Dungarees Fashion In Summer: ಬೇಸಿಗೆ ಸೀಸನ್‌ನಲ್ಲಿ ಹೀಗಿರಲಿ ಲೈಟ್‌ವೈಟ್‌ ಡಂಗ್ರೀಸ್‌ ಕಾಂಬಿನೇಷನ್‌ - Vistara News

ಫ್ಯಾಷನ್

Dungarees Fashion In Summer: ಬೇಸಿಗೆ ಸೀಸನ್‌ನಲ್ಲಿ ಹೀಗಿರಲಿ ಲೈಟ್‌ವೈಟ್‌ ಡಂಗ್ರೀಸ್‌ ಕಾಂಬಿನೇಷನ್‌

ಬೇಸಿಗೆಯಲ್ಲಿ ಲೈಟ್‌ವೈಟ್‌ ಡಂಗ್ರೀಸ್‌ಗಳು ಕಾಲಿಟ್ಟಿದ್ದು (Dungarees Fashion In Summer), ಇವುಗಳೊಂದಿಗೆ ಸ್ಲಿವ್‌ಲೆಸ್‌ ಹಾಗೂ ಸಮ್ಮರ್‌ ಟಾಪ್‌ಗಳ ಕಾಂಬಿನೇಷನ್‌ ಹಿಟ್‌ ಅಗಿವೆ. ಇನ್ನು, ಈ ಸೀಸನ್‌ನಲ್ಲಿ ಇವುಗಳ ಮಿಕ್ಸ್‌ ಮ್ಯಾಚ್‌ ಟ್ರೆಂಡ್‌ಗೆ ತಕ್ಕಂತೆ ಹೇಗೆಲ್ಲಾ ಮಾಡಬಹುದು ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಸಿಂಪಲ್‌ ಟಿಪ್ಸ್‌ ಹಾಗೂ ಐಡಿಯಾಗಳನ್ನು ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Dungarees Fashion In Summer
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲೈಟ್‌ವೈಟ್‌ ಡಂಗ್ರೀಸ್‌ ಫ್ಯಾಷನ್‌ (Dungarees Fashion In Summer) ಕೊಂಚ ಬದಲಾವಣೆಗಳೊಂದಿಗೆ ಇದೀಗ ಬೇಸಿಗೆ ಫ್ಯಾಷನ್‌ಗೂ ಕಾಲಿಟ್ಟಿದೆ. ಹೌದು. ದಪ್ಪನೆಯ ಫ್ಯಾಬ್ರಿಕ್‌ನ ಡಂಗ್ರೀಸ್‌ಗಳು ಸೈಡಿಗೆ ಸರಿದಿದ್ದು, ಭಾರವಿಲ್ಲದ ತೆಳುವಾದ ಫ್ಯಾಬ್ರಿಕ್‌ನವು, ಸ್ಲಿವ್‌ಲೆಸ್‌ ಹಾಗೂ ಕ್ರಾಪ್‌ ಟಾಪ್‌ಗಳೊಂದಿಗೆ ಬಿಡುಗಡೆಗೊಂಡಿವೆ. ಅಷ್ಟು ಮಾತ್ರವಲ್ಲದೇ, ಬೇಕಾದಾಗ ಇವನ್ನೇ ನಾನಾ ರೀತಿಯಲ್ಲಿ ಧರಿಸುವ ಸ್ಟೈಲಿಂಗ್‌ ಕೂಡ ಪಾಪುಲರ್‌ ಆಗಿದೆ.
“ಡಂಗ್ರೀಸ್‌ ಫ್ಯಾಷನ್‌ (Dungarees Fashion) ಎಲ್ಲರಿಗೂ ಇಷ್ಟವಾಗುವುದಿಲ್ಲ. ಕೆಲವು ಹುಡುಗಿಯರಿಗೆ ಮಾತ್ರ, ಈ ಫ್ಯಾಷನ್‌ ಇಷ್ಟವಾಗುತ್ತವೆ. ಇಂತಹವರು ಈ ಸೀಸನ್‌ಗೆ ಮ್ಯಾಚ್‌ ಆಗುವಂತಹ ನಾನಾ ಕಾಂಬಿನೇಷನ್‌ಗಳಲ್ಲಿ ಧರಿಸುತ್ತಿದ್ದಾರೆ. ಪ್ರಯೋಗಾತ್ಮಕ ಮಿಕ್ಸ್‌ ಮ್ಯಾಚ್‌ ಕಾನ್ಸೆಪ್ಟ್‌ನಲ್ಲಿ ಧರಿಸುತ್ತಿದ್ದಾರೆ. ಇದು ಈ ಸೀಸನ್‌ ಟ್ರೆಂಡ್‌ನಲ್ಲಿ ಸೇರಿದೆ” ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಹಾಗಾದಲ್ಲಿ, ಯಾವ್ಯಾವ ಬಗೆಯ ಡಂಗ್ರೀಸ್‌ಗಳು ಈ ಸೀಸನ್‌ಗೆ ಎಂಟ್ರಿ ನೀಡಿವೆ ಹಾಗೂ ಈ ಸೆಕೆಗಾಲದಲ್ಲಿ ಇದನ್ನು ಧರಿಸುವವರು ಹೇಗೆಲ್ಲಾ ಮಿಕ್ಸ್‌ ಮ್ಯಾಚ್‌ ಮಾಡಿ ನಾನಾ ಬಗೆಯ ಕಾಂಬಿನೇಷನ್‌ನಲ್ಲಿ ಟ್ರೆಂಡ್‌ಗೆ ತಕ್ಕಂತೆ ಧರಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಿಂಪಲ್‌ ಟಿಪ್ಸ್‌ ಹಾಗೂ ಐಡಿಯಾಗಳನ್ನು ಇಲ್ಲಿ ನೀಡಿದ್ದಾರೆ.

Dungarees Fashion In Summer

ಕ್ರಾಪ್‌ ಟಾಪ್‌ ಜೊತೆ ಡಂಗ್ರೀಸ್‌

ಡಂಗ್ರೀಸ್‌ ಜೊತೆ ಕ್ರಾಪ್‌ ಟಾಪ್‌ಗಳನ್ನು ನಾನಾ ಬಗೆಯಲ್ಲಿ ಧರಿಸಬಹುದು. ಹೊಟ್ಟೆಯ ಮೇಲೆ ನಿಲ್ಲುವ ಈ ಕ್ರಾಪ್‌ ಟಾಪ್‌ಗಳು ಡಂಗ್ರೀಸ್‌ ಜೊತೆ ಮ್ಯಾಚ್‌ ಮಾಡಿದಾಗ ಕೊಂಚ ಗ್ಲಾಮರಸ್‌ ಲುಕ್‌ ನೀಡುತ್ತವೆ. ಲೈಟ್‌ ಹಾಗೂ ಪಾಸ್ಟೆಲ್‌ ಶೇಡ್‌ನವು ಟ್ರೆಂಡ್‌ನಲ್ಲಿವೆ. ಅವನ್ನು ಇವುಗಳೊಂದಿಗೆ ಧರಿಸಿದಾಗ ಟ್ರೆಂಡಿಯಾಗಿ ಕಾಣಿಸುತ್ತವೆ.

