Site icon Vistara News

Festive Season Shopping: ಶುರುವಾಯ್ತು ಶ್ರಾವಣ ಮಾಸದ ಫೆಸ್ಟೀವ್‌ ಸೀಸನ್‌ ಶಾಪಿಂಗ್‌

Festive Season Shopping

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಎಲ್ಲಿ ನೋಡಿದರೂ ಶ್ರಾವಣ ಮಾಸದ ಫೆಸ್ಟೀವ್‌ ಸೀಸನ್‌ ಶಾಪಿಂಗ್‌ (Festive Season Shopping) ಮೇನಿಯಾ. ಹೌದು, ಮಾಲ್‌ಗಳಲ್ಲಿ ಮಾತ್ರವಲ್ಲ, ಚಿಕ್ಕ ಪುಟ್ಟ ಬೀದಿ ಬದಿಯ ಶಾಪ್‌ಗಳು ಸೇರಿದಂತೆ ಉದ್ಯಾನನಗರಿಯ ಪ್ರಮುಖ ಏರಿಯಾಗಳಲ್ಲೆಲ್ಲಾ ಶಾಪಿಂಗ್‌ ಹಬ್ಬ ಶುರುವಾಗಿದೆ.

“ಶ್ರಾವಣ ಮಾಸದ ಶಾಪಿಂಗ್‌ನಲ್ಲಿ ಕೇವಲ ಎಥ್ನಿಕ್‌ ಡಿಸೈನರ್‌ವೇರ್ಸ್‌ ಹಾಗೂ ಉಡುಗೆ ತೊಡುಗೆ ಹಾಗೂ ರೇಷ್ಮೆ ಸೀರೆ ಖರೀದಿ ಮಾತ್ರವಲ್ಲ, ಚಿನ್ನ-ಬೆಳ್ಳಿ ಆಭರಣಗಳ ಖರೀದಿಯೂ ಹೆಚ್ಚಾಗುತ್ತದೆ. ಇದರೊಂದಿಗೆ ಡೆಕೋರೇಟಿವ್‌ ಐಟಂಗಳನ್ನು ಅಲಂಕಾರಿಕ ವಸ್ತುಗಳನ್ನು ಕೊಳ್ಳುವುದು ಅಧಿಕಗೊಳ್ಳುತ್ತದೆ. ಹಬ್ಬಗಳಿಗೆಂದು ಮನೆಯನ್ನು ಅಲಂಕರಿಸುವ ತೋರಣದಿಂದಿಡಿದು, ವರಮಹಾಲಕ್ಷ್ಮಿ ಹಬ್ಬದ ದೇವಿ ಸಿಂಗಾರದ ಐಟಂಗಳ ಕೊಳ್ಳುವವರು ಹೆಚ್ಚಾಗುತ್ತಾರೆ. ಆನ್‌ಲೈನ್‌ನಲ್ಲಿ ಎಷ್ಟೇ ವ್ಯವಹಾರ ನಡೆಸಿದರೂ, ಹಬ್ಬದ ಸಿಂಗಾರದ ವಸ್ತುಗಳನ್ನು, ಮಧ್ಯಮ ವರ್ಗದವರು ಖುದ್ದು ಅಂಗಡಿಗಳಿಗೆ ತೆರಳಿ ಖರೀದಿಸುತ್ತಾರೆ. ಇಂದಿಗೂ ಈ ಚಿತ್ರಣ ಬದಲಾಗಿಲ್ಲ” ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಪಟ್ರ್ಸ್ ರಮಣಿತಾ. ಅವರ ಪ್ರಕಾರ, ಅಧಿಕ ಮಾಸದಲ್ಲೆ ಶಾಪಿಂಗ್‌ ಶುರವಾಗಿದ್ದು, ಹೀಗೆಯೇ ಮಾಸ ಮುಗಿಯುವವರೆಗೂ ಮುಂದುವರಿಯಲಿದೆ” ಎನ್ನುತ್ತಾರೆ.

