-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲೈಟ್‌ವೈಟ್ ಡಂಗ್ರೀಸ್ ಫ್ಯಾಷನ್ (Dungarees Fashion In Summer) ಕೊಂಚ ಬದಲಾವಣೆಗಳೊಂದಿಗೆ ಇದೀಗ ಬೇಸಿಗೆ ಫ್ಯಾಷನ್‌ಗೂ ಕಾಲಿಟ್ಟಿದೆ. ಹೌದು. ದಪ್ಪನೆಯ ಫ್ಯಾಬ್ರಿಕ್‌ನ ಡಂಗ್ರೀಸ್‌ಗಳು ಸೈಡಿಗೆ ಸರಿದಿದ್ದು, ಭಾರವಿಲ್ಲದ ತೆಳುವಾದ ಫ್ಯಾಬ್ರಿಕ್‌ನವು, ಸ್ಲಿವ್‌ಲೆಸ್ ಹಾಗೂ ಕ್ರಾಪ್ ಟಾಪ್‌ಗಳೊಂದಿಗೆ ಬಿಡುಗಡೆಗೊಂಡಿವೆ. ಅಷ್ಟು ಮಾತ್ರವಲ್ಲದೇ, ಬೇಕಾದಾಗ ಇವನ್ನೇ ನಾನಾ ರೀತಿಯಲ್ಲಿ ಧರಿಸುವ ಸ್ಟೈಲಿಂಗ್ ಕೂಡ ಪಾಪುಲರ್ ಆಗಿದೆ.
“ಡಂಗ್ರೀಸ್ ಫ್ಯಾಷನ್ (Dungarees Fashion) ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೆಲವು ಹುಡುಗಿಯರಿಗೆ ಮಾತ್ರ, ಈ ಫ್ಯಾಷನ್ ಇಷ್ಟವಾಗುತ್ತವೆ. ಇಂತಹವರು ಈ ಸೀಸನ್‌ಗೆ ಮ್ಯಾಚ್ ಆಗುವಂತಹ ನಾನಾ ಕಾಂಬಿನೇಷನ್‌ಗಳಲ್ಲಿ ಧರಿಸುತ್ತಿದ್ದಾರೆ. ಪ್ರಯೋಗಾತ್ಮಕ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ನಲ್ಲಿ ಧರಿಸುತ್ತಿದ್ದಾರೆ. ಇದು ಈ ಸೀಸನ್ ಟ್ರೆಂಡ್‌ನಲ್ಲಿ ಸೇರಿದೆ” ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಹಾಗಾದಲ್ಲಿ, ಯಾವ್ಯಾವ ಬಗೆಯ ಡಂಗ್ರೀಸ್‌ಗಳು ಈ ಸೀಸನ್‌ಗೆ ಎಂಟ್ರಿ ನೀಡಿವೆ ಹಾಗೂ ಈ ಸೆಕೆಗಾಲದಲ್ಲಿ ಇದನ್ನು ಧರಿಸುವವರು ಹೇಗೆಲ್ಲಾ ಮಿಕ್ಸ್ ಮ್ಯಾಚ್ ಮಾಡಿ ನಾನಾ ಬಗೆಯ ಕಾಂಬಿನೇಷನ್‌ನಲ್ಲಿ ಟ್ರೆಂಡ್‌ಗೆ ತಕ್ಕಂತೆ ಧರಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಿಂಪಲ್ ಟಿಪ್ಸ್ ಹಾಗೂ ಐಡಿಯಾಗಳನ್ನು ಇಲ್ಲಿ ನೀಡಿದ್ದಾರೆ.
ಕ್ರಾಪ್ ಟಾಪ್ ಜೊತೆ ಡಂಗ್ರೀಸ್
ಡಂಗ್ರೀಸ್ ಜೊತೆ ಕ್ರಾಪ್ ಟಾಪ್‌ಗಳನ್ನು ನಾನಾ ಬಗೆಯಲ್ಲಿ ಧರಿಸಬಹುದು. ಹೊಟ್ಟೆಯ ಮೇಲೆ ನಿಲ್ಲುವ ಈ ಕ್ರಾಪ್ ಟಾಪ್‌ಗಳು ಡಂಗ್ರೀಸ್ ಜೊತೆ ಮ್ಯಾಚ್ ಮಾಡಿದಾಗ ಕೊಂಚ ಗ್ಲಾಮರಸ್ ಲುಕ್ ನೀಡುತ್ತವೆ. ಲೈಟ್ ಹಾಗೂ ಪಾಸ್ಟೆಲ್ ಶೇಡ್‌ನವು ಟ್ರೆಂಡ್‌ನಲ್ಲಿವೆ. ಅವನ್ನು ಇವುಗಳೊಂದಿಗೆ ಧರಿಸಿದಾಗ ಟ್ರೆಂಡಿಯಾಗಿ ಕಾಣಿಸುತ್ತವೆ.