ಶಾರ್ಟ್‌ ಕಾಲರ್‌ಲೆಸ್‌ ಟೀ ಶರ್ಟ್ಸ್‌

ಕಾಲರ್‌ ಇಲ್ಲದ ಶಾರ್ಟ್‌ ಟೀ ಶರ್ಟ್‌ಗಳು ಡಂಗ್ರೀಸ್‌ ಜೊತೆ ಧರಿಸಬಹುದು. ಇವು ಬಿಸಿಲಲ್ಲಿ ಧರಿಸಿದಾಗ ಸೆಕೆಯಾಗುವುದಿಲ್ಲ. ನೋಡಲು ಆಕರ್ಷಕವಾಗಿ ಕಾಣಿಸುತ್ತವೆ.

Dungarees Fashion In Summer

ಹಾಲ್ಟರ್‌ ನೆಕ್‌ ಟಾಪ್‌

ಡಂಗ್ರೀಸ್‌ ಜೊತೆ ಹಾಲ್ಟರ್‌ ನೆಕ್‌ಲೈನ್‌ ಇರುವಂತಹ ಟಾಪ್ ಕೂಡ ಧರಿಸಬಹುದು. ಇವು ಕೂಡ ಗ್ಲಾಮರಸ್‌ ಟಚ್‌ ನೀಡುವುದರೊಂದಿಗೆ ಸಖತ್‌ ಲುಕ್‌ ನೀಡುತ್ತವೆ. ಇವು ಈ ಜನರೇಷನ್‌ ಯುವತಿಯರ ಹೈ ಫ್ಯಾಷನ್‌ನಲ್ಲಿ ಸ್ಥಾನ ಪಡೆದಿವೆ.

ರಾಂಪರ್‌ ಶೈಲಿ ಡಂಗ್ರೀಸ್‌ ಜೊತೆ ಮಿಕ್ಸ್‌ ಮ್ಯಾಚ್‌

ಇನ್ನು ರಾಂಪರ್‌ ಶೈಲಿಯ ಶಾರ್ಟ್‌ ಡ್ರೆಸ್‌ ಜೊತೆಗೆ ಚಿಕ್ಕ ಮಕ್ಕಳು ಧರಿಸುವ ವಿನ್ಯಾಸವಿರುವ ಫ್ಲೋರಲ್‌ ಮಿನಿ ಟಾಪ್‌ಗಳ ಕಾಂಬಿನೇಷನ್‌ ಕೂಡ ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಇವು ಔಟಿಂಗ್‌ ಹಾಗೂ ವೀಕೆಂಡ್‌ ಸ್ಟೈಲ್‌ನಲ್ಲಿ ಚೆನ್ನಾಗಿ ಕಾಣಿಸುತ್ತವೆ.

ತ್ರೀ ಫೋರ್ತ್‌ ಡಂಗ್ರೀಸ್‌

ಮಂಡಿವರೆಗೂ ಬರುವ ಡಂಗ್ರೀಸ್‌ಗೆ ಎಂದಿನಂತೆ ಚಿಕ್ಕ ಕ್ರಾಪ್‌ ಟಾಪ್‌ ಹಾಗೂ ಟೀ ಶರ್ಟ್‌ ಧರಿಸಬಹುದು. ಇವು ಕೂಡ ಯಂಗ್‌ ಲುಕ್‌ ನೀಡುತ್ತವೆ. ಈ ಸೀಸನ್‌ನ ಫ್ಯಾಷನಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Dungarees Fashion In Summer

ಡಂಗ್ರೀಸ್‌ ಸ್ಟೈಲಿಂಗ್‌ ಹಾಗೂ ಮೇಕೋವರ್‌ ಟಿಪ್ಸ್‌

 • ಈ ಸೀಸನ್‌ನಲ್ಲಿ ಆದಷ್ಟೂ ಫ್ಲೋರಲ್‌ ಟಾಪ್‌ ಹಾಗೂ ಪಾಸ್ಟೆಲ್‌ ಶೇಡ್ಸ್‌ ಆಯ್ಕೆ ಮಾಡಿ.
 • ಹೇರ್‌ಸ್ಟೈಲ್‌ ಸೀಸನ್‌ಗೆ ತಕ್ಕಂತಿರಲಿ.
 • ಸಿಂಪಲ್‌ ಮೇಕಪ್‌ ನಿಮ್ಮದಾಗಿರಲಿ.
 • ಫುಟ್‌ವೇರ್‌ ಮ್ಯಾಚ್‌ ಆಗುವಂತಿರಲಿ.
 • ಮಿನಿಮಲ್‌ ಆಕ್ಸೆಸರೀಸ್‌ಗೆ ಆದ್ಯತೆ ನೀಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Kids Summer Travel Fashion: ಬೇಸಿಗೆಯಲ್ಲಿ ಹೀಗಿರಲಿ ಚಿಣ್ಣರ ಟ್ರಾವೆಲ್‌ ಫ್ಯಾಷನ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Canne Film Festival 2024: ಕಾನ್‌ ಫಿಲ್ಮ್ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ ತಾರೆಯರ ಫ್ಯಾಷನ್ ಕಲರವ!

