ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ಗರನ್ನು ಮೀರಿಸುವಂತೆ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ , ನಟ ಕಿಚ್ಚ ಸುದೀಪ್ ಅವರಿಗೆ ಆಕರ್ಷಕವಾಗಿ ಜಂಪ್‌ಸೂಟ್ಸ್ ಡಿಸೈನ್ ಮಾಡಿದ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್ ಅವರ ಹೆಸರು ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಚಿರಪರಿಚಿತ. ಇವರ ಬಾಟಲ್ ಪೈಪ್ಸ್ ಲೆಬೆಲ್‌ನ ಒಂದೊಂದು ಔಟ್‌ಫಿಟ್ಸ್ ಕುರಿತಂತೆ ಫ್ಯಾಷನ್‌ಲೋಕ ಪ್ರಶಂಸೆಯ ಸುರಿಮಳೆಗೈದಿದೆ. ಹಾಗೆಂದು ಆರಂಭದಲ್ಲಿ ಇವರ ಫ್ಯಾಷನ್ ಜರ್ನಿಯೇನೂ ಸುಲಭವಾಗಿರಲಿಲ್ಲ. ಸಾಮಾನ್ಯ ರಿಟೇಲ್ ಸೇಲ್ಸ್ ಮಾಡುವುದರಿಂದಿಡಿದು, ವೆಡ್ಡಿಂಗ್ ಆರ್ಡರ್‌ವರೆಗೂ ಕೆಲಸ ಮಾಡಿದ್ದಾರೆ. ಸ್ನೇಹಿತ ನಟ ಸಿದ್ಧು ಮೂಲಿಮನಿಯ ಸಹಾಯದಿಂದ ಸಿನಿಮಾರಂಗಕ್ಕೆ ಕಾಲಿಟ್ಟ ನಂತರ ಇದುವರೆಗೂ ಹಿಂತಿರುಗಿ ನೋಡಿಲ್ಲ! ಡಿಸೈನರ್ ಪಟ್ಟ ಒಲಿದಿದೆ. ತಮ್ಮ ಈ ಫ್ಯಾಷನ್ ಜರ್ನಿ ಕುರಿತು ಭರತ್ ಸಾಗರ್ ವಿಸ್ತಾರ ನ್ಯೂಸ್‌ನ ಸಂದರ್ಶನದಲ್ಲಿ (Celebrity Designer Interview) ಮಾತನಾಡಿದ್ದಾರೆ. ಅವರ ಸಂದರ್ಶನದ ಸಾರಂಶ ಇಲ್ಲಿದೆ.
ವಿಸ್ತಾರ ನ್ಯೂಸ್: ಮೂಲತಃ ಮೆಕಾನಿಕಲ್ ಎಂಜಿನಿಯರ್ ಆಗಿರುವ ನೀವು ಡಿಸೈನಿಂಗ್ ಲೋಕಕ್ಕೆ ಎಂಟ್ರಿ ನೀಡಿದ್ದು ಹೇಗೆ? ಪ್ಯಾಷನ್ ಅನ್ನು ಪ್ರೊಫೆಷನ್ ಮಾಡಿಕೊಂಡದ್ದು ಯಾಕೆ?
ಭರತ್ ಸಾಗರ್ : ಮೊದಲಿನಿಂದಲೂ ನನಗೆ ಈ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಬಾಷ್ ಸೇರಿದಂತೆ ಸಾಕಷ್ಟು ಪ್ರತಿಷ್ಥಿತ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುತ್ತಲೇ ಸಿಕ್ಕಿದ ಸಮಯದಲ್ಲೆ ಡಿಸೈನಿಂಗ್ ಕೂಡ ಮಾಡುತ್ತಿದ್ದೆ. ಆರಂಭದಲ್ಲಿ ಜೀವನ ನಿರ್ವಹಣೆಗೆಂದು ರಿಟೇಲ್ ಟೆಕ್ಸ್‌ಟೈಲ್ ಬಿಸ್ನೆಸ್ ಮಾಡುತ್ತಿದ್ದೆ. ಸ್ನೇಹಿತರ ಜೊತೆಗೂಡಿ ಸಮ್ಮರ್ ಕ್ಯಾಂಪ್ ನಡೆಸುತ್ತಿದ್ದೆ. ಈ ಮಧ್ಯೆ ಸ್ನೇಹಿತ ನಟ ಸಿದ್ದು ಮೂಲಿಮನೆಯ ಸಹಕಾರದಿಂದ ರಾಜರಥ ಸಿನಿಮಾಗಾಗಿ ಅಸಿಸ್ಟಂಟ್ ಡಿಸೈನರ್ ಆಗಿ ಕೆಲಸ ಮಾಡುವ ಅವಕಾಶ ದೊರೆಯಿತು. ನಂತರ ಒಂದರ ನಂತರ ಒಂದರಂತೆ ಅವಕಾಶಗಳು ದೊರೆತವು.
ವಿಸ್ತಾರ ನ್ಯೂಸ್ : ಕಿಚ್ಚ ಸುದೀಪ್ ಅವರ ಫ್ಯಾಷನ್ ನಾಲೆಡ್ಜ್ ಬಗ್ಗೆ ಹೇಳಿ ?
