ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹ್ಯಾಂಗಿಂಗ್ ಜುಮ್ಕಾಗಳು ಜ್ಯುವೆಲ್ (Hanging Jumka Fashion) ಪ್ರಿಯ ಯುವತಿಯರ ಕಿವಿಯನ್ನು ಸಿಂಗರಿಸುತ್ತಿವೆ. ಹೌದು. ಉದ್ದನೆಯ ಕಿವಿಯೊಲೆಗಳನ್ನು ಇಷ್ಟಪಡುವ ಹುಡುಗಿಯರ ಜ್ಯುವೆಲ್ ಲಿಸ್ಟ್‌ನಲ್ಲಿ ಸೇರಿವೆ.
ಕಿವಿಯನ್ನು ಹೈಲೈಟ್ ಮಾಡುವ ಹ್ಯಾಂಗಿಂಗ್ ಜುಮ್ಕಾ
“ಇತ್ತೀಚೆಗೆ ಜುಮ್ಕಾಗಳನ್ನು ನಾನಾ ವಿನ್ಯಾಸಗಳನ್ನು ಕಾಣಬಹುದು. ಇವು ಹುಡುಗಿಯರ ಹಾಗೂ ಮಹಿಳೆಯರ ಮನೋಭಿಲಾಷೆಗೆ ತಕ್ಕಂತೆ ಬಿಡುಗಡೆಗೊಳ್ಳುತ್ತಿವೆ. ಅದರಲ್ಲೂ ಸಿನಿಮಾ ಹಾಗೂ ಸೀರಿಯಲ್ ನಟಿಯರು ಧರಿಸಿದ ನಂತರ ಸಾಮಾನ್ಯ ಯುವತಿಯರು ಇಷ್ಟಪಡುವುದು ಸಾಮಾನ್ಯವಾಗತೊಡಗಿದೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಉದ್ದನೆಯ ಹ್ಯಾಂಗಿಂಗ್ ಜುಮ್ಕಾಗಳು ಬಿಡುಗಡೆಗೊಂಡಿವೆ. ಕೆಲವಂತೂ ಇನ್ನೇನೂ ಭುಜವನ್ನು ಮುಟ್ಟುತ್ತವೆಯೇನೋ ಎಂಬಂತೆ ಲಾಂಗ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಧರಿಸಿದಾಗ ಕಿವಿಗಳನ್ನು ಹೈಲೈಟ್ ಮಾಡುತ್ತವೆ. ಎಥ್ನಿಕ್ ಲುಕ್‌ಗೆ ಸಾಥ್ ನೀಡುತ್ತವೆ” ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಂಜಿನಿ. ಅವರ ಪ್ರಕಾರ, ಲಾಂಗ್ ಲೆಂತ್‌ನ ಜುಮ್ಕಾಗಳು ಈ ಸೀಸನ್‌ನಲ್ಲಿ ಹುಡುಗಿಯರ ಫೇವರೇಟ್ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಡಿಸೈನ್ಸ್
ಲಾಂಗ್ ಲೆಂಥ್‌ನ ಸಿಂಗಲ್ ಜುಮ್ಕಾ, ಒಂದೆರೆಡು ಚೈನ್‌ಗೆ ಹೊಂದಿಕೊಂಡಂತಿರುವ ಮಲ್ಟಿಪಲ್ ಜುಮ್ಕಾ, ಸ್ಟೆಪ್ ಬೈ ಸ್ಟೆಪ್ ಚೈನ್‌ಗೆ ಅಂಟಿಕೊಂಡಂತಿರುವ ಜುಮ್ಕಾ, ಪುಟ್ಟ ಪುಟ್ಟ ಜುಮಕಿಗಳನ್ನು ಹೊಂದಿರುವ ಚೈನ್ ಜುಮ್ಕಾಗಳು ಹೆಚ್ಚು ಚಾಲ್ತಿಯಲ್ಲಿವೆ. ಬ್ಲ್ಯಾಕ್ ಹಾಗೂ ವೈಟ್ ಮೆಟಲ್‌ನಲ್ಲಿ ಇವು ಅತಿ ಹೆಚ್ಚು ಡಿಸೈನ್‌ನಲ್ಲಿ ದೊರೆಯುತ್ತಿವೆ. ಬೆಲೆಯೂ ಕೂಡ ಕೈಗೆಟಕುವಂತಿರುತ್ತವೆ. ಕಡಿಮೆ ಎಂದರೂ 50 ರೂ.ಗಳಿಂದ ನೂರು ರೂ.ಗಳಲ್ಲಿ ಇವು ದೊರೆಯುತ್ತವೆ. ಚಿಕ್ಕ ಸೈಝ್ ಹಾಗೂ ದೊಡ್ಡ ಜುಮ್ಕಾ ಸೈಝ್ ಜುಮ್ಕಾ ಬೆಲೆ ಅವುಗಳ ಡಿಸೈನ್‌ಗೆ ತಕ್ಕಂತೆ ನಿಗಧಿಯಾಗಿರುತ್ತವೆ ಎನ್ನುತ್ತಾರೆ ಮಾರಾಟಗಾರರು.
ದೇಸಿ ಔಟ್‌ಫಿಟ್ಸ್‌ಗೆ ಬೆಸ್ಟ್ ಮ್ಯಾಚಿಂಗ್
ಎಥ್ನಿಕ್ ಹಾಗೂ ದೇಸಿ ಉಡುಪುಗಳಿಗೆ ಇವು ಹೇಳಿ ಮಾಡಿಸಿದಂತಿರುತ್ತವೆ. ಎಲ್ಲಾ ಬಗೆಯ ಸಲ್ವಾರ್ ಸೂಟ್‌ಗೆ ಹಾಗೂ ಕುರ್ತಾಗಳಿಗೆ ಮ್ಯಾಚ್ ಆಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಎಲ್ಲೆಲ್ಲೆ ಲಭ್ಯ?
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರಂ 8 ನೇ ಕ್ರಾಸ್ ಸುತ್ತಮುತ್ತಾ, ಜಯನಗರ ಬಿಡಿಎ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ಮೆಜೆಸ್ಟಿಕ್ ಸುತ್ತಮುತ್ತಲಿನ ಶಾಪ್‌ಗಳಲ್ಲಿ ಇವು ದೊರಕುತ್ತವೆ ಎಂದು ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು ಮಾಲ್‌ಗಳಲ್ಲಿ ದೊರಕುವ ಜುಮ್ಕಾಗಳು ಕೊಂಚ ದುಬಾರಿ ಬೆಲೆ ಹೊಂದಿರುತ್ತವೆ ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Saree Fashion: ಬಂತು ಬಣ್ಣ ಬಣ್ಣದ ಮಲ್ಟಿ ಕಲರ್ ಸಿಕ್ವೀನ್ಸ್ ಸೀರೆ ಫ್ಯಾಷನ್