ಕಾನ್‌ ಫಿಲ್ಮ್ ಫೆಸ್ಟಿವಲ್‌ನ 3ನೇ ದಿನದಂದು (Canne Film Festival 2024) ಬಾಲಿವುಡ್ ನಟಿ ಅಥಿಯಾ ಶೆಟ್ಟಿಯ ಶಿಮ್ಮರ್ ಜಂಪ್‌ಸೂಟ್‌ನಲ್ಲಿ ಶೋಭಿತಾ ಕಾಣಿಸಿಕೊಂಡರೆ; ಊರ್ವಶಿ ರೌತೆಲಾ ಆಕರ್ಷಕ ರೆಡ್ ಗೌನ್‌ನಲ್ಲಿ ಕಣ್ಮನ ಸೆಳೆದರು. ಇನ್ನುಳಿದವರು ಹೇಗೆಲ್ಲಾ ಕಂಡರು? ಇದಕ್ಕಾಗಿ ಹೇಗೆಲ್ಲಾ ಸಿದ್ಧಗೊಂಡಿರುತ್ತಾರೆ ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Canne Film Festival 2024
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾನ್‌ ಫಿಲ್ಮ್ ಫೆಸ್ಟಿವಲ್ 2024ರ ರೆಡ್‌ ಕಾರ್ಪೆಟ್‌ (Canne Film Festival 2024) ಮೇಲೆ ಒಂದೊಂದು ದಿನವೂ ಒಂದೊಂದು ಬಗೆಯ ವಿಶೇಷವಾದ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿಯರು ಹಾಗೂ ಸೆಲೆಬ್ರೆಟಿಗಳು 3ನೇ ದಿನವೂ ಕೂಡ ಆಫ್ ಶೋಲ್ಡರ್ ಡಿಸೈನರ್‌ವೇರ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದರು. ಅಂದಹಾಗೆ, ಬಾಲಿವುಡ್ ನಟಿ ಶೋಭಿತಾ, ಕಳೆದ ಬಾರಿ ನಟಿ ಅಥಿಯಾ ಶೆಟ್ಟಿ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಡಿಸೈನರ್ ನಮ್ರತಾ ವಿನ್ಯಾಸಗೊಳಿಸಿ, ಧರಿಸಿದ್ದ ಶಿಮ್ಮರ್ ಪರ್ಪಲ್ ಜಂಪ್‌ಸೂಟ್‌ನಲ್ಲಿ ಕಾಣಿಸಿಕೊಂಡರು. ಹಳೆಯ ಡಿಸೈನ್ ಮತ್ತೊಮ್ಮೆ ರಿಪೀಟ್ ಮಾಡಿದರು.

ಊರ್ವಶಿ ರೌತೆಲಾ ಆಕರ್ಷಕ ರೆಡ್ ಗೌನ್: ಇನ್ನು ಬಾಲಿವುಡ್ ನಟಿ ಊರ್ವಶಿ ರೌತೆಲಾ, ತುನೇಸಿಯನ್ ಡಿಸೈನರ್‌ನ ಆಫ್ ಶೋಲ್ಡರ್ ಕೇಪ್ ಶೈಲಿಯ ಬಲೂನ್ ಸ್ಲೀವ್‌ನ ಆಕರ್ಷಕ ರೆಡ್ ಗೌನ್‌ನಲ್ಲಿ ಯೂರೋಪಿಯನ್ ಕ್ವೀನ್ ಲುಕ್‌ ಮೂಲಕ ಕಣ್ಮನ ಸೆಳೆದರು.

ಇದನ್ನೂ ಓದಿ: Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!

ದೀಪ್ತಿ – ನಮಿತಾ ತಾಪರ್ ಡಿಸೈನರ್‌ವೇರ್ಸ್: ಇನ್ನು, ದೀಪ್ತಿ ಯೆಲ್ಲೋ & ಗೋಲ್ಡ್ ಫಿಶ್ಟೇಲ್ ರಫಲ್ ಗೌನ್‌ನಲ್ಲಿ ಕಾಣಿಸಿಕೊಂಡರೆ, ನಮಿತಾ ರಾಯಲ್ ಬ್ಲ್ಯೂ ಸ್ಯಾಟೀನ್ ಗೌನ್‌ನಲ್ಲಿ ಪೋಸ್ ನೀಡಿದರು.

ಸೆಲೆಬ್ರೆಟಿಗಳ ರೆಡ್‌ಕಾರ್ಪೆಟ್‌ ಸ್ಟೈಲಿಂಗ್ ಬದಲಾವಣೆ: ಮೊದಲ ದಿನ ಬಹುತೇಕ ಸೆಲೆಬ್ರೆಟಿಗಳು ತಮ್ಮ ಡಿಸೈನರ್‌ವೇರ್‌ಗಳು ಎಕ್ಸ್ಕ್ಲೂಸಿವ್ ಡಿಸೈನ್ ಹೊಂದಿವೆ ಎಂದು ಭಾವಿಸಿಯೇ ರೆಡ್ ಕಾರ್ಪೆಟ್‌ ಮೇಲೆ ವಾಕ್ ಮಾಡಿದರೆ, ತದನಂತರ ಕೊಂಚ ಜಾಗರೂಕರಾಗಿ ಸ್ಟೈಲಿಂಗ್‌ನಲ್ಲಿ ಬದಲಾವಣೆ ತಂದಿರುವುದು ಕಂಡು ಬಂದಿತು.

ಡಿಸೈನರ್‌ವೇರ್‌ ಬದಲಿಸಲಾಗದು!

ಹಾಗೆಂದು ಇದ್ದಕ್ಕಿದ್ದಂತೆ ಯಾವ ಸೆಲೆಬ್ರೆಟಿಗೂ ಕೂಡ ಡಿಸೈನರ್ವೇರ್ ಮತ್ತೊಬ್ಬರ ದಿರಸಿನಂತೆ ಇದೆ ಎಂದು ಅರಿವಾದಾಕ್ಷಣ ಬದಲಿಸಲು ಆಗುವುದಿಲ್ಲ! ಯಾಕೆಂದರೇ, ಅವರು ಧರಿಸುವ ಒಂದೊಂದು ಉಡುಪು ಲಕ್ಷಗಟ್ಟಲೆ ರೂ. ಬೆಲೆ ಬಾಳುತ್ತವೆ. ಅಲ್ಲದೇ, ತಿಂಗಳಾನುಗಟ್ಟಲೇ ಮೊದಲೇ ಯಾವುದನ್ನು ಧರಿಸಬೇಕೆಂಬುದು ನಿರ್ಧರಿತವಾಗಿರುತ್ತದೆ. ಇದಕ್ಕಾಗಿ ಸ್ಟಾರ್ಗಳ ಡಿಸೈನರ್‌ಗಳು ಕೂಡ ತಿಂಗಳಾನುಗಟ್ಟಲೇ ಹೋಮ್‌ ವರ್ಕ್‌ ಮಾಡಿರುತ್ತಾರೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ವಿಶೇಷ ದಿರಸನ್ನು ಸಿದ್ಧಪಡಿಸಲು ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಕೆಲವು ಯಾರೂ ಧರಿಸದ ಹೊಸ ಡಿಸೈನರ್‌ಗಳಾಗಿ ಹಿಟ್ ಲಿಸ್ಟ್‌ಗೆ ಸೇರಿದರೇ, ಮತ್ತೆ ಕೆಲವು ಸೇಮ್ ಟು ಸೇಮ್ ಅಥವಾ ಕಾಪಿಕ್ಯಾಟ್ ಆಗಿ ನಗೆಪಾಟಲೀಗಿಡಾಗುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಕ್.

