Site icon Vistara News

Bridal Footwear Fashion: ಮದುಮಗಳ ಜಗಮಗಿಸುವ ಗ್ರ್ಯಾಂಡ್‌ ಪಾದರಕ್ಷೆಗಳಿಗೆ 5 ಸಿಂಪಲ್‌ ಸಲಹೆ

Bridal Footwear Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಬ್ರೈಡಲ್‌ ಫುಟ್‌ವೇರ್‌ಗಳು (Bridal Footwear Fashion) ನಾನಾ ವಿನ್ಯಾಸದಲ್ಲಿ ಆಗಮಿಸಿದ್ದು, ಆಯ್ಕೆ ಮಾಡುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಅವರ ಪ್ರಕಾರ, ಮದುವೆಯಾಗುತ್ತಿರುವ ಬಹುತೇಕ ಹೆಣ್ಣು ಮಕ್ಕಳು ತೀರಾ ಜಗಮಗಿಸುವ ಗ್ರ್ಯಾಂಡ್‌ ಪಾದರಕ್ಷೆಗಳನ್ನು ಕೊಳ್ಳುತ್ತಾರೆ. ನಂತರ ಇವುಗಳನ್ನು ಧರಿಸುವುದೇ ಇಲ್ಲ. ಮೂಲೆಯಲ್ಲಿಡುತ್ತಾರೆ. ಇದು ಸುಮ್ಮನೇ ವ್ಯರ್ಥವಾಗುತ್ತದೆ. ಹಾಗಾಗಿ ಮದುಮಗಳು ಕೊಳ್ಳುವಂತಹ ಪಾದರಕ್ಷೆಗಳು ಮದುವೆಯ ನಂತರವೂ ಧರಿಸುವಂತಿರಬೇಕು. ಔಟ್‌ಫಿಟ್‌ಗಳಿಗೆ ಹೇಗೆಲ್ಲಾ ಹೊಂದಬೇಕು! ಯಾವ ಸಂದರ್ಭಕ್ಕೆ ಯಾವ ಬಗೆಯವನ್ನು ಧರಿಸಬೇಕು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದೈದು ಸಿಂಪಲ್‌ ಸಲಹೆ ನೀಡಿದ್ದಾರೆ.

ಡಿಸೈನರ್‌ವೇರ್‌/ಸೀರೆಗೆ ಮ್ಯಾಚಿಂಗ್‌

ಮದುವೆಯಾಗುವ ಹೆಣ್ಣು ಮಕ್ಕಳು ತಾವು ಧರಿಸುವ ಔಟ್‌ಫಿಟ್‌ ಹಾಗೂ ಸೀರೆಗೆ ತಕ್ಕಂತೆ ಮ್ಯಾಚ್‌ ಮಾಡುವುದಾದಲ್ಲಿ ಆದಷ್ಟೂ ಕಾಮನ್‌ ಕಲರ್‌ನದ್ದನ್ನು ಆಯ್ಕೆ ಮಾಡಿಕೊಳ್ಳಬೇಕು. ಸೀರೆಯ ಬಣ್ಣಕ್ಕೆ ಹೊಂದಬೇಕು. ಕಾರ್ಯಕ್ರಮದಲ್ಲಿ ಒಂದಕ್ಕಿಂತ ಹೆಚ್ಚು ಪಾದರಕ್ಷೆ ಧರಿಸುವುದಾದಲ್ಲಿ ಅವನ್ನು ಮರುಬಳಕೆ ಮಾಡುವಂತಿರಬೇಕು.

