Hanging Jumka Fashion: ಯುವತಿಯರ ಕಿವಿ ಅಲಂಕರಿಸುತ್ತಿರುವ ಹ್ಯಾಂಗಿಂಗ್‌ ಜುಮ್ಕಾ - Vistara News

ಫ್ಯಾಷನ್

Hanging Jumka Fashion: ಯುವತಿಯರ ಕಿವಿ ಅಲಂಕರಿಸುತ್ತಿರುವ ಹ್ಯಾಂಗಿಂಗ್‌ ಜುಮ್ಕಾ

ಇದೀಗ ಯುವತಿಯರ ಕಿವಿಗಳನ್ನು ಹ್ಯಾಂಗಿಂಗ್‌ ಜುಮ್ಕಾಗಳು (Hanging Jumka Fashion) ಅಲಂಕರಿಸುತ್ತಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ. ಯಾರ್ಯಾರು ಇವನ್ನು ಧರಿಸಬಹುದು? ಎಲ್ಲಿ ದೊರೆಯುತ್ತವೆ? ಎಂಬುದರ ಬಗ್ಗೆ ಸ್ಟೈಲಿಂಗ್‌ ಎಕ್ಸ್ಪಟ್ರ್ಸ್ ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Hanging Jumka Fashion
ಚಿತ್ರಗಳು: ಸಾಯಿ ಮಂಜ್ರೆಕರ್‌, ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹ್ಯಾಂಗಿಂಗ್‌ ಜುಮ್ಕಾಗಳು ಜ್ಯುವೆಲ್‌ (Hanging Jumka Fashion) ಪ್ರಿಯ ಯುವತಿಯರ ಕಿವಿಯನ್ನು ಸಿಂಗರಿಸುತ್ತಿವೆ. ಹೌದು. ಉದ್ದನೆಯ ಕಿವಿಯೊಲೆಗಳನ್ನು ಇಷ್ಟಪಡುವ ಹುಡುಗಿಯರ ಜ್ಯುವೆಲ್‌ ಲಿಸ್ಟ್‌ನಲ್ಲಿ ಸೇರಿವೆ.

A hanging jhumka that highlights the ears

ಕಿವಿಯನ್ನು ಹೈಲೈಟ್‌ ಮಾಡುವ ಹ್ಯಾಂಗಿಂಗ್‌ ಜುಮ್ಕಾ

“ಇತ್ತೀಚೆಗೆ ಜುಮ್ಕಾಗಳನ್ನು ನಾನಾ ವಿನ್ಯಾಸಗಳನ್ನು ಕಾಣಬಹುದು. ಇವು ಹುಡುಗಿಯರ ಹಾಗೂ ಮಹಿಳೆಯರ ಮನೋಭಿಲಾಷೆಗೆ ತಕ್ಕಂತೆ ಬಿಡುಗಡೆಗೊಳ್ಳುತ್ತಿವೆ. ಅದರಲ್ಲೂ ಸಿನಿಮಾ ಹಾಗೂ ಸೀರಿಯಲ್‌ ನಟಿಯರು ಧರಿಸಿದ ನಂತರ ಸಾಮಾನ್ಯ ಯುವತಿಯರು ಇಷ್ಟಪಡುವುದು ಸಾಮಾನ್ಯವಾಗತೊಡಗಿದೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಉದ್ದನೆಯ ಹ್ಯಾಂಗಿಂಗ್‌ ಜುಮ್ಕಾಗಳು ಬಿಡುಗಡೆಗೊಂಡಿವೆ. ಕೆಲವಂತೂ ಇನ್ನೇನೂ ಭುಜವನ್ನು ಮುಟ್ಟುತ್ತವೆಯೇನೋ ಎಂಬಂತೆ ಲಾಂಗ್‌ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಧರಿಸಿದಾಗ ಕಿವಿಗಳನ್ನು ಹೈಲೈಟ್‌ ಮಾಡುತ್ತವೆ. ಎಥ್ನಿಕ್‌ ಲುಕ್‌ಗೆ ಸಾಥ್‌ ನೀಡುತ್ತವೆ” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ರಂಜಿನಿ. ಅವರ ಪ್ರಕಾರ, ಲಾಂಗ್‌ ಲೆಂತ್‌ನ ಜುಮ್ಕಾಗಳು ಈ ಸೀಸನ್‌ನಲ್ಲಿ ಹುಡುಗಿಯರ ಫೇವರೇಟ್‌ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ.