(ಲೇಖಕಿ ಫ್ಯಾಷನ್ ಪತ್ರಕರ್ತೆ)

Continue Reading

ಫ್ಯಾಷನ್

Raveena tandon Saree fashion: ಜಯಂತಿ ಬಲ್ಲಾಳ್‌ ಡಿಸೈನರ್‌ ಸೀರೆಯಲ್ಲಿ ನಟಿ ರವೀನಾ ಟಂಡನ್‌ ಜಾದೂ!

ಮೈಸೂರಿನ (Raveena tandon Saree fashion) ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಡಿಸೈನರ್‌ ರೇಷ್ಮೆ ಸೀರೆ ಹಾಗೂ ಬ್ಲೌಸ್‌ನಲ್ಲಿ ಬಾಲಿವುಡ್‌ ನಟಿ ರವೀನಾ ಟಂಡನ್‌ ಮಿಂಚಿದ್ದಾರೆ. ಹಾಗಾದಲ್ಲಿ ಅವರು ಉಟ್ಟ ಸೀರೆಯ ವಿಶೇಷತೆಯೇನು? ಈ ಬಗ್ಗೆ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರು ವಿಸ್ತಾರ ನ್ಯೂಸ್‌ಗೆ ವಿವರಿಸಿದ್ದಾರೆ.

VISTARANEWS.COM


on

Raveena tandon Saree fashion magic in Jayanthi Ballal designer
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮೈಸೂರಿನ ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಡಿಸೈನರ್‌ ಸೀರೆ ಹಾಗೂ ಬ್ಲೌಸ್‌ನಲ್ಲಿ ಬಾಲಿವುಡ್‌ ನಟಿ, ಮಸ್ತ್‌ ಮಸ್ತ್‌ ಬೆಡಗಿ ರವೀನಾ ಟಂಡನ್‌ (Raveena tandon Saree fashion) ಮಿಂಚಿದ್ದಾರೆ.
ಹೌದು. ನಟಿ ರವೀನಾ ಟಂಡನ್‌ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಯಂತಿ ಅವರು ಡಿಸೈನ್‌ ಮಾಡಿದ ವಿಶೇಷವಾದ ಟ್ರೆಡಿಷನಲ್‌ ರೇಷ್ಮೆ ಸೀರೆಗೆ ವಿನ್ಯಾಸಗೊಳಿಸಲಾದ ಬ್ಲೌಸ್‌ ಧರಿಸಿ ದೇವತೆಯಂತೆ ಕಂಗೊಳಿಸಿದ್ದಾರೆ.

ಬಾಲಿವುಡ್‌ ನಟಿ ರವೀನಾ ಸೀರೆ ಪ್ರೇಮ

ಅಂದಹಾಗೆ, ರವೀನಾ ಟಂಡನ್‌ ಮೈಸೂರಿನ ಜಯಂತಿ ಬಲ್ಲಾಳ್‌ ಡಿಸೈನರ್‌ ಸೀರೆಯಲ್ಲಿ ಕಂಗೊಳಿಸಿರುವುದು ಇದು ಮೊದಲೇನಲ್ಲ! ಈಗಾಗಲೇ ಮೈಸೂರು ಫ್ಯಾಷನ್‌ ವೀಕ್‌ನಲ್ಲೂ ಕೂಡ ಅವರ ಡಿಸೈನರ್‌ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡು, ರ್ಯಾಂಪ್‌ ಮೇಲೆ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದ್ದರು. ಸೀರೆ ಪ್ರಿಯರ ಮನಗೆದ್ದಿದ್ದರು. ಇದರೊಂದಿಗೆ ಆಗಲೂ ಜಯಂತಿ ಅವರ ಸೀರೆ ವಿನ್ಯಾಸದ ಬಗ್ಗೆ ಹಾಡಿ ಹೊಗಳಿದ್ದರು.

ಜಯಂತಿ ಬಲ್ಲಾಳ್‌ ಡಿಸೈನರ್‌ ರೇಷ್ಮೆ ಸೀರೆ ವಿಶೇಷತೆ

ಬಾಲಿವುಡ್‌ ನಟಿ ರವೀನಾ ಟಂಡನ್‌ ಅವರಿಗೆ ಪ್ರಿಯವಾಗುವಂತಹ ಶೇಡ್ಸ್‌ ಹಾಗೂ ಡಿಸೈನ್‌ನ ಸೀರೆ ವಿನ್ಯಾಸಗೊಳಿಸಿರುವ ಜಯಂತಿ ಅವರು ಈ ಸೀರೆ ಬಗ್ಗೆ ಹೇಳುವುದು ಹೀಗೆ. ಪರಿಶುದ್ಧ ಕಂಚಿ ಸಿಲ್ಕ್‌ ಸೀರೆಯನ್ನು ಪಲ್ಲುವಿನ ಕಡೆ ಮಾತ್ರವಲ್ಲದೆ, ಸೀರೆಯ ನಾನಾ ಕಡೆ ಗೋಲ್ಡ್‌ ವರ್ಕ್ನಿಂದ ವಿನ್ಯಾಸಗೊಳಿಸಲಾಗಿದೆ. ಸಿಲ್ವರ್‌ ಜರ್ದೋಸಿ ವರ್ಕ್‌ ಜೊತೆಜೊತೆಗೆ ಪರ್ಲ್‌ ಹಾಗೂ ಸಿಕ್ವೀನ್ಸ್‌ ಹ್ಯಾಂಡ್‌ ವರ್ಕ್‌ ಮಾಡಲಾಗಿದೆ. ಪ್ರಿಶೀಯಸ್‌ ಸ್ಟೋನ್ಸ್‌ ಲುಕ್‌ನಂತೆ ಬಿಂಬಿಸುವ ಕುಂದನ್‌ ವರ್ಕ್‌ ಕೂಡ ಮಾಡಲಾಗಿದೆ. ಇಡೀ ಸೀರೆಯ ಒಡಲು ಬುಟ್ಟಾ ಹೊಂದಿದೆ. ತೀರಾ ಲೈಟ್‌ವೈಟ್‌ ಆಗಿರುವ ಇದು ಬ್ಯೂಟಿಫುಲ್‌ ಬ್ರೈಡಲ್‌ ಸೀರೆ ಎಂದು ವಿವರಿಸುತ್ತಾರೆ ಡಿಸೈನರ್‌ ಜಯಂತಿ. ಸೀರೆಗಳನ್ನು ಅತ್ಯಾಕರ್ಷಕವಾಗಿ ಡಿಸೈನ್‌ಗೊಳಿಸುವುದರೊಂದಿಗೆ ಅದ್ಭುತ ನೆಕ್‌ಲೈನ್‌ ಇರುವಂತಹ ಬ್ಲೌಸನ್ನು ಕೂಡ ಅತ್ಯಾಕರ್ಷಕವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೈಸೂರಿನ ಸಂಸ್ಕೃತಿಯ ದ್ಯೋತಕ

