Bridal Footwear Fashion: ಮದುಮಗಳ ಜಗಮಗಿಸುವ ಗ್ರ್ಯಾಂಡ್‌ ಪಾದರಕ್ಷೆಗಳಿಗೆ 5 ಸಿಂಪಲ್‌ ಸಲಹೆ - Vistara News

ಫ್ಯಾಷನ್

Bridal Footwear Fashion: ಮದುಮಗಳ ಜಗಮಗಿಸುವ ಗ್ರ್ಯಾಂಡ್‌ ಪಾದರಕ್ಷೆಗಳಿಗೆ 5 ಸಿಂಪಲ್‌ ಸಲಹೆ

ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಮದುಮಗಳು ಧರಿಸುವ ಜಗಮಗಿಸುವ ಗ್ರ್ಯಾಂಡ್‌ ಪಾದರಕ್ಷೆಗಳು (Bridal Footwear Fashion) ಹೇಗಿರಬೇಕು? ಯಾವ ಬಗೆಯವು? ಯಾವ ಔಟ್‌ಫಿಟ್‌ ಸೀರೆಗೆ ಸೂಕ್ತ ಎಂಬುದರ ಬಗ್ಗೆ ಸ್ಟೈಲಿಸ್ಟ್ ಗಳು ಒಂದೈದು ಟಿಪ್ಸ್ ನೀಡಿದ್ದಾರೆ.

VISTARANEWS.COM


on

Bridal Footwear Fashion
ಚಿತ್ರಕೃಪೆ: ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಬ್ರೈಡಲ್‌ ಫುಟ್‌ವೇರ್‌ಗಳು (Bridal Footwear Fashion) ನಾನಾ ವಿನ್ಯಾಸದಲ್ಲಿ ಆಗಮಿಸಿದ್ದು, ಆಯ್ಕೆ ಮಾಡುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಅವರ ಪ್ರಕಾರ, ಮದುವೆಯಾಗುತ್ತಿರುವ ಬಹುತೇಕ ಹೆಣ್ಣು ಮಕ್ಕಳು ತೀರಾ ಜಗಮಗಿಸುವ ಗ್ರ್ಯಾಂಡ್‌ ಪಾದರಕ್ಷೆಗಳನ್ನು ಕೊಳ್ಳುತ್ತಾರೆ. ನಂತರ ಇವುಗಳನ್ನು ಧರಿಸುವುದೇ ಇಲ್ಲ. ಮೂಲೆಯಲ್ಲಿಡುತ್ತಾರೆ. ಇದು ಸುಮ್ಮನೇ ವ್ಯರ್ಥವಾಗುತ್ತದೆ. ಹಾಗಾಗಿ ಮದುಮಗಳು ಕೊಳ್ಳುವಂತಹ ಪಾದರಕ್ಷೆಗಳು ಮದುವೆಯ ನಂತರವೂ ಧರಿಸುವಂತಿರಬೇಕು. ಔಟ್‌ಫಿಟ್‌ಗಳಿಗೆ ಹೇಗೆಲ್ಲಾ ಹೊಂದಬೇಕು! ಯಾವ ಸಂದರ್ಭಕ್ಕೆ ಯಾವ ಬಗೆಯವನ್ನು ಧರಿಸಬೇಕು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದೈದು ಸಿಂಪಲ್‌ ಸಲಹೆ ನೀಡಿದ್ದಾರೆ.

Bridal Footwear

ಡಿಸೈನರ್‌ವೇರ್‌/ಸೀರೆಗೆ ಮ್ಯಾಚಿಂಗ್‌

ಮದುವೆಯಾಗುವ ಹೆಣ್ಣು ಮಕ್ಕಳು ತಾವು ಧರಿಸುವ ಔಟ್‌ಫಿಟ್‌ ಹಾಗೂ ಸೀರೆಗೆ ತಕ್ಕಂತೆ ಮ್ಯಾಚ್‌ ಮಾಡುವುದಾದಲ್ಲಿ ಆದಷ್ಟೂ ಕಾಮನ್‌ ಕಲರ್‌ನದ್ದನ್ನು ಆಯ್ಕೆ ಮಾಡಿಕೊಳ್ಳಬೇಕು. ಸೀರೆಯ ಬಣ್ಣಕ್ಕೆ ಹೊಂದಬೇಕು. ಕಾರ್ಯಕ್ರಮದಲ್ಲಿ ಒಂದಕ್ಕಿಂತ ಹೆಚ್ಚು ಪಾದರಕ್ಷೆ ಧರಿಸುವುದಾದಲ್ಲಿ ಅವನ್ನು ಮರುಬಳಕೆ ಮಾಡುವಂತಿರಬೇಕು.

ಗೋಲ್ಡನ್‌ ಶೇಡ್‌ ಕಮಾಲ್‌

ಬಂಗಾರ ವರ್ಣದ ಪಾದರಕ್ಷೆಗಳು ಬಹುತೇಕ ಎಲ್ಲಾ ಉಡುಪು ಹಾಗೂ ಸೀರೆಗಳಿಗೆ ಮ್ಯಾಚ್‌ ಆಗುತ್ತವೆ. ಹಾಗಾಗಿ ಈ ಶೇಡ್‌ನದ್ದನ್ನು ಖರೀದಿಸಿದರೇ ಎಲ್ಲಾ ಔಟ್‌ಫಿಟ್‌ಗೂ ಧರಿಸಬಹುದು. ಕಪ್ಪು ವರ್ಣದ ಪಾದರಕ್ಷೆಗಳನ್ನು ಆವಾಯ್ಡ್‌ ಮಾಡುವುದು ಉತ್ತಮ. ಹಿಂದೂ ಸಂಪ್ರದಾಯದ ಪ್ರಕಾರ, ಸಮಾರಂಭಗಳಿಗೆ ಕಪ್ಪು ಬಣ್ಣದ ಪಾದರಕ್ಷೆಗಳನ್ನು ಧರಿಸುವುದಿಲ್ಲ.

