖಲಿಸಿ 9ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು.

ಆರೋಪಿಗಳು ಮೂರು ವರ್ಷಗಳ ಅವಧಿಯಲ್ಲಿ 900ಕ್ಕೂ ಅಧಿಕ ಹೆಣ್ಣು ಭ್ರೂಣಗಳ ಹತ್ಯೆ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಈ ಜಾಲ ಇನ್ನಷ್ಟು ಪ್ರದೇಶಗಳಲ್ಲಿ ವಿಸ್ತರಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದೇ ರೀತಿ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ಆರೋಗ್ಯ ಇಲಾಖೆಯ ಅಧಿಕಾರಿಗಳ ಕಣ್ತಪ್ಪಿಸಿ ನಡೆಯುತ್ತಿದ್ದ ಜಾಲವನ್ನು ಮಟ್ಟ ಹಾಕುವಲ್ಲಿ ವ್ಯವಸ್ಥೆ ವೈಫಲ್ಯವಾಗಿರುವುದು ಕೂಡ ಬಹಿರಂಗೊಂಡಿತ್ತು. ಹೀಗಾಗಿ ತಕ್ಷಣವೇ ಕ್ರಮ ಕೈಗೊಳ್ಳಲು ಮುಂದಾಗಿದ್ದ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು.

ಇದನ್ನೂ ಓದಿ: Self Harming: ಕಬ್ಬಿಗೆರೆ ಗೊಲ್ಲರಹಟ್ಟಿಯಲ್ಲಿ ಸಾಲದ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Exit mobile version