ಇಡೀ ಸೀರೆ ಹಾಗೂ ಬ್ಲೌಸನ್ನು ಸಿದ್ಧಗೊಳಿಸಲು ಸರಿ ಸುಮಾರು 90 ಗಂಟೆಗಳ ಕಾಲ ಹಿಡಿದಿದ್ದು, 4 ಮಂದಿ ಆರ್ಟಿಸನ್ಸ್‌ ಇದನ್ನು ಸಿಂಗರಿಸುವಲ್ಲಿ ಕಾರ್ಯೊನ್ಮುಖರಾಗಿದ್ದರು ಎನ್ನುತ್ತಾರೆ ಜಯಂತಿ ಬಲ್ಲಾಳ್‌. ಮೈಸೂರಿನ ಕಲ್ಚರ್‌ ಹಾಗೂ ಹೆರಿಟೇಜ್‌ ಪ್ರತಿಬಿಂಬಿಸುವ ವಿನ್ಯಾಸಕ್ಕೆ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ ಅವರು.

ಇದನ್ನೂ ಓದಿ: Neha Murder case : ನ್ಯಾಯಾಧೀಶರ ಎದುರೆ ನೇಹಾ ಕೊಲೆ ಆರೋಪಿ ಫಯಾಜ್‌ನ DNA ಮಾದರಿ ಸಂಗ್ರಹ!

ರವೀನಾ-ಜಯಂತಿ ಸೀರೆ ಕೆಮಿಸ್ಟ್ರಿ

ಬಾಲಿವುಡ್‌ ನಟಿ ರವೀನಾ ಟಂಡನ್‌ ಹಾಗೂ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಸೀರೆ ಕೆಮಿಸ್ಟ್ರಿ ಸಖತ್‌ ಆಗಿದೆ. ಇದಕ್ಕೆ ಪ್ರತ್ಯಕ್ಷ ಸಾಖ್ಷಿ ಪ್ರತಿಬಾರಿ ರವೀನಾ ಒಂದೂ ಮಾತನಾಡದೇ ಜಯಂತಿ ಅವರ ಸೀರೆಯುಟ್ಟು ಸಿಂಗಾರಗೊಳ್ಳುವುದು. ಸಂತಸಪಡುವುದು. ನೀವು ಏನೇ ಡಿಸೈನ್‌ ಮಾಡಿದ್ದರೂ ಸರಿಯೇ !ಅದರ ಬಗ್ಗೆ ಯೋಚಿಸುವಂತೆಯೇ ಇಲ್ಲ! ಆ ಮಟ್ಟಿಗೆ ಜಯಂತಿ ಡಿಸೈನ್‌ ಮಾಡಿದ ಸೀರೆ ಆಕರ್ಷಕವಾಗಿರುತ್ತದೆ ಎಂದು ಹಾಡಿ ಹೊಗಳುತ್ತಾರೆ ರವೀನಾ. ಇನ್ನು, ಜಯಂತಿಯವರು ಮುಂಬಯಿಗೆ ಹೋದಾಗ ರವೀನಾ ಮನೆಗೆ ಭೇಟಿ ನೀಡುವ ಅವರು ಸ್ನೇಹಿತರಂತೆ ಟೈಮ್‌ ಕಳೆಯುತ್ತಾರೆ. ಒಟ್ಟಿನಲ್ಲಿ, ರವೀನಾ ಅವರ ಮೈಸೂರು ವಿಸಿಟ್ಸ್‌ ಜಯಂತಿಯವರ ಸೀರೆಯೊಂದಿಗೆ ಕನೆಕ್ಟ್‌ ಆಗಿದೆ ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ದೇಶ

Reliance Retail: ರಿಲಯನ್ಸ್‌ ರಿಟೇಲ್‌ನಲ್ಲಿ ಎಎಸ್‌ಒಎಸ್‌ ಬ್ರ್ಯಾಂಡ್‌ನ ಉತ್ಪನ್ನಗಳು ಈಗ ಲಭ್ಯ

Reliance Retail: ಬ್ರಿಟನ್‌ನ ಪ್ರಮುಖ ಆನ್‌ಲೈನ್‌ ಫ್ಯಾಷನ್‌ ಕಂಪನಿ ಎಎಸ್‌ಒಎಸ್‌ ನ (ಎಸೋಸ್‌) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್‌ ರಿಟೇಲ್‌ ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ರಿಲಯನ್ಸ್‌ ರಿಟೇಲ್‌ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ. ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದ್ದು, 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.

VISTARANEWS.COM


on

ASOS brand products are available at Reliance Retail
Koo

ನವದೆಹಲಿ: ಬ್ರಿಟನ್‌ನ ಪ್ರಮುಖ ಆನ್‌ಲೈನ್‌ ಫ್ಯಾಷನ್‌ ಕಂಪನಿ ಎಎಸ್‌ಒಎಸ್‌ ನ (ಎಸೋಸ್‌) ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ರಿಲಯನ್ಸ್‌ ರಿಟೇಲ್‌ (Reliance Retail) ಕಂಪನಿಯು ದೀರ್ಘಾವಧಿಯ ಪಾಲುದಾರಿಕೆ ಮಾಡಿಕೊಂಡಿದ್ದು, ಈ ಒಪ್ಪಂದದ ಪ್ರಕಾರ, ರಿಲಯನ್ಸ್‌ ರಿಟೇಲ್‌ ಕಂಪನಿಯು ಭಾರತದಲ್ಲಿ ತನ್ನ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪ್ಲಾಟ್‌ಫಾರಂಗಳಲ್ಲಿ (ASOS) ಎಎಸ್‌ಒಎಸ್‌ನ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲಿದೆ.

