ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪೊಂಗಲ್ ಫೆಸ್ಟೀವ್ ಸೀಸನ್ನಲ್ಲಿ ಅದಕ್ಕೆ ಮ್ಯಾಚ್ ಆಗುವಂತೆ ಸೀರೆ (Pongal Saree styling tips) ಉಡುವ ಮಾನಿನಿಯರು ಹೆಚ್ಚಾಗಿದ್ದಾರೆ. ಇತರೆ ಸೀರೆಗಳಲ್ಲಿ ಕಾಣಿಸಿಕೊಳ್ಳುವ ಲುಕ್ಗಿಂತ ಈ ಲುಕ್ ಕಂಪ್ಲೀಟ್ ಡಿಫರೆಂಟ್ ಆಗಿರುತ್ತದೆ. ಪಕ್ಕಾ ಸೌತ್ ಇಂಡಿಯನ್ ಲುಕ್ ನೀಡುವ ಈ ಪೊಂಗಲ್ ಸೀರೆಗಳು ಟ್ರೆಡಿಷನಲ್ ಲುಕ್ ನೀಡುತ್ತದೆ. ಸೆಲೆಬ್ರೇಷನ್ಗಾಗಿ ಪೊಂಗಲ್ ಹಬ್ಬಕ್ಕೆ ಮ್ಯಾಚ್ ಆಗುವ ಸೀರೆ ಉಡುವ ಮಾನಿನಿಯರು ಒಂದೈದು ಟಿಪ್ಸ್ಗಳನ್ನು ಫಾಲೋ ಮಾಡಿದಲ್ಲಿ, ಪಕ್ಕಾ ದಕ್ಷಿಣ ಭಾರತದ ಮಾನಿನಿಯರಂತೆ ಫೆಸ್ಟೀವ್ ಲುಕ್ ಪಡೆಯಬಹುದು ಎನ್ನುತ್ತಾರೆ ಸೀರೆ ಎಕ್ಸ್ಫರ್ಟ್.
ಉಲ್ಲಾಸ ಹೆಚ್ಚಿಸುವ ಸೀರೆಗಳಿವು
“ಪೊಂಗಲ್ ಹಬ್ಬದ ಸೆಲೆಬ್ರೇಷನ್ ಇದೀಗ ಕೇವಲ ದಕ್ಷಿಣ ಭಾರತದ ಮಾನಿನಿಯರಿಗೆ ಸೀಮಿತವಾಗಿಲ್ಲ! ಬದಲಿಗೆ ಹಬ್ಬದ ಸೀರೆ ಉಡುವುದು ಇತರರನ್ನು ಸೆಳೆದಿದೆ. ಅಷ್ಟೇಕೆ! ಕೆಲವು ಕಾರ್ಪೋರೇಟ್ ಕ್ಷೇತ್ರಗಳಲ್ಲಿ ಇದಕ್ಕಾಗಿ ಒಂದು ದಿನ ಮೀಸಲಿಟ್ಟು ಎಲ್ಲರೂ ಹಬ್ಬದ ಲುಕ್ನಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅಪರೂಪಕ್ಕೆ ಒಮ್ಮೆ ಉಡುವ ಈ ಶೈಲಿಯ ಸೀರೆ ಅಥವಾ ಸ್ಟೈಲಿಂಗ್ ಡಿಫರೆಂಟ್ ಲುಕ್ ನೀಡುವುದರೊಂದಿಗೆ ಒಂದಿಷ್ಟು ಉಲ್ಲಾಸ ಹೆಚ್ಚಿಸುತ್ತದೆ” ಎನ್ನುತ್ತಾರೆ ಸ್ಟೈಲಿಸ್ಟ್ ಮಧು.
ಬಾರ್ಡರ್ ಸೀರೆಗೆ ಆದ್ಯತೆ
ಈ ಹಬ್ಬದ ಸ್ಪೆಷಲ್ ಸೀರೆ ಎಂದರೇ ಬಾರ್ಡರ್ ಸೀರೆಗಳು. ಇಂದಿನ ಜನರೇಷನ್ಗೂ ಮ್ಯಾಚ್ ಆಗುವಂತೆ ನಾನಾ ಡಿಸೈನ್ನಲ್ಲಿ ಲಭ್ಯವಿರುವ ನಾನಾ ಬಗೆಯ ರೇಷ್ಮೆ ಹಾಗೂ ಕ್ರೇಪ್ ಸೀರೆಗಳನ್ನು ಆಯ್ಕೆ ಮಾಡಿ. ಇದನ್ನು ಉಟ್ಟರೇ ಕಂಪ್ಲೀಟ್ ಪೊಂಗಲ್ ಹಬ್ಬದ ಲುಕ್ ನಿಮ್ಮದಾಗುವುದು.
