Celebrity Designer Interview: ಕಿಚ್ಚ ಸುದೀಪ್‌ರಿಂದ ಭೇಷ್‌ ಎನಿಸಿಕೊಂಡ ಡಿಸೈನರ್‌ ಭರತ್‌ ಸಾಗರ್ ಫ್ಯಾಷನ್‌ ಜರ್ನಿ ಕುತೂಹಲಕರ! - Vistara News

ಫ್ಯಾಷನ್

Celebrity Designer Interview: ಕಿಚ್ಚ ಸುದೀಪ್‌ರಿಂದ ಭೇಷ್‌ ಎನಿಸಿಕೊಂಡ ಡಿಸೈನರ್‌ ಭರತ್‌ ಸಾಗರ್ ಫ್ಯಾಷನ್‌ ಜರ್ನಿ ಕುತೂಹಲಕರ!

ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ನಟ ಕಿಚ್ಚ ಸುದೀಪ್‌ಗೆ ವಿಶೇಷ ಔಟ್‌ಫಿಟ್ಸ್ ಡಿಸೈನ್‌ ಮಾಡಿ ಭೇಷ್‌ ಎನಿಸಿಕೊಂಡು ಫ್ಯಾಷನ್‌ ಪ್ರಿಯರ ಮೆಚ್ಚುಗೆ ಗಳಿಸಿದ ಸ್ಯಾಂಡಲ್‌ವುಡ್‌ನ ಸೆಲೆಬ್ರೆಟಿ ಡಿಸೈನರ್‌ ಭರತ್ ಸಾಗರ್‌ ವಿಸ್ತಾರ ನ್ಯೂಸ್‌ಗೆ ವಿಶೇಷ ಸಂದರ್ಶನ (Celebrity Designer Interview) ನೀಡಿದ್ದಾರೆ.

VISTARANEWS.COM


on

Celebrity Designer Interview
ಚಿತ್ರಗಳು: ಭರತ್‌ ಸಾಗರ್‌, ಸ್ಯಾಂಡಲ್‌ವುಡ್‌ ಸೆಲೆಬ್ರೆಟಿ ಡಿಸೈನರ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ಗರನ್ನು ಮೀರಿಸುವಂತೆ ಕನ್ನಡ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ , ನಟ ಕಿಚ್ಚ ಸುದೀಪ್‌ ಅವರಿಗೆ ಆಕರ್ಷಕವಾಗಿ ಜಂಪ್‌ಸೂಟ್ಸ್ ಡಿಸೈನ್‌ ಮಾಡಿದ ಸೆಲೆಬ್ರೆಟಿ ಡಿಸೈನರ್‌ ಭರತ್‌ ಸಾಗರ್‌ ಅವರ ಹೆಸರು ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಚಿರಪರಿಚಿತ. ಇವರ ಬಾಟಲ್‌ ಪೈಪ್ಸ್ ಲೆಬೆಲ್‌ನ ಒಂದೊಂದು ಔಟ್‌ಫಿಟ್ಸ್ ಕುರಿತಂತೆ ಫ್ಯಾಷನ್‌ಲೋಕ ಪ್ರಶಂಸೆಯ ಸುರಿಮಳೆಗೈದಿದೆ. ಹಾಗೆಂದು ಆರಂಭದಲ್ಲಿ ಇವರ ಫ್ಯಾಷನ್‌ ಜರ್ನಿಯೇನೂ ಸುಲಭವಾಗಿರಲಿಲ್ಲ. ಸಾಮಾನ್ಯ ರಿಟೇಲ್‌ ಸೇಲ್ಸ್ ಮಾಡುವುದರಿಂದಿಡಿದು, ವೆಡ್ಡಿಂಗ್‌ ಆರ್ಡರ್‌ವರೆಗೂ ಕೆಲಸ ಮಾಡಿದ್ದಾರೆ. ಸ್ನೇಹಿತ ನಟ ಸಿದ್ಧು ಮೂಲಿಮನಿಯ ಸಹಾಯದಿಂದ ಸಿನಿಮಾರಂಗಕ್ಕೆ ಕಾಲಿಟ್ಟ ನಂತರ ಇದುವರೆಗೂ ಹಿಂತಿರುಗಿ ನೋಡಿಲ್ಲ! ಡಿಸೈನರ್‌ ಪಟ್ಟ ಒಲಿದಿದೆ. ತಮ್ಮ ಈ ಫ್ಯಾಷನ್‌ ಜರ್ನಿ ಕುರಿತು ಭರತ್‌ ಸಾಗರ್‌ ವಿಸ್ತಾರ ನ್ಯೂಸ್‌ನ ಸಂದರ್ಶನದಲ್ಲಿ (Celebrity Designer Interview) ಮಾತನಾಡಿದ್ದಾರೆ. ಅವರ ಸಂದರ್ಶನದ ಸಾರಂಶ ಇಲ್ಲಿದೆ.

Celebrity designer Bharath Sagar with actor kiccha Sudeep

ವಿಸ್ತಾರ ನ್ಯೂಸ್‌: ಮೂಲತಃ ಮೆಕಾನಿಕಲ್‌ ಎಂಜಿನಿಯರ್‌ ಆಗಿರುವ ನೀವು ಡಿಸೈನಿಂಗ್‌ ಲೋಕಕ್ಕೆ ಎಂಟ್ರಿ ನೀಡಿದ್ದು ಹೇಗೆ? ಪ್ಯಾಷನ್‌ ಅನ್ನು ಪ್ರೊಫೆಷನ್‌ ಮಾಡಿಕೊಂಡದ್ದು ಯಾಕೆ?