ಎಎಸ್‌ಒಎಸ್‌ ಕಂಪನಿಯು ಜಗತ್ತಿನಾದ್ಯಂತ ಯುವ ಪೀಳಿಗೆಯಲ್ಲಿ ಜನಪ್ರಿಯವಾಗಿದ್ದು, 200ಕ್ಕೂ ಅಧಿಕ ಮಾರುಕಟ್ಟೆಗಳಲ್ಲಿ ಕಂಪನಿಯ ಉತ್ಪನ್ನಗಳು ಲಭ್ಯವಿವೆ.

ಇದನ್ನೂ ಓದಿ: Udupi News: ಮೂವರು ಸಾಧಕರಿಗೆ ಭಂಡಾರಕೇರಿ ಮಠದ ಪ್ರಶಸ್ತಿ; ಬೆಂಗಳೂರಿನಲ್ಲಿ ಮೇ 20ರಂದು ಪ್ರಶಸ್ತಿ ಪ್ರದಾನ

ಈ ಕುರಿತು ರಿಲಿಯನ್ಸ್‌ ರಿಟೇಲ್‌ ವೆಂಚರ್ಸ್‌ನ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ನಮ್ಮ ಫ್ಯಾಷನ್‌ ಕುಟುಂಬಕ್ಕೆ ಎಎಸ್‌ಒಎಸ್‌ ಅನ್ನು ಸ್ವಾಗತಿಸುತ್ತೇವೆ. ಜಾಗತಿಕ ಫ್ಯಾಷನ್‌ ಅನ್ನು ಭಾರತದ ಮಾರುಕಟ್ಟೆಗೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಮೈಲಿಗಲ್ಲು. ಭಾರತದ ರಿಟೇಲ್‌ ಮಾರುಕಟ್ಟೆಯಲ್ಲಿ ನಮಗಿರುವ ಸ್ಥಾನವನ್ನು ಈ ಪಾಲುದಾರಿಕೆಯು ಸೂಚಿಸುತ್ತದೆ. ಅಲ್ಲದೆ, ನಮ್ಮ ಗ್ರಾಹಕರು ಬಯಸುವ ಫ್ಯಾಷನ್‌ ಉತ್ಪನ್ನಗಳನ್ನು ಅವರಿಗೆ ಒದಗಿಸುವ ಖಾತರಿಯನ್ನೂ ನೀಡುತ್ತದೆ ಎಂದು ತಿಳಿಸಿದರು.

ಈ ಬಗ್ಗೆ ಎಎಸ್‌ಒಎಸ್‌ (ASOS) ನ ಸಿಇಒ ಜೋಸ್‌ ಆಂಟೋನಿಯೋ ಮಾತನಾಡಿ, ರಿಲಯನ್ಸ್‌ ರಿಟೇಲ್‌ ಜತೆಗೂಡಿ ನಮ್ಮ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಕೆಲವೊಂದನ್ನು ನಾವು ಭಾರತದ ಗ್ರಾಹಕರಿಗೆ ನೀಡಲು ಉತ್ಸುಕರಾಗಿದ್ದೇವೆ. ಮುಖ್ಯವಾಗಿ ಜಗತ್ತಿನಲ್ಲಿಯೇ ಬ್ರಿಟಿಷ್‌ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಎಎಸ್‌ಒಎಸ್‌ ವಿನ್ಯಾಸವನ್ನು ನೀಡಲು ಕಾತುರರಾಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Bengaluru News: ವ್ಯಾಸ-ದಾಸ ಸಾಹಿತ್ಯ ಜ್ಞಾನ ಪ್ರಸಾರಕ್ಕೆ ಮಾನ್ಯತೆ ನೀಡಿ; ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ

ಆರ್‌ಐಎಲ್‌ (ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌) ಸಮೂಹದ ಎಲ್ಲಾ ರೀಟೇಲ್‌ ಕಂಪನಿಗಳನ್ನು ಒಳಗೊಂಡಿರುವ ಕಂಪನಿಯೇ ರಿಲಿಯನ್ಸ್‌ ರಿಟೇಲ್‌ ವೆಂಚರ್ಸ್‌ ಲಿಮಿಟೆಡ್‌ (ರಿಲಯನ್ಸ್‌ ರಿಟೇಲ್‌). ರಿಲಯನ್ಸ್‌ ರಿಟೇಲ್‌ 18,836ಕ್ಕೂ ಅಧಿಕ ಮಳಿಗೆಗಳು ಮತ್ತು ಡಿಜಿಟಲ್‌ ಇ-ಕಾಮರ್ಸ್‌ ಮೂಲಕ ಕಾರ್ಯಾಚರಿಸುತ್ತದೆ. ರಿಲಯನ್ಸ್‌ ರಿಟೇಲ್‌ ಕಂಪನಿಯು ತನ್ನ ಹೊಸ ವಾಣಿಜ್ಯ ಯೋಜನೆಯ ಭಾಗವಾಗಿ 30 ಲಕ್ಷಕ್ಕೂ ಅಧಿಕ ವ್ಯಾಪಾರಿಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

Continue Reading

ಫ್ಯಾಷನ್

Namratha Gowda: ರೆಡ್‌ ರಫಲ್‌ ಲೇಯರ್‌ ಮ್ಯಾಕ್ಸಿ ಡ್ರೆಸ್‌ನಲ್ಲಿ ನಟಿ ನಮ್ರತಾ ಗೌಡ ಹಾಲಿಡೇ ಲುಕ್‌!

Namratha Gowda: ರೆಡ್‌ ಶೇಡ್‌ನ ಅಸ್ಸೆಮ್ಮಿಟ್ರಿಕಲ್‌ ರಫಲ್‌ ಲೇಯರ್‌ ಮ್ಯಾಕ್ಸಿ ಡ್ರೆಸ್ನಲ್ಲಿ ನಟಿ ನಮ್ರತಾ ಗೌಡ, ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಇದ್ಯಾವ ಬಗೆಯ ಔಟ್‌ಫಿಟ್‌ ಎಂಬುದರ ಬಗ್ಗೆ ಸ್ಟೈಲಿಸ್ಟ್ ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Namrata Gowda Holiday Look in Red Ruffle Layered Maxi Dress
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ನಮ್ರತಾ ಗೌಡ (Namratha Gowda) ರೆಡ್‌ ಕಲರ್‌ನ ರಫಲ್‌ ಲೇಯರ್‌ ಮ್ಯಾಕ್ಸಿಯಲ್ಲಿ ಬಿಂದಾಸ್‌ ಹಾಲಿ ಡೇ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮ್ಮರ್‌ ಸೀಸನ್‌ನ ಹಾಲಿ ಡೇ ಲುಕ್‌ಗೆ ಸೈ ಎಂದಿದ್ದು, ಸಾಮಾನ್ಯವಾದ ಔಟ್‌ಫಿಟ್‌ಗೆ ಮೊರೆ ಹೋಗದೇ ಕೊಂಚ ಡಿಫರೆಂಟ್‌ ಲುಕ್‌ ನೀಡುವ ಡ್ರೆಸ್‌ ಧರಿಸಿ, ಹಾಲಿ ಡೇ ಫ್ಯಾಷನ್‌ ಪ್ರಿಯರ ಗಮನ ಸೆಳೆದಿದ್ದಾರೆ.