Choose footwear with an ethnic look

ಎಥ್ನಿಕ್‌ ಲುಕ್‌ ಇರುವ ಪಾದರಕ್ಷೆಗಳ ಆಯ್ಕೆ

ಟ್ರೆಡಿಷನಲ್‌ ಮದುವೆಗಳಲ್ಲಿ ಯಾವುದೇ ಕಾರಣಕ್ಕೂ ಫ್ಲಿಪ್‌ ಫ್ಲಾಪ್‌, ಹವಾಯಿ ಶೈಲಿಯ ಫಂಕಿ ಲುಕ್‌ ನೀಡುವಂತವು, ಬೂಟ್ಸ್‌ನಂತಹ ಡಿಸೈನ್‌ನ ಪಾದರಕ್ಷೆಗಳನ್ನು ಆಯ್ಕೆ ಮಾಡಕೂಡದು. ಇವು ಎಥ್ನಿಕ್‌ ಔಟ್‌ಫಿಟ್‌ ಹಾಗೂ ಸೀರೆಗಳಿಗೆ ಮ್ಯಾಚ್‌ ಆಗುವುದಿಲ್ಲ ಎಂಬುದು ನೆನಪಿರಲಿ.

ಗೌನ್‌ಗಳಿಗೆ ಮಾತ್ರ ಶೂ

ಮದುವೆಯ ರಿಸಪ್ಷನ್‌ನಲ್ಲಿ ಕೆಲವರು ವೆಸ್ಟರ್ನ್ ಗೌನ್‌ ಧರಿಸುತ್ತಾರೆ. ಇವಕ್ಕೆ ಮಾತ್ರ ಶೂಗಳು ಓಕೆ. ಇತರೇ ಕಾರ್ಯಕ್ರಮಗಳಿಗೆ ಇವು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ ಎಂಬುದು ನೆನಪಿರಲಿ. ಧರಿಸಿದರೂ ನಮ್ಮ ದೇಸಿ ಶೈಲಿಯ ಜೂತಿ ಶೈಲಿಯವನ್ನು ಧರಿಸಬೇಕು.

High shoes for reception only

ರಿಸಪ್ಷನ್‌ಗೆ ಮಾತ್ರ ಎತ್ತರದ ಪಾದರಕ್ಷೆ

ಮದುವೆಗಳಲ್ಲಿ ದೇವರ ಕಾರ್ಯಗಳಿರುವುದರಿಂದ ಬಹುತೇಕರು ಪಾದರಕ್ಷೆಗಳನ್ನು ಧರಿಸುವುದೇ ಇಲ್ಲ. ಏನಿದ್ದರೂ ರಿಸಪ್ಷನ್‌ ಹಾಗೂ ಇತರೇ ಕಾರ್ಯಕ್ರಮಗಳಲ್ಲಿ ಮಾತ್ರ ಧರಿಸಲಾಗುತ್ತದೆ. ಹಾಗಾಗಿ ಯೋಚಿಸಿ ಹೀಲ್ಸ್ ಇರುವಂತವನ್ನು ಖರೀದಿಸಿ. ರಿಸಪ್ಷನ್‌ನಲ್ಲಿ ಮಾತ್ರ ಹೀಲ್ಸ್‌ ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Cowrie Fashion Accessories: ಕವಡೆಗೂ ಸಿಕ್ತು ಫಂಕಿ ಚೋಕರ್‌ ನೆಕ್ಲೇಸ್‌ ರೂಪ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Wedding Celebrity Look: ಮದುವೆಯಲ್ಲಿ ಮದುಮಗಳ ಸೆಲೆಬ್ರೆಟಿ ಲುಕ್‌ಗೆ ಸಾಥ್‌ ನೀಡುವ 5 ಪ್ರಮುಖ ಅಂಶಗಳಿವು

ಮದುವೆಯಲ್ಲಿ ಮದುಮಗಳು ಸೆಲೆಬ್ರೆಟಿ ಲುಕ್‌ (Wedding celebrity look) ಪಡೆಯಲು 5 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌. ಅವು ಯಾವುವು? ಟ್ರೆಂಡ್‌ಗೆ ತಕ್ಕಂತೆ ಹೇಗೆಲ್ಲಾ ಬದಲಿಸಿಕೊಳ್ಳಬೇಕು? ಎಂಬುದರ ಬಗ್ಗೆ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Wedding Celebrity Look
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ಸೆಲೆಬ್ರೆಟಿ ಲುಕ್‌ (Wedding celebrity look) ಟ್ರೆಂಡಿಯಾಗಿದೆ. ಈ ಲುಕ್‌ಗಾಗಿ ಸಾಕಷ್ಟು ಹೆಣ್ಣುಮಕ್ಕಳು ನಾನಾ ಕಸರತ್ತು ಮಾಡುತ್ತಾರೆ. ಇದಕ್ಕೆ ಕಾರಣ, ಈ ಲುಕ್‌ ಇಡೀ ಬಳಗವನ್ನೇ ಸೆಳೆಯುತ್ತದೆ. ಅಷ್ಟು ಮಾತ್ರವಲ್ಲ, ಜೀವನದ ಬ್ಯೂಟಿಫುಲ್‌ ನೆನಪಿನಂಗಳದಲ್ಲಿ ಉಳಿಯುತ್ತದೆ. ವಿಡಿಯೋ, ಫೋಟೋ ಹೀಗೆ ಎಲ್ಲವಲ್ಲೂ ಹೈಲೈಟಾಗುತ್ತದೆ. ನೋಡಿದಾಗ ಮದುಮಗಳ ಸುಂದರ ವಧನ ಹಾಗೂ ಅಲಂಕಾರ ಎಲ್ಲರನ್ನು ಸಮ್ಮೋಹನಗೊಳಿಸುತ್ತದೆ. ಪರಿಣಾಮ, ಸಾಮಾನ್ಯ ಹೆಣ್ಣುಮಕ್ಕಳು ಕೂಡ ಇತ್ತೀಚೆಗೆ ಈ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿ ಮಾಡಬೇಕಾಗಿದ್ದು ಇಷ್ಟೇ! ಮದುಮಗಳ ಸೌಂದರ್ಯ ಹೆಚ್ಚಿಸುವ ಈ ಲುಕ್‌ಗಾಗಿ 5 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌.‌ ಅವರ ಪ್ರಕಾರ, ಮದುಮಗಳಿಗೆ ಸಿಂಗಾರ ಮಾಡಿದಾಗ ದೇವತೆಯಂತೆ ಕಾಣಿಸಬೇಕು. ನೋಡಿದಾಗ ಎಲ್ಲರ ಕಣ್ಮನ ಸೆಳೆಯಬೇಕು. ಆಗಷ್ಟೇ ಇಡೀ ಮದುವೆ ಮನೆಯ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಲು ಸಾಧ್ಯ ಎನ್ನುತ್ತಾರೆ.