ಭರತ್‌ ಸಾಗರ್‌ : ಮೊದಲಿನಿಂದಲೂ ನನಗೆ ಈ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ಬಾಷ್‌ ಸೇರಿದಂತೆ ಸಾಕಷ್ಟು ಪ್ರತಿಷ್ಥಿತ ಮಲ್ಟಿ ನ್ಯಾಷನಲ್‌ ಕಂಪನಿಗಳಲ್ಲಿ ಕೆಲಸ ಮಾಡುತ್ತಲೇ ಸಿಕ್ಕಿದ ಸಮಯದಲ್ಲೆ ಡಿಸೈನಿಂಗ್‌ ಕೂಡ ಮಾಡುತ್ತಿದ್ದೆ. ಆರಂಭದಲ್ಲಿ ಜೀವನ ನಿರ್ವಹಣೆಗೆಂದು ರಿಟೇಲ್‌ ಟೆಕ್ಸ್‌ಟೈಲ್‌ ಬಿಸ್ನೆಸ್‌ ಮಾಡುತ್ತಿದ್ದೆ. ಸ್ನೇಹಿತರ ಜೊತೆಗೂಡಿ ಸಮ್ಮರ್‌ ಕ್ಯಾಂಪ್‌ ನಡೆಸುತ್ತಿದ್ದೆ. ಈ ಮಧ್ಯೆ ಸ್ನೇಹಿತ ನಟ ಸಿದ್ದು ಮೂಲಿಮನೆಯ ಸಹಕಾರದಿಂದ ರಾಜರಥ ಸಿನಿಮಾಗಾಗಿ ಅಸಿಸ್ಟಂಟ್‌ ಡಿಸೈನರ್‌ ಆಗಿ ಕೆಲಸ ಮಾಡುವ ಅವಕಾಶ ದೊರೆಯಿತು. ನಂತರ ಒಂದರ ನಂತರ ಒಂದರಂತೆ ಅವಕಾಶಗಳು ದೊರೆತವು.

ವಿಸ್ತಾರ ನ್ಯೂಸ್‌ : ಕಿಚ್ಚ ಸುದೀಪ್‌ ಅವರ ಫ್ಯಾಷನ್‌ ನಾಲೆಡ್ಜ್‌ ಬಗ್ಗೆ ಹೇಳಿ ?

ಭರತ್‌ ಸಾಗರ್‌ : ಸುದೀಪ್‌ ಸರ್‌ಗೆ ಅಗಾಧ ಫ್ಯಾಷನ್‌ ಜ್ಞಾನವಿದೆ. ನಾವು ಅವರಿಗೆ ಡಿಸೈನ್‌ ಮಾಡುವಾಗ, ಖುದ್ದು ಅವರೇ ಹೊಸ ಹೊಸ ವಿನ್ಯಾಸದ ಬಗ್ಗೆ ನಮಗೆ ಹೇಳುತ್ತಿದ್ದರು. ಅವರ ಅಭಿಲಾಷೆಗೆ ತಕ್ಕಂತೆ ನಾವು ಡಿಸೈನ್‌ ಮಾಡುತ್ತಿದ್ದೆವು.

ವಿಸ್ತಾರ ನ್ಯೂಸ್‌ : ಫ್ಯಾಷನ್‌ ಲೋಕದಲ್ಲಿ ಪ್ರಶಂಸೆಗೊಳಗಾದ ಕಿಚ್ಚ ಸುದೀಪ್‌ ಧರಿಸಿದ ಜಂಪ್‌ ಸೂಟ್‌ ಕೋಟ್‌ ಡಿಸೈನರ್‌ವೇರ್‌ ಸಿದ್ಧಗೊಂಡದ್ದು ಹೇಗೆ?

ಭರತ್‌ ಸಾಗರ್‌: ಕೊನೆಯ ಎಪಿಸೋಡ್‌ನ ಕಾಸ್ಟ್ಯೂಮ್‌ ಸಿದ್ಧಪಡಿಸಲು ಸುಮಾರು ಒಂದೂವರೆ ವಾರ ಬೇಕಾಯಿತು. ಸ್ವೆಡ್‌ ಶಿಮ್ಮರ್‌ ಫ್ಯಾಬ್ರಿಕ್‌ ಬಳಸಲಾಗಿದೆ. ಎಂಬ್ರಾಯ್ಡರಿ ವರ್ಕ್, ಪೋತ್‌, ಗ್ಲಾಸ್‌ ಬೀಡ್ಸ್ ವರ್ಕ್ ಈ ಬ್ಲಾಕ್‌ ಶೇಡ್‌ನ ಜಂಪ್‌ ಸೂಟ್‌ ಡಿಸೈನರ್‌ವೇರ್‌ ಮೇಲೆ ಕಾಣಬಹುದು. ಕ್ರಿಸ್‌ ಕ್ರಾಸ್‌ ಲೆಪೆಲ್‌ ಹೈ ನೆಕ್‌ ಔಟ್‌ಫಿಟ್ಟನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಪ್ಯಾಂಟ್‌ ಮೇಲೆ ಸುಮಾರು 4000 ಮೆಟಲ್‌ ರಿವರ್ಟ್ ಹಾಕಿ ಅತ್ಯಾಕರ್ಷಕವಾಗಿಸಲಾಗಿದೆ.

Celebrity designer Bharath Sagar with actor dancer prabhudeva

ವಿಸ್ತಾರ ನ್ಯೂಸ್‌: ಯಾವ್ಯಾವ ಸ್ಟಾರ್‌ಗಳಿಗೆ ಡಿಸೈನ್‌ ಮಾಡುತ್ತಿದ್ದೀರಾ?

ಭರತ್‌ ಸಾಗರ್‌ : ಶಿವಣ್ಣ, ಪ್ರಭುದೇವಾ, ಉಪ್ಪಿ ಸರ್‌ ಸೇರಿದಂತೆ ಸಾಕಷ್ಟು ಸಿನಿಮಾಗಳ ಹೀರೋಗಳಿಗೆ ಕಾಸ್ಟ್ಯೂಮ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಟಿವಿ ಚಾನೆಲ್‌ಗಳಲ್ಲಿ ಭಾಗವಹಿಸುವ ಸೆಲೆಬ್ರೆಟಿಗಳಿಗೂ ಡಿಸೈನ್‌ ಮಾಡಿದ್ದೇನೆ.

ವಿಸ್ತಾರ ನ್ಯೂಸ್‌: ತಾರೆಯರಿಗೆ ಡಿಸೈನ್‌ ಮಾಡುವ ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನು?

ಭರತ್‌ ಸಾಗರ್‌: ನನ್ನದು ತೀರಾ ಸಿಂಪಲ್‌ ಫ್ಯಾಷನ್‌!

ವಿಸ್ತಾರ ನ್ಯೂಸ್‌: ನಿಮಗೆ ಕೆಲಸಕ್ಕೆ ಸ್ಫೂರ್ತಿ ನೀಡುವ ವ್ಯಕ್ತಿ ಯಾರು ?

ಭರತ್‌ ಸಾಗರ್‌: ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ರವರಿಗೆ ಸ್ಟೈಲಿಂಗ್‌ ಮಾಡುವ ಸೆಲೆಬ್ರೆಟಿ ಡಿಸೈನರ್‌ ಅಸಾ ಕಝಾಮಿ ಸರ್‌.