ಬೀಚ್‌ ಸೈಡ್‌ ಹಾಲಿ ಡೇ ಲುಕ್‌

“ಹಾಲಿ ಡೇ ಫ್ಯಾಷನ್‌ ಎಂದಾಕ್ಷಣ ಅದರಲ್ಲೂ ನಟಿ ಎಂದಾಕ್ಷಣಾ ಬಿಕಿನಿ ಇಲ್ಲವೇ ತೀರಾ ಎಕ್ಸ್ಪೋಸಿಂಗ್‌ ಉಡುಪುಗಳನ್ನು ಊಹಿಸುತ್ತಾರೆ. ಆದರೆ, ಈ ಬಾರಿ ನಟಿ ಸಮ್ರತಾ ಗೌಡ ಕೊಂಚ ಡಿಫರೆಂಟ್‌ ಆಗಿ ಬಿಂಬಿಸುವ ಡ್ರೆಸ್‌ ಧರಿಸಿದ್ದಾರೆ. ಇದು ಬೀಚ್‌ ಸೈಡ್‌ ಹಾಲಿಡೇ ಫ್ಯಾಷನ್‌ಗೆ ಮ್ಯಾಚ್‌ ಮಾಡಿದ್ದಾರೆ. ಅದರಲ್ಲೂ ಬಿಸಿಲಲ್ಲಿ ಕೊಂಚ ತಿಳಿ ವರ್ಣದ ಉಡುಪಿನ ಬದಲಾಗಿ ರೆಡ್‌ ಕಲರ್‌ ಆಯ್ಕೆ ಮಾಡಿದ್ದಾರೆ. ಇದು ಅವರ ಬದಲಾದ ಹಾಲಿಡೇ ಫ್ಯಾಷನ್‌ ಹೈಲೈಟ್‌ ಮಾಡುತ್ತದೆ” ಎಂದು ಹೇಳುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌. ಅವರ ಪ್ರಕಾರ, ನಮ್ರತಾ ಈ ಬಾರಿ ಡಾರ್ಕ್‌ ಶೇಡ್‌ ಔಟ್‌ಫಿಟ್ಸ್‌ ಆಯ್ಕೆ ಮಾಡಿರುವುದು ವಿಭಿನ್ನ ಲುಕ್‌ಗಾಗಿ ಎಂಬುದು ತಿಳಿದು ಬರುತ್ತದೆ ಎಂದಿದ್ದಾರೆ.

ಏನಿದು ಹಾಲ್ಟರ್‌ ನೆಕ್‌ ರಫಲ್‌ ಲೇಯರ್‌ ಮ್ಯಾಕ್ಸಿ ?

ನೋಡಲು ಸ್ಟ್ರಾಪ್‌ನಂತೆ ಕಾಣುವ ಹಾಲ್ಟರ್‌ ನೆಕ್‌ಲೈನ್‌ ಇರುವ ರಫಲ್‌ ಲೇಯರ್‌ ಮ್ಯಾಕ್ಸಿಯು ಅಸ್ಸೆಮ್ಮಿಟ್ರಿಕಲ್‌ ಡಿಸೈನ್‌ ಒಳಗೊಂಡಿರುತ್ತದೆ. ಇದೊಂದು ಸಮ್ಮರ್‌ ಸೀಸನ್‌ ಫ್ಯಾಷನ್‌ವೇರ್‌ ಆಗಿದೆ. ಬಾಲಿವುಡ್‌ಗರ ಫೇವರೇಟ್‌ ಹಾಲಿಡೇ ಫ್ಯಾಷನ್‌ನಲ್ಲಿದೆ. ನಾನಾ ಶೇಡ್‌ಗಳಲ್ಲಿ ದೊರೆತರೂ, ಇದೀಗ ರೆಡ್‌ ಕಲರ್‌ನವು ಅತಿ ಹೆಚ್ಚು ಟ್ರೆಂಡಿಯಾಗಿವೆ. ಪದರ ಪದರದಂತೆ ಕಾಣುವ ಈ ಲೇಯರ್‌ ಶಿಫಾನ್‌ ರೆಕ್ಕೆ ಪುಕ್ಕದಂತಹ ಡಿಸೈನ್ಸ್‌ ಹಾಗೂ ಸೈಡ್‌ ಸ್ಲಿಟ್‌ ಜೊತೆಗೆ ಶೋಲ್ಡರ್‌ ಎಕ್ಸ್ಪೋಸ್‌ ಮಾಡುವ ನೆಕ್‌ಲೈನ್ಸ್‌ ಎಲ್ಲವೂ ಈ ಸಮ್ಮರ್‌ ಬಿಸಿಲಿಗೆ ಹೊಂದುತ್ತದೆ ಎಂದು ಡಿಟೇಲ್‌ ನೀಡುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಈ ಬಗೆಯ ನೆಕ್‌ಲೈನ್‌ ಸಮ್ಮರ್‌ ಸೀಸನ್‌ನ ಬೆಸ್ಟ್‌ ಡಿಸೈನ್ಸ್.‌ ಇನ್ನು, ರಫಲ್‌ ಡಿಸೈನ್ಸ್‌ ಶಿಫಾನ್‌ದ್ದಾದರಿಂದ ಲೈಟ್‌ವೈಟ್‌ ಆಗಿರುತ್ತವೆ. ಸ್ಲಿಟ್‌ ಕಾಲಿನ ಅಂದಕ್ಕೆ ಬಿಂದಾಸ್‌ ಟಚ್‌ ನೀಡುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

ನಮ್ರತಾ ಹಾಲಿಡೇ ಫ್ಯಾಷನ್‌ ಲವ್‌

ನಟಿ ನಮ್ರತಾ ಕೂಡ ಹಾಲಿ ಡೇ ಫ್ಯಾಷನ್‌ ಲವ್ವರ್‌ ಎನ್ನಬಹುದು. ಯಾಕೆಂದರೇ, ಅವರು ಎಲ್ಲೇ ಹೋಗಲಿ ಆಯಾ ಸ್ಥಳಗಳಿಗೆ ತಕ್ಕಂತೆ ಇಲ್ಲವೇ, ಟ್ರೆಂಡಿಯಾಗಿರುವ ಬಿಂದಾಸ್‌ ಉಡುಪುಗಳನ್ನೇ ಧರಿಸುತ್ತಾರೆ. ಮುಲಾಜು ನೋಡದೇ ತಮ್ಮ ಆಸೆ-ಅಭಿಲಾಷೆಗೆ ತಕ್ಕಂತೆ ಬಿಂದಾಸ್‌ ಔಟ್‌ಫಿಟ್ಸ್‌ ಧರಿಸುತ್ತಾರೆ. ಇದು ಅವರ ಬಿಂದಾಸ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌ ಬಿಂಬಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಗಳು.