Wedding Celebrity Look

ವೆಡ್ಡಿಂಗ್‌ಗೆ ಗ್ರ್ಯಾಂಡ್‌ ಮೇಕಪ್‌ ಆಯ್ಕೆ ಮಾಡಿ

ಮದುವೆಗಳಲ್ಲಿ ಮದುಮಗಳಿಗೆ ಆದಷ್ಟೂ ಗ್ರ್ಯಾಂಡ್‌ ಲುಕ್‌ ನೀಡುವ ವೆಡ್ಡಿಂಗ್‌ ಮೇಕಪ್‌ ಆಯ್ಕೆ ಮಾಡಿ. ಯಾಕೆಂದರೇ, ಸಿಂಪಲ್‌ ಲುಕ್‌ ಫೋಟೋಗ್ರಾಫಿ ಹಾಗೂ ವಿಡಿಯೋಗ್ರಾಫಿಯಲ್ಲಿ ಹೈಲೈಟ್‌ ಆಗುವುದಿಲ್ಲ. ವೆಡ್ಡಿಂಗ್‌ಗೆಂದು ಮಾಡಲಾಗುವ ನಾನಾ ಮೇಕಪ್‌ಗಳು ಮಾತ್ರ ಈ ಕೆಲಸ ಮಾಡಬಲ್ಲವು. ಉದಾಹರಣೆಗೆ., ಸೆಲೆಬ್ರೆಟಿ ಮೇಕಪ್‌, ಮಿನರಲ್‌ ಮೇಕಪ್‌, ಟ್ರೆಡಿಷನಲ್‌ ಮೇಕಪ್‌ನಲ್ಲಿ ಬರುವಂತಹ ಮೇಕಪ್‌ಗಳನ್ನು ಆರಿಸಿಕೊಳ್ಳಬೇಕು. ಹಣೆಗೆ ಬಿಂದಿ ಇಡುವುದನ್ನು ಮರೆಯಬಾರದು, ಕಣ್ಣಿಗೆ ಕಾಡಿಗೆ ಮಸ್ಟ್‌ ಮೇಕಪ್‌ ಲಿಸ್ಟ್‌ನಲ್ಲಿರಬೇಕು.

Wedding Celebrity Look

ಟ್ರೆಂಡಿ ಗ್ರ್ಯಾಂಡ್‌ ರೇಷ್ಮೆ ಸೀರೆಯ ಆಯ್ಕೆ

ಮದುವೆಗೆ ರೇಷ್ಮೆ ಸೀರೆಯನ್ನು ಉಡುವುದು ಪ್ರಮುಖ ಸಂಗತಿಗಳಲ್ಲೊಂದು. ಅದರಲ್ಲೂ ಗ್ರ್ಯಾಂಡ್‌ ಲುಕ್‌ ನೀಡುವ ಟ್ರೆಂಡಿ ಗೋಲ್ಡನ್‌ ಹಾಗೂ ಸಿಲ್ವರ್‌ ಶೇಡ್‌ನ ಬಾರ್ಡರ್‌ ರೇಷ್ಮೆ ಸೀರೆಗಳನ್ನು ಉಟ್ಟಾಗ ಎದ್ದು ಕಾಣುವುದು. ಪಾಸ್ಟೆಲ್‌ ಶೇಡ್‌ಗಳು ಚಾಲ್ತಿಯಲ್ಲಿವೆ.

Wedding Celebrity Look

ಟ್ರೆಡಿಷನಲ್‌ ಹೇರ್‌ಸ್ಟೈಲ್‌

ಇದೀಗ ಲಾಂಗ್‌ ಮೆಸ್ಸಿ ಜಡೆ ಹಾಗೂ ಉದ್ದುದ್ದದ ಕುಚ್ಚು ಹಾಕಿರುವಂತಹ ಇನ್‌ಸ್ಟಂಟ್‌ ಜಡೆಗಳು ಟ್ರೆಂಡಿಯಾಗಿವೆ. ಇವುಗಳಿಗೆ ಹೇರ್‌ ಎಕ್ಸ್‌ಟೆನ್‌ಷನ್‌ ಹಾಕಿ ವೈವಿಧ್ಯಮಯವಾಗಿ ಸಿಂಗರಿಸಲಾಗುತ್ತದೆ. ಹೂವುಗಳ ಸಿಂಗಾರ ಕೂಡ ಟ್ರೆಡಿಷನಲ್‌ ಲುಕ್‌ ಜೊತೆಗೆ ಮದುಮಗಳನ್ನು ಗ್ರ್ಯಾಂಡ್‌ ಆಗಿ ಬಿಂಬಿಸುತ್ತದೆ.

Wedding Celebrity Look

ಆಂಟಿಕ್‌ ಆಭರಣಗಳನ್ನು ಧರಿಸಿ

ಆಂಟಿಕ್‌ ಜ್ಯುವೆಲರಿಗಳು ಇಡೀ ಲುಕ್ಕನ್ನು ಹೈಲೈಟ್‌ ಮಾಡುತ್ತದೆ. ಆಯಾ ರೇಷ್ಮೆ ಸೀರೆ ಮ್ಯಾಚ್‌ ಆಗುವಂತಹ ಜ್ಯುವೆಲರಿ ಸೆಟ್‌ ಧರಿಸಿದಾಗ ದೇವತೆಯ ಲುಕ್‌ ಪಡೆಯಬಹುದು. ಜುಮಕಿ, ಕಿವಿಯ ಸರಪಳಿ, ನೆಕ್ಲೇಸ್‌, ಹಾರ, ಕಡಗ, ಕೈ ಉಂಗುರಗಳು ಹೀಗೆ ಎಲ್ಲವನ್ನೂ ಧರಿಸಬೇಕು. ಟೆಂಪಲ್‌ ಜ್ಯುವೆಲರಿ, ಕಾಸಿನ, ಅಡಕೆ ಡಿಸೈನ್‌ನ ನೆಕ್ಲೇಸ್‌ಗಳು ಟ್ರೆಡಿಷನಲ್‌ ಲುಕ್‌ ನೀಡಬಲ್ಲವು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬದಲಾಯ್ತು ಜೆನ್‌ ಜಿ ಹುಡುಗರ ಸಮ್ಮರ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌

Continue Reading

ಫ್ಯಾಷನ್

Kids Summer Travel Fashion: ಬೇಸಿಗೆಯಲ್ಲಿ ಹೀಗಿರಲಿ ಚಿಣ್ಣರ ಟ್ರಾವೆಲ್‌ ಫ್ಯಾಷನ್‌

ಬೇಸಿಗೆಯಲ್ಲಿ ಮಕ್ಕಳೊಂದಿಗೆ ಪ್ರಯಾಣಿಸುವ ಪೋಷಕರು ಅವರ ಟ್ರಾವೆಲ್‌ ಫ್ಯಾಷನ್‌ (Kids Summer Travel Fashion) ಬಗ್ಗೆ ಗಮನ ನೀಡಬೇಕಾದ್ದು ಅತ್ಯಗತ್ಯ. ಸ್ಟೈಲಾಗಿರುವ ಉಡುಪಿನ ಜೊತೆಗೆ ಅವರಿಗೆ ಕಂಫರ್ಟಬಲ್‌ ಆಗುವಂತಹ ಔಟ್‌ಫಿಟ್‌ ಆಯ್ಕೆ ಮಾಡುವುದು ಅವಶ್ಯ ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್.‌

VISTARANEWS.COM


on

Kids Summer Travel Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ನಲ್ಲಿ ಟ್ರಾವೆಲ್‌ ಮಾಡುವ ಮಕ್ಕಳ ಫ್ಯಾಷನ್‌ (Kids Summer Travel Fashion) ಪರ್ಫೆಕ್ಟಾಗಿರಲಿ ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್. ಹೌದು, ಬೇಸಿಗೆಯಲ್ಲಿ ಮಕ್ಕಳೊಂದಿಗೆ ಪಿಕ್ನಿಕ್‌, ಟೂರ್‌, ಔಟಿಂಗ್‌ ಎಂದೆಲ್ಲಾ ಪ್ರಯಾಣಿಸುವ ಚಿಣ್ಣರ ಡ್ರೆಸ್‌ಕೋಡ್‌ ಬಗ್ಗೆ ಪೋಷಕರು ಗಮನ ನೀಡಬೇಕಾದ್ದು ಅತ್ಯಗತ್ಯ. ಮಕ್ಕಳಿಗೆ ಹಾಕುವ ಒಂದೊಂದು ಉಡುಪು ನೋಡಲು ಸ್ಟೈಲಾಗಿದ್ದರೇ ಸಾಲದು, ಜೊತೆಗೆ ಕಂಫರ್ಟಬಲ್‌ ಆಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಕಿಡ್ಸ್‌ ಸ್ಟೈಲಿಸ್ಟ್‌ ಜಾನ್‌ ಒಂದಿಷ್ಟು ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ.

Kids Summer Travel Fashion

ಬೇಸಿಗೆಯ ಸೀಸನ್‌ಗೆ ತಕ್ಕಂತಿರಲಿ

ಸುಡು ಬೇಸಿಗೆಯ ಸೀಸನ್‌ಗೆ ತಕ್ಕಂತೆ ಮಕ್ಕಳ ಔಟ್‌ಫಿಟ್‌ಗಳಿರಬೇಕು. ಧರಿಸಿದಾಗ ಸೆಕೆಯಾಗಬಾರದು. ಅಲ್ಲದೇ, ಆರಾಮ ಎಂದೆನಿಸಬೇಕು. ಹಾಗಾಗಿ ಟ್ರೆಂಡಿಯಾಗಿರುವ ಉಡುಪುಗಳಿಗಿಂತ ಆರಾಮದಾಯಕ ಎಂದೆನಿಸುವ ಔಟ್‌ಫಿಟ್‌ಗಳನ್ನು ಮಕ್ಕಳಿಗೆ ಪ್ರಿಫರ್‌ ಮಾಡಬೇಕು. ಲೈಟ್‌ವೈಟ್‌ನದ್ದಾಗಿರಬೇಕು.

Kids Summer Travel Fashion

ಯೂನಿಸೆಕ್ಸ್‌ ಡಿಸೈನ್ಸ್‌ ಮಕ್ಕಳಿಗೆ ಬೇಡ

ಟ್ರಾವೆಲಿಂಗ್‌ ಸಮಯದಲ್ಲಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಯೂನಿಸೆಕ್ಸ್‌ ಡಿಸೈನ್‌ ಚೂಸ್‌ ಮಾಡಬೇಡಿ. ಧರಿಸಿದಾಗ ಅವರ ಬಾಡಿಗೆ ಸರಿಯಾಗಿ ಕೂರುವುದಿಲ್ಲ. ಇನ್ನು, ಈ ಸೀಸನ್‌ನಲ್ಲಿ, ಹುಡುಗರಿಗೆ ಸ್ಲೀವ್‌ಲೆಸ್‌ ಟೀ ಶರ್ಟ್‌ ಹಾಕಿಸಿದಲ್ಲಿ, ಹುಡುಗಿಯರಿಗೆ ಸ್ಲೀವ್‌ಲೆಸ್‌ ಫ್ರಾಕ್‌ ಹಾಕಿಸಬಹುದು. ಕ್ಯಾಶುವಲ್‌ವೇರ್‌ ಆದಲ್ಲಿ ಮಾತ್ರ ಇಬ್ಬರಿಗೂ ಒಂದೇ ರೀತಿಯದ್ದನ್ನು ಹಾಕಿಸಬಹುದು. ಟೀ ಶರ್ಟ್‌ -ಪ್ಯಾಂಟ್‌, ಬರ್ಮಡಾ, ಶಾರ್ಟ್ಸ್‌ ಹೀಗೆ ಒಂದೇ ರೀತಿಯಲ್ಲಿ ನಾನಾ ಬಗೆಯಲ್ಲಿ ಮ್ಯಾಚ್‌ ಮಾಡಬಹುದು.

ಮಕ್ಕಳಿಗಾದಲ್ಲಿ ಟ್ವಿನ್ನಿಂಗ್‌ ಮಾಡಿ

ಇಬ್ಬರು ಮಕ್ಕಳಿಗಾದಲ್ಲಿ ಟ್ವಿನ್ನಿಂಗ್‌ ಮಾಡಬಹುದು. ಒಂದೇ ರೀತಿಯ ಉಡುಪುಗಳನ್ನು ಹಾಕಬಹುದು. ನೋಡಲು ಆಕರ್ಷಕವಾಗಿ ಕಾಣುವ ಔಟ್‌ಫಿಟ್‌ ಚೂಸ್‌ ಮಾಡಬಹುದು. ಕಾರ್ಟೂನ್‌ ಕ್ಯಾರೆಕ್ಟರ್‌ನಿಂದಿಡಿದು ಟ್ರೆಂಡಿಯಾಗಿರುವ ಫಂಕಿ ಉಡುಪನ್ನು ಹಾಕಬಹುದು. ಸಮ್ಮರ್‌ ಡಿಸೈನ್‌ಗಳಲ್ಲಿ ನಾನಾ ವಿನ್ಯಾಸದವು ಲಭ್ಯ.

