Bangalore Fashion Week 2024: ಸಿಲ್ವರ್‌ ಜ್ಯುಬಿಲಿ ಆಚರಿಸಿಕೊಂಡ ಬೆಂಗಳೂರು ಫ್ಯಾಷನ್‌ ವೀಕ್‌ - Vistara News

ಫ್ಯಾಷನ್

Bangalore Fashion Week 2024: ಸಿಲ್ವರ್‌ ಜ್ಯುಬಿಲಿ ಆಚರಿಸಿಕೊಂಡ ಬೆಂಗಳೂರು ಫ್ಯಾಷನ್‌ ವೀಕ್‌

ಸತತ ಮೂರು ದಿನಗಳ ಕಾಲ ಉದ್ಯಾನನಗರಿಯಲ್ಲಿ ನಡೆದ ಬೆಂಗಳೂರು ಫ್ಯಾಷನ್‌ ವೀಕ್‌ (Bangalore Fashion Week 2024) ಸಿಲ್ವರ್‌ ಜ್ಯುಬಿಲಿ ಆಚರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಡೆದ ಶೋನಲ್ಲಿ ಸೆಲೆಬ್ರೆಟಿ ಡಿಸೈನರ್‌ಗಳು, ಮಾಡೆಲ್‌ಗಳು, ಫ್ಯಾಷನ್‌ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Bangalore Fashion week 2024
ಚಿತ್ರಗಳು: ಬೆಂಗಳೂರು ಫ್ಯಾಷನ್‌ ವೀಕ್‌ ಚಿತ್ರಗಳು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ ಸೀಸನ್‌ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್‌ ಮಾಡೆಲ್‌ಗಳು ಬಿಗ್‌ ರ‍್ಯಾಂಪ್‌ ಮೇಲೆ ಕ್ಯಾಟ್‌ ವಾಕ್‌ ಮಾಡುತ್ತಾ ನೋಡುಗರ ಮನ ಸೆಳೆದರೇ, ಸೆಲೆಬ್ರೆಟಿ ಡಿಸೈನರ್‌ಗಳು, ಕೊರಿಯಾಗ್ರಾಫರ್‌ಗಳು ಹಾಗೂ ಸೆಲೆಬ್ರೆಟಿಗಳು ರ‍್ಯಾಂಪ್‌ನ ಈ ಪ್ರದರ್ಶನಕ್ಕೆ ಸಾಕ್ಷಿಯಾದರು. ಸತತ ಮೂರು ದಿನಗಳ ಕಾಲ ಉದ್ಯಾನನಗರಿಯಲ್ಲಿ ನಡೆದ ಬೆಂಗಳೂರು ಫ್ಯಾಷನ್‌ ವೀಕ್‌ನಲ್ಲಿ, (Bangalore Fashion Week 2024) ರಾಷ್ಟ್ರದ ನಾನಾ ಕಡೆಯಿಂದ ಸೆಲೆಬ್ರೆಟಿ ಡಿಸೈನರ್‌ಗಳು, ಮಾಡೆಲ್‌ಗಳು, ಫ್ಯಾಷನ್‌ ಕ್ಷೇತ್ರದ ದಿಗ್ಗಜರು ಪಾಲ್ಗೊಂಡಿದ್ದರು. ಆಯಾ ಡಿಸೈನರ್‌ಗಳ ಡಿಸೈನರ್‌ವೇರ್‌ಗಳು ಒಂದರ ನಂತರ ಮತ್ತೊಂದರಂತೆ ಫ್ಯಾಷನ್ ವೀಕ್‌ನಲ್ಲಿ ಅನಾವರಣಗೊಂಡವು.

Silver Jubilee Special

ಸಿಲ್ವರ್‌ ಜ್ಯುಬಿಲಿ ವಿಶೇಷ

ಅಂದಹಾಗೆ, ಬೆಂಗಳೂರು ಫ್ಯಾಷನ್‌ ವೀಕ್‌ಗೆ ಇದು 25 ನೇ ಎಡಿಷನ್‌. ಸಿಲ್ವರ್‌ ಜ್ಯುಬಿಲಿ. ಈ ಹಿನ್ನೆಲೆಯಲ್ಲಿ ನಡೆದ ಈ ವರ್ಷದ ಮೊದಲ ಫ್ಯಾಷನ್‌ ವೀಕ್‌ ಆದ ಈ ಕಾರ್ಯಕ್ರಮದಲ್ಲಿ ಸುಮಾರು 16 ಡಿಸೈನರ್‌ಗಳು ಭಾಗವಹಿಸಿದ್ದರು.

ಸೆಲೆಬ್ರೆಟಿ ಡಿಸೈನರ್‌ಗಳ ಶೋ

ಸೆಲೆಬ್ರೆಟಿ ಡಿಸೈನರ್‌ ನೌಮಾನ್‌ ಖಾನ್‌, ಅಭಿಷೇಕ್‌ ದತ್ತಾ, ನರೇಂದ್ರ ಕುಮಾರ್‌, ಸಿದ್ಧಾರ್ಥ್ ಕಕ್ಕರ್‌, ರೂಪಮ್‌ ಕೌರ್‌, ಅನಾಮಿಕಾ ಜೈಸಿಂಗಾನಿ ಫ್ಯಾಷನ್‌ ವೀಕ್‌ನ ರ‍್ಯಾಂಪ್‌ ಶೋನಲ್ಲಿ ಭಾಗವಹಿಸಿದ್ದರು. ಇನ್ನು, ದಿಲ್ಲಿಯ ಲೆಜೆಂಡರಿ ಡಿಸೈನರ್‌ ನಿಕ್ಕಿ ಮಹಾಜನ್‌ ಫ್ಯಾಷನ್‌ ವೀಕ್‌ನ ಕಳೆ ಹೆಚ್ಚಿಸಿದರು.

