Site icon Vistara News

Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್‌

Akshaya Tritiya 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯ ತೃತೀಯ (Akshaya Tritiya) ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಎಲ್ಲೆಡೆ ಬೆಳ್ಳಿ-ಬಂಗಾರದ ಆಭರಣಗಳ ಶಾಪಿಂಗ್‌ ಶುರುವಾಗಿದೆ. ಮಾಲ್‌ಗಳು ಹಾಗೂ ನಗರಗಳಲ್ಲಿರುವ ದೊಡ್ಡ ದೊಡ್ಡ ಬ್ರಾಂಡೆಡ್‌ ಜ್ಯುವೆಲರಿ ಶಾಪ್‌ಗಳಲ್ಲಿ ಮಾತ್ರವಲ್ಲ, ರಸ್ತೆಯಲ್ಲಿರುವ ಚಿಕ್ಕ-ಪುಟ್ಟ ಚಿನ್ನಾಭರಣ ಅಂಗಡಿಗಳಲ್ಲೂ ಅಕ್ಷಯ ತೃತೀಯ ಶಾಪಿಂಗ್‌ ಮೇನಿಯಾ ಹೆಚ್ಚಾಗಿದೆ. ಆ ವಿಶೇಷ ದಿನದಂದು ಬಂಗಾರ ಖರೀದಿಸಲು ಮುನ್ನವೇ ಅಡ್ವಾನ್ಸ್‌ ನೀಡಿ ಅಥವಾ ಜ್ಯುವೆಲರಿ ಬುಕ್‌ ಮಾಡುವ ಗ್ರಾಹಕರು ಇಂದು ಹೆಚ್ಚಾಗಿದ್ದಾರೆ.

ಅಕ್ಷಯ ತೃತೀಯದಂದು ಬಂಗಾರದ ಖರೀದಿ

ಪುರಾಣ ಕಾಲದಿಂದಲೂ ಅಕ್ಷಯ ತೃತೀಯಾದಂದು ಶುಭ ಕೆಲಸ ಮಾಡುವುದರೊಂದಿಗೆ ಬೆಳ್ಳಿ-ಬಂಗಾರ ಖರೀದ ಮಾಡುವ ಪ್ರತೀತಿ ಇದೆ. ಆ ದಿನದಂದು ಖರೀದಿಸಿದಲ್ಲಿ ಅಥವಾ ಕೊಂಡು ಮನೆಗೆ ತಂದಲ್ಲಿ, ದುಪಟ್ಟು ಆಗುವುದೆಂಬ ನಂಬಿಕೆಯಿದೆ. ಅಷ್ಟು ಮಾತ್ರವಲ್ಲ, ಅಂದು ಬಂಗಾರ ಖರೀದಿ ಮಾಡಿದರೇ, ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದಾಗಿ ವರ್ಷದಿಂದ ವರ್ಷಕ್ಕೆ ಬಂಗಾರ ಖರೀದಿಸುವವರ ಸಂಖ್ಯೆ ಅಧಿಕಗೊಂಡಿದೆ ಎನ್ನುತ್ತಾರೆ ಜ್ಯುವೆಲರಿ ಮಾರಾಟಗಾರರು.

