-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ವಿರ್ಕಿ ಲೆಗ್ಗಿಂಗ್ಸ್ ಜೆನ್ ಜಿ ಫ್ಯಾಷನ್‌ಗೆ ಎಂಟ್ರಿ ನೀಡಿದೆ. ಹೌದು, ಈ ಮೊದಲು ಸೀದಾ ಸಾದಾ ಹಾಗೂ ಸಿಂಪಲ್ ಪ್ರಿಂಟ್ಸ್‌ನಲ್ಲಿ ಮಾತ್ರ ಲಭ್ಯವಿದ್ದ ಲೆಗ್ಗಿಂಗ್ಸ್ ಇದೀಗ ಕ್ವಿರ್ಕಿ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಡಿಫರೆಂಟ್ ವೈಬ್ರೆಂಟ್ ಪ್ರಿಂಟ್ಸ್ ನಿಂದಾಗಿ ಈ ಜನರೇಷನ್‌ನ ಬಿಂದಾಸ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇನ್ನು, ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಅನನ್ಯಾ ಪಾಂಡೇ ಧರಿಸಿದ ಕ್ವಿರ್ಕಿ ಪ್ಯಾಂಟ್ ಕೂಡ ಸಖತ್ ಹಂಗಾಮ ಎಬ್ಬಿಸಿತ್ತು. ಅವರು ಧರಿಸಿ ಇನ್ನೂ ವಾರವಾಗಿಲ್ಲ! ಆಗಲೇ ಈ ಲೆಗ್ಗಿಂಗ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಂದಹಾಗೆ, ಮಲ್ಟಿ ಕಲರ್ ಶೇಡ್ ಹೊಂದಿರುವ ಈ ಕ್ವಿರ್ಕಿ ಲೆಗ್ಗಿಂಗ್ಸ್ ವಿಶೇಷತೆಯೇನು ಗೊತ್ತೇ! ಹುಡುಗಿಯರು ಇವನ್ನು ಪಾರ್ಟಿವೇರ್‌ಗಳಾಗಿಯೂ ಬಳಸಬಹುದು. ಕ್ಯಾಶುವಲ್ ಲುಕ್‌ಗೂ ಧರಿಸಬಹುದು ಎನ್ನುತ್ತಾರೆ ಡಿಸೈನರ್ಸ್.
ಟ್ರೆಂಡ್‌ನಲ್ಲಿರುವ ಕ್ವಿರ್ಕಿ ಪ್ಯಾಂಟ್‌ಗಳಿವು
ವೈಬ್ರೆಂಟ್ ಶೇಡ್‌ನವು, ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್‌ನವು, ಕ್ಯಾರೆಕ್ಟರ್ ಪ್ರಿಂಟ್ಸ್, ಹಾರ್ಟ್ ಶೇಪ್ ಹೀಗೆ ನಾನಾ ಬಗೆಯ ಮಲ್ಟಿ ಶೇಡ್‌ನ ಕ್ವಿರ್ಕಿ ಲೆಗ್ಗಿಂಗ್ಸ್ ಇದೀಗ ಟ್ರೆಂಡ್‌ನಲ್ಲಿವೆ. ಅದರಲ್ಲಿ, ಇದೀಗ ಹಾರ್ಟ್ ಶೇಪ್ ಲೆಗ್ಗಿಂಗ್ಸ್ ಆನ್‌ಲೈನ್‌ನಲ್ಲಿ ಹೆಚ್ಚು ಪಾಪುಲರ್ ಆಗಿವೆ. ಇದೀಗ ಚಾಲ್ತಿಯಲ್ಲಿರುವ ಕ್ವಿರ್ಕಿ ಲೆಗ್ಗಿಂಗ್ಸ್‌ನಲ್ಲಿ ಜಿಪ್ ಹಾಗೂ ಬೆಲ್ಟ್ ಕೂಡ ಸೇರಿದೆ.