Catwalk of professional models

ಪ್ರೊಫೆಷನಲ್‌ ಮಾಡೆಲ್‌ಗಳ ಕ್ಯಾಟ್‌ ವಾಕ್‌

ಅತ್ಯಾಕರ್ಷಕ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್‌ ಮಾಡೆಲ್‌ಗಳು, ಡಿಸೈನರ್‌ಗಳ ಡಿಸೈನರ್‌ವೇರ್‌ಗಳನ್ನು ಧರಿಸಿ, ಭಿನ್ನ-ವಿಭಿನ್ನ ಸ್ಟೈಲ್‌ನಲ್ಲಿ ವಾಕ್‌ ಮಾಡುತ್ತಾ ನೆರೆದಿದ್ದವರ ಮನ ಸೆಳೆದರು.

ಶೋ ಸ್ಟಾಪರ್‌ ಮಿಸ್‌ ಇಂಡಿಯಾ ಮಾನಸ ವಾಕ್‌

ಇನ್ನು, ಸಿಲ್ವರ್‌ ಜ್ಯುಬ್ಲಿಯ ವಿಶೇಷತೆಯ ಹಿನ್ನೆಲೆಯಲ್ಲಿ, ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದ ಈ ಫ್ಯಾಷನ್‌ ವೀಕ್‌ನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ಮಿಸ್‌ ಇಂಡಿಯಾ ವಿನ್ನರ್‌ 2020 ಮಾನಸ ವಾರಣಾಸಿ ಕ್ಯಾಟ್‌ ವಾಕ್‌ ಮಾಡಿ, ಫ್ಯಾಷನ್‌ ಪ್ರಿಯರ ಮನ ಗೆದ್ದರು.

Choreography by Rajesh Shetty-Lovell Prabhu

ರಾಜೇಶ್‌ ಶೆಟ್ಟಿ-ಲವೆಲ್‌ ಪ್ರಭು ಕೊರಿಯಾಗ್ರಾಫಿ

ಫ್ಯಾಷನ್‌ ವೀಕ್‌ನ ಕಂಪ್ಲೀಟ್‌ ಕೊರಿಯಾಗ್ರಾಫಿಯನ್ನು ಸೆಲೆಬ್ರೆಟಿ ಶೊ ಡೈರೆಕ್ಟರ್‌ ಹಾಗೂ ಕೊರಿಯಾಗ್ರಾಫರ್‌ ರಾಜೇಶ್‌ ಶೆಟ್ಟಿ ಹಾಗೂ ಲೆವೆಲ್‌ ಪ್ರಭು ವಹಿಸಿಕೊಂಡಿದ್ದರು.“ಬೆಂಗಳೂರು ಫ್ಯಾಷನ್‌ ವೀಕ್‌ನಲ್ಲಿ ಪಾಲ್ಗೊಳ್ಳುವುದೇ ಒಂದು ಹೆಮ್ಮೆ. ಸದಾ ಹೊಸತನದಿಂದ ಕೂಡಿರುತ್ತದೆ ಹಾಗೂ ಸೀಸನ್‌ ಫ್ಯಾಷನ್‌ಗೆ ವೇದಿಕೆ ಕಲ್ಪಿಸಿಕೊಡುತ್ತದೆ” ಎಂದು ರಾಜೇಶ್‌ ಶೆಟ್ಟಿ ಅಭಿಪ್ರಾಯಪಟ್ಟರು. ಮಾಡೆಲ್‌ ಸಂತೋಷ್‌ ರೆಡ್ಡಿ ಹಾಗೂ ಆದಿತ್ಯಾ ಶ್ರೀವಾತ್ಸವ್‌ ಸೇರಿದಂತೆ, ಫ್ಯಾಷನ್‌ ಲೋಕದ ಹಲವು ಗಣ್ಯರು ಈ ಫ್ಯಾಷನ್‌ ವೀಕ್‌ನಲ್ಲಿ ಪಾಲ್ಗೊಂಡಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Season End Sale 2024: ವಿಂಟರ್‌ ಸೀಸನ್‌ ಎಂಡ್‌ ಸೇಲ್‌ನಲ್ಲಿ ಶಾಪಿಂಗ್‌ ಮಾಡುವವರಿಗೆ 5 ಸಿಂಪಲ್‌ ಟಿಪ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Crush Saree Fashion: ಸೆಲೆಬ್ರೆಟಿ ಲುಕ್‌ ನೀಡುವ ಡಿಸೈನರ್‌ ಕ್ರಶ್‌ ಸೀರೆಗಳು

Crush Saree Fashion: ಡಿಸೈನರ್‌ ಕ್ರಶ್‌ ಸೀರೆಗಳು ಇದೀಗ ಟ್ರೆಂಡಿಯಾಗಿದ್ದು, ಸೀರೆ ಪ್ರಿಯರನ್ನು ಸೆಳೆದಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಸೆಲೆಬ್ರೆಟಿ ಲುಕ್‌ಗೆ ಸಾಥ್‌ ನೀಡುತ್ತಿವೆ. ಯಾವ್ಯಾವ ಶೇಡ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಸೆಲೆಕ್ಷನ್‌ ಹೇಗೆ ಎಂಬುದರ ಬಗ್ಗೆ ಸೀರೆ ಪರಿಣತರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Crush Saree Fashion
ಚಿತ್ರಗಳು: ಗುಲಾಟಿ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇತ್ತೀಚೆಗೆ ಕ್ರಶ್‌ ಸೀರೆಗಳು ನೀರೆಯರನ್ನು (Crush Saree Fashion) ಸೆಳೆದಿವೆ. ಬಣ್ಣದ ಬಣ್ಣದ ಕ್ರಶ್‌ ಸೀರೆಗಳು ಮಾನೋಕ್ರೋಮ್‌, ಸಾಲಿಡ್‌ ಶೇಡ್‌ ಹಾಗೂ ಮಿಕ್ಸ್ ಶೇಡ್‌ಗಳಲ್ಲಿಆಗಮಿಸಿದ್ದು, ಫ್ಯಾಷನ್‌ ಪ್ರಿಯ ಮಾನಿನಿಯರನ್ನು ಬರಸೆಳೆದಿವೆ. ನೋಡಲು ಒಂದೇ ಡಿಸೈನ್‌ನಂತೆ ಕಂಡರೂ ಅವುಗಳ ಬಣ್ಣ ಹಾಗೂ ಡಿಸೈನ್‌ನಿಂದ ಡಿಫರೆಂಟ್‌ ಲುಕ್‌ ನೀಡುತ್ತಿವೆ.