ಪಿಕ್ನಿಕ್‌ ಔಟ್‌ಫಿಟ್ಸ್‌

ಒಂದು ದಿನದ ಫಿಕ್ನಿಕ್‌ಗೆ ಹೋಗುವುದಾದಲ್ಲಿ ಆದಷ್ಟೂ ಅಟ್ರಾಕ್ಟಿವ್‌ ಆಗಿರುವಂತಹ, ನೋಡಲು ಚೆನ್ನಾಗಿ ಕಾಣುವಂತಹ ಫಂಕಿ ಸ್ಟೈಲ್‌ ಇರುವಂತಹ ಸ್ಲಿವ್‌ಲೆಸ್‌ , ಕ್ರಾಪ್‌ ಟಾಪ್ಸ್‌, ಸ್ಟ್ರಾಪ್ಸ್‌, ಸ್ಪೆಗೆಟಿ, ನೂಡಲ್ಸ್‌ ಸ್ಟ್ರಾಪ್‌ ಸೇರಿದಂತೆ ನಾನಾ ಬಗೆಯ ಟಾಪ್‌ಗಳಿರುವಂತಹ ಔಟ್‌ಫಿಟ್‌ಗಳನ್ನು ಹೆಣ್ಣುಮಕ್ಕಳಿಗೆ ಹಾಕಿಸಬಹುದು. ಇನ್ನು ಗಂಡು ಮಕ್ಕಳಿಗಾದಲ್ಲಿ ಸಿಂಪಲ್‌ ಟೀ ಶರ್ಟ್ಸ್‌, ಸ್ಲಿವ್‌ಲೆಸ್‌ ಟಾಪ್ಸ್‌, ಪಾಕೆಟ್‌ ಶಾರ್ಟ್ಸ್‌, ಪ್ಯಾಂಟ್ಸ್‌ ಚೂಸ್‌ ಮಾಡಬಹುದು.

Kids Summer Travel Fashion

ಟೂರ್‌ಗೆ ತೆರಳುವಾಗ

ಮಕ್ಕಳನ್ನು ಕರೆದುಕೊಂಡು ಲಾಂಗ್‌ ಟೂರ್‌ಗಳಿಗೆ ತೆರಳುವುದಾದಲ್ಲಿ, ಆದಷ್ಟೂ ರಫ್‌ ಆಗಿ ಬಳಸಬಹುದಾದ ಫ್ಯಾಬ್ರಿಕ್‌ನ ಡ್ರೆಸ್‌ಗಳನ್ನು ಆಯ್ಕೆ ಮಾಡಿ. ಸೆಕೆ ಕಾಲವಾದ್ದರಿಂದ ಬ್ರಿಥೆಬಲ್‌ ಔಟ್‌ಫಿಟ್ಸ್‌ ಮಕ್ಕಳಿಗೆ ಹಾಕಿಸಿ. ಅವರು ಧರಿಸುವ ಉಡುಪು ಉಸಿರುಗಟ್ಟಿಸುವಂತಿರಬಾರದು. ನೋಡಲು ಬಣ್ಣಬಣ್ಣದ ಉಡುಪುಗಳನ್ನು ಸೆಲೆಕ್ಟ್‌ ಮಾಡಿ. ಮುದ್ದು ಮುದ್ದಾಗಿ ಕಾಣಿಸುತ್ತವೆ.

Kids Summer Travel Fashion

ಮಕ್ಕಳ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತಿರಲಿ

ಮಕ್ಕಳ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಔಟ್‌ಫಿಟ್‌ ಆಯ್ಕೆ ಉತ್ತಮ. ತೀರಾ ದೊಗಲೆಯಾದರೂ ಚೆನ್ನಾಗಿ ಕಾಣದು. ತೀರಾ ಟೈಟಾದರೂ ಉಸಿರುಗಟ್ಟಿಸುವುದು. ಹಾಗಾಗಿ ಮಕ್ಕಳ ಆರಾಮಕ್ಕೆ ಸೂಕ್ತವೆನಿಸುವುದನ್ನು ಚೂಸ್‌ ಮಾಡಿ ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Horseshoe Septum Ring Fashion: ಅಲ್ಟ್ರಾ ಮಾಡರ್ನ್‌ ಸ್ಟೈಲಿಂಗ್‌ ಪ್ರಿಯರ ಮನಗೆದ್ದ ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌

Continue Reading

ಫ್ಯಾಷನ್

Horseshoe Septum Ring Fashion: ಅಲ್ಟ್ರಾ ಮಾಡರ್ನ್‌ ಸ್ಟೈಲಿಂಗ್‌ ಪ್ರಿಯರ ಮನಗೆದ್ದ ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌

