ಉದಯಪುರ: ವಿವಾಹಬಾಹಿರ ಸಂಬಂಧ ಹೊಂದಿದ್ದ ಜೋಡಿಯನ್ನು ಮಂತ್ರವಾದಿಯೊಬ್ಬ ಅವರು ನಗ್ನವಾಗಿದ್ದಾಗ ಫೆವಿಕ್ವಿಕ್ ಸುರಿದು, ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಭಾಲೇಶ್ ಕುಮಾರ್ (55) ಎಂಬ ಮಂತ್ರವಾದಿಯೇ ಈ ಪಾತಕಿ. ಈತ ರಾಜಸ್ಥಾನದ ಉದಯಪುರದ ಕೆಳಬಾವಡಿ ಎಂಬ ಅರಣ್ಯ ಪ್ರದೇಶದಲ್ಲಿ ಜೋಡಿಯ ಹತ್ಯೆಗೈದಿದ್ದಾನೆ.
ಹತ್ಯೆಗೊಳಗಾದ ಜೋಡಿ ಭಿನ್ನ ಜಾತಿಗೆ ಸೇರಿದವರಾಗಿದ್ದುದರಿಂದ, ಆರಂಭದಲ್ಲಿ ಇದೊಂದು ಮರ್ಯಾದಾ ಹತ್ಯೆ ಎಂದೇ ಪೊಲೀಸರು ತಿಳಿದಿದ್ದರು. ಮಂತ್ರವಾದಿಯ ತನಿಖೆಯ ಬಳಿಕ ವಿವರಗಳು ಹೊರಬಿದ್ದಿವೆ.
ರಾಹುಲ್ ಮೀನಾ (30) ಎಂಬ ಶಿಕ್ಷಕ ಹಾಗೂ ಸೋನು ಕನ್ವರ್ (28) ಇಬ್ಬರಿಗೂ ಪ್ರತ್ಯೇಕ ಮದುವೆಯಾಗಿತ್ತಾದರೂ, ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಮಂತ್ರವಾದಿ ಭಾಲೇಶ್ ಕುಮಾರ್‌ಗೆ ಇದು ತಿಳಿದಿದ್ದು, ಇದನ್ನು ರಾಹುಲ್‌ನ ಪತ್ನಿಗೆ ತಿಳಿಸಿದ್ದ. ಈ ವಿಚಾರ ತಿಳಿದ ಬಳಿಕ ರೊಚ್ಚಿಗೆದ್ದ ರಾಹುಲ್ ಮತ್ತು ಸೋನು, ರೇಪ್ ಯತ್ನ ನಡೆಸಿರುವುದಾಗಿ ಕೇಸು ದಾಖಲಿಸಿ ಮರ್ಯಾದೆ ತೆಗೆಯುವುದಾಗಿ ಭಾಲೇಶ್‌ಗೆ ಬೆದರಿಕೆ ಹಾಕಿದ್ದರು.
ಇದರಿಂದ ಸಿಟ್ಟಿಗೆದ್ದು ಭಾಲೇಶ್ ಇಬ್ಬರನ್ನೂ ಕೊಲ್ಲುವ ಸ್ಕೆಚ್ ಹಾಕಿದ್ದಾನೆ. ನಂತರ ಇಬ್ಬರನ್ನೂ ಕಾಡು ಪ್ರದೇಶಕ್ಕೆ ಕರೆದೊಯ್ದು, ಇಬ್ಬರೂ ತನ್ನ ಮುಂದೆ ಲೈಂಗಿಕ ಕ್ರಿಯೆ ನಡೆಸುವಂತೆ ಪ್ರೇರೇಪಿಸಿದ್ದ. ಆಗ ತಾನು ಮೊದಲೇ ತುಂಬಿಟ್ಟುಕೊಂಡು ತಂದಿದ್ದ ಕ್ಯಾನ್‌ನಿಂದ ಫೆವಿಕ್ವಿಕ್ ಅನ್ನು ಇಬ್ಬರ ಮೇಲೂ ಸುರಿದಿದ್ದ. ಇದರಿಂದ ಇಬ್ಬರೂ ಕೆಲಕಾಲ ಅಂಟಿಕೊಳ್ಳುವಂತಾಗಿತ್ತು. ನಂತರ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಇಬ್ಬರ ಚರ್ಮ ಹಾಗೂ ದೇಹದ ಅಂಗಗಳೇ ಕಿತ್ತು ಬಂದಿದ್ದವು. ನಂತರ ಇವರಿಬ್ಬರ ಕತ್ತು ಸೀಳಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.
ಇದನ್ನೂ ಓದಿ | Lover Murdered | ಪ್ರೇಮಿಯ ಕತ್ತು ಸೀಳಿ ಕೊಂದು, ವಿಡಿಯೋ ಮಾಡಿ ಹರಿಬಿಟ್ಟ ಕೊಲೆಪಾತಕಿ!