–ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಈ ಜನರೇಷನ್‌ನವರು ಇಷ್ಟಪಡುವಂತಹ ನಾನಾ ವೆರೈಟಿ ಡಿಸೈನ್‌ನ ಫ್ಯಾಷನ್ ಜ್ಯುವೆಲರಿಗಳು ಎಂಟ್ರಿ ನೀಡಿವೆ. ಚಿಕ್ಕ ಮಕ್ಕಳಿಂದ ಹಿಡಿದು ಯುವತಿಯರು, ಉದ್ಯೋಗಸ್ಥ ಮಹಿಳೆಯರು ಹಾಗೂ ಗೃಹಿಣಿಯರು ಕೂಡ ಇಷ್ಟಪಡುವಂತಹ ಸಿಂಪಲ್ ಫ್ಯಾಷನ್ ಜ್ಯುವೆಲರಿಗಳು (Akshaya Tritiya Jewellery), ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರು ಧರಿಸುವಂತಹ ಬಿಗ್ ಹಾಗೂ ಹ್ಯಾಂಗಿಂಗ್ ಫ್ಯಾಷನ್ ಜ್ಯುವೆಲರಿಗಳು ಕಾಲಿಟ್ಟಿವೆ.
ವೈವಿಧ್ಯಮಯ ಜ್ಯುವೆಲರಿಗಳು
ಈ ಬಾರಿ ಕಳೆದ ಬಾರಿಗಿಂತ ಅತಿ ಹೆಚ್ಚು ಫ್ಯಾಷನ್ ಜ್ಯುವೆಲರಿಗಳು ಕಾಲಿಟ್ಟಿವೆ. ಮೊದಲೆಲ್ಲ ಕೇವಲ ದೊಡ್ಡ ಬ್ರಾಂಡ್‌ಗಳಲ್ಲಿ ಮಾತ್ರ ದೊರಕುತ್ತಿದ್ದ ಬಂಗಾರದ ಫ್ಯಾಷನ್ ಜ್ಯುವೆಲರಿಗಳು ಇದೀಗ ಸಾಮಾನ್ಯ ಬ್ರಾಂಡ್‌ಗಳಲ್ಲೂ ಬಂದಿರುವುದು ವಿಶೇಷ. ಇನ್ನು, ಕಡಿಮೆ ಗ್ರಾಮ್‌ಗಳಲ್ಲೂ ದೊರಕುತ್ತಿರುವುದು ಗ್ರಾಹಕರನ್ನು ಆಕರ್ಷಿಸಲು ಪ್ರಮುಖ ಕಾರಣ. ಇದರಿಂದಾಗಿ ಸಾಮಾನ್ಯ ಜನರು ಕೂಡ ಫ್ಯಾಷನ್ ಜ್ಯುವೆಲರಿಗಳತ್ತ ವಾಲಿದ್ದಾರೆ. ಪರಿಣಾಮ, ಫ್ಯಾಷನ್ ಜ್ಯುವೆಲರಿಗಳು ಸಖತ್ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಜ್ಯುವೆಲ್ ಮಾರಾಟಗಾರರು.
