ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್ ಮಾಡೆಲ್‌ಗಳು ಬಿಗ್ ರ‍್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುತ್ತಾ ನೋಡುಗರ ಮನ ಸೆಳೆದರೇ, ಸೆಲೆಬ್ರೆಟಿ ಡಿಸೈನರ್‌ಗಳು, ಕೊರಿಯಾಗ್ರಾಫರ್‌ಗಳು ಹಾಗೂ ಸೆಲೆಬ್ರೆಟಿಗಳು ರ‍್ಯಾಂಪ್‌ನ ಈ ಪ್ರದರ್ಶನಕ್ಕೆ ಸಾಕ್ಷಿಯಾದರು. ಸತತ ಮೂರು ದಿನಗಳ ಕಾಲ ಉದ್ಯಾನನಗರಿಯಲ್ಲಿ ನಡೆದ ಬೆಂಗಳೂರು ಫ್ಯಾಷನ್ ವೀಕ್‌ನಲ್ಲಿ, (Bangalore Fashion Week 2024) ರಾಷ್ಟ್ರದ ನಾನಾ ಕಡೆಯಿಂದ ಸೆಲೆಬ್ರೆಟಿ ಡಿಸೈನರ್‌ಗಳು, ಮಾಡೆಲ್‌ಗಳು, ಫ್ಯಾಷನ್ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಆಯಾ ಡಿಸೈನರ್‌ಗಳ ಡಿಸೈನರ್‌ವೇರ್‌ಗಳು ಒಂದರ ನಂತರ ಮತ್ತೊಂದರಂತೆ ಫ್ಯಾಷನ್ ವೀಕ್‌ನಲ್ಲಿ ಅನಾವರಣಗೊಂಡವು.
ಸಿಲ್ವರ್ ಜ್ಯುಬಿಲಿ ವಿಶೇಷ
ಅಂದಹಾಗೆ, ಬೆಂಗಳೂರು ಫ್ಯಾಷನ್ ವೀಕ್‌ಗೆ ಇದು 25 ನೇ ಎಡಿಷನ್. ಸಿಲ್ವರ್ ಜ್ಯುಬಿಲಿ. ಈ ಹಿನ್ನೆಲೆಯಲ್ಲಿ ನಡೆದ ಈ ವರ್ಷದ ಮೊದಲ ಫ್ಯಾಷನ್ ವೀಕ್ ಆದ ಈ ಕಾರ್ಯಕ್ರಮದಲ್ಲಿ ಸುಮಾರು 16 ಡಿಸೈನರ್‌ಗಳು ಭಾಗವಹಿಸಿದ್ದರು.
ಸೆಲೆಬ್ರೆಟಿ ಡಿಸೈನರ್‌ಗಳ ಶೋ
ಸೆಲೆಬ್ರೆಟಿ ಡಿಸೈನರ್ ನೌಮಾನ್ ಖಾನ್, ಅಭಿಷೇಕ್ ದತ್ತಾ, ನರೇಂದ್ರ ಕುಮಾರ್, ಸಿದ್ಧಾರ್ಥ್ ಕಕ್ಕರ್, ರೂಪಮ್ ಕೌರ್, ಅನಾಮಿಕಾ ಜೈಸಿಂಗಾನಿ ಫ್ಯಾಷನ್ ವೀಕ್‌ನ ರ‍್ಯಾಂಪ್ ಶೋನಲ್ಲಿ ಭಾಗವಹಿಸಿದ್ದರು. ಇನ್ನು, ದಿಲ್ಲಿಯ ಲೆಜೆಂಡರಿ ಡಿಸೈನರ್ ನಿಕ್ಕಿ ಮಹಾಜನ್ ಫ್ಯಾಷನ್ ವೀಕ್‌ನ ಕಳೆ ಹೆಚ್ಚಿಸಿದರು.