Crush Saree Fashion

ಮಾಡರ್ನ್‌ ನೀರೆಯರ ಸೀರೆಗಳಿವು

ಮಾಡರ್ನ್‌ ಹಾಗೂ ಜೆನ್‌ ಜಿ ಹುಡುಗಿಯರ ಸೀರೆಗಳಿವು. ಯಾಕೆಂದರೆ, ಇವು ಟ್ರೆಡಿಷನಲ್‌ ಲುಕ್‌ ನೀಡುವುದಿಲ್ಲ, ಬದಲಿಗೆ ಪ್ರಯೋಗಾತ್ಮಕ ಡಿಸೈನರ್‌ ಬ್ಲೌಸ್‌ಗಳ ಜೊತೆಗೆ ಧರಿಸಬಹುದಾದಂತಹ ಸೀರೆಗಳಿವು. ಎಲ್ಲದಕ್ಕಿಂತ ಹೆಚ್ಚಾಗಿ ಸೆಲೆಬ್ರೆಟಿಗಳು ಹಾಗೂ ಫ್ಯಾಷನ್‌ ಕ್ಷೇತ್ರದ ಮಾಡೆಲ್‌ಗಳು ಉಡುವಂತಹ ಸೀರೆಗಳು ಎನ್ನಬಹುದು. ಸಾಮಾನ್ಯವರ ಮಹಿಳೆಯರ ಚಾಯ್ಸ್‌ನಲ್ಲಿ ಹೆಚ್ಚಾಗಿ ಇಂತಹ ಸೀರೆಗಳು ಕಂಡು ಬರುವುದಿಲ್ಲ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್ ರಾಕಿ.

Crush Saree Fashion

ಟ್ರೆಂಡ್‌ನಲ್ಲಿರುವ ಕ್ರಶ್‌ ಸೀರೆಗಳು

ಜಾರ್ಜೆಟ್‌ ಕ್ರಶ್‌ ಸೀರೆ, ಶಿಫಾನ್‌, ಚಂದೇರಿ, ಸಿಲ್ಕ್‌ ಫ್ಯಾಬ್ರಿಕ್‌ನಲ್ಲೂ ಕ್ರಶ್‌ ಸೀರೆಗಳು ಇತ್ತೀಚೆಗೆ ಪ್ರಚಲಿತದಲ್ಲಿವೆ. ಆದರೆ, ಜಾರ್ಜೆಟ್‌ನವು ಹೆಚ್ಚು ಟ್ರೆಂಡ್‌ನಲ್ಲಿವೆ. ಇವುಗಳೊಂದಿಗೆ ಕಸ್ಟಮೈಸ್ಡ್ ಕ್ರಶ್‌ ಸೀರೆಗಳು ಇದೀಗ ಹೆಚ್ಚು ಚಾಲ್ತಿಯಲ್ಲಿವೆ. ನಮಗೆ ಬೇಕಾದ ಕಲರ್‌ನವನ್ನು ಕಸ್ಟಮೈಸ್ಡ್‌ ಮಾಡಿಸಿ, ಮಿಕ್ಸ್ ಶೇಡ್‌ಗಳಲ್ಲಿ ಸಿದ್ಧಪಡಿಸಿ ಕೊಡುವ ಸೀರೆ ಮಾರಾಟಗಾರರು ಇದ್ದಾರೆ. ಬಹುತೇಕ ಸೆಲೆಬ್ರೆಟಿಗಳು ಕಸ್ಟಮೈಸ್ಡ್ ಕ್ರಶ್‌ ಸೀರೆಗಳನ್ನು ಉಡುತ್ತಾರೆ.

Crush Saree Fashion

ಕ್ರಶ್‌ ಸೀರೆಗಳ ರೂಲ್ಸ್

ಕ್ರಶ್‌ ಸೀರೆಗಳು ಸ್ಲಿಮ್‌ ಹಾಗೂ ಉದ್ದನಾಗಿರುವವರಿಗೆ ಆಕರ್ಷಕವಾಗಿ ಕಾಣಿಸುತ್ತವೆ. ಪ್ಲಂಪಿಯಾಗಿರುವವರಿಗೆ ಚೆನ್ನಾಗಿ ಕಾಣಿಸುವುದಿಲ್ಲ. ಯಾಕೆಂದರೆ, ಇವು ಹರಡಿಕೊಳ್ಳುತ್ತವೆ. ಕೆಲವು ಫ್ಯಾಬ್ರಿಕ್‌ ಸಾಫ್ಟಾಗಿರುತ್ತವೆ. ಅಂತವನ್ನು ಆಯ್ಕೆ ಮಾಡಿಕೊಂಡರೇ ಉತ್ತಮ ಎನ್ನುತ್ತಾರೆ ಸೀರೆ ಡ್ರೇಪರ್ಸ್.

ಇದನ್ನೂ ಓದಿ: Dogs Monsoon Fashion: ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌!

