-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲೇಸರ್ ಕಟ್ ಡ್ರೆಸ್ ಫ್ಯಾಷನ್ (Dress Fashion) ಇದೀಗ ಗ್ಲಾಮರಸ್ ಟಚ್ ಪಡೆದಿದೆ. ಕೇವಲ ಡ್ರೆಸ್‌ನ ಒಂದು ಭಾಗವಾಗಿದ್ದ ಈ ಲೇಸರ್ ಕಟ್ ವಿನ್ಯಾಸ ಇದೀಗ ಇಡೀ ಡ್ರೆಸ್‌ಗಳನ್ನು ಆವರಿಸಿಕೊಂಡಿದ್ದು, ತನ್ನದೇ ಆದ ಹೊಸ ರೂಪ ಪಡೆದುಕೊಂಡಿವೆ.
ಏನಿದು ಲೇಸರ್ ಕಟ್‌ವರ್ಕ್ ಡ್ರೆಸ್
ಸಿಂಪಲ್ ಆಗಿ ಹೇಳುವುದಾದಲ್ಲಿ, ಒಂದು ಡ್ರೆಸ್‌ನ ನಿರ್ಧಿಷ್ಟ ಭಾಗವನ್ನು ಲೇಸರ್ ಮೂಖಾಂತರ ಸಾಕಷ್ಟು ಕಡೆ ಪಕ್ಕ ಪಕ್ಕದಲ್ಲೆ ತೂತು ಮಾಡುವ ಮೂಲಕ ವಿನ್ಯಾಸಗೊಳಿಸುವ ಒಂದು ಡಿಸೈನಿಂಗ್ ಕ್ರಮವಿದು. ಇದನ್ನು ಲೇಸರ್ ಕಟ್‌ವರ್ಕ್ ವಿನ್ಯಾಸವೆಂದು ಹೇಳಲಾಗುತ್ತದೆ. ನೋಡಲು ಕೀ ಹೋಲ್ ಡ್ರೆಸ್‌ನಂತೆ ಯೂ ಇವು ಕಾಣುತ್ತವೆ. ಆದರೆ, ಇವು ಆವಲ್ಲ!
ಲೇಸರ್ ಕಟ್ ವರ್ಕ್‌ನ ನಾನಾ ವಿನ್ಯಾಸ
ಈ ಸೀಸನ್‌ನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ನಾನಾ ಬಗೆಯ ಲೇಸರ್ ಕಟ್ ಡ್ರೆಸ್‌ಗಳು ಕಾಲಿಟ್ಟಿದ್ದವು. ಸಲ್ವಾರ್ ಸೂಟ್‌ನಿಂದಿಡಿದು ಸೀರೆಯ ಹಾಗೂ ಲೆಹೆಂಗಾ ಬ್ಲೌಸ್‌ಗಳು ಕೂಡ ಲೇಸರ್ ಕಟ್ ಡಿಸೈನ್ ಹೊಂದಿದ್ದವು. ನಂತರ ಉಡುಪಿನ ಸ್ಲೀವ್, ಆಂಕೆಲ್ ಪ್ಯಾಂಟ್‌ನ ತುದಿ, ನೆಕ್‌ಲೈನ್, ವೇಸ್ಟ್‌ಕಲೈನ್ ಹೀಗೆ ನಾನಾ ಕಡೆ ಆಯಾ ಡ್ರೆಸ್ ಡಿಸೈನರ್‌ನ ಅಭಿಲಾಷೆಗೆ ತಕ್ಕಂತೆ ವ್ಯಾಪ್ತಿ ವಿಸ್ತರಿಸಿಕೊಂಡವು. ಒಂದಿಷ್ಟು ದಿನ ಔಟ್‌ಫಿಟ್‌ಗಳ ಒಂದು ಭಾಗವಾಗಿದ್ದ ಈ ಡಿಸೈನ್ಸ್ ಇದೀಗ ಇಡೀ ಡ್ರೆಸ್‌ಗಳನ್ನು ಆವರಿಸಿಕೊಂಡವು. ಪರಿಣಾಮ, ಇವು ಲೇಸರ್ ಕಟ್ ಡ್ರೆಸ್‌ಗಳೆಂದು ನಾಮಕರಣಗೊಂಡವು ಎನ್ನುತ್ತಾರೆ ಡಿಸೈನರ್ ಲಿಯಾ. ಅವುಗಳಲ್ಲಿ ಕೆಲವಂತೂ ಗ್ಲಾಮರಸ್ ಟಚ್ ಪಡೆದು ಬೀಚ್‌ವೇರ್‌ನೊಳಗೂ ಸೇರಿಕೊಂಡಿವೆ. ಇನ್ನು, ಕೆಲವು ಸಾಮಾನ್ಯ ಡ್ರೆಸ್‌ನೊಳಗೂ ನುಸುಳಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಧವನ್. ಅಷ್ಟು ಮಾತ್ರವಲ್ಲದೇ, ಬಾಲಿವುಡ್ ಸೆಲೆಬ್ರೆಟಿಗಳನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ.