ಹಾರ್ಸ್‌ ಶೂ ಸೆಪ್ಟಮ್‌ ನೋಸ್‌ ರಿಂಗ್‌ಗಳು (Horseshoe Septum Ring Fashion) ಇದೀಗ ಟೀನೇಜ್‌ ಹುಡುಗಿಯರನ್ನು ಆವರಿಸಿಕೊಂಡಿವೆ. ಅಲ್ಟ್ರಾ ಮಾಡರ್ನ್‌ ಲುಕ್‌ ನೀಡುತ್ತಿರುವ ಇವು ಸದ್ಯ ಜಂಕ್‌ ಆಕ್ಸೆಸರೀಸ್‌ ಲಿಸ್ಟ್‌ನ ಟಾಪ್‌ನಲ್ಲಿವೆ. ಏನಿದು ಹಾರ್ಸ್‌ ಶೂ ಸೆಪ್ಟಮ್‌ ನೋಸ್‌ ರಿಂಗ್‌? ಎಲ್ಲೆಲ್ಲಿ ಲಭ್ಯ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Horseshoe Septum Ring Fashion
ಚಿತ್ರಕೃಪೆ : ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೂಗಿನ ಸೌಂದರ್ಯ ಹೆಚ್ಚಿಸುವ ಹಾರ್ಸ್‌ ಶೂ ಸೆಪ್ಟಮ್‌ ನೋಸ್‌ ರಿಂಗ್‌ಗಳು (Horseshoe Septum Ring Fashion) ಇದೀಗ ಟೀನೇಜ್‌ ಹುಡುಗಿಯರನ್ನು ಆವರಿಸಿಕೊಂಡಿವೆ. ಅಲ್ಟ್ರಾ ಮಾಡರ್ನ್‌ ಲುಕ್‌ ನೀಡುತ್ತಿರುವ ಇವು ಸದ್ಯ ಜಂಕ್‌ ಆಕ್ಸೆಸರೀಸ್‌ ಲಿಸ್ಟ್‌ನ ಟಾಪ್‌ನಲ್ಲಿವೆ. ಅದರಲ್ಲೂ ಮೂಗಿನ ಮಧ್ಯ ಭಾಗವನ್ನು ಇವು ವ್ಯಾಪಿಸಿಕೊಂಡಿದ್ದು, ನೋಡಲು ಡಿಫರೆಂಟ್‌ ಲುಕ್‌ ನೀಡುವುದರೊಂದಿಗೆ ಹೈ ಫ್ಯಾಷನ್‌ ಲುಕ್‌ಗೆ ಸಾಥ್‌ ನೀಡುತ್ತಿವೆ.

Horseshoe Septum Ring Fashion

ಏನಿದು ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌ ಫ್ಯಾಷನ್‌

ಮೂಗಿನ ಹೊಳ್ಳೆಗೆ ಚುಚ್ಚಲಾದ ಸೆಪ್ಟಮ್‌ ನೋಸ್‌ ರಿಂಗ್‌ಗಳಿವು. ಈ ಮೊದಲು ಸೆಪ್ಟಮ್‌ ರಿಂಗ್‌ ಚುಚ್ಚುವುದು ಹೈ ಫ್ಯಾಷನ್‌ನಲ್ಲಿ ಬಂದಿತ್ತು. ಇದೀಗ ಈ ಸೆಪ್ಟಮ್‌ ನೋಸ್‌ ರಿಂಗ್‌ಗಳಲ್ಲಿ ಹಾರ್ಸ್‌ ಶೂ ರಿಂಗ್‌ಗಳು ಎಂಟ್ರಿ ನೀಡಿವೆ. ಇವು ನೋಡಲು ವಿಭಿನ್ನ ಲುಕ್‌ ನೀಡುವುದರೊಂದಿಗೆ ಜೆನ್‌ ಜಿ ಹುಡುಗಿಯರ ಆಕ್ಸೆಸರೀಸ್‌ ಅದರಲ್ಲೂ ಪಿಯರ್ಸಿಂಗ್‌ ಆಕ್ಸೆಸರೀಸ್‌ ಲಿಸ್ಟ್‌ಗೆ ಸೇರಿಕೊಂಡಿವೆ.

Horseshoe Septum Ring Fashion

ಪ್ರಯೋಗಾತ್ಮಕ ಪಿಯರ್ಸಿಂಗ್‌ ಆಕ್ಸೆಸರೀಸ್‌ಗಳಿವು

“ಅಂಗೈ ಅಗಲದ ಹಾರ್ಸ್‌ ಶೂ ಸಿಂಬಲ್‌ ಇರುವಂತಹ ಮೆಟಲ್‌ ಪ್ರಾಡಕ್ಟನ್ನು ಮನೆಯ ಬಾಗಿಲಿಗೆ ನೇತುಹಾಕುವುದನ್ನು ಬಹಳಷ್ಟು ಕಡೆ ನೋಡಬಹುದು. ಇದು ಬಹಳಷ್ಟು ಕಡೆಯ ಟ್ರೆಡಿಷನಲ್‌ ರಿವಾಜಿನಲ್ಲಿ ಕಾಣಬಹುದು. ಇದೀಗ ಹುಡುಗಿಯರ ಮೂಗಿನ ಹೊಳ್ಳೆಗೆ ಸಿಕ್ಕಿಸುವಂತಹ ಫ್ಯಾಷನ್‌ನಲ್ಲಿ ಈ ಡಿಸೈನ್‌ನ ಮಿನಿ ಮೆಟಲ್‌ ನೋಸ್‌ ರಿಂಗ್‌ ಸೇರಿರುವುದು ಅಚ್ಚರಿ ಮೂಡಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ಟ್ರೆಡಿಷನಲ್‌ ಆಕ್ಸೆಸರೀಸ್‌ ಅಲ್ಲವೇ ಅಲ್ಲ, ನಮ್ಮ ರಾಷ್ಟ್ರದಲ್ಲಿ ಮೊದಲಿನಿಂದಲೂ ಮೂಗಿಗೆ ರಿಂಗ್‌ ಹಾಗೂ ಮೂಗಿನ ಬೊಟ್ಟು ಧರಿಸುವುದು ಟ್ರೆಡಿಷನಲ್‌ ಆಕ್ಸೆಸರೀಸ್‌ನಲ್ಲಿವೆ. ಹೆಚ್ಚೆಂದರೇ ಅಗಲವಾದ ಹಾಗೂ ಬಂಗಾರೇತರ ಮೆಟಲ್‌ಗಳನ್ನು ಧರಿಸುವ ಫ್ಯಾಷನ್‌ ಇದೀಗ ಇಂಡೋ-ವೆಸ್ಟರ್ನ್‌ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿವೆ. ಇದಕ್ಕೆಲ್ಲಾ ತದ್ವಿರುದ್ಧವೆಂಬಂತೆ, ನಮ್ಮ ರಿವಾಜಿನಲ್ಲಿ ಇಲ್ಲದ, ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌ಗಳು ಪ್ರಯೋಗಾತ್ಮಕ ನೋಸ್‌ ರಿಂಗ್‌ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ. ಜೆನ್‌ ಜಿ ಹುಡುಗಿಯರು ಅದರಲ್ಲೂ ಕೊಂಚ ಹೈ ಸ್ಟ್ರೀಟ್‌ ಫ್ಯಾಷನ್‌ ಆಕ್ಸೆಸರೀಸ್‌ ಇಷ್ಟಪಡುವಂತಹ ಹುಡುಗಿಯರನ್ನು ಸೆಳೆದಿವೆ” ಎಂದು ಈ ಫ್ಯಾಷನ್‌ ಬಗ್ಗೆ ತಿಳಿಸುವ ಸ್ಟೈಲಿಸ್ಟ್‌ ಧನ್ಯಾ ಅವರ ಪ್ರಕಾರ, ಇವು ಸದ್ಯ ಪಿಯರ್ಸಿಂಗ್‌ ಪ್ರಿಯರ ಆಕ್ಸೆಸರೀಸ್‌ಗಳಾಗಿವೆ ಎನ್ನುತ್ತಾರೆ.