ಅಕ್ಷಯ ತೃತೀಯಗೆ ಚಿನ್ನದ ಶಾಪಿಂಗ್‌

ಅಕ್ಷಯಾ ತೃತೀಯದಂದು ಶ್ರೀಮಂತರಿಂದ ಹಿಡಿದು ಶ್ರೀಸಾಮಾನ್ಯರು ಕೂಡ ಚಿನ್ನ ಖರೀದಿ ಮಾಡುತ್ತಾರೆ. ಹಾಗಾಗಿ ಚಿನ್ನದ ಶಾಪಿಂಗ್‌ ಮಾಡುವವರ ಸಂಖ್ಯೆ ಮೊದಲಿಗಿಂತ ಹೆಚ್ಚಾಗತೊಡಗಿದೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಆಭರಣಗಳ ಅಂಗಡಿಯವರು ಕೂಡ ಖುದ್ದು ಕರೆ ಮಾಡಿ ಅಥವಾ ಜಾಹೀರಾತಿನ ಮೂಲಕ ಈಗಾಗಲೇ ಶಾಪಿಂಗ್‌ ಮಾಡುವವರಿಗೆ ಆಹ್ವಾನ ನೀಡುತ್ತಿದ್ದಾರೆ. ಜೊತೆಗೆ ನಾನಾ ಬಗೆಯ ಆಕರ್ಷಕ ಆಫರ್‌ ಕೂಡ ನೀಡುತಿದ್ದಾರೆ. ಅದರಲ್ಲೂ ರೆಗ್ಯುಲರ್‌ ಕಸ್ಟಮರ್‌ಗಳಿಗಂತೂ ಡಿಸ್ಕೌಂಟ್ಸ್‌ ಸೇರಿದಂತೆ ಮೇಕಿಂಗ್‌ ಚಾರ್ಜ್‌ ರಹಿತ, ವೆಸ್ಟೇಜ್‌ ರಹಿತವಾದ ಬೆಲೆಯಲ್ಲಿ ನೀಡುವ ಆಫರ್‌ಗಳನ್ನು ನೀಡುತ್ತಿದ್ದಾರೆ.

ಜ್ಯುವೆಲರಿಗಳ ಚೀಟಿ

ಇನ್ನು, ಸಾಕಷ್ಟು ಆಭರಣ ಶಾಪ್‌ಗಳು ಪ್ರತಿ ವರ್ಷವೂ ಗ್ರಾಹಕರನ್ನು ಸೆಳೆಯಲು ನಾನಾ ಬಗೆಯ ಬಂಗಾರ ಕೊಳ್ಳಲು ಸೇವಿಂಗ್ಸ್‌ ಚೀಟಿಗಳನ್ನು ಹಾಕಿಸಿಕೊಂಡು, ವರ್ಷಕ್ಕೊಮ್ಮೆ ಅಕ್ಷಯಾ ತೃತೀಯಾದಂದು ಬೇಕಾದ ಚಿನ್ನಾಭರಣಗಳನ್ನು ಖರೀದಿಸುವ ಸೌಲಭ್ಯವನ್ನು ನೀಡಿವೆ. ಇದರೊಂದಿಗೆ ಹೊಸ ಹೊಸ ಗ್ರಾಹಕರನ್ನು ಸೆಳೆದು ಅವರನ್ನೂ ಬಂಗಾರದ ಖರೀದಿಗೆ ಪ್ರೋತ್ಸಾಹಿಸುತ್ತಿವೆ ಎನ್ನುತ್ತಾರೆ ಜ್ಯುವೆಲರಿ ಶಾಪ್‌ವೊಂದರ ಮ್ಯಾನೇಜರ್‌.

ಬಂಗಾರ ಖರೀದಿಗೂ ಬಂತು ಇಎಮ್‌ಐ ಸೌಲಭ್ಯ

ಚಿನ್ನ ಖರೀದಿಸಲು ಸದ್ಯ ಹಣವಿಲ್ಲ! ಆದರೆ, ಖರೀದಿಸಬೇಕು ಎನ್ನುವವರಿಗೆ, ಒಂದಿಷ್ಟು ಡೌನ್‌ ಪೇಮೆಂಟ್‌ ತೆಗೆದುಕೊಂಡು, ಉಳಿದ ಹಣವನ್ನು ಇಎಮ್‌ಐ ಮೂಲಕ ಕಟ್ಟುವ ಸೌಲಭ್ಯವನ್ನು ನೀಡುತ್ತಿವೆ. ದೊಡ್ಡ ದೊಡ್ಡ ಬ್ರಾಂಡ್‌ಗಳಲ್ಲಿ ಈ ವ್ಯವಸ್ಥೆಯನ್ನು ಕಾಣಬಹುದು ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಪರ್ಟ್‌ ನೀರಜ್‌. ಅವರ ಪ್ರಕಾರ, ಇಂತಹ ಸೌಲಭ್ಯಗಳು ಇತ್ತೀಚೆಗೆ ಮಹಿಳಾ ಖರೀದಿದಾರರನ್ನು ಹೆಚ್ಚಿಸಿವೆಯಂತೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಅಕ್ಷಯ ತೃತೀಯ ಶಾಪಿಂಗ್‌ ಟಿಪ್ಸ್‌

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version