ಕ್ರಶ್‌ ಸೀರೆ ಪ್ರಿಯರಿಗೆ 5 ಟಿಪ್ಸ್

 • ನಿಯಾನ್‌ ವರ್ಣದವು ಸಖತ್‌ ಟ್ರೆಂಡ್‌ನಲ್ಲಿವೆ. ಇವುಗಳ ಆಯ್ಕೆ ಉತ್ತಮ.
 • ಸೆಲೆಬ್ರೆಟಿ ಲುಕ್‌ ಪಡೆಯಲು ಆದಷ್ಟೂ ಟ್ರೆಂಡಿಯಾಗಿರುವ ಸಾಲಿಡ್‌ ಕಲರ್‌ನವನ್ನು ಚೂಸ್‌ ಮಾಡಬೇಕು.
 • ಈ ಸೀರೆಗಳಿಗೆ ಗ್ಲಾಮರಸ್‌ ಬ್ಲೌಸ್‌ ಧರಿಸಿದಲ್ಲಿ ಮಾತ್ರ ಚೆನ್ನಾಗಿ ಕಾಣಿಸುವುದು.
 • ನಿಮ್ಮ ಪರ್ಸನಾಲಿಟಿಗೆ ಹೊಂದುವುದೇ ಎಂಬುದನ್ನು ನೋಡಿಕೊಂಡು ಖರೀದಿಸುವುದು ಉತ್ತಮ.
 • ಇವುಗಳಿಗೆ ಕಾಂಟ್ರಸ್ಟ್ ಬ್ಲೌಸ್‌ ಮ್ಯಾಚ್‌ ಮಾಡಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Monsoon Trench Coat Fashion: ಮಾನ್ಸೂನ್‌ಗೂ ಕಾಲಿಟ್ಟ ಟ್ರೆಂಚ್‌ ಕೋಟ್‌ ಫ್ಯಾಷನ್‌!

Monsoon trench coat fashion: ಚಳಿಗಾಲದಲ್ಲಿ ಮಾತ್ರ ಟ್ರೆಂಡಿಯಾಗುತ್ತಿದ್ದ ಟ್ರೆಂಚ್‌ ಕೋಟ್‌ಗಳು ಇದೀಗ ಮಾನ್ಸೂನ್‌ ಸೀಸನ್‌ಗೂ ಕಾಲಿಟ್ಟಿವೆ. ಕೇವಲ ಸೆಲೆಬ್ರೆಟಿಗಳ ಚಾಯ್ಸ್ನಲ್ಲಿದ್ದ ಈ ಡ್ರೆಸ್‌ಕೋಡ್‌ ಇದೀಗ ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಏನಿದು ಟ್ರೆಂಚ್‌ ಕೋಟ್‌? ಇದನ್ನು ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

VISTARANEWS.COM


on

Monsoon Trench Coat Fashion
ಚಿತ್ರಗಳು: ಸುಹಾನಾ ಖಾನ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲಕ್ಕೂ ಟ್ರೆಂಚ್‌ ಕೋಟ್‌ (Monsoon trench coat fashion) ಫ್ಯಾಷನ್‌ ಎಂಟ್ರಿ ನೀಡಿದೆ. ಹೌದು, ಕೇವಲ ಚಳಿಗಾಲದಲ್ಲಿ ಟ್ರೆಂಡಿಯಾಗುತ್ತಿದ್ದ, ಟ್ರೆಂಚ್‌ ಕೋಟ್‌ಗಳು ಇದೀಗ ಮಾನ್ಸೂನ್‌ ಸೀಸನ್‌ಗೂ ಕಾಲಿಟ್ಟಿದ್ದು, ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಕಿಂಗ್‌ ಖಾನ್‌ ಮಗಳು ಹಾಗೂ ನಟಿ ಸುಹಾನಾ ಖಾನ್‌ ಟ್ರೆಂಚ್‌ ಕೋಟ್‌ ಧರಿಸಿದ್ದು, ಈ ಫ್ಯಾಷನ್‌ ಜೆನ್‌ ಜಿ ಹುಡುಗಿಯರನ್ನು ಸೆಳೆದಿದೆ. ಮಾನ್ಸೂನ್‌ನಲ್ಲೂ ಟ್ರೆಂಚ್‌ ಕೋಟ್‌ ಕ್ಲಾಸಿಯಾಗಿ ಕಾಣಿಸುತ್ತದೆ ಎಂಬುದನ್ನು ಪ್ರೂವ್‌ ಮಾಡಿದೆ.

Monsoon Trench Coat Fashion

ಟ್ರೆಂಚ್‌ಕೋಟ್‌ ವೆರೈಟಿ ವಿನ್ಯಾಸ

ಟ್ರೆಂಚ್‌ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್‌ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್‌ ಲುಕ್‌, ಫಾರ್ಮಲ್‌ ಬ್ಲೇಜರ್‌ ಸ್ಟೈಲ್‌ನಲ್ಲೂದೊರಕುತ್ತವೆ. ಮೊದಲೆಲ್ಲಾ ಹಿಲ್‌ ಸ್ಟೇಷನ್‌ಗಳಲ್ಲಿ ಮಾತ್ರ ಇವುಗಳ ಬಳಕೆ ಹೆಚ್ಚಾಗಿತ್ತು. ಬರಬರುತ್ತಾ ಸಿನಿಮಾ ತಾರೆಯರ ವಾರ್ಡ್‌ರೋಬ್‌ ಸೇರಿದ ನಂತರ ಸಾಮಾನ್ಯ ಹುಡುಗಿಯರ ಮನಸ್ಸನ್ನು ಗೆಲ್ಲತೊಡಗಿದವು. ಸ್ವೆಟರ್‌ ಹಾಗೂ ಜಾಕೆಟ್‌ ಧರಿಸುವಂತೆ, ಟ್ರೆಂಚ್‌ ಕೋಟ್‌ಗಳನ್ನು ಧರಿಸುವುದು ಹೆಚ್ಚಾಯಿತು ಎನ್ನುತ್ತಾರೆ ಜಿಯಾ.

