ಹೊಸದಿಲ್ಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿದ, ಹಲವು ಪರಮಾಣು ಬಾಂಬ್‌ಗಳನ್ನು (Nuclear warhead) ಏಕಕಾಲಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯದ ಅಗ್ನಿ-ವಿ (Agni-V) ಬಹು ಸಿಡಿತಲೆ ಕ್ಷಿಪಣಿಯ (multi warhead missile) ಮೊದಲ ಹಾರಾಟ ಪರೀಕ್ಷೆಯನ್ನು (first test flight) ಭಾರತ ನಿನ್ನೆ ಸಂಜೆ ಯಶಸ್ವಿಯಾಗಿ ನಡೆಸಿತು. ಇದೊಂದು ಬಹು ಸ್ವತಂತ್ರವಾಗಿ ಕಾರ್ಯಾಚರಿಸಬಲ್ಲ, ರೀ-ಎಂಟ್ರಿ ತಂತ್ರಜ್ಞಾನ ಹೊಂದಿರುವ ಕ್ಷಿಪಣಿ.
ವಿಶೇಷವೆಂದರೆ, ಮೂರು ವರ್ಷಗಳ ಹಿಂದೆ ಪಾಕಿಸ್ತಾನ ಇದನ್ನು ಪರೀಕ್ಷಿಸಲು ಯತ್ನಿಸಿ ವಿಫಲವಾಗಿತ್ತು. ಪಾಕ್ 3 ವರ್ಷದ ಹಿಂದೆ 2,750 ಕಿಮೀ ವ್ಯಾಪ್ತಿಯ ಶಾಹೀನ್ III ಕ್ಷಿಪಣಿಯನ್ನು ಬಳಸಿಕೊಂಡು ಬಹು ಸ್ವತಂತ್ರವಾಗಿ ಗುರಿಯಿಡುವ, ಮರು-ಪ್ರವೇಶ ವಾಹನ (ಎಂಐಆರ್‌ವಿ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿತ್ತು. ಆದರೆ ಡಿಆರ್‌ಡಿಒ ನೀಡಿರುವ ಮಾಹಿತಿ ಪ್ರಕಾರ ಅದು ಶೋಚನೀಯವಾಗಿ ವಿಫಲವಾಯಿತು.
ಮಿಷನ್ ಯಶಸ್ಸಿಗಾಗಿ ಡಿಆರ್‌ಡಿಒ ಅನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೊಂಡಾಡಿದ್ದಾರೆ: “Multiple Independently Targetable Re-entry Vehicle (MIRV) ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-V ಕ್ಷಿಪಣಿಯ ಮೊದಲ ಹಾರಾಟದ ಪರೀಕ್ಷೆ ನಡೆಸಿದ ʼಮಿಷನ್ ದಿವ್ಯಾಸ್ತ್ರʼ ನಡೆಸಿಕೊಟ್ಟ ನಮ್ಮ DRDO ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ” ಎಂದು ಪ್ರಧಾನಿ ಮೋದಿ Xನಲ್ಲಿ ಪೋಸ್ಟ್ ಮಾಡಿದ್ದಾರೆ.
Proud of our DRDO scientists for Mission Divyastra, the first flight test of indigenously developed Agni-5 missile with Multiple Independently Targetable Re-entry Vehicle (MIRV) technology.
— Narendra Modi (@narendramodi) March 11, 2024
ಹೇಗೆ ಕಾರ್ಯಾಚರಿಸುತ್ತದೆ?
ಸೋಮವಾರ ಸಂಜೆ ಭಾರತವು ಅಗ್ನಿ-V ಕ್ಷಿಪಣಿಯನ್ನು ಮೂರು MIRVಗಳೊಂದಿಗೆ ಪರೀಕ್ಷಿಸಿತು. ಕ್ಷಿಪಣಿಯ ವ್ಯಾಪ್ತಿಯು 5000 ಕಿ.ಮೀ. ಆಗಿದ್ದರೂ 3000 ಕಿ.ಮೀ ದೂರಕ್ಕೆ ಸಿಡಿಸಿತು. ಈ ಕ್ಷಿಪಣಿ ಸ್ವತಂತ್ರವಾಗಿ ಬಹು ಗುರಿಗಳನ್ನು ಹೊಡೆಯಬಲ್ಲ, ಮರುಪ್ರವೇಶಿಸುವ ವಾಹನ- multiple independently targetable re-entry vehicle- MIRV. ಅಂದರೆ ಇದರ ಸಿಡಿತಲೆಯು ಬಾಹ್ಯಾಕಾಶದಲ್ಲಿ ಬೇರ್ಪಟ್ಟು, ಬೆಂಕಿಯ ಚೆಂಡುಗಳು ವಾತಾವರಣವನ್ನು ಮರು ಪ್ರವೇಶಿಸುತ್ತವೆ. ಸೆಕೆಂಡಿಗೆ ಸುಮಾರು ಆರು ಕಿಲೋಮೀಟರ್ ವೇಗದಲ್ಲಿ ಮರು-ಪ್ರವೇಶಿಸುತ್ತದೆ.