Celebrity designer Bharath Sagar with friends

ವಿಸ್ತಾರ ನ್ಯೂಸ್‌: ಫ್ಯಾಷನ್‌ ಜರ್ನಿಯಲ್ಲಿ ನೀವು ಕಲಿತ ಪಾಠ ಏನು?

ಭರತ್‌ ಸಾಗರ್: ದೊರಕುವ ಒಂದೊಂದು ಅವಕಾಶವನ್ನು ಬಳಸಿಕೊಳ್ಳಬೇಕು. ಕಷ್ಟಪಟ್ಟು ಕೆಲಸ ಮಾಡಬೇಕು. ಹೊಸತನವನ್ನು ಅಳವಡಿಸಿಕೊಳ್ಳಬೇಕು. ಸ್ನೇಹಿತರ ಸಹಾಯವನ್ನು ಮರೆಯಬಾರದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Hanging Jumka Fashion: ಯುವತಿಯರ ಕಿವಿ ಅಲಂಕರಿಸುತ್ತಿರುವ ಹ್ಯಾಂಗಿಂಗ್‌ ಜುಮ್ಕಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Union Budget 2024: ಏಳನೇ ಸಲ ಬಜೆಟ್ ಮಂಡನೆ; ನಿರ್ಮಲಾ ಸೀತಾರಾಮನ್‌ ಸೀರೆಯ ವಿಶಿಷ್ಟತೆ ಏನು?

Union Budget : ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಸಾಂಪ್ರದಾಯದಂತೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿ ಶುಭ ಹಾರೈಸಿದರು. ಪ್ರತೀ ಬಾರಿಯೂ ಬಜೆಟ್ ಮಂಡನೆ ದಿನ ವಿಶೇಷ ಸೀರೆಯಲ್ಲಿ ಕಾಣಿಸಿಕೊಳ್ಳುವ ನಿರ್ಮಲಾ ಅವರು ಈ ಬಾರಿಯೂ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Nirmala Sitharaman’s Budget 2024 look White and Pink saree this time
Koo

ಬೆಂಗಳೂರು: ದೇಶವೇ ಕುತೂಹಲದಿಂದ ಕಾಯುತ್ತಿರುವ ಬಜೆಟ್‌ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುತ್ತಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದ ನಂತರ ಮೊದಲ ಕೇಂದ್ರ ಬಜೆಟ್‌ ಮಂಡನೆ(Union Budget 2024) ಆಗುತ್ತಿದೆ. ಏಳನೇ ಬಾರಿ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Sitharaman) ಸಂಸತ್‌ ಪ್ರವೇಶಕ್ಕೂ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ಕೊಟ್ಟರು. ಅಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಅವರು ಸಾಂಪ್ರದಾಯದಂತೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮೊಸರು ಮತ್ತು ಸಕ್ಕರೆ ತಿನ್ನಿಸಿ ಶುಭ ಹಾರೈಸಿದರು. ಪ್ರತೀ ಬಾರಿಯೂ ಬಜೆಟ್ ಮಂಡನೆ ದಿನ ವಿಶೇಷ ಸೀರೆಯಲ್ಲಿ ಕಾಣಿಸಿಕೊಳ್ಳುವ ನಿರ್ಮಲಾ ಅವರು ಈ ಬಾರಿಯೂ ವಿಶಿಷ್ಟವಾಗಿ ಕಾಣಿಸಿಕೊಂಡಿದ್ದಾರೆ.

ತಮ್ಮ ಏಳನೇ ಬಜೆಟ್‌ಗಾಗಿ, ಹಣಕಾಸು ಸಚಿವರು ಬಿಳಿ ಮತ್ತು ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದಾರೆ. ಈ ಪ್ರಮುಖ ಸಂದರ್ಭಕ್ಕಾಗಿ ಆರು ಗಜಗಳ ಸೀರೆಯಲ್ಲಿ ಕಂಡರು. ವಿಶಿಷ್ಟವಾದ ರೇಷ್ಮೆ ಸೀರೆಯನ್ನು ಆರಿಸಿಕೊಂಡಿದ್ದಾರೆ. ಅವರ ಸೀರೆಯ ಬಣ್ಣ ಬಿಳಿ ಮತ್ತು ಗಾಢ ಗುಲಾಬಿಯಿಂದ ಕೂಡಿದೆ. ಗುಲಾಬಿ ಮತ್ತು ಬಿಳಿ ಬಣ್ಣದ ಸೀರೆಯು ಆಕರ್ಷಣೀಯವಾಗಿದೆ. ಇದು ಭಾರತೀಯ ಕರಕುಶಲತೆಯ ಶ್ರೀಮಂತ ಕಲಾತ್ಮಕತೆಯನ್ನು ಎತ್ತಿ ತೋರಿಸುತ್ತದೆ. ಗುಲಾಬಿ ಬ್ಲೌಸ್‌ ಕೂಡ ಚೆಂದವಾಗಿ ಕಂಡಿತ್ತು.

ಚಿನ್ನದ ಬಳೆಗಳೊಂದಿಗೆ ಚೈನ್ ಪೆಂಡೆಂಟ್ ಮತ್ತು ಸ್ಟಡ್ ಕಿವಿಯೋಲೆಗಳೊಂದಿಗೆ ಚೆಂದವಾಗಿ ಕಂಡಿದ್ದಾರೆ. ಅವರು 2024ರ ಮಧ್ಯಂತರ ಬಜೆಟ್‌ ದಿನ ನೀಲಿ ಕೈಮಗ್ಗದ ಸೀರೆಯನ್ನು ಧರಿಸಿದ್ದರು. ನೀಲಿ ಬಣ್ಣವು ಶಾಂತಿ ಮತ್ತು ಶಕ್ತಿಯ ಸಂಕೇತವಾಗಿದೆ.