Horseshoe Septum Ring Fashion

ಟ್ರೆಂಡಿಯಾಗಿರುವ ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌

ಇದೀಗ ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌ಗಳಲ್ಲಿ ಮ್ಯಾಗ್ನೆಟಿಕ್‌ ರಿಂಗ್‌ಗಳು ಹೆಚ್ಚು ಟ್ರೆಂಡ್‌ನಲ್ಲಿವೆ. ಖುಷಿಯ ವಿಚಾರವೆಂದರೇ, ಇವನ್ನು ಮೂಗಿನ ಹೊಳ್ಳೆ ಚುಚ್ಚದೆಯೇ ಧರಿಸಬಹುದು. ಇವು ಪ್ಲಾಟಿನಂ ಕೋಟೆಡ್‌ನಲ್ಲಿ ದೊರೆಯುತ್ತವೆ. ಇನ್ನು ನಾರ್ಮಲ್‌ ಡಿಸೈನ್‌ನವನ್ನು ಚುಚ್ಚಿಸಿ ಧರಿಸಬೇಕಾಗುತ್ತದೆ. ಕೆಲವರು ಇವನ್ನು ಗೋಲ್ಡ್‌ ಹಾಗೂ ಸಿಲ್ವರ್‌ನಲ್ಲೂ ಧರಿಸುತ್ತಾರೆ. ಡೈಮಂಡ್‌ನವು ಕೂಡ ದೊರೆಯುತ್ತವೆ. ಇನ್ನು ಬ್ಲ್ಯಾಕ್‌ ಮೆಟಲ್‌ ಹಾಗೂ ವೈಟ್‌ ಮೆಟಲ್‌ನವು ಹೆಚ್ಚು ಚಾಲ್ತಿಯಲ್ಲಿವೆ.

Horseshoe Septum Ring Fashion

ಎಲ್ಲೆಲ್ಲಿ ಲಭ್ಯ ? ಯಾವುದೆಲ್ಲಾ ಬೆಸ್ಟ್‌ ?

  • ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ ಆಕ್ಸೆಸರೀಸ್‌ ಶಾಪ್‌ಗಳಲ್ಲಿ ನಾನಾ ಡಿಸೈನ್‌ನವು ಲಭ್ಯ.
  • ಆನ್‌ಲೈನ್‌ ಶಾಪ್‌ಗಳಲ್ಲಿ ಬೇಕಾದ ಡಿಸೈನ್‌ನವನ್ನು ಖರೀದಿಸಬಹುದು.
  • ಆದಷ್ಟೂ ಫಿನಿಶಿಂಗ್‌ ಇರುವಂತದ್ದನ್ನು ಕೊಳ್ಳಬೇಕು.
  • ಗುಣಮಟ್ಟದ ಬ್ರಾಂಡೆಡ್‌ ಪ್ರಾಡಕ್ಟ್‌ ಖರೀದಿಸಿ.
  • ನೋಸ್‌ ಪಿಯರ್ಸಿಂಗ್‌ ಮಾಡಿಸುವವರ ಬಳಿಯೂ ದೊರೆಯುತ್ತವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬದಲಾಯ್ತು ಜೆನ್‌ ಜಿ ಹುಡುಗರ ಸಮ್ಮರ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌

Continue Reading

ಪ್ರಮುಖ ಸುದ್ದಿ

Surabhi Jain : 30 ವರ್ಷಕ್ಕೆ ಮೃತಪಟ್ಟ ಫ್ಯಾಷನ್ ಐಕಾನ್​ ಸುರಭಿ ಜೈನ್

VISTARANEWS.COM


on

Surabhi Jain
Koo

ನವದೆಹಲಿ: ಜನಪ್ರಿಯ ಫ್ಯಾಷನ್ ಐಕಾನ್​ ಸುರಭಿ ಜೈನ್ ಕ್ಯಾನ್ಸರ್​ನೊಂದಿಗಿನ ದೀರ್ಘಕಾಲದ ಹೋರಾಟದ ನಂತರ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಅವರಿಗೆ 30 ವರ್ಷ ವಯಸ್ಸಾಗಿತ್ತು. ಇನ್​ಸ್ಟಾಗ್ರಾಮ್​ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರೆ. ಜೈನ್ ಅಂಡಾಶಯದ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಎಂಟು ವಾರಗಳ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಹಾಕಿದ ತನ್ನ ಕೊನೆಯ ಪೋಸ್ಟ್​ನಲ್ಲಿ ಸುರಭಿ ಜೈನ್ ಆಸ್ಪತ್ರೆಯಲ್ಲಿ ತನ್ನ ಚಿತ್ರ ಹಂಚಿಕೊಂಡಿದ್ದರು.

“ನನ್ನ ಆರೋಗ್ಯದ ಬಗ್ಗೆ ನಾನು ನಿಮಗೆ ಅಪ್ಡೇಟ್ ಮಾಡಿಲ್ಲ ಎಂದು ನನಗೆ ತಿಳಿದಿದೆ. ಅದರ ಬಗ್ಗೆ ನಾನು ಪ್ರತಿದಿನ ಪಡೆಯುತ್ತಿರುವ ಸಂದೇಶಗಳ ಸಂಖ್ಯೆಯನ್ನು ನೋಡಿದರೆ ಭಯವಾಗುತ್ತಿದೆ. ವಿಷಯಗಳು ಉತ್ತಮವಾಗಿ ನಡೆಯುತ್ತಿಲ್ಲ. ಆದ್ದರಿಂದ ಹಂಚಿಕೊಳ್ಳಲು ಹೆಚ್ಚು ಇಲ್ಲ. ಕಳೆದ 2 ತಿಂಗಳುಗಳಲ್ಲಿ ನಾನು ಹೆಚ್ಚಾಗಿ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಚಿಕಿತ್ಸೆ ನಡೆಯುತ್ತಿದೆ. ಕಷ್ಟ ಮತ್ತು ಇದೆಲ್ಲವೂ ಕೊನೆಗೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದು ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

ಅವರ ಸಾವಿನ ಸುದ್ದಿಯನ್ನು ಅವರ ಕುಟುಂಬವು ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ. ಅವರು ಗುರುವಾರ ನಿಧನರಾದರು ಮತ್ತು ಏಪ್ರಿಲ್ 19 ರಂದು ಗಾಜಿಯಾಬಾದ್​ನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ಅವರು ಹೇಳಿದರು.

