Site icon Vistara News

Anant Ambani: ಅನಂತ್ ಅಂಬಾನಿ ಬಳಿ ಇವೆ 300 ಕೋಟಿಯ ವಾಚ್‌ಗಳು! ಎಂಥೆಂಥ ಗಡಿಯಾರಗಳಿವೆ ನೋಡಿ!

Anant Ambani

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಹಾಗೂ ರಿಲಾಯನ್ಸ್ ಫೌಂಡೇಶನ್ ನ (Reliance Foundation) ಸಂಸ್ಥಾಪಕಿ ನೀತಾ ಅಂಬಾನಿ (nita ambani) ಅವರ ಕೊನೆಯ ಪುತ್ರ ಅನಂತ್ ಅಂಬಾನಿ (Anant Ambani) ತಮ್ಮ ಮದುವೆಯ ಕಾರಣದಿಂದ ಕಳೆದ ಒಂದು ವರ್ಷದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ (radhika merchant) ಅವರನ್ನು ಇದೇ ತಿಂಗಳ 12ರಂದು ಮುಂಬಯಿನ (mumbai) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (BKC) ಪ್ರಸಿದ್ಧ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಈ ನಡುವೆ ಇದೀಗ ಅನಂತ್ ಅಂಬಾನಿ ಅವರ ಸಂಗ್ರಹದಲ್ಲಿರುವ ದುಬಾರಿ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ.

ಕ್ಯುರೇಟೆಡ್ ಮತ್ತು ಅತ್ಯದ್ಭುತ ದುಬಾರಿ ವಾಚ್ ಸಂಗ್ರಹಣೆಗಾಗಿ ಹೆಸರುವಾಸಿಯಾಗಿರುವ ಅನಂತ್ ಅಂಬಾನಿ ಅವರ ಬಳಿ ಇರುವ ಕೆಲವು ಅಸಾಧಾರಣ ವಾಚ್ ಸಂಗ್ರಹದ ಕುರಿತು ಕಿರು ಮಾಹಿತಿ ಇಲ್ಲಿದೆ.


ಪಾಟೆಕ್ ಫಿಲಿಪ್ ಗ್ರ್ಯಾಂಡ್ ಮಾಸ್ಟರ್ ಚೈಮ್

ಅನಂತ್ ಅಂಬಾನಿ ಗ್ರ್ಯಾಂಡ್ ಮಾಸ್ಟರ್ ಚೈಮ್ ಸೇರಿದಂತೆ ಪಾಟೆಕ್ ಫಿಲಿಪ್ ಅವರ ಅತ್ಯಂತ ದುಬಾರಿ ಕೈಗಡಿಯಾರಗಳಲ್ಲಿ ಎರಡನ್ನು ಹೊಂದಿದ್ದಾರೆ. ಪಾಟೆಕ್‌ ನ ಅತ್ಯಂತ ದುಬಾರಿ ಕೈಗಡಿಯಾರ ಇದಾಗಿದೆ. ಇದುವರೆಗೆ ಇದರ ಏಳು ವಾಚ್‌ಗಳನ್ನು ಮಾತ್ರ ಮಾಡಲಾಗಿದೆ. ಇದು ಇತ್ತೀಚೆಗೆ ಹರಾಜಿನಲ್ಲಿ 31 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 2.58 ಬಿಲಿಯನ್ ರೂ.ಗಳಾಗಿದೆ.


ಆಡೆಮರ್ಸ್ ಪಿಗುಯೆಟ್ ರಾಯಲ್ ಓಕ್ ಕಾನ್ಸೆಪ್ಟ್ ಜಿಎಂಟಿ ಟೂರ್‌ಬಿಲ್ಲನ್

ರಾಯಲ್ ಓಕ್‌ನ 30ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಬಿಡುಗಡೆ ಮಾಡಲಾದ ಈ ದಪ್ಪ ಗಡಿಯಾರವು ಟೈಟಾನಿಯಂ ಕೇಸ್ ಮತ್ತು ಅಸ್ಥಿಪಂಜರ ಮಾದರಿಯ ಡಯಲ್ ಅನ್ನು ಒಳಗೊಂಡಿದೆ. ಅದರ ಸಂಕೀರ್ಣ ಕಾರ್ಯವಿಧಾನ ಮೋಡಿ ಮಾಡುವಂತಿದೆ. ಮೈ ಯ ಶಾಖ ಮತ್ತು ಜಿಎಂಟಿ ಕಾರ್ಯದೊಂದಿಗೆ ಇದು ಕಾರ್ಯ ನಿರ್ವಹಿಸುತ್ತದೆ. ಇದರ ಅಂದಾಜು ಬೆಲೆ 1.9 ಕೋಟಿ ರೂ.