ಇದನ್ನೂ ಓದಿ: Union Budget 2024: ಬಂಪರ್‌ ಘೋಷಣೆ; 5 ವರ್ಷದಲ್ಲಿ 4.1 ಕೋಟಿ ಉದ್ಯೋಗ, ಹೊಸ ನೌಕರರಿಗೆ ತಿಂಗಳ ಸಂಬಳ ಕೊಡುಗೆ

ನಿರ್ಮಲಾ ಸೀತಾರಾಮನ್ ಅವರು 2023ರ ಬಜೆಟ್‌ ಮಂಡನೆ ದಿನ ಕೆಂಪು ಬಣ್ಣದ ಸೀರೆಯನ್ನು ಆಯ್ಕೆ ಮಾಡಿದ್ದರು. ಸಾಂಪ್ರದಾಯಿಕ ಕೆಂಪು ಬಣ್ಣವನ್ನು ಪ್ರೀತಿ, ಶಕ್ತಿ, ಶೌರ್ಯ ಮತ್ತು ಬದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬಜೆಟ್ ಮಂಡನೆಗೂ ಕರ್ನಾಟಕಕ್ಕೂ ವಿಶೇಷವಾದ ನಂಟಿತ್ತು. ಏನೆಂದರೆ, ನಿರ್ಮಾಲಾ ಅವರು ಧರಿಸಿದ್ದ, ಕೈಯಿಂದ ನೇಯ್ದ ಇಳಕಲ್ ಸೀರೆ ಕರ್ನಾಟಕದ್ದು. ಇಷ್ಟೇ ಆಗಿದ್ದರೆ ಅದರಲ್ಲೇನೂ ವಿಶೇಷ ಇರಲಿಲ್ಲ. ಈ ಸೀರೆ ಮೇಲೆ ಚಿತ್ತಾರಗೊಂಡಿದ್ದ ಕಸೂತಿಯನ್ನು ಧಾರವಾಡದಲ್ಲಿ ಮಾಡಲಾಗಿತ್ತು.

ನಿರ್ಮಲಾ ಅವರು ಧರಿಸಿದ್ದ ಸೀರೆಯ ಮೇಲೆ ರಥ, ನವಿಲು ಮತ್ತು ಕಮಲಗಳು ಸಾಂಪ್ರದಾಯಿಕ ಕಸೂತಿಯ ಮೂಲಕ ಚಿತ್ತಾರ ಬಿಡಿಸಲಾಗಿತ್ತು. ಧಾರವಾಡದ ಆರತಿ ಕ್ರಾಫ್ಟ್‌ನ ಆರತಿ ಹಿರೇಮಠ್ ಅವರು ಈ ಕಸೂತಿಯ ಹಿಂದಿನ ಕಲಾವಿದೆ. ಈ ಸೀರೆಯನ್ನು ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಅವರು ನಿರ್ಮಲಾ ಸೀತಾರಾಮನ್ ಅವರಿಗೆ ಗಿಫ್ಟ್ ನೀಡಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

Continue Reading

ಫ್ಯಾಷನ್

Monsoon fashion: ಶರ್ಟ್ ಸ್ಟೈಲ್‌ ಜಾಕೆಟ್ಸ್; ಇವು ಯುವಕರ ಮಳೆಗಾಲದ ಫ್ಯಾಷನ್‌ ಟ್ರೆಂಡ್‌

Monsoon fashion: ಮಳೆಗಾಲವೆಂದಾಕ್ಷಣ ನಾನಾ ಬಗೆಯ ಜಾಕೆಟ್‌ಗಳು ಮಾರುಕಟ್ಟೆಗೆ ಕಾಲಿಡುತ್ತವೆ. ಅವುಗಳಲ್ಲಿ, ಇದೀಗ ಮೆನ್ಸ್ ಲೇಯರ್‌ ಸ್ಟೈಲಿಂಗ್‌ನಲ್ಲಿ ಶರ್ಟ್ ಸ್ಟೈಲ್‌ ಜಾಕೆಟ್‌ಗಳು ಟ್ರೆಂಡಿಯಾಗಿವೆ. ಅವು ಯಾವುವು? ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು ಎಂಬುದನ್ನು ಮೆನ್ಸ್ ಸ್ಟೈಲಿಸ್ಟ್ ಜಿಶಾನ್‌ ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Monsoon fashion
ಚಿತ್ರಗಳು: ರೋಹಿತ್‌ ಸರಾಫ್‌, ನಟ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಶರ್ಟ್ (Monsoon fashion) ಧರಿಸಿರುವಂತೆ ಕಾಣುವ ನಾನಾ ಬಗೆಯ ಬೆಚ್ಚಗಿಡುವ ಶರ್ಟ್ ಸ್ಟೈಲ್‌ ಜಾಕೆಟ್‌ಗಳು ಮೆನ್ಸ್ ಮಾನ್ಸೂನ್‌ ಫ್ಯಾಷನ್‌ಗೆ ಕಾಲಿಟ್ಟಿವೆ. ಹೌದು. ಮಳೆಗಾಲವೆಂದಾಕ್ಷಣ ನಾನಾ ಬಗೆಯ ಜಾಕೆಟ್‌ಗಳು ವಾರ್ಡ್ರೋಬ್‌ನಿಂದ ಹೊರಬರುವುದು ಮಾತ್ರವಲ್ಲ, ಮಾರುಕಟ್ಟೆಯಲ್ಲೂ ಬಿಡುಗಡೆಗೊಳ್ಳುತ್ತವೆ. ಅವುಗಳಲ್ಲಿ, ಇದೀಗ ಮೆನ್ಸ್ ಲೇಯರ್‌ ಸ್ಟೈಲಿಂಗ್‌ನಲ್ಲಿ ಶರ್ಟ್ ಸ್ಟೈಲ್‌ ಜಾಕೆಟ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಕೆಲವಂತೂ ಟೂ ಇನ್‌ ವನ್‌ ಸ್ಟೈಲಿಂಗ್‌ನಲ್ಲಿ ಧರಿಸುವಂತಹ ರಿವರ್ಸಿಬಲ್‌ ಡಿಸೈನ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಕುರಿತಂತೆ ಮೆನ್ಸ್ ಸ್ಟೈಲಿಸ್ಟ್ ಜಿಶಾನ್‌ ಇಲ್ಲಿ ವಿವರಿಸಿದ್ದಾರೆ.