ಕ್ಲಾಸಿಕ್‌ ಲುಕ್‌ ಗ್ಯಾರಂಟಿ

ಅಂದಹಾಗೆ, ವೆಸ್ಟರ್ನ್‌ ಲುಕ್‌ ನೀಡುವಲ್ಲಿಈ ಟ್ರೆಂಚ್‌ ಕೋಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಡಿಸೈನರ್‌ ಋತು ಹೇಳುವಂತೆ, ಇದೀಗ ಇಂಡೋ – ವೆಸ್ಟರ್ನ್ ಸ್ಟೈಲ್‌ನಲ್ಲೂ ಈ ಕೋಟ್‌ಗಳನ್ನು ಬಳಸುವುದು ಹೆಚ್ಚಾಗತೊಡಗಿದೆ. ಹಾಗಾಗಿ ಫಾರ್ಮಲ್‌ , ಎಥ್ನಿಕ್‌ ಡ್ರೆಸ್‌ ಧರಿಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ ಎನ್ನುತ್ತಾರೆ ಅವರು.

ಇದನ್ನೂ ಓದಿ: Ms/Mrs india Karnataka Audition: ಮಿಸ್‌&ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಗೆ ಆಡಿಷನ್‌

ಹೀಗಿರಲಿ ಟ್ರೆಂಚ್‌ ಕೋಟ್‌ ಸ್ಟೈಲಿಂಗ್‌

 • ಟ್ರೆಂಚ್‌ ಕೋಟ್‌ ಬೆಚ್ಚಗಿಡುವುದರಿಂದ ಧರಿಸುವವರು ಸಿಂಪಲ್‌ ಇನ್ನರ್‌ ಡ್ರೆಸ್‌ ಧರಿಸುವುದು ಬೆಸ್ಟ್.
 • ಉದ್ದಗಿರುವವರಿಗೆ ಯಾವುದೇ ಬಗೆಯ ಟ್ರೆಂಚ್‌ ಕೋಟ್‌ ಆದರೂ ಸೂಟ್‌ ಆಗುತ್ತವೆ.
 • ಪ್ಲಂಪಿಯಾಗಿರುವವರು ಆದಷ್ಟು ಡಿಸೈನರ್‌ ಕೋಟ್‌ ಧರಿಸುವುದು ಉತ್ತಮ.
 • ವಿಂಟೆಂಜ್‌ ಹಾಗೂ ರಾಯಲ್‌ ಕಲರ್‌ಗಳ ಟ್ರೆಂಚ್‌ ಕೋಟ್‌ಗಳು ರಾಯಲ್‌ ಲುಕ್‌ ನೀಡುತ್ತವೆ.
 • ಪ್ರಿಂಟೆಡ್‌ ಕೋಟ್‌ಗಳು ಟ್ರೆಂಡ್‌ನಲ್ಲಿಲ್ಲ.
 • ಫಿಟ್ಟಿಂಗ್‌ ಇದ್ದರೇ ಮಾತ್ರ ಚೆನ್ನಾಗಿ ಕಾಣಿಸುತ್ತವೆ.
 • ( ಲೇಖಕಿ ಫ್ಯಾಷನ್‌ ಪತ್ರಕರ್ತೆ )
Continue Reading

ಫ್ಯಾಷನ್

Ms/Mrs india Karnataka Audition: ಮಿಸ್‌&ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಗೆ ಆಡಿಷನ್‌

Ms/Mrs india Karnataka Audition: ಮಿಸ್‌ ಮತ್ತು ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಯ ಆಡಿಷನ್‌ ಬೆಂಗಳೂರಿನ ಟುಲಿಪ್‌ ಇನ್‌ ಹೋಟೆಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು. ಇದರಲ್ಲಿ, ವಯಸ್ಸಿನ ಭೇದ-ಭಾವವಿಲ್ಲದೇ ನಾನಾ ಯುವತಿಯರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Ms or Mrs india Karnataka Audition
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸ್‌/ಮಿಸೆಸ್‌ ಇಂಡಿಯಾ ಕರ್ನಾಟಕ (Ms/Mrs india Karnataka Audition) ಕೀರೀಟ ತಮ್ಮದಾಗಿಸಿಕೊಳ್ಳಲು ಯುವತಿಯರು ಹಾಗೂ ಮಹಿಳೆಯರು ಮುಂದಾಗಿದ್ದಾರೆ. ಹೌದು, ಫ್ಯಾಷನ್‌ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಕನಸು ಹೊಂದಿದ ಮಹಿಳೆಯರು ಇಂದು ಮಿಸ್‌ ಮತ್ತು ಮಿಸೆಸ್‌ ಇಂಡಿಯಾ ಕರ್ನಾಟಕ 8ನೇ ಆವೃತ್ತಿಯ ಆಡಿಷನ್‌ನಲ್ಲಿ ಸಂತಸದಿಂದ ಪಾಲ್ಗೊಂಡರು. ಉದ್ಯಾನನಗರಿಯ ಟುಲಿಪ್‌ ಇನ್‌ ಹೋಟೆಲ್‌ನಲ್ಲಿ ಬೆಳಗ್ಗೆಯಿಂದಲೇ ಆರಂಭಗೊಂಡ ಆಡಿಷನ್‌ನಲ್ಲಿ ನಾನಾ ವರ್ಗದ, ವಯಸ್ಸಿನ ಮಹಿಳೆಯರು ಅತ್ಯುತ್ಸಾಹದಿಂದ ಭಾಗವಹಿಸಿದರು.