ಗಾಳಿಯಾಡುವ ವಿನ್ಯಾಸ
ಅರರೆ, ಇದೇನಿದು? ಎಂದು ಯೋಚಿಸುತ್ತಿದ್ದೀರಾ! ಈ ಲೇಸರ್ ಕಟ್ ವಿನ್ಯಾಸ ಡ್ರೆಸ್‌ಗಳನ್ನು ಗಾಳಿಯಾಡುವಂತೆ ಮಾಡುತ್ತವೆ. ಇದನ್ನೇ ಪ್ರಮುಖ ಅಂಶವಾಗಿರಿಸಿಕೊಂಡ ಡಿಸೈನರ್‌ಗಳು ಕಳೆದ ಸಮ್ಮರ್‌ನಲ್ಲಿ ನಾನಾ ವಿನ್ಯಾಸದ ಲೇಸರ್ ಕಟ್ ವರ್ಕ್ ಡಿಸೈನ್‌ನ ಫ್ಯಾಷನ್‌ವೇರ್‌ಗಳನ್ನು ಬಿಡುಗಡೆ ಮಾಡಿದ್ದರು. ಕೊನೆಗೆ ಇಡೀ ಡ್ರೆಸ್‌ನನ್ನೇ ಲೇಸರ್ ಕಟ್ ವಿನ್ಯಾಸದಲ್ಲಿ ಡಿಸೈನ್ ಮಾಡಿದ್ದರು. ಒಳಗೆ ಇನ್ನರ್‌ವೇರ್ ಅಥವಾ ಸ್ವೀಮ್ ವೇರ್ ಇಲ್ಲವೇ ಶಾರ್ಟ್ಸ್ ಧರಿಸಿದ ಮಾಡೆಲ್‌ಗಳು ಇವನ್ನು ಧರಿಸಿ ಟ್ರೆಂಡಿಯಾಗಿಸಿದರು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
- ಸೀಸನ್ ಎಂಡ್ನಲ್ಲಿ ಶ್ವೇತ ವರ್ಣದವು ಟ್ರೆಂಡಿಯಾಗಿವೆ.
- ಮುಂದಿನ ಸೀಸನ್ಗೆ ಮುಂದುವರಿಸಲು ಸೂಕ್ತವಲ್ಲ!
- ಸೆಲೆಬ್ರೆಟಿಗಳ ಡ್ರೆಸ್ಕೋಡ್ ಇದು ಎಂದರೂ ತಪ್ಪಿಲ್ಲ!
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Saree Fashion: ರಫಲ್ ಡಿಸೈನ್‌ನಲ್ಲಿ ಬಂದಿದೆ ಜಾರ್ಜೆಟ್ ಲೆಹೆಂಗಾ ಸೀರೆ!