Monsoon fashion

ಟ್ರೆಂಡ್‌ನಲ್ಲಿರುವ ಶರ್ಟ್ ಸ್ಟೈಲ್‌ ಜಾಕೆಟ್ಸ್

ಈ ಮೊದಲು ಚಳಿಗಾಲದಲ್ಲಿ ಬಿಡುಗಡೆಯಾಗುತ್ತಿದ್ದ ಟ್ವೀಡ್‌ ಜಾಕೆಟ್ಸ್, ವೂಲ್‌ ಜಾಕೆಟ್ಸ್, ಚೆಕ್ರ್ಡ್ ಜಾಕೆಟ್‌, ನಿಟ್‌ ಜಾಕೆಟ್‌ಗಳು ಇದೀಗ ಹೊಸ ರೂಪದೊಂದಿಗೆ ಮಳೆಗಾಲದಲ್ಲೂ ಎಂಟ್ರಿ ನೀಡಿವೆ. ತಕ್ಷಣಕ್ಕೆ ನೋಡಲು ಇವು ಶರ್ಟ್ ಡಿಸೈನ್‌ನಂತೆ ಕಾಣಿಸುತ್ತವೆ ನಿಜ, ಆದರೆ ಇವು ಜಾಕೆಟ್‌ಗಳು. ಧರಿಸಿದಾಗ ಶರ್ಟ್‌ನಂತೆ ಧರಿಸಬಹುದು. ಬೇಡವಾದಲ್ಲಿ ಬಟನ್‌ ಬಿಚ್ಚಿ ಜಾಕೆಟ್‌ನಂತೆ ಹಾಕಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಮಳೆಗಾಲದಲ್ಲಿ ಇವು ಮಳೆಯಿಂದ ರಕ್ಷಣೆ ನೀಡದಿದ್ದರೂ, ಚಳಿ-ಗಾಳಿಯಿಂದ ಕಾಪಾಡುತ್ತವೆ. ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಆದರೆ, ಇವುಗಳ ಫ್ಯಾಬ್ರಿಕ್‌ ಕೊಂಚ ಭಾರವಾಗಿರುವುದರಿಂದ ಮಳೆಗೆ ಧರಿಸುವುದು ಸೂಕ್ತವಲ್ಲ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಅವರ ಪ್ರಕಾರ, ಶರ್ಟ್ ಸ್ಟೈಲ್‌ ಜಾಕೆಟ್‌ಗಳು ಕೇವಲ ಔಟ್‌ಲುಕ್‌ಗೆ ಮಾತ್ರ ಸಾಥ್‌ ನೀಡುತ್ತವೆ ಹೊರತು, ಮಳೆಗಲ್ಲ! ಎನ್ನುತ್ತಾರೆ.

ಯುವಕರ ಸ್ಟೈಲಿಂಗ್‌ನಲ್ಲಿ ಶರ್ಟ್ ಸ್ಟೈಲ್‌ ಜಾಕೆಟ್ಸ್

ಕಾಲೇಜು ಯುವಕರ ಸ್ಟೈಲಿಂಗ್‌ನಲ್ಲಿ ಇವು ಸೇರಿಕೊಂಡಿವೆ. ಒಂದು ಜಾಕೆಟ್‌ ಮೂರ್ನಾಲ್ಕು ವಿಧದಲ್ಲಿ ಧರಿಸಬಹುದು. ಇದನ್ನು ಈ ಜನರೇಷನ್‌ನ ಹುಡುಗರು ಪಾಲಿಸುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಶಾನ್‌.

ಇದನ್ನೂ ಓದಿ: Contact Lens Awareness: ಶೋಕಿಗಾಗಿ ಕಾಂಟ್ಯಾಕ್ಟ್‌ ಲೆನ್ಸ್ ಧರಿಸುವವರೇ ಎಚ್ಚರ! ಈ 5 ಸಂಗತಿ ಗಮನದಲ್ಲಿರಲಿ

ಶರ್ಟ್ ಶೈಲಿಯ ಜಾಕೆಟ್‌ ಸ್ಟೈಲಿಂಗ್‌ ಟಿಪ್ಸ್

  • ಜೀನ್ಸ್ ಪ್ಯಾಂಟ್‌ ಮೇಲೆ ಜಾಕೆಟ್‌ನಂತೆ ಧರಿಸಬಹುದು.
  • ಫಾರ್ಮಲ್‌ ಪ್ಯಾಂಟ್‌ ಮೇಲೆ ಶರ್ಟ್ ನಂತೆ ಧರಿಸಬಹುದು. ಆದರೆ ಫಿಟ್ಟಿಂಗ್‌ ಇರಬೇಕು.
  • ಓವರ್‌ಸೈಝ್‌ ಜಾಕೆಟ್‌ಗಳು ಟ್ರೆಂಡಿಯಾಗಿರುವುದರಿಂದ ಟೀನೇಜ್‌ ಹುಡುಗರು ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌ ಮಾಡುತ್ತಿದ್ದಾರೆ.
  • ಆಕ್ಸೆಸರೀಸ್‌ ಧರಿಸುವುದು ಬೇಕಾಗಿಲ್ಲ!
  • ಜಾಕೆಟ್‌ಗೆ ಸಿಂಪಲ್‌ ಸ್ಣಿಕರ್‌ ಮ್ಯಾಚ್‌ ಮಾಡಿದರೇ ಸಾಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Contact Lens Awareness: ಶೋಕಿಗಾಗಿ ಕಾಂಟ್ಯಾಕ್ಟ್‌ ಲೆನ್ಸ್ ಧರಿಸುವವರೇ ಎಚ್ಚರ! ಈ 5 ಸಂಗತಿ ಗಮನದಲ್ಲಿರಲಿ

Contact lens awareness: ಕೇವಲ ಶೋಕಿಗಾಗಿ ಅಥವಾ ಕಣ್ಣಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಕಾಂಟ್ಯಾಕ್ಟ್‌ ಲೆನ್ಸ್ ಬಳಸುವ ಬ್ಯೂಟಿ ಪ್ರಿಯರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಇಲ್ಲವಾದಲ್ಲಿ, ಇತ್ತೀಚೆಗೆ ನಡೆದ ನಟಿ ಜಾಸ್ಮಿನ್‌ ಎದುರಿಸಿದಂತಹ ಪರಿಸ್ಥಿತಿ ನಿಮಗೂ ಎದುರಾಗಬಹುದು ಎಂದು ಎಚ್ಚರಿಸುತ್ತಾರೆ ಐ ಎಕ್ಸ್‌ಫರ್ಟ್ಸ್‌. ಈ ಕುರಿತಂತೆ ಒಂದಿಷ್ಟು ಸಲಹೆಗಳನ್ನು ಅವರು ನೀಡಿದ್ದಾರೆ.

