-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಆಷಾಢದಲ್ಲಿ ನಡೆಯುವ ಸೇಲ್‌ನಲ್ಲಿ (Ashada Sale 2024) ಶಾಪಿಂಗ್ ಮಾಡುತ್ತೀದ್ದೀರಾ! ಈ ಆಷಾಢದಲ್ಲಿ ಕಡಿಮೆ ಬೆಲೆಗೆ ಸಿಗುವುದೆಂದು ಖರೀದಿಗೆ ಮುಂದಾಗಿದ್ದೀರಾ? ಹಾಗಾದಲ್ಲಿ, ಒಂದಿಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆಗಷ್ಟೇ! ನೀವು ಈ ಖರೀದಿಯ ಸದುಪಯೋಗದೊಂದಿಗೆ ಕೊಂಚ ಉಳಿತಾಯ ಕೂಡ ಮಾಡಬಹುದು ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಫರ್ಟ್ಸ್. “ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಸೇಲ್ ಎಲ್ಲೆಡೆ ಆರಂಭವಾಗಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಸಾಕಷ್ಟು ಜ್ಯುವೆಲರಿ ಶಾಪ್‌ಗಳು ಹಾಗೂ ಬಟ್ಟೆ ಅಂಗಡಿಗಳು ಕೂಡ ಈ ಸೇಲ್ ಆಯೋಜಿಸುತ್ತಿವೆ. ಅಲ್ಲದೇ, ಸಾಕಷ್ಟು ಎಕ್ಸಿಬೀಷನ್‌ಗಳು ಕೂಡ ನಡೆಯುತ್ತಿವೆ. ಇನ್ನು, ಇದಕ್ಕೆ ಪೂರಕ ಎಂಬಂತೆ, ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಮಂದಿ ಈ ಸೇಲ್ನಲ್ಲಿ ಶಾಪಿಂಗ್ ಮಾಡುವುದು ಕಂಡು ಬರುತ್ತಿದೆ” ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಫರ್ಟ್ ರಾಘವ್ ಹಾಗೂ ಧನ್ಯ ಶರ್ಮಾ.
ಫೆಸ್ಟಿವ್ ಸೀಸನ್‌ಗೆ ಈಗಲೇ ಖರೀದಿಸಿ
ಮುಂಬರುವ ಫೆಸ್ಟಿವ್ ಸೀಸನ್‌ಗೆ ಈಗಲೇ ಖರೀದಿ ಆರಂಭಿಸಬಹುದು. ಹಾಗೆಂದು ಕಂಡಕಂಡದ್ದನ್ನೇಲ್ಲಾ ಖರೀದಿಸಿದಲ್ಲಿ, ಹಣ ವ್ಯಯವಾಗಬಹುದು. ಎಥ್ನಿಕ್ ಡಿಸೈನರ್‌ವೇರ್‌ಗಳು ಈ ಆಷಾಡ ಸೇಲ್‌ನಲ್ಲಿ ಕಡಿಮೆ ಬೆಲೆಗೆ ದೊರಕುತ್ತವೆ. ಅಂತಹವನ್ನು ಕೊಂಡಲ್ಲಿ, ಮುಂಬರುವ ಹಬ್ಬಗಳಿಗೆ ಖರೀದಿಸುವ ಜವಾಬ್ದಾರಿ ಕೊಂಚ ಕಡಿಮೆಯಾಗಬಹುದು.
ಆಭರಣಗಳ ಖರೀದಿ
ಬೆಳ್ಳಿ-ಬಂಗಾರದ ಆಭರಣಗಳನ್ನು ಮುಂಬರುವ ಶ್ರಾವಣದಲ್ಲಿ ಖರೀದಿ ಮಾಡುವ ಯೋಚನೆಯಿದ್ದಲ್ಲಿ, ಅದನ್ನು ಮುಂದೂಡದೇ ಈ ಸಮಯದಲ್ಲೆ ಜಾರಿಗೊಳಿಸಿ. ಹೌದು, ಕೆಲವು ಅಂಗಡಿಗಳಲ್ಲಿ ಆಷಾಡ ಸೇಲ್‌ನಲ್ಲಿ ಮೇಕಿಂಗ್ ಚಾರ್ಜ್, ವೇಸ್ಟೆಜ್ ಎಲ್ಲವನ್ನು ಕಡಿತಗೊಳಿಸಲಾಗಿರುತ್ತದೆ. ಇದರಿಂದ ನಿಮಗೆ ಕೊಂಚ ಲಾಭವಾದರೂ ಆಗಬಹುದು.
ಆನ್‌ಲೈನ್ ಸೇಲ್‌ನ ಸದುಪಯೋಗ
ಆನ್‌ಲೈನ್ ಶಾಪಿಂಗ್ ಮಾಡುವಾಗ ಎಚ್ಚರವಹಿಸಿ. ಆನ್‌ಲೈನ್ ಶಾಪಿಂಗ್ ಮಾಡಿ. ಕಣ್ಣಿಗೆ ಬೇಕಾದ ವಸ್ತುಗಳನ್ನು ಮನೆಯಲ್ಲೆ ಕುಳಿತು ಖರೀದಿಸಬಹುದು. ಫ್ಯಾಷನ್‌ವೇರ್ಸ್, ಬ್ಯೂಟಿ ಪ್ರಾಡಕ್ಟ್ಸ್, ಕಿಚನ್ ಸಾಮಗ್ರಿಗಳಿಂದ ಹಿಡಿದು ಸಾಕಷ್ಟು ವಸ್ತುಗಳಿಗೆ ಆಷಾಡ ಸೇಲ್‌ನಲ್ಲಿ ಆಫರ್‌ಗಳ ಸುರಿಮಳೆಯನ್ನೇ ಕಾಣಬಹುದು.
ಎಕ್ಸ್‌ಚೇಗ್‌ಗೆ ಅವಕಾಶವಿರುವುದಿಲ್ಲ
ಯಾವುದೇ ಒಂದು ಸೇಲ್‌ನಲ್ಲಿ ಶಾಪಿಂಗ್ ಮಾಡುವಾಗ ತೀರಾ ಅಗತ್ಯವಾಗಿರುವಂತವಕ್ಕೆ ಮಾತ್ರ ಆದ್ಯತೆ ನೀಡಬೇಕು. ಯಾಕೆಂದರೇ, ಅವಕ್ಕೆ ಎಕ್ಸ್ಚೇಂಜ್ ಸೌಲಭ್ಯ ಇರುವುದಿಲ್ಲ ಎಂಬುದು ನೆನಪಿರಲಿ.
ಇದನ್ನೂ ಓದಿ: Paris Fashion Week: ಪ್ಯಾರಿಸ್ ಹಾಟ್ ಕೌಚರ್ ಫ್ಯಾಷನ್ ವೀಕ್ 2024ರ ಹೈಲೈಟ್ಸ್
ಮಾಲ್‌ಗಳಲ್ಲಿ ಶಾಪಿಂಗ್
ಮಾಲ್‌ಗಳಲ್ಲಿ ಲಭ್ಯವಿರುವ ಆಷಾಡ ಸೇಲ್‌ನಲ್ಲಿ, ನೀವು ನಾನಾ ಪಾಪುಲರ್ ಬ್ರಾಂಡ್‌ನ ಗುಣ ಮಟ್ಟದ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)