ಶಾರ್ಟ್ ಕಾಲರ್‌ಲೆಸ್ ಟೀ ಶರ್ಟ್ಸ್
ಕಾಲರ್ ಇಲ್ಲದ ಶಾರ್ಟ್ ಟೀ ಶರ್ಟ್‌ಗಳು ಡಂಗ್ರೀಸ್ ಜೊತೆ ಧರಿಸಬಹುದು. ಇವು ಬಿಸಿಲಲ್ಲಿ ಧರಿಸಿದಾಗ ಸೆಕೆಯಾಗುವುದಿಲ್ಲ. ನೋಡಲು ಆಕರ್ಷಕವಾಗಿ ಕಾಣಿಸುತ್ತವೆ.
ಹಾಲ್ಟರ್ ನೆಕ್ ಟಾಪ್
ಡಂಗ್ರೀಸ್ ಜೊತೆ ಹಾಲ್ಟರ್ ನೆಕ್‌ಲೈನ್ ಇರುವಂತಹ ಟಾಪ್ ಕೂಡ ಧರಿಸಬಹುದು. ಇವು ಕೂಡ ಗ್ಲಾಮರಸ್ ಟಚ್ ನೀಡುವುದರೊಂದಿಗೆ ಸಖತ್ ಲುಕ್ ನೀಡುತ್ತವೆ. ಇವು ಈ ಜನರೇಷನ್ ಯುವತಿಯರ ಹೈ ಫ್ಯಾಷನ್‌ನಲ್ಲಿ ಸ್ಥಾನ ಪಡೆದಿವೆ.
ರಾಂಪರ್ ಶೈಲಿ ಡಂಗ್ರೀಸ್ ಜೊತೆ ಮಿಕ್ಸ್ ಮ್ಯಾಚ್
ಇನ್ನು ರಾಂಪರ್ ಶೈಲಿಯ ಶಾರ್ಟ್ ಡ್ರೆಸ್ ಜೊತೆಗೆ ಚಿಕ್ಕ ಮಕ್ಕಳು ಧರಿಸುವ ವಿನ್ಯಾಸವಿರುವ ಫ್ಲೋರಲ್ ಮಿನಿ ಟಾಪ್‌ಗಳ ಕಾಂಬಿನೇಷನ್ ಕೂಡ ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಇವು ಔಟಿಂಗ್ ಹಾಗೂ ವೀಕೆಂಡ್ ಸ್ಟೈಲ್‌ನಲ್ಲಿ ಚೆನ್ನಾಗಿ ಕಾಣಿಸುತ್ತವೆ.
ತ್ರೀ ಫೋರ್ತ್ ಡಂಗ್ರೀಸ್
ಮಂಡಿವರೆಗೂ ಬರುವ ಡಂಗ್ರೀಸ್‌ಗೆ ಎಂದಿನಂತೆ ಚಿಕ್ಕ ಕ್ರಾಪ್ ಟಾಪ್ ಹಾಗೂ ಟೀ ಶರ್ಟ್ ಧರಿಸಬಹುದು. ಇವು ಕೂಡ ಯಂಗ್ ಲುಕ್ ನೀಡುತ್ತವೆ. ಈ ಸೀಸನ್‌ನ ಫ್ಯಾಷನಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಡಂಗ್ರೀಸ್ ಸ್ಟೈಲಿಂಗ್ ಹಾಗೂ ಮೇಕೋವರ್ ಟಿಪ್ಸ್
- ಈ ಸೀಸನ್‌ನಲ್ಲಿ ಆದಷ್ಟೂ ಫ್ಲೋರಲ್ ಟಾಪ್ ಹಾಗೂ ಪಾಸ್ಟೆಲ್ ಶೇಡ್ಸ್ ಆಯ್ಕೆ ಮಾಡಿ.
- ಹೇರ್ಸ್ಟೈಲ್ ಸೀಸನ್‌ಗೆ ತಕ್ಕಂತಿರಲಿ.
- ಸಿಂಪಲ್ ಮೇಕಪ್ ನಿಮ್ಮದಾಗಿರಲಿ.
- ಫುಟ್ವೇರ್ ಮ್ಯಾಚ್ ಆಗುವಂತಿರಲಿ.
- ಮಿನಿಮಲ್ ಆಕ್ಸೆಸರೀಸ್ಗೆ ಆದ್ಯತೆ ನೀಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Kids Summer Travel Fashion: ಬೇಸಿಗೆಯಲ್ಲಿ ಹೀಗಿರಲಿ ಚಿಣ್ಣರ ಟ್ರಾವೆಲ್ ಫ್ಯಾಷನ್