VISTARANEWS.COM


on

Contact Lens Awareness
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಐಶ್ವರ್ಯ ರೈ ಕಂಗಳಂತೆ ನನ್ನ ಕಣ್ಣುಗಳು ಹೊಳೆಯಬೇಕು! ಹಾಲಿವುಡ್‌ ತಾರೆಯರ ಅತ್ಯಾಕರ್ಷಕವಾದ ಬೆಕ್ಕಿನ ಕಂಗಳು ನನ್ನದಾಗಬೇಕು! ಎಂದೆಲ್ಲಾ ಬಯಸುವ ಯುವತಿಯರು ಇತ್ತೀಚೆಗೆ ಕಂಗಳ ಸೌಂದರ್ಯಕ್ಕಾಗಿ ಕಾಂಟ್ಯಾಕ್ಟ್‌ ಲೆನ್ಸ್‌ ಧರಿಸುವುದು ಮೊದಲಿಗಿಂತ ಹೆಚ್ಚಾಗಿದೆ. ಬ್ಯೂಟಿ ಅಕಾಡೆಮಿಯ ಸಮೀಕ್ಷೆಯೊಂದರ ಪ್ರಕಾರ, ಮೊದಲಿನಂತೆ ಕೇವಲ ಸಿನಿಮಾ, ಮಾಡೆಲಿಂಗ್‌ ಕ್ಷೇತ್ರಗಳಲ್ಲಿ ಮಾತ್ರವಲ್ಲ, ಸಾಮಾನ್ಯ ಹುಡುಗಿಯರು ಅತಿ ಸುಲಭವಾಗಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ, ಲಭ್ಯವಿರುವ ಕಾಂಟ್ಯಾಕ್ಟ್‌ ಲೆನ್ಸ್ ಕೊಂಡು ಬಳಸುವುದು ಹೆಚ್ಚಾಗಿದೆ ಎನ್ನಲಾಗಿದೆ. ಇನ್ನು, ಮದುವೆ ಹಾಗೂ ಫೋಟೋಶೂಟ್‌ಗಳಲ್ಲಿ, ಯುವತಿಯರು ತಮ್ಮ ವಿಶೇಷ ಲುಕ್‌ಗಾಗಿ ವೆರೈಟಿ ಕಾಂಟಕ್ಟ್ ಲೆನ್ಸ್ ಧರಿಸುತ್ತಾರಂತೆ.
ಸಿನಿಮಾ ನಟಿ ಜಾಸ್ಮಿನ್‌ ಬಾಸಿನ್‌ ಧರಿಸಿದ ಕಾಂಟ್ಯಾಕ್ಟ್‌ ಲೆನ್ಸ್‌ನಿಂದ ಆಗಿರುವ ಅನಾಹುತ ಇದೀಗ ಎಲ್ಲರಿಗೂ ಗೊತ್ತೇ ಇದೆ. ಹಾಗೆಂದು ಲೆನ್ಸ್ ಧರಿಸಲೇ ಬಾರದು ಎಂದಲ್ಲ! ಸೂಕ್ತ ಕಾರಣವಿಲ್ಲದೇ, ಪದೇ ಪದೇ ಧರಿಸುವುದು ಕಣ್ಣಿನ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದಲ್ಲ! ಎನ್ನುತ್ತಾರೆ ಕಣ್ಣಿನ ಚಿಕಿತ್ಸಕರು. ಲೆನ್ಸ್ ಧರಿಸಲೇ ಬೇಕಿದ್ದವರು ಈ ಬಗ್ಗೆ ಒಂದಿಷ್ಟು ಮುಂಜಾಗ್ರತಾ ಕ್ರಮ ಹಾಗೂ ಜಾಗೃತಿ ಹೊಂದಿರವುದು ಅಗತ್ಯ ಎನ್ನುತ್ತಾರೆ. ಈ ಕುರಿತಂತೆ ಇಲ್ಲಿದೆ (Contact Lens Awareness) ಸಿಂಪಲ್‌ ಟಿಪ್ಸ್.

Contact Lens Awareness

ಕಣ್ಣಿನ ವೈದ್ಯರ ಸಲಹೆಯಿಲ್ಲದೇ ಬಳಸಬೇಡಿ

ಕಣ್ಣಿನ ವೈದ್ಯರ ಸಲಹೆ ಮೇರೆಗೆ ಬಳಸಿ. ಕೆಲವರು ಕನ್ನಡಕದ ಬದಲು ಬಳಸುತ್ತಾರೆ. ಇದು ಅತ್ಯಗತ್ಯ. ಕಾರಣವಿಲ್ಲದೇ ಬಳಸುವವರು ಹಾಕುವ ವಿಧಾನದಿಂದ ಹಿಡಿದು ಲೆನ್ಸ್ ಸ್ವಚ್ಚತೆ ಕಾಪಾಡುವ ಬಗ್ಗೆಯೂ ತಿಳಿದುಕೊಂಡಿರಬೇಕು.

Contact Lens Awareness

ಶೋಕಿಗಾಗಿ ಲೆನ್ಸ್ ಬಳಕೆ ಬೇಡ!

ಕೇವಲ ಶೋಕಿಗಾಗಿ ಕಣ್ಣಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಪದೇ ಪದೇ ಕಾಂಟಕ್ಟ್ ಲೆನ್ಸ್ ಬಳಸುತ್ತಿದ್ದಲ್ಲಿ ಆದಷ್ಟೂ ಕಡಿಮೆಗೊಳಿಸಿ. ಇಲ್ಲವೇ ತ್ಯಜಿಸಿ. ಅಭ್ಯಾಸ ಬರಬರುತ್ತಾ ಅಡಿಕ್ಷನ್‌ ಆದರೂ ಆಗಬಹುದು. ಒಬ್ಬರು ಧರಿಸಿದ್ದನ್ನೂ ಮತ್ತೊಬ್ಬರು ಬಳಸಲೇಕೂಡದು ಎಂಬುದು ನೆನಪಿರಲಿ!

ಪ್ರೊಫೆಷನ್‌ಗೆ ಅಗತ್ಯವಿದ್ದಲ್ಲಿ ಬಳಸಿ

ಸಿನಿಮಾ, ಮಾಡೆಲಿಂಗ್‌ನಂತಹ ಕ್ಷೇತ್ರದಲ್ಲಿ ಕಾಂಟಕ್ಟ್ ಲೆನ್ಸ್ ಧರಿಸುವುದು ಸಾಮಾನ್ಯ. ಹೆವಿ ಐ ಮೇಕಪ್‌ ಹಾಕಿ, ಧರಿಸಿದಾಗ ಕಿರಿಕಿರಿ ಉಂಟಾದಲ್ಲಿ ಲೆನ್ಸ್ ಕಳಚಿಡಿ. ಯಾವುದೇ ಕಾರಣಕ್ಕೂ ಕಣ್ಣುಗಳನ್ನು ಉಜ್ಜದಿರಿ.