ಈ ಔಟ್‌ಫಿಟ್‌ನಲ್ಲಿ ನೀವೂ ನಮ್ರತಾರಂತೆ ಕಾಣಲು ಹೀಗೆ ಮಾಡಿ

 • ಪ್ರಯೋಗಾತ್ಮಕ ಡಿಸೈನರ್‌ವೇರ್‌ ಸೆಲೆಕ್ಟ್‌ ಮಾಡಿ.
 • ಹಾಲ್ಟರ್‌ ನೆಕ್‌ ಡ್ರೆಸ್‌ ಬಿಂದಾಸ್‌ ಲುಕ್‌ ನೀಡುತ್ತದೆ.
 • ಸ್ಲಿಟ್‌ ಡ್ರೆಸ್‌ಗಳು ಕಾಲುಗಳನ್ನು ಆಕರ್ಷಕವಾಗಿ ಬಿಂಬಿಸುತ್ತವೆ.
 • ಸಿಂಪಲ್‌ ಮೇಕಪ್‌ ಹಾಗೂ ಹೇರ್‌ಸ್ಟೈಲ್‌ಗೆ ಸೈ ಎನ್ನಿ.
 • ಹಾಲಿಡೇಯಲ್ಲಿ ಧರಿಸುವ ಸ್ಯಾಂಡಲ್ಸ್‌ ಫ್ಲಾಟಾಗಿರಲಿ.
 • ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವ ಕಲರ್‌ ಡ್ರೆಸ್‌ ಆಯ್ಕೆ ಮಾಡಿ.
 • ಶೋಲ್ಡರ್‌ಗೆ ಹಾಲ್ಟರ್‌ ನೆಕ್‌ ಹೊಂದುತ್ತದೆಯೇ ಎಂಬುದನ್ನು ಮೊದಲೇ ಟ್ರಯಲ್‌ ಮಾಡಿ ನೋಡಿ.
 • ಹಾಲ್ಟರ್‌ ನೆಕ್‌ ಡ್ರೆಸ್‌ ಧರಿಸಿದಾ ಕತ್ತಿಗೆ ಆಕ್ಸೆಸರೀಸ್‌ ಧರಿಸಬೇಡಿ.
 • ಹಾಲಿ ಡೇ ಫ್ಯಾಷನ್‌ ಟ್ರೆಂಡ್‌ ಫಾಲೋ ಮಾಡಿ, ನಂತರ ಡಿಸೈಡ್‌ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
lr Shivarame gowda prajwal revanna case
ಕ್ರೈಂ18 mins ago

Prajwal Revanna Case: ಮಾಜಿ ಸಂಸದ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

Triple Talaq
ದೇಶ20 mins ago

Triple Talaq: ವಾಟ್ಸ್‌ಆ್ಯಪ್‌ ವಾಯ್ಸ್‌ ಮೆಸೇಜ್‌ನಲ್ಲಿ ತ್ರಿವಳಿ ತಲಾಕ್ ನೀಡಿದ ಪತಿ; ದೂರು ದಾಖಲು

rave party electronic city
ಕ್ರೈಂ47 mins ago

Rave Party: ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ, ತೆಲುಗು ನಟಿ ಹೇಮಾ ಪತ್ತೆ; ನಟಿಯರನ್ನು ಕರೆಸಿಕೊಂಡು ಏನ್‌ ಮಾಡ್ತಿದ್ರು?

Lok Sabha Election 2024
ದೇಶ48 mins ago

Lok Sabha Election 2024: 5ನೇ ಹಂತದ ಮತದಾನ; 49 ಕ್ಷೇತ್ರಗಳಲ್ಲಿ ವೋಟಿಂಗ್ ಶುರು

Job Alert
ಉದ್ಯೋಗ1 hour ago

Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ಇಂದು ಕೊನೆ ದಿನ

Lok Sabha Election
ದೇಶ2 hours ago

Lok Sabha Election: ಇಂದು 5ನೇ ಹಂತದ ಮತದಾನ; ರಾಹುಲ್‌ ಗಾಂಧಿ, ಸ್ಮೃತಿ ಸೇರಿ ಹಲವರ ಭವಿಷ್ಯ ನಿರ್ಧಾರ

Karnataka Weather Forecast
ಮಳೆ2 hours ago

Karnataka Weather : ವರ್ಷಾಘಾತಕ್ಕೆ ಜನ ಸುಸ್ತು; ಮಳೆಯಾಟಕ್ಕೆ ಬಿರುಗಾಳಿ ಸಾಥ್‌

Dina Bhavishya
ಭವಿಷ್ಯ3 hours ago

Dina Bhavishya : ಮಾನಸಿಕ ಒತ್ತಡದಿಂದ ಮುಕ್ತರಾಗುವಿರಿ; ಹೂಡಿಕೆ ವ್ಯವಹಾರವು ಹೆಚ್ಚು ಲಾಭ ತರುವುದು

Pralhad Joshi
ಕರ್ನಾಟಕ8 hours ago

Pralhad Joshi: ರಾಜ್ಯದಲ್ಲಿ ಹತ್ಯೆ, ಆತ್ಮಹತ್ಯೆಗಳೇ ಅಧಿಕ, ಅಭಿವೃದ್ಧಿ ಸಮಾಧಿ: ಪ್ರಲ್ಹಾದ್‌ ಜೋಶಿ ಟೀಕೆ

Ebrahim Raisi
ವಿದೇಶ9 hours ago

Ebrahim Raisi: ಪತನದ ಬಳಿಕ ಹೆಲಿಕಾಪ್ಟರ್‌ ನಾಪತ್ತೆ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ17 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ17 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ19 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