ಸುರಭಿ ಜೈನ್ ಅವರಿಗೆ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿರುವುದು ಇದು ಎರಡನೇ ಬಾರಿ. 27 ನೇ ವಯಸ್ಸಿನಲ್ಲಿ, ಅವರು ತಮ್ಮ ಮೊದಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. “ಶಸ್ತ್ರಚಿಕಿತ್ಸೆಯಿಂದ ನನಗೆ 149 ಹೊಲಿಗೆಗಳು ಮತ್ತು ಸಾಕಷ್ಟು ನೋವು ಕಾಣಿಸಿಕೊಂಡಿತು. ನಾನು ಹೆಚ್ಚು ಚಟವಟಿಕೆಯಿಂದ ಇರಲು ಹಾಗೂ ನಗು ಮೂಡಿಸಲು ಶ್ರಮ ವಹಿಸುತ್ತಿದ್ದೇನೆ ಎಂದು ಅವರು ಆ ವೇಳೆ ಬರೆದುಕೊಂಡಿದ್ದರು.

ಅಂಡಾಶಯದ ಕ್ಯಾನ್ಸರ್ ಅಂಡಾಶಯಗಳಲ್ಲಿ ಹುಟ್ಟುತ್ತದೆ ಮತ್ತು ಇದು ಮಹಿಳೆಯರಿಗೆ ಗಮನಾರ್ಹ ಆರೋಗ್ಯ ಕಾಳಜಿಯಾಗಿದೆ. ಈ ರೋಗವು ಅಂಡಾಶಯಗಳಲ್ಲಿ ಮಾರಣಾಂತಿಕ ಗೆಡ್ಡೆಯಿಂದ ಆರಂಭವಾಗುತ್ತದೆ. ಇದು ಆರೋಗ್ಯಕರ ಅಂಗಾಂಶಗಳನ್ನು ನಾಶಪಡಿಸುತ್ತದೆ. ಇದು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ನಂತರ ಭಾರತದಲ್ಲಿ ಮಹಿಳೆಯರಲ್ಲಿ ಮೂರನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ.

Continue Reading
Advertisement
Pralhad Joshi
ಕರ್ನಾಟಕ41 mins ago

Pralhad Joshi: ಯುಪಿಎ ಕಾಲದಲ್ಲಿ ಸತ್ತ ಉಗ್ರನಿಗಾಗಿ ಸೋನಿಯಾ ಗಾಂಧಿ ಕಣ್ಣೀರಿಟ್ಟಿದ್ದರು: ಪ್ರಲ್ಹಾದ್‌ ಜೋಶಿ

Lok Sabha Election 2024
ಕರ್ನಾಟಕ1 hour ago

Lok Sabha Election: ಮೋದಿಯಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು, ನಾವು ಗ್ಯಾರಂಟಿ ಮೂಲಕ ಸ್ಪಂದಿಸಿದ್ದೇವೆ: ಸಿಎಂ

The Great Khal
ಪ್ರಮುಖ ಸುದ್ದಿ1 hour ago

The Great Khali : ರಾಹುಲ್ ಗಾಂಧಿ ಸುಳ್ಳ ಎಂದು ಕರೆದ ಬಿಜೆಪಿ ನಾಯಕ ದಿ ಗ್ರೇಟ್ ಖಲಿ, ಇಲ್ಲಿದೆ ವಿಡಿಯೊ

IPL 2024
ಪ್ರಮುಖ ಸುದ್ದಿ1 hour ago

IPL 2024 : ಗುಜರಾತ್​ ತಂಡಕ್ಕೆ3 ವಿಕೆಟ್​ ವಿಜಯ, ಪಂಜಾಬ್​ಗೆ ಬಿಡದ ಸೋಲಿನ ನಂಟು

belagavi Airport
ಕರ್ನಾಟಕ1 hour ago

Indigo Airlines: ಪ್ರಯಾಣಿಕರ ಲಗೇಜ್‌ ಬೆಂಗಳೂರಲ್ಲೇ ಬಿಟ್ಟು ಬೆಳಗಾವಿಗೆ ಬಂದ ವಿಮಾನ; ಮಾಜಿ ಸಿಎಂ ಬ್ಯಾಗ್‌ ಕೂಡ ಮಿಸ್ಸಿಂಗ್!‌

Viral News
ವೈರಲ್ ನ್ಯೂಸ್2 hours ago

Viral News: ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನೇತಾಡುವ ಯುವಕ; ಶಾಕಿಂಗ್‌ ವಿಡಿಯೊ ನೋಡಿ

Sportsmanship
ಕ್ರೀಡೆ2 hours ago

Sportsmanship : ಭಾರತದವರನ್ನೇ ಸೋಲಿಸಿ ತ್ರಿವರ್ಣ ಧ್ವಜವನ್ನೂ ಎತ್ತಿ ಹಿಡಿದ ಪಾಕ್ ಕರಾಟೆ ಪಟು!

DK Suresh
ಬೆಂಗಳೂರು2 hours ago

DK Suresh: ಬೆಲೆ ಏರಿಕೆ, ಜಿಎಸ್‌ಟಿ ಹೊರೆಯೇ ಮೋದಿ ಗ್ಯಾರಂಟಿ: ಡಿ.ಕೆ. ಸುರೇಶ್

soil
ಕೃಷಿ2 hours ago

ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

Narendra modi
ದೇಶ3 hours ago

Narendra Modi : ಹೆಚ್ಚು ಮಕ್ಕಳಿದ್ದವರಿಗೆ ಕಾಂಗ್ರೆಸ್​ನಿಂದ ಸಂಪತ್ತು ವಿತರಣೆ; ಮೋದಿ ಹೇಳಿಕೆಗೆ ಕೈ ಪಕ್ಷದ ಆಕ್ಷೇಪ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ20 hours ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ1 day ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20241 day ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20241 day ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ2 days ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ2 days ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ2 days ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ3 days ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ5 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

ಟ್ರೆಂಡಿಂಗ್‌