Ms or Mrs india Karnataka Audition

ಪ್ರತಿಭಾ ಸಂಶಿಮಠ್‌ ನೇತೃತ್ವ

ಈ ಪೇಜೆಂಟ್‌ ಆಡಿಷನ್‌ನ ನೇತೃತ್ವವನ್ನು ಪೇಜೆಂಟ್‌ನ ಕರ್ನಾಟಕ ಡೈರೆಕ್ಟರ್ ಪ್ರತಿಭಾ ಸಂಶಿಮಠ್‌ ವಹಿಸಿದ್ದರು. ನಿರೂಪಣೆಯೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

Ms or Mrs india Karnataka Audition

ಮಹಿಳೆಯರಿಗೆ ಪ್ರೋತ್ಸಾಹ

ಪಾಲ್ಗೊಂಡ ಮಹಿಳೆಯರನ್ನು ಪ್ರೋತ್ಸಾಹಿಸುತ್ತಾ, ಅವರ ಕ್ಷೇತ್ರ ಹಾಗೂ ಇತರೇ ವಿಷಯಗಳನ್ನು ಪ್ರಸ್ತಾಪಿಸುತ್ತಾ , ಎಲ್ಲರನ್ನೂ ಪರಿಚಯಿಸಿದರು. ರಾಜ್ಯದ ನಾನಾ ಕಡೆಯಿಂದ ಬಂದಂತಹ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು. ಒಬ್ಬೊಬ್ಬರಿಗೂ ಮುಂಬರುವ ಪೇಜೆಂಟ್‌ನ ಬಗ್ಗೆ ಸವಿವರವಾಗಿ ವಿವರಿಸಿದರು.

Ms or Mrs india Karnataka Audition

ಮಿಸ್‌ ಇಂಡಿಯಾ ಕರ್ನಾಟಕ ಟೈಟಲ್‌ಗೂ ನಡೆದ ಆಡಿಷನ್‌

ಹೊಸದಾಗಿ ಸೇರಿಸಲಾಗಿರುವ ಮಿಸ್‌ ಇಂಡಿಯಾ ಕರ್ನಾಟಕ ಟೈಟಲ್‌ ಅನ್ನು ಇದೇ ಮಿಸೆಸ್‌ ಪೇಜೆಂಟ್‌ನಲ್ಲಿ ಸೇರಿಸಲಾಗಿದ್ದು, 16 ವರ್ಷ ಪೂರ್ಣಗೊಳಿಸಿರುವ ಅವಿವಾಹಿತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರತಿಭಾ ಸಂಶಿಮಠ್‌ ವಿವರಿಸಿದರು.

Ms or Mrs india Karnataka Audition

ನಾನಾ ವಯೋಮಾನದವರ ಪಾಲ್ಗೊಳ್ಳುವಿಕೆ

ಇನ್ನು, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಭಾಗವಹಿಸಲು ಇಚ್ಛಿಸುವ ನಾನಾ ವಯೋಮಾನದವರಿಗೆ ಪ್ರತ್ಯೇಕ ಗುಂಪುಗಳನ್ನು ರೂಪಿಸಲಾಗಿತ್ತು. 22-40 ರೊಳಗಿನ ವಯೋಮಾನದವರು, 41-60 ಹಾಗೂ 60ರ ಮೇಲ್ಪಟ್ಟವರು ಈ ಅಡಿಷನ್‌ನಲ್ಲಿ ಪಾಲ್ಗೊಂಡಿದ್ದರು.

ಅಡಿಷನ್‌ನಲ್ಲಿ ಭಾಗವಹಿಸಿದ ಸೆಲೆಬ್ರೆಟಿಗಳು

ಈ ಆಡಿಷನ್‌ನಲ್ಲಿ, ಮಿಸ್‌ ಕೆನಡಾ ಸೌತ್‌ ಏಷಿಯಾ 2019 & ಮಿಸ್‌ ಇಂಡಿಯಾ ಗ್ಲೋಬಲ್‌ 2019 ಪೂರ್ಣಿಮಾ ರಮೇಶ್‌ ವಿಶೇ‍ಷ ಅತಿಥಿಯಾಗಿ ಭಾಗವಹಿಸಿದ್ದರು. ಇವರೊಂದಿಗೆ ಬಿಗ್‌ ಬಾಸ್‌ ಸ್ಪರ್ಧಿ ಅವಿನಾಶ್‌ ಶೆಟ್ಟಿ, ಆಕ್ಸೀಸ್‌ ಬ್ಯಾಂಕ್‌ನ ಉಪಾಧ್ಯಕ್ಷೆ ಅನಿತಾ ಹರೀಶ್‌ ಹಾಗೂ ಪೇಜ್‌ ತ್ರೀ ಸೆಲೆಬ್ರೆಟಿ ಸತೀಶ್‌ ಕಡಾಬಮ್‌ ಅವರು ಕೂಡ ಪಾಲ್ಗೊಂಡಿದ್ದರು.

ಇದನ್ನೂ ಓದಿ: Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!

ಆನ್‌ಲೈನ್‌ ಮಾಹಿತಿ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್‌ ಸೈಟ್‌ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. www.mrsindiakarnataka.com ಹಾಗೂ ವಾಟ್ಸಪ್‌ ಸಂಖ್ಯೆ: 9886761457

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Dogs Monsoon Fashion: ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌!

Dogs Monsoon Fashion: ಮುದ್ದು ಶ್ವಾನಗಳನ್ನು ಸಿಂಗರಿಸುವ ಮಾನ್ಸೂನ್‌ ಡ್ರೆಸ್‌, ರೈನ್‌ಕೋಟ್ಸ್ ಹಾಗೂ ಇತರೇ ಆಕ್ಸೆಸರೀಸ್‌ಗಳು ಪೆಟ್‌ ಶಾಪ್‌ಗಳಿಗೆ ಎಂಟ್ರಿ ನೀಡಿವೆ. ಯಾವ್ಯಾವ ಬಗೆಯವು ದೊರೆಯುತ್ತಿವೆ? ಯಾವುದೆಲ್ಲಾ ಆಕ್ಸೆಸರೀಸ್‌ಗಳು ಬೇಡಿಕೆ ಪಡೆದುಕೊಂಡಿವೆ? ಎಂಬುದರ ಕುರಿತಂತೆ ಡಾಗ್‌ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ.