ಪಾಟೆಕ್ ಫಿಲಿಪ್ ನಾಟಿಲಸ್ ಟ್ರಾವೆಲ್ ಟೈಮ್

ಪಾಟೆಕ್ ಫಿಲಿಪ್ ವಾಚ್‌ ನ ಅತ್ಯಂತ ಅಪರೂಪದ ವಾಚ್ ಇದಾಗಿದ್ದು, ಮಾಣಿಕ್ಯ, ವಜ್ರ ಬಿಳಿ ಚಿನ್ನವನ್ನು ಒಳಗೊಂಡಿದೆ. ಅತ್ಯಂತ ಐಷಾರಾಮಿ ಕೈಗಡಿಯಾರವಾದ ಇದು ಕೆಂಪು ಮಾಣಿಕ್ಯ, ಹಸಿರು ಪಚ್ಚೆಗಳಿಂದ ಅಲಂಕರಿಸಲ್ಪಟ್ಟಿದೆ. ಇದರ ಅಂದಾಜು ಬೆಲೆ 8.2 ಕೋಟಿ ರೂ.

ಇದನ್ನೂ ಓದಿ: Nita Ambani: 50-60 ಬನಾರಸಿ ಸೀರೆ ಖರೀದಿಸಿದ ನೀತಾ ಅಂಬಾನಿ: ಸೀರೆಯ ದರ ಎಷ್ಟು?


ರಿಚರ್ಡ್ ಮಿಲ್ಲೆ ಆರ್ ಎಮ್ 56-01 ಟೂರ್‌ಬಿಲ್ಲನ್

ರಿಚರ್ಡ್ ಮಿಲ್ಲೆ ಆರ್ ಎಮ್ 56-01 ಶುದ್ಧ, ಸ್ಫಟಿಕದಂತಹ ನೀಲಮಣಿಯನ್ನು ಹೊಂದಿದೆ. ಇದು ಅಸಾಧಾರಣ ಬಾಳಿಕೆ ಮತ್ತು ಸ್ಕ್ರಾಚ್ ಪ್ರತಿರೋಧವನ್ನು ಹೊಂದಿದೆ. ಹಸಿರು ನೀಲಮಣಿಯನ್ನು ಒಳಗೊಂಡಿರುವ ಇದರ ಅಂದಾಜು ಬೆಲೆ 25 ಕೋಟಿ ರೂ.


ಪಾಟೆಕ್ ಫಿಲಿಪ್ ಸ್ಕೈ ಮೂನ್ ಟೂರ್ಬಿಲ್ಲಾನ್

ಪಾಟೆಕ್ ಫಿಲಿಪ್ ರಚಿಸಿದ ಅತ್ಯಂತ ಅಪರೂಪದ ಕೈಗಡಿಯಾರಗಳಲ್ಲಿ ಸ್ಕೈ ಮೂನ್ ಟೂರ್‌ಬಿಲ್ಲನ್ ನಲ್ಲಿ ಕ್ಯಾಲೆಂಡರ್, ಚಂದ್ರನ ಚಲನೆಯ ಸೂಚಕ ಸೇರಿದಂತೆ ಹನ್ನೆರಡು ವಿಶೇಷತೆಗಳನ್ನು ಒಳಗೊಂಡಿದೆ. ಇದರ ಸಂಕೀರ್ಣ ವಿನ್ಯಾಸ ಮತ್ತು ಅಸಾಧಾರಣ ಕರಕುಶಲತೆಯು ಸ್ವಿಸ್ ವಾಚ್‌ಮೇಕಿಂಗ್ ಅನ್ನು ಅತ್ಯುತ್ತಮವಾಗಿಸಿದೆ. ಇದರ ಅಂದಾಜು ಬೆಲೆ 54 ಕೋಟಿ ರೂ.

Exit mobile version