ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಫ್ಯಾಷನ್‌ನಲ್ಲಿ ವರ್ಷದ ಕೊನೆಯ ಮಾಸದಲ್ಲಿ, ವೈವಿಧ್ಯಮಯ ಕೇಪ್ ಡ್ರೆಸ್‌ಗಳು (Winter cape dress fashion) ಎಂಟ್ರಿ ನೀಡಿವೆ. ಧರಿಸಿದಾಗ ಬೆಚ್ಚಗಿಡುವ ಫ್ಯಾಬ್ರಿಕ್‌ನಲ್ಲಿ ಗ್ಲಾಮರಸ್ ವಿನ್ಯಾಸದಲ್ಲಿ ಆಗಮಿಸಿವೆ. ಯುವತಿಯರನ್ನು ಸವಾರಿ ಮಾಡತೊಡಗಿವೆ.
ಅಭಿರುಚಿಗೆ ತಕ್ಕಂತೆ ಬದಲಾದ ಕೇಪ್ ಡ್ರೆಸ್
“ಕೇಪ್ ವಿನ್ಯಾಸದ ಔಟ್ಫಿಟ್‌ಗಳು ವೆಸ್ಟರ್ನ್ ಲುಕ್ ನೀಡುತ್ತವೆ. ಇವು ವಿಂಟರ್‌ನಲ್ಲಿ ಅತಿ ಹೆಚ್ಚಾಗಿ ಕಾಣಸಿಗುತ್ತವೆ. ಹಾಲಿವುಡ್-ಬಾಲಿವುಡ್ ಸಿನಿಮಾಗಳ ಮೂಲಕ ಇದೀಗ ಯುವತಿಯರನ್ನು ಸೆಳೆದಿವೆ. ನೋಡಲು ಆಕರ್ಷಕವಾಗಿ ಕಾಣುವ ಇವು ಇದೀಗ ನಮ್ಮಲ್ಲೂ ನಾನಾ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ” ಎನ್ನುತ್ತಾರೆ ಫ್ಯಾಷನಿಸ್ಟ್ ರೀಟಾ. ಅವರ ಪ್ರಕಾರ, ಈ ಡ್ರೆಸ್‌ಗಳಿಗೂ ಹಿನ್ನೆಲೆಯಿದೆ. ಆಯಾ ರಾಷ್ಟ್ರಕ್ಕೆ ಎಂಟ್ರಿ ನೀಡಿದಂತೆ, ಅಲ್ಲಿನ ಜನರ ಅಭಿರುಚಿಗೆ ತಕ್ಕಂತೆ ಬದಲಾಗಿವೆ ಅಷ್ಟೇ! ಎನ್ನುತ್ತಾರೆ.
ವೆಸ್ಟರ್ನ್ ಕಾನ್ಸೆಪ್ಟ್‌ನ ಕೇಪ್ ಡ್ರೆಸ್‌ಗಳಿವು
ಅಂದಹಾಗೆ, ಕೆಲವು ಡಿಸೈನರ್‌ಗಳು ಹೇಳುವಂತೆ, ಕೇಪ್ ವಿನ್ಯಾಸ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಟ್ರೆಂಡಿಯಾಗಿತ್ತು. ಬರಬರುತ್ತಾ ಈ ವಿನ್ಯಾಸದಲ್ಲಿಕೊಂಚ ಬದಲಾವಣೆಗಳು ಹೆಚ್ಚಾಗಿ, ಹೊಸ ರೂಪ ಪಡೆದವು. 19 ಹಾಗೂ 20ನೇ ಶತಮಾನದಲ್ಲಿ ಆರಂಭಗೊಂಡ ಈ ಉಡುಪುಗಳು ಮಹಿಳೆಯರ ಭುಜವನ್ನು ಸುತ್ತುವರಿದಿರುತ್ತಿದ್ದವು. ಕೇಪ್ ಶೈಲಿಯಲ್ಲಿ, ರೆಕ್ಕೆಯಂತೆ ಕಾಣುವ ಸ್ಲೀವ್ ಡಿಸೈನ್‌ಗಳು ನೋಡಲು ಆಕರ್ಷಕವಾಗಿ ಕಾಣುತ್ತವೆ. ಕೇಪ್ ಹಾಗೂ ಡ್ರೆಸ್‌ನ ಒಟ್ಟಾರೆ ಕಾಂಬೀನೇಷನ್‌ನ ಹೊಸ ರೂಪವಿದು. ಒಂದು ಸಮುದಾಯದವರು ಧರಿಸುತ್ತಿದ್ದ ಈ ಉಡುಪು ಇದೀಗ ರೂಪು ರೇಷೆ ಬದಲಿಸಿಕೊಂಡು ಹೊಸತನ ರೂಢಿಸಿಕೊಂಡು ನಯಾ ಡಿಸೈನ್‌ನಲ್ಲಿ ಮೂಡಿ ಬರತೊಡಗಿದೆ.