VISTARANEWS.COM


on

Dogs Monsoon Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುದ್ದು ಶ್ವಾನಗಳಿಗೂ ಬಂತು ಮಾನ್ಸೂನ್‌ ಫ್ಯಾಷನ್‌! (Dogs Monsoon Fashion) ಅರರೆ., ಇದೇನಿದು ಶ್ವಾನಗಳಿಗೂ ಮಳೆಗಾಲದ ಫ್ಯಾಷನ್‌ ಎಂದು ಹುಬ್ಬೇರಿಸಬಹುದು. ಹೌದು, ಇದೀಗ ಶ್ವಾನಗಳ ಮಾನ್ಸೂನ್‌ ಡ್ರೆಸ್‌ ಹಾಗೂ ರೈನ್‌ಕೋಟ್‌, ಮತ್ತಿತರೇ ಆಕ್ಸೆಸರೀಸ್‌ ಪೆಟ್‌ ಲೋಕದಲ್ಲಿ ಕಾಲಿಟ್ಟಿವೆ. ಆಯಾ ಜಾತಿಯ ಮುದ್ದು ಶ್ವಾನಗಳಿಗೆ ಹೊಂದುವಂತಹ, ನಾನಾ ವೆರೈಟಿ ಮಾನ್ಸೂನ್‌ ಡ್ರೆಸ್‌ಗಳು ಹಾಗೂ ವಾಟರ್‌ಪ್ರೂಫ್‌ ರೈನ್‌ಕೋಟ್‌ಗಳು ನಾಯಿಮರಿಗಳನ್ನು ಅಲಂಕರಿಸುತ್ತಿವೆ.

Dogs Monsoon Fashion

ಮುದ್ದು ಶ್ವಾನಗಳಿಗೂ ಮಾನ್ಸೂನ್‌ ಫ್ಯಾಷನ್‌

“ಇಂದು ಕಾಲ ಬದಲಾಗಿದೆ. ಮನೆಯಲ್ಲಿ ಮುದ್ದು ಶ್ವಾನಗಳಿಗೂ ಮಕ್ಕಳ ಸ್ಥಾನ ಮಾನ ದೊರಕಿದೆ. ಪ್ರತಿಯೊಬ್ಬರು ಅವರು ಸಾಕಿದ ನಾಯಿಮರಿಗಳನ್ನು ಯಾವ ಮಟ್ಟಿಗೆ ಇಷ್ಟ ಪಡುತ್ತಾರೆಂದರೇ, ಅವಕ್ಕೆ ಇತ್ತೀಚೆಗೆ ನಾನಾ ಬಗೆಯಲ್ಲಿ ಸ್ಟೈಲಿಂಗ್‌ ಕೂಡ ಮಾಡುತ್ತಾರೆ. ಇನ್ನು, ಹಿರಿಯರು ಕಿರಿಯರೆನ್ನದೇ ಎಲ್ಲರೂ ವಾಕಿಂಗ್‌ ಹಾಗೂ ಜಾಕಿಂಗ್‌ ಸಮಯದಲ್ಲೂ ಶ್ವಾನಗಳನ್ನು ಜೊತೆಯಲ್ಲಿಯೇ ಕರೆದೊಯ್ಯುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಪೆಟ್‌ ಲೋಕದಲ್ಲೂ ನಾನಾ ಬಗೆಯ ಆಕ್ಸೆಸರೀಸ್‌ಗಳು ಹಾಗೂ ಉಡುಗೆಗಳು ಬಂದಿವೆ. ಆಯಾ ಸೀಸನ್‌ಗೆ ಮ್ಯಾಚ್‌ ಆಗುವಂತೆ ದೊರಕುತ್ತಿವೆ. ಅವುಗಳಲ್ಲಿ ಇದೀಗ ಮಾನ್ಸೂನ್‌ ಸೀಸನ್‌ಗೆ ಹೊಂದುವಂತಹ ಫ್ಯಾಷನ್‌ ಉಡುಗೆ ಹಾಗೂ ರೈನ್‌ಕೋಟ್‌ಗಳು ಬಿಡುಗಡೆಗೊಂಡಿವೆ” ಎನ್ನುತ್ತಾರೆ ಪೆಟ್‌ ಸ್ಪಾನ ಸ್ಟೈಲಿಂಗ್‌ ಎಕ್ಸ್‌ಫರ್ಟ್ ಜಾಕಿ. ಅವರ ಪ್ರಕಾರ, ಶ್ವಾನಗಳು ಇದೀಗ ಸ್ಟೈಲಿಶ್‌ ಆಗಿ ಕಾಣಿಸಲು ಈ ಆಕ್ಸೆಸರೀಸ್‌ಗಳು ಸಹಕರಿಸುತ್ತಿವೆಯಂತೆ.

Dogs Monsoon Fashion

ಮಾನ್ಸೂನ್‌ಗೆ ಮ್ಯಾಚಿಂಗ್‌

ಶ್ವಾನಗಳಿಗೆ ಬಂದಿರುವ ಕಲರ್‌ಫುಲ್‌ ಉಡುಗೆ ಹಾಗೂ ರೈನ್‌ಕೋಟ್‌ ಮತ್ತು ಅವುಗಳ ಕಾಲಿನ ಪಾದಗಳಿಗೆ ಹಾಕಬಹುದಾದ ಪೆಟ್‌ ವೆಲ್ಲೈಸ್‌, ರೈನ್‌ ಬೂಟ್ಸ್ ಹಾಗೂ ಟವೆಲ್‌ ಮತ್ತು ವೈಪ್ಸ್ ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

