Site icon Vistara News

Deepavali Mens Fashion: ದೀಪಾವಳಿ ಹಬ್ಬದ ಮೆನ್ಸ್ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಎಥ್ನಿಕ್‌ವೇರ್ಸ್

Deepavali Mens Fashion

ಶೀಲಾ. ಸಿ. ಶೆಟ್ಟಿ, ಬೆಂಗಳೂರು

ಬೆಳಕಿನ ಹಬ್ಬ ದೀಪಾವಳಿಗೆ ಈಗಾಗಲೇ ಪುರುಷರಿಗೂ ನಾನಾ ವಿನ್ಯಾಸದ ಡಿಸೈನರ್‌ವೇರ್‌ಗಳು (Deepavali Mens Fashion) ಲಗ್ಗೆ ಇಟ್ಟಿವೆ. ದೇಸಿ ಲುಕ್‌ ನೀಡುವ ಕುರ್ತಾ, ಶೆರ್ವಾನಿ, ಮಿಕ್ಸ್‌ ಮ್ಯಾಚ್‌ ಮಾಡಬಹುದಾದ ಯುವಕರ ಸಲ್ವಾರ್‌, ಧೋತಿ ಹಾಗೂ ಬಣ್ಣಬಣ್ಣದ ಸಿಲ್ಕ್‌ ಶರ್ಟ್‌ಗಳು ಡಿಫರೆಂಟ್‌ ಶೇಡ್‌ ಹಾಗೂ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಖರೀದಿಸಿದ ನಂತರ ಅವುಗಳನ್ನು ಹೇಗೆಲ್ಲಾ ಧರಿಸಬಹುದು? ಮ್ಯಾಚಿಂಗ್‌ ಮಾಡುವುದು ಹೇಗೆ?ಈ ಕುರಿತಂತೆ ಸ್ಟೈಲಿಸ್ಟ್ ರಾಘವ್ ಶರ್ಮಾ ಒಂದಿಷ್ಟು ಐಡಿಯಾ ನೀಡಿದ್ದಾರೆ.

ಬ್ರೈಟ್‌ ಕಲರ್ಸ್ ಶರ್ಟ್

ದೀಪಾವಳಿ ಹಬ್ಬಕ್ಕೆ ಯುವಕರು ಆದಷ್ಟೂ ಬ್ರೈಟ್‌ ಕಲರ್‌ನ ರಾಯಲ್‌ ಬ್ಲ್ಯೂ, ಮೆರೂನ್‌, ನೇರಳೆ, ಮಜಂತಾ, ಸನ್‌ಕಲರ್‌ ಶೇಡ್‌ಗಳ ಶರ್ಟ್‌ ಅಥವಾ ಫುಲ್‌ ಸ್ಲೀವ್‌ ಶರ್ಟ್‌ಗಳನ್ನು ಧರಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಅವರ ಪ್ರಕಾರ, ಶರ್ಟ್‌ಗಳನ್ನು ಧರಿಸುವುದಾದಲ್ಲಿ ಕಾಂಟ್ರಸ್ಟ್‌ ಕಲರ್‌ನ ಪ್ಯಾಂಟ್‌ ಮ್ಯಾಚ್‌ ಮಾಡಬೇಕು.

ಟ್ರೆಡಿಷನಲ್‌ ಕುರ್ತಾ

ಹಬ್ಬದ ಸೀಸನ್‌ಗೆ ನೆಕ್‌ ಎಂಬ್ರಾಯ್ಡರಿ ಇರುವಂತಹ ಸಿಲ್ಕ್‌ ಕುರ್ತಾಗಳು ಬಂದಿವೆ. ಇವುಗಳಲ್ಲಿ ಡಾರ್ಕ್‌ ಕಲರ್‌ನ ಕುರ್ತಾ ಆಯ್ಕೆ ಮಾಡಿಕೊಳ್ಳಬಹುದು. ಇನ್ನು ಪರ್ಸನಾಲಿಟಿಗೆ ತಕ್ಕಂತೆ ಕುರ್ತಾಗಳ ಲೆಂತ್‌ ನೋಡಿಕೊಳ್ಳಬೇಕು. ಆದಷ್ಟೂ ಶಾರ್ಟ್ ಕುರ್ತಾಗಳಿಗೆ ಮಾನ್ಯತೆ ನೀಡಿ. ಇದನ್ನು ಜೀನ್ಸ್‌ ಮೇಲೂ ಧರಿಸಬಹುದು. ಸಿಲ್ಕ್‌ ಫ್ಯಾಬ್ರಿಕ್‌ನದ್ದು ಗ್ಯ್ರಾಂಡ್‌ ಲುಕ್‌ ನೀಡುತ್ತದೆ.

ನಾರ್ತ್ ಇಂಡಿಯನ್‌ ಲುಕ್‌ ಶೆರ್ವಾನಿ

ನಾರ್ತ್ ಇಂಡಿಯನ್‌ ಔಟ್‌ಫಿಟ್‌ಗಳಲ್ಲಿ ಇದೀಗ ನಾನಾ ಬಗೆಯ ಶೆರ್ವಾನಿ ಹಾಗೂ ಪಟಾನಿ ಡ್ರೆಸ್‌ಗಳು ಟ್ರೆಂಡ್‌ನಲ್ಲಿವೆ. ಇವನ್ನು ಕೂಡ ಟ್ರೆಡಿಷನಲ್‌ ಲುಕ್‌ ನೀಡಲು ಧರಿಸಬಹುದು.

ಸಿಲ್ಕ್‌ ಔಟ್‌ಫಿಟ್ಸ್‌ಗೆ ಆದ್ಯತೆ ನೀಡಿ

ಇದೀಗ ಮಾರುಕಟ್ಟೆಯಲ್ಲಿ ಸಿಲ್ಕ್ ಜುಬ್ಬಾ ಅಥವಾ ಸಿಲ್ಕ್‌ ಶರ್ಟ್‌ಗಳು ದೊರೆಯುತ್ತವೆ. ಇವು ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣುತ್ತವೆ. ಸಿಲ್ಕ್‌ ಜುಬ್ಬಾಗಳಲ್ಲಿ ಕ್ರೀಂ ಕಲರ್‌, ಹಾಫ್‌ ವೈಟ್‌ ಕಲರ್‌ ಗ್ಯ್ರಾಂಡ್‌ ಲುಕ್‌ ನೀಡುತ್ತದೆ. ಸಿಲ್ಕ್‌ ಶೈನಿಂಗ್‌ ಕಲರ್‌ ಶರ್ಟ್‌ಗಳನ್ನು ಕಾಂಟ್ರಾಸ್ಟ್ ಪ್ಯಾಂಟ್‌ನೊಂದಿಗೆ ಮ್ಯಾಚ್‌ ಮಾಡಿ ಧರಿಸಬಹುದು. ಸಿಲ್ಕ್‌ ಶರ್ಟ್‌ಗಳನ್ನು ಪಂಚೆ ಜೊತೆ ಧರಿಸುವುದರಿಂದ ಟ್ರೆಡಿಷನಲ್‌ ಲುಕ್‌ ನೀಡಬಹುದು.

ಮೆನ್ಸ್ ಟ್ರೆಡಿಷನಲ್‌ ಲುಕ್‌ಗಾಗಿ ನೀವು ಪಾಲಿಸಬೇಕಾದ ಟಿಪ್ಸ್

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Deepavali Fashion: ಬೆಳಕಿನ ಹಬ್ಬ ದೀಪಾವಳಿಗೆ ಬಂತು ಗ್ರ್ಯಾಂಡ್‌ ಫ್ಯಾಷನ್‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version