ಭರತ್ ಸಾಗರ್ : ಸುದೀಪ್ ಸರ್‌ಗೆ ಅಗಾಧ ಫ್ಯಾಷನ್ ಜ್ಞಾನವಿದೆ. ನಾವು ಅವರಿಗೆ ಡಿಸೈನ್ ಮಾಡುವಾಗ, ಖುದ್ದು ಅವರೇ ಹೊಸ ಹೊಸ ವಿನ್ಯಾಸದ ಬಗ್ಗೆ ನಮಗೆ ಹೇಳುತ್ತಿದ್ದರು. ಅವರ ಅಭಿಲಾಷೆಗೆ ತಕ್ಕಂತೆ ನಾವು ಡಿಸೈನ್ ಮಾಡುತ್ತಿದ್ದೆವು.
ವಿಸ್ತಾರ ನ್ಯೂಸ್ : ಫ್ಯಾಷನ್ ಲೋಕದಲ್ಲಿ ಪ್ರಶಂಸೆಗೊಳಗಾದ ಕಿಚ್ಚ ಸುದೀಪ್ ಧರಿಸಿದ ಜಂಪ್ ಸೂಟ್ ಕೋಟ್ ಡಿಸೈನರ್‌ವೇರ್ ಸಿದ್ಧಗೊಂಡದ್ದು ಹೇಗೆ?
ಭರತ್ ಸಾಗರ್: ಕೊನೆಯ ಎಪಿಸೋಡ್‌ನ ಕಾಸ್ಟ್ಯೂಮ್ ಸಿದ್ಧಪಡಿಸಲು ಸುಮಾರು ಒಂದೂವರೆ ವಾರ ಬೇಕಾಯಿತು. ಸ್ವೆಡ್ ಶಿಮ್ಮರ್ ಫ್ಯಾಬ್ರಿಕ್ ಬಳಸಲಾಗಿದೆ. ಎಂಬ್ರಾಯ್ಡರಿ ವರ್ಕ್, ಪೋತ್, ಗ್ಲಾಸ್ ಬೀಡ್ಸ್ ವರ್ಕ್ ಈ ಬ್ಲಾಕ್ ಶೇಡ್‌ನ ಜಂಪ್ ಸೂಟ್ ಡಿಸೈನರ್‌ವೇರ್ ಮೇಲೆ ಕಾಣಬಹುದು. ಕ್ರಿಸ್ ಕ್ರಾಸ್ ಲೆಪೆಲ್ ಹೈ ನೆಕ್ ಔಟ್‌ಫಿಟ್ಟನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಪ್ಯಾಂಟ್ ಮೇಲೆ ಸುಮಾರು 4000 ಮೆಟಲ್ ರಿವರ್ಟ್ ಹಾಕಿ ಅತ್ಯಾಕರ್ಷಕವಾಗಿಸಲಾಗಿದೆ.
ವಿಸ್ತಾರ ನ್ಯೂಸ್: ಯಾವ್ಯಾವ ಸ್ಟಾರ್‌ಗಳಿಗೆ ಡಿಸೈನ್ ಮಾಡುತ್ತಿದ್ದೀರಾ?
ಭರತ್ ಸಾಗರ್ : ಶಿವಣ್ಣ, ಪ್ರಭುದೇವಾ, ಉಪ್ಪಿ ಸರ್ ಸೇರಿದಂತೆ ಸಾಕಷ್ಟು ಸಿನಿಮಾಗಳ ಹೀರೋಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟಿವಿ ಚಾನೆಲ್‌ಗಳಲ್ಲಿ ಭಾಗವಹಿಸುವ ಸೆಲೆಬ್ರೆಟಿಗಳಿಗೂ ಡಿಸೈನ್ ಮಾಡಿದ್ದೇನೆ.
ವಿಸ್ತಾರ ನ್ಯೂಸ್: ತಾರೆಯರಿಗೆ ಡಿಸೈನ್ ಮಾಡುವ ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ಭರತ್ ಸಾಗರ್: ನನ್ನದು ತೀರಾ ಸಿಂಪಲ್ ಫ್ಯಾಷನ್!
ವಿಸ್ತಾರ ನ್ಯೂಸ್: ನಿಮಗೆ ಕೆಲಸಕ್ಕೆ ಸ್ಫೂರ್ತಿ ನೀಡುವ ವ್ಯಕ್ತಿ ಯಾರು ?
ಭರತ್ ಸಾಗರ್: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ರವರಿಗೆ ಸ್ಟೈಲಿಂಗ್ ಮಾಡುವ ಸೆಲೆಬ್ರೆಟಿ ಡಿಸೈನರ್ ಅಸಾ ಕಝಾಮಿ ಸರ್.
ವಿಸ್ತಾರ ನ್ಯೂಸ್: ಫ್ಯಾಷನ್ ಜರ್ನಿಯಲ್ಲಿ ನೀವು ಕಲಿತ ಪಾಠ ಏನು?
ಭರತ್ ಸಾಗರ್: ದೊರಕುವ ಒಂದೊಂದು ಅವಕಾಶವನ್ನು ಬಳಸಿಕೊಳ್ಳಬೇಕು. ಕಷ್ಟಪಟ್ಟು ಕೆಲಸ ಮಾಡಬೇಕು. ಹೊಸತನವನ್ನು ಅಳವಡಿಸಿಕೊಳ್ಳಬೇಕು. ಸ್ನೇಹಿತರ ಸಹಾಯವನ್ನು ಮರೆಯಬಾರದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Hanging Jumka Fashion: ಯುವತಿಯರ ಕಿವಿ ಅಲಂಕರಿಸುತ್ತಿರುವ ಹ್ಯಾಂಗಿಂಗ್ ಜುಮ್ಕಾ