ಆನ್‌ಲೈನ್‌ನಲ್ಲಿ ಕ್ವಿರ್ಕಿ ಲೆಗ್ಗಿಂಗ್ಸ್ ಹಂಗಾಮ
ಆನ್‌ಲೈನ್ ಶಾಪ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ವೈಬ್ರೆಂಟ್ ಪಾರ್ಟಿವೇರ್ ಕ್ವಿರ್ಕಿ ಲೆಗ್ಗಿಂಗ್ಸ್ ಈಗಾಗಲೇ ಹಂಗಾಮ ಎಬ್ಬಿಸಿವೆ. ಈ ಫ್ಯಾಷನ್ ಕ್ರೇಝ್ ಇದೀಗ ಯಾವ ಮಟ್ಟಿಗೆ ಕಡಿಮೆ ಸಮಯದಲ್ಲಿ ಟ್ರೆಂಡ್ ಲಿಸ್ಟ್ಗೆ ಸೇರಿದೆ ಎಂದರೇ, ಕಾಲೇಜು ಹುಡುಗಿಯರು ಈಗಾಗಲೇ ತಮ್ಮ ವಾರ್ಡ್ರೋಬ್ ಲಿಸ್ಟ್‌ಗೆ ಸೇರಿಸಿಕೊಳ್ಳಲಾರಂಭಿಸಿದ್ದಾರಂತೆ.
ಬ್ಲ್ಯಾಕ್ ಕಲರ್ ಮಿಶ್ರಿತ ವೈಬ್ರೆಂಟ್ ಲೆಗ್ಗಿಂಗ್ಸ್ ಗೆ ಬೇಡಿಕೆ
ಮಲ್ಟಿ ಶೇಡ್ ಲೆಗ್ಗಿಂಗ್ಸ್‌ನಲ್ಲಿ ಇದೀಗ ಬ್ಲ್ಯಾಕ್ ಮಿಕ್ಸ್ ಇರುವ ಪ್ರಿಂಟೆಡ್ ಕ್ವಿರ್ಕ್ ಲೆಗ್ಗಿಂಗ್ಸ್‌ಗೆ ಬೇಡಿಕೆ ಹೆಚ್ಚಾಗಿದೆಯಂತೆ. ಕಾರಣ, ಇವು ಎಲ್ಲಾ ಟಾಪ್‌ಗಳಿಗೂ ಮ್ಯಾಚ್ ಆಗುತ್ತವೆ. ಅಲ್ಲದೇ, ವಿಧ ವಿಧವಾಗಿ ಧರಿಸಬಹುದೆಂಬ ಕಾನ್ಸೆಪ್ಟ್ ಹೊಂದಿರುವುದು ಎನ್ನುತ್ತಾರೆ ಸ್ಟೈಲಿಸ್ಟ್ ರಾಜ್.
ಇದನ್ನೂ ಓದಿ: Monsoon Fashion: ಟೀನೇಜ್ ಹುಡುಗಿಯರ ಮಾನ್ಸೂನ್ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿರುವ 3 ಫ್ಯಾಷನ್ ವೇರ್ಸ್
ನಿಮಗೆ ಗೊತ್ತೇ!
ನಾನಾ ಬ್ರಾಂಡ್‌ಗಳಲ್ಲಿ ಲಭ್ಯವಿರುವ ಈ ಕ್ವಿರ್ಕಿ ಲೆಗ್ಗಿಂಗ್ಸ್ ಸ್ಟ್ರೀಟ್ ಶಾಪ್‌ಗಳಲ್ಲಿ ಕೇವಲ 500 ರೂ.ಗಳಿಂದ 600 ರೂ.ಗಳಿಗೆ ದೊರೆಯುತ್ತವೆ. ದೊಡ್ಡ ಬ್ರಾಂಡ್‌ನಲ್ಲಾದಲ್ಲಿ 10 ಸಾವಿರ ರೂ.ಗಳಿಂದ 90 ಸಾವಿರ ರೂ.ಗಳವರೆಗೂ ಇವುಗಳ ಬೆಲೆ ಇದೆಯಂತೆ, ಎಂದರೇ ನಂಬುತ್ತೀರಾ! ನಂಬಲೇಬೇಕು. ಬಾಲಿವುಡ್ ನಟಿಯರು ಧರಿಸುವುದೇ ಇದಕ್ಕೆ ಸಾಕ್ಷಿ ಎನ್ನುತ್ತಾರೆ ಡಿಸೈನರ್ಸ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)