ಗೋಲ್ಡನ್‌ ಶೇಡ್‌ ಕಮಾಲ್‌

ಬಂಗಾರ ವರ್ಣದ ಪಾದರಕ್ಷೆಗಳು ಬಹುತೇಕ ಎಲ್ಲಾ ಉಡುಪು ಹಾಗೂ ಸೀರೆಗಳಿಗೆ ಮ್ಯಾಚ್‌ ಆಗುತ್ತವೆ. ಹಾಗಾಗಿ ಈ ಶೇಡ್‌ನದ್ದನ್ನು ಖರೀದಿಸಿದರೇ ಎಲ್ಲಾ ಔಟ್‌ಫಿಟ್‌ಗೂ ಧರಿಸಬಹುದು. ಕಪ್ಪು ವರ್ಣದ ಪಾದರಕ್ಷೆಗಳನ್ನು ಆವಾಯ್ಡ್‌ ಮಾಡುವುದು ಉತ್ತಮ. ಹಿಂದೂ ಸಂಪ್ರದಾಯದ ಪ್ರಕಾರ, ಸಮಾರಂಭಗಳಿಗೆ ಕಪ್ಪು ಬಣ್ಣದ ಪಾದರಕ್ಷೆಗಳನ್ನು ಧರಿಸುವುದಿಲ್ಲ.

ಎಥ್ನಿಕ್‌ ಲುಕ್‌ ಇರುವ ಪಾದರಕ್ಷೆಗಳ ಆಯ್ಕೆ

ಟ್ರೆಡಿಷನಲ್‌ ಮದುವೆಗಳಲ್ಲಿ ಯಾವುದೇ ಕಾರಣಕ್ಕೂ ಫ್ಲಿಪ್‌ ಫ್ಲಾಪ್‌, ಹವಾಯಿ ಶೈಲಿಯ ಫಂಕಿ ಲುಕ್‌ ನೀಡುವಂತವು, ಬೂಟ್ಸ್‌ನಂತಹ ಡಿಸೈನ್‌ನ ಪಾದರಕ್ಷೆಗಳನ್ನು ಆಯ್ಕೆ ಮಾಡಕೂಡದು. ಇವು ಎಥ್ನಿಕ್‌ ಔಟ್‌ಫಿಟ್‌ ಹಾಗೂ ಸೀರೆಗಳಿಗೆ ಮ್ಯಾಚ್‌ ಆಗುವುದಿಲ್ಲ ಎಂಬುದು ನೆನಪಿರಲಿ.

ಗೌನ್‌ಗಳಿಗೆ ಮಾತ್ರ ಶೂ

ಮದುವೆಯ ರಿಸಪ್ಷನ್‌ನಲ್ಲಿ ಕೆಲವರು ವೆಸ್ಟರ್ನ್ ಗೌನ್‌ ಧರಿಸುತ್ತಾರೆ. ಇವಕ್ಕೆ ಮಾತ್ರ ಶೂಗಳು ಓಕೆ. ಇತರೇ ಕಾರ್ಯಕ್ರಮಗಳಿಗೆ ಇವು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ ಎಂಬುದು ನೆನಪಿರಲಿ. ಧರಿಸಿದರೂ ನಮ್ಮ ದೇಸಿ ಶೈಲಿಯ ಜೂತಿ ಶೈಲಿಯವನ್ನು ಧರಿಸಬೇಕು.

ರಿಸಪ್ಷನ್‌ಗೆ ಮಾತ್ರ ಎತ್ತರದ ಪಾದರಕ್ಷೆ

ಮದುವೆಗಳಲ್ಲಿ ದೇವರ ಕಾರ್ಯಗಳಿರುವುದರಿಂದ ಬಹುತೇಕರು ಪಾದರಕ್ಷೆಗಳನ್ನು ಧರಿಸುವುದೇ ಇಲ್ಲ. ಏನಿದ್ದರೂ ರಿಸಪ್ಷನ್‌ ಹಾಗೂ ಇತರೇ ಕಾರ್ಯಕ್ರಮಗಳಲ್ಲಿ ಮಾತ್ರ ಧರಿಸಲಾಗುತ್ತದೆ. ಹಾಗಾಗಿ ಯೋಚಿಸಿ ಹೀಲ್ಸ್ ಇರುವಂತವನ್ನು ಖರೀದಿಸಿ. ರಿಸಪ್ಷನ್‌ನಲ್ಲಿ ಮಾತ್ರ ಹೀಲ್ಸ್‌ ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Cowrie Fashion Accessories: ಕವಡೆಗೂ ಸಿಕ್ತು ಫಂಕಿ ಚೋಕರ್‌ ನೆಕ್ಲೇಸ್‌ ರೂಪ!

Exit mobile version