Contact Lens Awareness

ಲೆನ್ಸ್ ಧರಿಸಿ ಮಲಗಬೇಡಿ

ಯಾವುದೇ ಕಾರಣಕ್ಕೂ ಲೆನ್ಸ್ ಧರಿಸಿ ಮರೆತು ಮಲಗಬೇಡಿ. ಸಾವಧಾನವಾಗಿ ತೆಗೆದು ಹಾಕುವ ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದಲ್ಲಿ, ಇದು ಕಣ್ಣಿನ ಕಾರ್ನಿಯಾ ಡ್ಯಾಮೇಜ್‌ ಮಾಡಬಹುದು.

Contact Lens Awareness

ಆನ್‌ಲೈನ್‌ ಲೆನ್ಸ್ ಶಾಪಿಂಗ್‌ ಬಗ್ಗೆ ಎಚ್ಚರ

ಇತ್ತೀಚೆಗೆ ಸಾಕಷ್ಟು ಮಂದಿ ಆನ್‌ಲೈನ್‌ನಲ್ಲೆ ಖರೀದಿಸುವುದು ಹೆಚ್ಚಾಗಿದೆ. ಗುಣಮಟ್ಟದ ಬ್ರಾಂಡೆಡ್‌ ಲೆನ್ಸ್ ಮಾತ್ರ ಖರೀದಿ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Pearl Saree fashion: ಪರ್ಲ್‌ ಸೀರೆಯಲ್ಲಿ ದೇವತೆಯಂತೆ ಕಂಡ ನಟಿ ಶನಾಯ!

Star Pearl Saree fashion: ಬಾಲಿವುಡ್‌ ನಟಿ ಶನಾಯಾ ಕಪೂರ್‌ ಉಟ್ಟಿದ್ದ ಪರ್ಲ್‌ ಸೀರೆ ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಸೀರೆ ಪ್ರಿಯರ ಕಣ್ಣರಳಿಸಿದೆ. ಡಿಸೈನರ್‌ ಮನೀಶ್‌ ಮಲ್ಹೋತ್ರಾ ಕ್ರಿಯೇಷನ್‌ನ ಈ ಸೀರೆಯ ವಿನ್ಯಾಸದವು ಸದ್ಯದಲ್ಲೆ ಮಾರುಕಟ್ಟೆಗೆ ಕಾಲಿಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

VISTARANEWS.COM


on

Star Pearl Saree fashion
ಚಿತ್ರಗಳು: ಶನಾಯ ಕಪೂರ್‌, ಬಾಲಿವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಂದು ಲಕ್ಷ ಪರ್ಲ್‌ ಒಳಗೊಂಡ (Star Pearl Saree fashion) ನಾಜುಕಿನ ಮುತ್ತಿನ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ ನಟಿ ಶನಾಯ ಕಪೂರ್‌! ಹೌದು. ಧರೆಗಿಳಿದ ಅಪ್ಸರೆಯಂತೆ ಕಾಣಿಸಿಕೊಂಡಿರುವ ಶನಾಯ, ವಿಶೇಷವಾಗಿ ಸಿದ್ಧಪಡಿಸಲಾದ ಮುತ್ತಿನ ಡಿಸೈನರ್‌ ಸೀರೆಯಲ್ಲಿ, ಸೀರೆ ಕಂಡರೇ ದೂರ ಓಡುತ್ತಿದ್ದ ಹುಡುಗಿಯರನ್ನೂ ಆಕರ್ಷಿಸಿದ್ದಾರೆ.

Star Pearl Saree fashion

ನಿರೀಕ್ಷೆ ಹುಟ್ಟುಹಾಕಿದ ಪರ್ಲ್‌ ಸೀರೆ

ಹೌದು, ಶನಾಯರ ಡಿಸೈನರ್‌ ಮುತ್ತಿನ ಸೀರೆ ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದ ಸೀರೆ ಲವರ್‌ಗಳನ್ನು ಸೆಳೆದಿದೆ. ಸೆಲೆಬ್ರೆಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಕ್ರಿಯೇಷನ್‌ನ ಕಣ್ಣರಳಿಸುವಂತಹ ವಿನ್ಯಾಸದ ಈ ಸೀರೆ ಸದ್ಯ ಅತ್ಯಾಕರ್ಷಕ ಪಾರ್ಟಿವೇರ್‌ ಸೀರೆಗಳ ಕೆಟಗರಿಗೆ ಸೇರಿದೆ. ಸದ್ಯದಲ್ಲೆ, ಮಾರುಕಟ್ಟೆಗೆ ರಿಪ್ಲಿಕಾ ರೂಪದಲ್ಲಿ ಕಾಲಿಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

Star Pearl Saree fashion

ಮುತ್ತಿನ ಸೀರೆಯ ವಿಶೇಷತೆ ಏನು?

ಸ್ಟೈಲಿಸ್ಟ್ ತಾನ್ಯಾ, ನಿಹಾರಿಕಾ, ಇಸ್ಟರ್‌ ಹೇಳುವಂತೆ ಅತಿ ಸೂಕ್ಷ್ಮ ಶ್ವೇತ ವರ್ಣದ ನಾಜೂಕಾಗಿರುವ ನೆಟ್ಟೆಡ್‌ನಂತಹ ಫ್ಯಾಬ್ರಿಕ್‌ ಮೇಲೆ ಮುತ್ತುಗಳನ್ನು ಕುಸುರಿ ಕಲಾತ್ಮಕವಾಗಿ ಹೆಣೆಯಲಾಗಿದೆ. ಇದು ಇಡೀ ಸೀರೆಯನ್ನು ಅಲಂಕರಿಸಿದೆ. ಬಿಳಿ ಮುತ್ತುಗಳು ಸೀರೆಯ ಫ್ಯಾಬ್ರಿಕ್‌ಗಿಂತ ಹೆಚ್ಚಾಗಿ ಹೈಲೈಟಾಗುವಂತೆ ವಿನ್ಯಾಸ ಮಾಡಲಾಗಿದೆ.