ಅಲಂಕಾರಿಕ ವಸ್ತುಗಳ ಖರೀದಿ

ಶ್ರಾವಣ ಮಾಸದಲ್ಲಿ ತಿಂಗಳಾನುಗಟ್ಟಲೇ ಒಂದರ ನಂತರ ಒಂದು ಹಬ್ಬಗಳು ಆಗಮಿಸುವುದರಿಂದ, ಮಾರುಕಟ್ಟೆಯಲ್ಲಿ ಮನೆಯ ಅಲಂಕಾರ ಮಾಡುವ ನಾನಾ ವೈವಿಧ್ಯಮಯ ವಸ್ತುಗಳು ಲಗ್ಗೆ ಇಟ್ಟಿವೆ. ಒಳಾಂಗಣವನ್ನು ಟ್ರೆಡಿಷನಲ್‌ ಲುಕ್‌ ನೀಡುವಂತಹ ಫ್ಲೋರಲ್‌ ತೋರಣಗಳು, ಪಾಟ್‌ಗಳು ಹಾಗೂ ನಾನಾ ಬಗೆಯ ಮೆಟಲ್‌ ಶೋ ಪೀಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ವೈವಿಧ್ಯಮಯ ಪೂಜಾ ಸಾಮಗ್ರಿಗಳು

ಪೂಜಾ ಅಲಂಕಾರ ಮಾಡುವಂತಹ ಸಾಮಗ್ರಿಗಳು ಈ ಬಾರಿ ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಂದಿವೆ. ಅಷ್ಟೇಕೆ! ತಿಂಗಳಾನುಗಟ್ಟಲೇ ಮುಂಚೆಯೇ ಖರೀದಿ ಆರಂಭವಾಗಿದ್ದು, ಕೆಲವು ಶಾಪ್‌ಗಳು ಹೋಮ್‌ ಡಿಲಿವರಿ ಸೌಲಭ್ಯ ಕೂಡ ನೀಡುತ್ತಿವೆ. ಕೃತಕ ಬಾಳೆ ಕಂಬದಿಂದಿಡಿದು, ಲೈಟಿಂಗ್‌ ದೀಪಗಳು, ತಾಂಬೂಲ ನೀಡುವ ಅರಿವಾಣಗಳಿಗೆ ಡಿಮ್ಯಾಂಡ್‌ ಮೊದಲಿಗಿಂತ ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರು.

ಸೀರೆ ಅಂಗಡಿಗಳು ಫುಲ್‌ ರಶ್

ಟ್ರೆಡಿಷನಲ್‌ ಉಡುಗೆ ತೊಡುಗೆಗಳ ಅಂಗಡಿಗಳಿಂದಿಡಿದು ಎಲ್ಲಾ ಬಗೆಯ ಎಥ್ನಿಕ್‌ವೇರ್‌ ಅಂಗಡಿಗಳು ಫುಲ್‌ ರಶ್‌ ಆಗಿವೆ. ನಾರಿಯರಿಂದ ತುಂಬಿ ತುಳುಕುತ್ತಿವೆ. ಇದಕ್ಕೆ ಕಾರಣ ಹಬ್ಬಗಳು ಸಮೀಪಿಸುತ್ತಿರುವುದು ಎನ್ನುತ್ತಾರೆ ಸೇಲ್ಸ್‌ ಮ್ಯಾನೇಜರ್‌.

ತುಂಬಿ ತುಳುಕಾಡುತ್ತಿವೆ ಚಿನ್ನಾಭರಣ ಅಂಗಡಿಗಳು

ದೇವಿಯ ಅಲಂಕಾರಕ್ಕೆಂದು ಹಬ್ಬದ ಸಮಯದಲ್ಲಿ ಚಿನ್ನಾಭರಣಗಳನ್ನು ಕೊಳ್ಳುವವರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಅಂಗಡಿಗಳು ಕೂಡ ನಾನಾ ಆಫರ್‌ಗಳನ್ನು ಪರಿಚಯಿಸಿವೆ ಎನ್ನುತ್ತಾರೆ ಮ್ಯಾನೇಜರ್ಸ್.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Desi Fashion: ಸ್ವಾತಂತ್ರ್ಯ ದಿನಾಚಾರಣೆಯ ಸಂಭ್ರಮಕ್ಕೆ ಸಾಥ್ ನೀಡುವ 3 ದೇಸಿ ಲುಕ್ ನೀಡುವ ಔಟ್‌ಫಿಟ್‌ಗಳು

Exit mobile version