Dogs Monsoon Fashion

ಕಲರ್‌ಫುಲ್‌ ಡಾಗ್ಗಿ ರೈನ್‌ ಕೋಟ್ಸ್

ಪಿರಿ ಪಿರಿ ಸಣ್ಣ ಮಳೆಯಲ್ಲೂ ಡಾಗ್ಗಿಯಿಲ್ಲದೇ ವಾಕ್‌ ಮಾಡಲಾಗುವುದಿಲ್ಲ ಎನ್ನುವ ಶ್ವಾನಗಳ ಪೋಷಕರು, ಈ ಮಾನ್ಸೂನ್‌ ಡಾಗ್‌ ರೈನ್‌ಕೋಟ್ಸ್‌ಗಳ ಖರೀದಿ ಮಾಡತೊಡಗಿದ್ದಾರೆ. ಬೇಡಿಕೆ ಹೆಚ್ಚಾದಂತೆ, ಸಿಂಥಟಿಕ್‌, ಪಾಲಿಸ್ಟರ್‌ ಸೇರಿದಂತೆ ವಾಟರ್‌ ಪ್ರೂಫ್‌ ಫ್ಯಾಬ್ರಿಕ್‌ನಲ್ಲಿ ಇವು ನಾನಾ ಡಿಸೈನ್‌ನಲ್ಲಿ ಆಗಮಿಸಿವೆ.

Dogs Monsoon Fashion

ಪೆಟ್ಸ್ ರೈನ್‌ ಬೂಟ್ಸ್

ನಾಯಿ ಮರಿಗಳಿಗೆ ರಸ್ತೆಯ ಹಾಗೂ ನೆಲದ ಕೊಚ್ಚೆ, ಕೆಸರು ಹತ್ತದಂತೆ ಕಾಪಾಡಬಹುದಾದ ಪುಟ್ಟ ಪುಟ್ಟ ರೈನ್‌ ಬೂಟ್ಸ್‌ಗಳು ಕೂಡ ನಾನಾ ವಿನ್ಯಾಸದಲ್ಲಿ ಪೆಟ್‌ ಶಾಪ್‌ಗಳಿಗೆ ಬಂದಿವೆ. ಇನ್ನು, ಡಾಗ್‌ ಟವೆಲ್ಸ್ ಹಾಗೂ ವೈಪ್ಸ್ ಸೇರಿದಂತೆ, ಬೋ ಹಾಗೂ ಬೆಲ್ಟ್‌ಗಳು ಕೂಡ ಪೆಟ್‌ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion 2024: ಮಾನ್ಸೂನ್‌ ಫ್ಯಾಷನ್‌ಗೆ ಲಗ್ಗೆ ಇಟ್ಟ ಡ್ರೆಸ್ ಕೋಡ್ಸ್

Continue Reading
Advertisement
Hemavati Link Canal
ಪ್ರಮುಖ ಸುದ್ದಿ6 mins ago

Hemavati Link Canal: ಹೇಮಾವತಿ‌ ಲಿಂಕ್‌ ಕೆನಾಲ್ ವಿರೋಧಿಸಿ ಇಂದು ತುಮಕೂರು ಬಂದ್

Rishab Shetty
ಸಿನಿಮಾ19 mins ago

Rishab Shetty: ಕುಂದಾಪುರಕ್ಕೆ ಆಗಮಿಸಿದ ʼಕಲ್ಕಿʼಯ ಬುಜ್ಜಿ; ಪ್ರಭಾಸ್‌ ಕಾರು ರೈಡ್‌ ಮಾಡಿದ ರಿಷಬ್‌ ಶೆಟ್ಟಿ ಹೇಳಿದ್ದೇನು?

Renuka swamy Murder case actor darshan
ಕ್ರೈಂ43 mins ago

Actor Darshan: ಸಿಗದೇ ಹೋದ ರೇಣುಕಾ ಸ್ವಾಮಿ ಮೊಬೈಲ್, ಹೊಸ ಸಿಮ್‌ ಖರೀದಿಸಿದ ಪೊಲೀಸರು

ನನ್ನ ದೇಶ ನನ್ನ ದನಿ ಅಂಕಣ indira gandhi
ಅಂಕಣ1 hour ago

ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?”

karnataka Weather Forecast
ಮಳೆ2 hours ago

Karnataka Weather : ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ ಸೇರಿ ವಿವಿಧೆಡೆ ಮಳೆ ಅಬ್ಬರ; ಆರೆಂಜ್‌ ಅಲರ್ಟ್‌ ಘೋಷಣೆ

Seeds For Men Sexual Power
ಆರೋಗ್ಯ2 hours ago

Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

Ram Mandir
Latest2 hours ago

Ayodhya Temple: ಕಡಿಮೆಯಾದ ಭಕ್ತರ ದಟ್ಟಣೆ; ಅಯೋಧ್ಯೆಗೆ ಭೇಟಿ ನೀಡಲು ಇದು ಸಕಾಲ

Monsoon Hair care
ಆರೋಗ್ಯ3 hours ago

Monsoon Hair care: ಮಳೆಗಾಲದಲ್ಲಿ ಕೂದಲಿನ ಆರೈಕೆಗೆ ಈ ಸಲಹೆ ಪಾಲಿಸಿ

Dina Bhavihsya
ಭವಿಷ್ಯ3 hours ago

Dina Bhavishya : ಕುಟುಂಬದ ಆಪ್ತರಿಂದ ಶುಭ ಸುದ್ದಿ; ಬಹು ದಿನಗಳ ಕನಸು ನನಸಾಗುವ ಕಾಲವಿದು

Kannada New movie Ee Pada Punya Pada title unveiling
ಕರ್ನಾಟಕ8 hours ago

Kannada New Movie: ಸಿದ್ದು ಪೂರ್ಣಚಂದ್ರ ನಿರ್ದೇಶನದ ನೂತನ ಚಿತ್ರ ‘ಈ ಪಾದ ಪುಣ್ಯ ಪಾದ’ ಶೀರ್ಷಿಕೆ ಅನಾವರಣ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ14 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