ಫ್ಯಾಷನ್ ಜ್ಯುವೆಲರಿಗಳ ಲೋಕ
ಪುಟ್ಟ ಚಿಕ್ಕ ಸ್ಟಡ್ಸ್‌ನಂತಹ ಫ್ಲೋರಲ್, ಟ್ರಾಪಿಕಲ್, ನಕ್ಷತ್ರ, ರಂಗೋಲಿ ಡಿಸೈನ್‌ನಂತಹ ಫ್ಯಾಷನ್ ಜ್ಯುವೆಲರಿಗಳು, ಜಿಯಾಮೆಟ್ರಿಕಲ್ ಡಿಸೈನ್‌ನ ಹ್ಯಾಂಗಿಂಗ್ ಫ್ಯಾಷನ್ ಜ್ಯುವೆಲರಿಗಳು, ಬಿಗ್ ಹರಳಿನೊಂದಿಗೆ ಮಿಕ್ಸ್ ಮ್ಯಾಚ್ ಮಾಡಿರುವಂತಹ ಡಿಸೈನ್‌ನ ಫ್ಯಾಷನ್ ಜ್ಯುವೆಲರಿಗಳು, ಇಮ್ಯಾಜೀನ್‌ಗೂ ಸಿಗದ ವೆರೈಟಿ ಡಿಸೈನ್‌ಗಳು, ಇನ್ನು, ಉಡುಪಿಗೆ ಮ್ಯಾಚ್ ಆಗುವಂತಹ ಫ್ಯಾಷನ್ ಜ್ಯುವೆಲರಿಗಳು ಸೇರಿದಂತೆ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಜ್ಯುವೆಲರಿ ಶಾಪ್‌ಗಳು ಕೂಡ ಫ್ಯಾಷೆನಬಲ್ ಜ್ಯುವೆಲರಿಗಳನ್ನು ಗ್ರಾಹಕರ ಮನೋಭಿಲಾಷೆಗೆ ತಕ್ಕಂತೆ ಆರ್ಡರ್ ತೆಗೆದುಕೊಂಡು ನೀಡುತ್ತಿವೆ. ಆ ಸೌಲಭ್ಯವನ್ನು ನೀಡಿವೆ. ಅಷ್ಟು ಮಾತ್ರವಲ್ಲದೇ, ಕಾಲೇಜು ಹುಡುಗಿಯರಿಗೆ ಪ್ರಿಯವಾಗುವಂತಹ ಇಂದು ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಫ್ಯಾಷನ್ ಜ್ಯುವೆಲರಿಗಳನ್ನು ಬಿಡುಗಡೆಗೊಳಿಸಿವೆ.
ಫ್ಯಾಷನ್ ಜ್ಯುವೆಲರಿಗಳನ್ನು ಖರೀದಿಸುವವರು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಗಳಿವು
- ಆದಷ್ಟೂ ಲೈಟ್ವೈಟ್ನವನ್ನು ಆಯ್ಕೆ ಮಾಡಿ.
- ಟ್ರೆಂಡಿ ಡಿಸೈನ್ನವನ್ನು ಸೆಲೆಕ್ಟ್ ಮಾಡಿ ಖರೀದಿಸಿ.
- ಮಕ್ಕಳಿಗಾದಲ್ಲಿ ಸಿಂಪಲ್ ಸ್ಟಡ್ಸ್ ಡಿಸೈನ್ನವನ್ನು ಕೊಳ್ಳಿ.
- ಕಾಲೇಜು ಯುವತಿಯರಾದಲ್ಲಿ ಬಹುತೇಕ ಔಟ್ಫಿಟ್ಗಳಿಗೆ ಮ್ಯಾಚ್ ಆಗುವಂತದ್ದನ್ನು ನೋಡಿ.
- ಉದ್ಯೋಗಸ್ಥ ಮಹಿಳೆಯರು ಅಗಲವಾದ ಡಿಸೈನ್ನವನ್ನು ಆಯ್ಕೆ ಮಾಡಬಹುದು.
- ಹೆವಿ ಭಾರವಿರುವಂಥದ್ದನ್ನು ಅವಾಯ್ಡ್ ಮಾಡಿ.
- ಬೀಡ್ಸ್ ಇರುವಂತವು ರೀಸೇಲ್ ಮಾಡುವಾಗ ಉತ್ತಮ ಬೆಲೆ ದೊರಕುವುದಿಲ್ಲ ಎಂಬುದು ನೆನಪಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಬಂಗಾರ ಖರೀದಿಸುವವರಿಗೆ ಇಲ್ಲಿದೆ ಉಪಯುಕ್ತ ಟಿಪ್ಸ್