ಆಕರ್ಷಕ ಹಾಫ್ ವೈಟ್-ಕ್ರೀಮ್ ಸೀರೆ ಆಯ್ಕೆ
ರೇಷ್ಮೆ ಸೀರೆ ಅಲ್ಲದಿದ್ದಲ್ಲಿ, ಹಾಫ್ ಕಾಟನ್ ಸಿಲ್ಕ್ಗಳನ್ನು ಆಯ್ಕೆ ಮಾಡಬಹುದು. ಐವರಿ ಶೇಡ್, ಹಾಫ್ ವೈಟ್, ಕ್ರೀಮ್ ಹಾಗೂ ವೈಟ್ನ ಬಾರ್ಡರ್ ಸೀರೆಗಳನ್ನೂ ಆಯ್ಕೆ ಮಾಡಿ ಉಡಬಹುದು.
ಸೂಕ್ತ ಜ್ಯುವೆಲರಿ ಧರಿಸಿ
ಹಬ್ಬಕ್ಕೆ ಧರಿಸುವ ಸೀರೆಗೆ ಸೂಕ್ತ ಮ್ಯಾಚ್ ಆಗುವ ಜ್ಯುವೆಲರಿ ಧರಿಸಿ. ಯಾಕೆಂದರೇ, ಜಂಕ್ ಹಾಗೂ ಕ್ವಿರ್ಕ್ ಜ್ಯುವೆಲರಿಗಳು ಮ್ಯಾಚ್ ಆಗುವುದಿಲ್ಲ. ಬಂಗಾರದ ಅಥವಾ ಇಮಿಟೇಷನ್ ಜ್ಯುವೆಲರಿಗಳು ಟ್ರೆಡಿಷನಲ್ ಲುಕ್ ನೀಡುತ್ತವೆ. ಜುಮಕಿಗಳು ಆಕರ್ಷಕವಾಗಿ ಕಾಣುತ್ತವೆ.
ಕೂದಲಿಗೆ ಮಲ್ಲಿಗೆ ಅಲಂಕಾರ
ಸೀರೆ ಹಾಗೂ ಆಭರಣದೊಂದಿಗೆ ಕೂದಲ ವಿನ್ಯಾಸದ ಬಗ್ಗೆಯೂ ಗಮನವಹಿಸಿ. ಲೂಸಾಗಿರುವ ಯಾವುದೇ ಲೋಕಲ್ ಹೇರ್ಸ್ಟೈಲ್ ಮಾಡಿ. ನೀರಜಡೆ ಹಾಕಿ. ಇಲ್ಲವೇ ಲೂಸಾದ ಜಡೆ ಹಾಕಿ. ದುಂಡು ಮಲ್ಲಿಗೆ ಅಥವಾ ಇತರೇ ಯಾವುದೇ ಮಲ್ಲಿಗೆಯನ್ನು ಉದ್ದನಾಗಿ ಹಾಕಿ. ನೋಡಲು ಸಖತ್ತಾಗಿ ಕಾಣಿಸುವುದು.
ಟ್ರೆಡಿಷನಲ್ ಮೇಕಪ್
ಮೇಕಪ್ ಹಿತಮಿತವಾಗಿರಲಿ. ನೋಡಲು ಸಿಂಪಲ್ ಲುಕ್ ನೀಡಬೇಕು. ಹಣೆಗೆ ಬಿಂದಿ, ಕಣ್ಣಿಗೆ ಕಾಡಿಗೆ, ಮಸ್ಕರಾ ಹಾಗೂ ತುಟಿಗೆ ಹೊಂದುವ ಲಿಪ್ಸ್ಟಿಕ್ ಲೇಪಿಸಿ. ಗಾಢವಾದ ಮೇಕಪ್ ಬೇಡ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sankranti Fashion 2024: ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಾದ ಟ್ರೆಡಿಷನಲ್ವೇರ್ಸ್ ಶಾಪಿಂಗ್