ರ‍್ಯಾಂಪ್ ಮೂಲಕ ಎಂಟ್ರಿ
ಮೊದಲಿಗೆ ರ‍್ಯಾಂಪ್ ಶೋಗಳಲ್ಲಿ ಕೇಪ್ ಡ್ರೆಸ್‌ಗಳು ಬಿಡುಗಡೆಯಾದಾಗ ಅಷ್ಟಾಗಿ ಬೇಡಿಕೆ ಇರಲಿಲ್ಲ. ಇದು ಏನಿದ್ದರೂ ಸೆಲೆಬ್ರಿಟಿಗಳ ಉಡುಪು ಎಂದು ಬಹಳಷ್ಟು ಮಂದಿ ಸುಮ್ಮನಿದ್ದರು. ಆದರೆ, ಫ್ಯಾಷನ್ ಪ್ರಿಯರು ಇವುಗಳನ್ನು ತಮ್ಮದೇ ಆದ ಶೈಲಿಯಲ್ಲಿ ಡಿಸೈನ್ ಮಾಡಿಸಿ ಧರಿಸಲಾರಂಭಿಸಿದರು. ಡಿಸೈನ್‌ಗೆ ನಾನಾ ಆಯಾಮಗಳನ್ನು ನೀಡಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿ ಬಿಡುಗಡೆಗೊಳ್ಳಲು ಕಾರಣವಾಯಿತು ಎನ್ನುತ್ತಾರೆ ಡಿಸೈನರ್‌ಗಳು.
ಕೇಪ್ ಡಿಸೈನರ್‌ವೇರ್ ಸ್ಟೈಲಿಂಗ್
- ಉದ್ದವಾಗಿರುವವರಿಗೆ ಕೇಪ್ ಡ್ರೆಸ್‌ಗಳು ಆಕರ್ಷಕವಾಗಿ ಕಾಣುತ್ತವೆ.
- ಹೈಟ್ಗೆ ತಕ್ಕಂತೆ ಕೇಪ್ ಲೆಂಥ್ ಇರುವುದು ಅಗತ್ಯ.
- ಯಾವುದೇ ಕಾರಣಕ್ಕೂ ಈ ಉಡುಪಿನ ಜತೆ ಫ್ಲ್ಯಾಟ್ ಧರಿಸಬೇಡಿ.
- ಹೆಚ್ಚು ಆಕ್ಸೆಸರೀಸ್ ಧರಿಸುವುದು ಬೇಡ.
- ಟ್ರೆಡಿಷನಲ್ ಲುಕ್ ನೀಡುವ ಮೇಕಪ್ ಈ ಡ್ರೆಸ್ಗೆ ಹೊಂದದು.
- ಕೇಪ್ ಟಾಪ್ಗಳಾದಲ್ಲಿ ಆದಷ್ಟೂ ಟೈಟ್ ಪ್ಯಾಂಟ್ ಧರಿಸಿ.
- ಕೇಪ್ ಟಾಪ್ಗಳಿಗೆ ಪೆನ್ಸಿಲ್ ಸ್ಕರ್ಟ್ ಕೂಡ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ರೆಟ್ರೊ ಫ್ಯಾಷನ್ ಪ್ರಿಯೆ ಮಾಡೆಲ್ ಲುಸಿ ಸರೆರಿಯಾ ಚಳಿಗಾಲದ ಟಿಪ್ಸ್ ಹೀಗಿದೆ