Star Pearl Saree fashion

1,00,000 ಲಕ್ಷ ಪರ್ಲ್ಸ್ ಹೊಂದಿದ ಸೀರೆಯಿದು

ಈ ಸೀರೆಯಲ್ಲಿ ಸರಿ ಸುಮಾರು 1 ಲಕ್ಷಕ್ಕೂ ಹೆಚ್ಚು ಪರ್ಲ್‌ಗಳನ್ನು ಬಳಸಲಾಗಿದೆ. ಇವು ಫ್ರೆಶ್‌ ವಾಟರ್‌ ಪರ್ಲ್ ಅಥವಾ ಹೈದರಾಬಾದ್‌ ಪರ್ಲಾ ಎಂಬುದನ್ನು ಮಾತ್ರ ಡಿಸೈನರ್‌ಗಳು ಎಲ್ಲಿಯೂ ಹೇಳಿಲ್ಲ! ಅಲ್ಲದೇ, ಈ ಸೀರೆಯ ಕಾಪಿಯೂ ಕೂಡ ಮಾರುಕಟ್ಟೆಯಲ್ಲಿ ಲಗ್ಗೆ ಇಡಬಹುದು ಎಂಬ ಭವಿಷ್ಯದ ಲೆಕ್ಕಾಚಾರದಿಂದ ಈ ವಿನ್ಯಾಸ ಹೇಗೆ ಮಾಡಲಾಯಿತೆಂಬುದನ್ನು ಕಂಪ್ಲೀಟ್‌ ಆಗಿ ಇನ್ನೂ ವಿವರಿಸಿಲ್ಲ ಎನ್ನುತ್ತಾರೆ ಸ್ಥಳೀಯ ಫ್ಯಾಷನಿಸ್ಟ್‌ಗಳು.

ಮನಮೋಹಕ ಸೀರೆ

ಶನಾಯ ಇದುವರೆಗೂ ಸಾಕಷ್ಟು ವಿಶೇಷ ಔಟ್‌ಫಿಟ್‌ಗಳನ್ನೇ ಧರಿಸಿದ್ದು, ಆದರೆ, ಈ ಪರ್ಲ್ ಸೀರೆ ಮಾತ್ರ ಅತ್ಯಾಕರ್ಷಕವಾಗಿದೆ. ಇದು ಜ್ಯುವೆಲ್ಡ್ ಎಥ್ನಿಕ್‌ವೇರ್‌ಗಳಿಗಿಂತ ವಿಭಿನ್ನವಾಗಿದೆ ಎನ್ನುತ್ತಾರ ಸ್ಟೈಲಿಸ್ಟ್‌ಗಳಾದ ಜಿಯಾ & ಜೆನ್ನಿ. ಪರ್ಲ್‌ ಸೀರೆ ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್‌ ರಾಯ್‌. ಒಟ್ಟಲ್ಲಿ, ಫ್ಯಾಷನ್‌ ವಿಶ್ಲೇಷಕರ ಪ್ರಕಾರ ಸದ್ಯದಲ್ಲೆ ಪರ್ಲ್‌ ಸೀರೆಗಳು ಮಾರುಕಟ್ಟೆಗೆ ದಾಳಿ ಇಡುವುದು ಗ್ಯಾರಂಟಿಯಂತೆ!

ಇದನ್ನೂ ಓದಿ: Monsoon Fashion: ಮಾನ್ಸೂನ್‌ಗೆ ತಕ್ಕಂತೆ ಬದಲಾದ ಸೂಪರ್‌ ಮಾಡೆಲ್‌ ಸಂತೋಷ್‌ ರೆಡ್ಡಿ ಫ್ಯಾಷನ್‌!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
ರಾಜಕೀಯ3 mins ago

BJP Padayatra: ಮುಡಾ ಹಗರಣ ಖಂಡಿಸಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ ನಿರ್ಧಾರ

Parashuram D
ಪ್ರಮುಖ ಸುದ್ದಿ13 mins ago

Parashuram D : ವಿಸ್ತಾರ ಮೀಡಿಯಾದ ನೂತನ ಜಿ.ಎಮ್ ಆಗಿ ಪರಶುರಾಮ ಡಿ

Train Tragedy
Latest18 mins ago

Train Tragedy: ರೈಲ್ವೆ ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ತಂದೆ!

Union Budget 2024
ದೇಶ18 mins ago

Union Budget 2024: ಬಜೆಟ್‌ನಲ್ಲಿ ಬಿಹಾರ, ಆಂಧ್ರಪ್ರದೇಶಕ್ಕೆ ಬಂಪರ್‌ ಕೊಡುಗೆ: ಇಲ್ಲಿದೆ ನಗೆಯುಕ್ಕಿಸುವ ಮೀಮ್ಸ್‌

Protest by Congress alleged that MLA Sunil Kumar has built a fake Parashurama statue
ಉಡುಪಿ19 mins ago

Lakshmi Hebbalkar: ನಕಲಿ ಪರಶುರಾಮ ಪ್ರತಿಮೆ ಸ್ಥಾಪನೆ; ಎಸ್ಐಟಿ ತನಿಖೆಗೆ ಹೆಬ್ಬಾಳಕರ್ ಒತ್ತಾಯ

Harshika Poonacha Bhuvann Ponnannaa shares opinion about marriage
ಸ್ಯಾಂಡಲ್ ವುಡ್27 mins ago

Harshika Poonacha: ಮದುವೆ ಆದ್ರೂ ಮಕ್ಕಳು ಬೇಡ ಅನ್ನೋರಿಗೆ ಮುಟ್ಟಿ ನೋಡ್ಕೊಳ್ಳೋ ಹಾಗೆ ಉತ್ತರ ಕೊಟ್ಟ ಹರ್ಷಿಕಾ ಪೂಣಚ್ಚ ದಂಪತಿ!

Team India
ಕ್ರೀಡೆ29 mins ago

Team India: ನೂತನ ಕೋಚ್​ ಗಂಭೀರ್​ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದ ಟೀಮ್​ ಇಂಡಿಯಾ ಆಟಗಾರರು

Viral Video
Latest36 mins ago

Viral Video: ಮೃಗಾಲಯದ ಸಿಬ್ಬಂದಿ ಮೇಲೆ ಸಿಂಹದ ದಾಳಿ; ತಡೆದು ನಿಲ್ಲಿಸಿದ ಸಿಂಹಿಣಿ!

CM Siddaramaiah
ಕರ್ನಾಟಕ37 mins ago

CM Siddaramaiah: ರೈತರು, ರಾಜ್ಯಕ್ಕೆ ಕೇಂದ್ರ ಪಂಗನಾಮ; ತಿಂಡಿ ತಿನ್ನುತ್ತಲೇ ಬಜೆಟ್‌ ಬಗ್ಗೆ ಸಿದ್ದರಾಮಯ್ಯ ಆಕ್ರೋಶ

assault case
ವಿಜಯನಗರ52 mins ago

Assault Case : ಹೋಮ್‌ ವರ್ಕ್‌ ಮಾಡದ್ದಕ್ಕೆ ಬಾಲಕಿಗೆ ಬಾಸುಂಡೆ ಬರುವಂತೆ ಬಾರಿಸಿದ ಮುಖ್ಯ ಶಿಕ್ಷಕಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ4 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ4 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ5 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ5 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ1 week ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 week ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 week ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