ಪ್ರತಿಯೊಂದು ಸಿಡಿತಲೆಯೂ ವಿಭಿನ್ನ ವೇಗದಲ್ಲಿ ಕೆಳಗಿಳಿದು ನೆಲಕ್ಕೆ ಅಪ್ಪಳಿಸುತ್ತದೆ. MIRVಯ ಮುಖ್ಯ ಸಾಮರ್ಥ್ಯವೇ ಮರು-ಪ್ರವೇಶ. ಇದು ಒಂದು ನಿರ್ಣಾಯಕ ಹಂತ. ಬಹು ಸಿಡಿತಲೆಗಳ ಕಾರಣದಿಂದಾಗಿ, ಪ್ರತಿ ಸಿಡಿತಲೆಯೂ ವಿಭಿನ್ನ ವೇಗಗಳು ಮತ್ತು ಪ್ರತ್ಯೇಕ ಗುರಿಗಳನ್ನು ಹೊಂದಿರುವುದರಿಂದ, ಕ್ಷಿಪಣಿ ವಿರೋಧಿ ಗುರಾಣಿಗಳಿಂದ ಅಗ್ನಿ-V ಅನ್ನು ಪ್ರತಿಬಂಧಿಸಲು ಸಾಧ್ಯವಿಲ್ಲ.
ಭಾರತವು ಈಗಾಗಲೇ 3700 ಕಿಮೀ ವ್ಯಾಪ್ತಿಯ K-4 ಜಲಾಂತರ್ಗಾಮಿ-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಾರ್ಥ ಉಡಾವಣೆ ಮಾಡಿದೆ. ಅದು ಮತ್ತು ಅಗ್ನಿ-Vಗಳು ಭಾರತದ ಪರಮಾಣು ಕ್ಷಿಪಣಿ ತಡೆ ಶಸ್ತ್ರಾಗಾರಗಳಾಗವೆ, ಇವು ಯಾವುದೇ ಎದುರಾಳಿಯ ಪರಮಾಣು ಕ್ಷಿಪಣಿ ದಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿವೆ. ಅಗ್ನಿ-P ಎಂಬ ಇನ್ನೊಂದು ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವ ಕೆಲಸ ಈಗಾಗಲೇ ನಡೆಯುತ್ತಿದೆ.
ಚೀನಾ ಬೇಹುಗಾರಿಕೆ
ಅಗ್ನಿ- V ಪರೀಕ್ಷೆಯ ಬಗ್ಗೆ ಬೇಹುಗಾರಿಕೆ ಮಾಡಲೆಂದೇ ಚೀನಾದ PLA ತನ್ನ ಎರಡು ಗೂಢಚಾರ ಹಡಗುಗಳನ್ನು ಭಾರತಕ್ಕೆ ಸಮೀಪದಲ್ಲಿ ಇರಿಸಿದೆ. ಇದರಲ್ಲಿ ಒಂದು ವೈಜಾಗ್‌ನ ಪಶ್ಚಿಮಕ್ಕೆ 500 ಕಿ.ಮೀ ದೂರದಲ್ಲಿದ್ದರೆ, ಇನ್ನೊಂದು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಮಾಲ್ಡೀವ್ಸ್ ಬಳಿ ಇದೆ.
ಚೀನಾ ಮಧ್ಯಂತರ ಶ್ರೇಣಿಯ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ವೇಗವಾಗಿ ಅಭಿವೃದ್ಧಿಪಡಿಸುತ್ತಿದೆ ಎಂಬ ಅಂಶದಿಂದಾಗಿ ಭಾರತದ MIRV ಸುಸಜ್ಜಿತ ಅಗ್ನಿ-V ಕ್ಷಿಪಣಿಯ ಅಭಿವೃದ್ಧಿ ಹಾಗೂ ಪರೀಕ್ಷೆಗೆ ವೇಗ ದೊರೆತಿತ್ತು. ಇದರ ಪರಿಣಾಮ, ಪಾಕಿಸ್ತಾನ ನಿಶ್ಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕದೆ ಉಳಿಯಬಹುದು. ಚೀನಾ ಕೂಡ ಈ ವಿಷಯದಲ್ಲಿ ಇನ್ನಷ್ಟು ಅಲರ್ಟ್ ಆಗಲಿದೆ. ಆದರೆ ಅಗ್ನಿ-ವಿ MIRV ವಿಸ್ತರಣಾವಾದಿ ಚೀನಾವನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಲಿದೆ.
ಇದನ್ನೂ ಓದಿ: Mission Divyastra : ಐತಿಹಾಸಿಕ ಮಿಲಿಟರಿ ಸಾಧನೆ, ದೇಶೀಯವಾಗಿ ನಿರ್ಮಿಸಿದ ಅಗ್ನಿ -5 ಕ್ಷಿಪಣಿ ಸಕ್ಸೆಸ್ ಘೋಷಿಸಿದ ಮೋದಿ