ಪ್ರೊಫೆಷನಲ್ ಮಾಡೆಲ್‌ಗಳ ಕ್ಯಾಟ್ ವಾಕ್
ಅತ್ಯಾಕರ್ಷಕ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್ ಮಾಡೆಲ್‌ಗಳು, ಡಿಸೈನರ್‌ಗಳ ಡಿಸೈನರ್‌ವೇರ್‌ಗಳನ್ನು ಧರಿಸಿ, ಭಿನ್ನ-ವಿಭಿನ್ನ ಸ್ಟೈಲ್‌ನಲ್ಲಿ ವಾಕ್ ಮಾಡುತ್ತಾ ನೆರೆದಿದ್ದವರ ಮನ ಸೆಳೆದರು.
ಶೋ ಸ್ಟಾಪರ್ ಮಿಸ್ ಇಂಡಿಯಾ ಮಾನಸ ವಾಕ್
ಇನ್ನು, ಸಿಲ್ವರ್ ಜ್ಯುಬ್ಲಿಯ ವಿಶೇಷತೆಯ ಹಿನ್ನೆಲೆಯಲ್ಲಿ, ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದ ಈ ಫ್ಯಾಷನ್ ವೀಕ್‌ನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ಮಿಸ್ ಇಂಡಿಯಾ ವಿನ್ನರ್ 2020 ಮಾನಸ ವಾರಣಾಸಿ ಕ್ಯಾಟ್ ವಾಕ್ ಮಾಡಿ, ಫ್ಯಾಷನ್ ಪ್ರಿಯರ ಮನ ಗೆದ್ದರು.
ರಾಜೇಶ್ ಶೆಟ್ಟಿ-ಲವೆಲ್ ಪ್ರಭು ಕೊರಿಯಾಗ್ರಾಫಿ
ಫ್ಯಾಷನ್ ವೀಕ್‌ನ ಕಂಪ್ಲೀಟ್ ಕೊರಿಯಾಗ್ರಾಫಿಯನ್ನು ಸೆಲೆಬ್ರೆಟಿ ಶೊ ಡೈರೆಕ್ಟರ್ ಹಾಗೂ ಕೊರಿಯಾಗ್ರಾಫರ್ ರಾಜೇಶ್ ಶೆಟ್ಟಿ ಹಾಗೂ ಲೆವೆಲ್ ಪ್ರಭು ವಹಿಸಿಕೊಂಡಿದ್ದರು.“ಬೆಂಗಳೂರು ಫ್ಯಾಷನ್ ವೀಕ್‌ನಲ್ಲಿ ಪಾಲ್ಗೊಳ್ಳುವುದೇ ಒಂದು ಹೆಮ್ಮೆ. ಸದಾ ಹೊಸತನದಿಂದ ಕೂಡಿರುತ್ತದೆ ಹಾಗೂ ಸೀಸನ್ ಫ್ಯಾಷನ್‌ಗೆ ವೇದಿಕೆ ಕಲ್ಪಿಸಿಕೊಡುತ್ತದೆ” ಎಂದು ರಾಜೇಶ್ ಶೆಟ್ಟಿ ಅಭಿಪ್ರಾಯಪಟ್ಟರು. ಮಾಡೆಲ್ ಸಂತೋಷ್ ರೆಡ್ಡಿ ಹಾಗೂ ಆದಿತ್ಯಾ ಶ್ರೀವಾತ್ಸವ್ ಸೇರಿದಂತೆ, ಫ್ಯಾಷನ್ ಲೋಕದ ಹಲವು ಗಣ್ಯರು ಈ ಫ್ಯಾಷನ್ ವೀಕ್‌ನಲ್ಲಿ ಪಾಲ್ಗೊಂಡಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Season End Sale 2024: ವಿಂಟರ್ ಸೀಸನ್ ಎಂಡ್ ಸೇಲ್‌ನಲ್ಲಿ ಶಾಪಿಂಗ್ ಮಾಡುವವರಿಗೆ 5 ಸಿಂಪಲ್ ಟಿಪ್ಸ್