Designs that are on trend

ಟ್ರೆಂಡ್‌ನಲ್ಲಿರುವ ಡಿಸೈನ್ಸ್

ಲಾಂಗ್‌ ಲೆಂಥ್‌ನ ಸಿಂಗಲ್‌ ಜುಮ್ಕಾ, ಒಂದೆರೆಡು ಚೈನ್‌ಗೆ ಹೊಂದಿಕೊಂಡಂತಿರುವ ಮಲ್ಟಿಪಲ್‌ ಜುಮ್ಕಾ, ಸ್ಟೆಪ್‌ ಬೈ ಸ್ಟೆಪ್‌ ಚೈನ್‌ಗೆ ಅಂಟಿಕೊಂಡಂತಿರುವ ಜುಮ್ಕಾ, ಪುಟ್ಟ ಪುಟ್ಟ ಜುಮಕಿಗಳನ್ನು ಹೊಂದಿರುವ ಚೈನ್‌ ಜುಮ್ಕಾಗಳು ಹೆಚ್ಚು ಚಾಲ್ತಿಯಲ್ಲಿವೆ. ಬ್ಲ್ಯಾಕ್‌ ಹಾಗೂ ವೈಟ್‌ ಮೆಟಲ್‌ನಲ್ಲಿ ಇವು ಅತಿ ಹೆಚ್ಚು ಡಿಸೈನ್‌ನಲ್ಲಿ ದೊರೆಯುತ್ತಿವೆ. ಬೆಲೆಯೂ ಕೂಡ ಕೈಗೆಟಕುವಂತಿರುತ್ತವೆ. ಕಡಿಮೆ ಎಂದರೂ 50 ರೂ.ಗಳಿಂದ ನೂರು ರೂ.ಗಳಲ್ಲಿ ಇವು ದೊರೆಯುತ್ತವೆ. ಚಿಕ್ಕ ಸೈಝ್‌ ಹಾಗೂ ದೊಡ್ಡ ಜುಮ್ಕಾ ಸೈಝ್‌ ಜುಮ್ಕಾ ಬೆಲೆ ಅವುಗಳ ಡಿಸೈನ್‌ಗೆ ತಕ್ಕಂತೆ ನಿಗಧಿಯಾಗಿರುತ್ತವೆ ಎನ್ನುತ್ತಾರೆ ಮಾರಾಟಗಾರರು.

Best matching for desi outfits

ದೇಸಿ ಔಟ್‌ಫಿಟ್ಸ್‌ಗೆ ಬೆಸ್ಟ್‌ ಮ್ಯಾಚಿಂಗ್‌

ಎಥ್ನಿಕ್‌ ಹಾಗೂ ದೇಸಿ ಉಡುಪುಗಳಿಗೆ ಇವು ಹೇಳಿ ಮಾಡಿಸಿದಂತಿರುತ್ತವೆ. ಎಲ್ಲಾ ಬಗೆಯ ಸಲ್ವಾರ್ ಸೂಟ್‌ಗೆ ಹಾಗೂ ಕುರ್ತಾಗಳಿಗೆ ಮ್ಯಾಚ್‌ ಆಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

ಎಲ್ಲೆಲ್ಲೆ ಲಭ್ಯ?

ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌, ಮಲ್ಲೇಶ್ವರಂ 8 ನೇ ಕ್ರಾಸ್‌ ಸುತ್ತಮುತ್ತಾ, ಜಯನಗರ ಬಿಡಿಎ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ಮೆಜೆಸ್ಟಿಕ್‌ ಸುತ್ತಮುತ್ತಲಿನ ಶಾಪ್‌ಗಳಲ್ಲಿ ಇವು ದೊರಕುತ್ತವೆ ಎಂದು ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು ಮಾಲ್‌ಗಳಲ್ಲಿ ದೊರಕುವ ಜುಮ್ಕಾಗಳು ಕೊಂಚ ದುಬಾರಿ ಬೆಲೆ ಹೊಂದಿರುತ್ತವೆ ಎನ್ನುತ್ತಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saree Fashion: ಬಂತು ಬಣ್ಣ ಬಣ್ಣದ ಮಲ್ಟಿ ಕಲರ್‌ ಸಿಕ್ವೀನ್ಸ್ ಸೀರೆ ಫ್ಯಾಷನ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Star Gown Fashion: ಕೇಪ್‌ ಗೌನ್‌ನಲ್ಲಿ ತ್ರಿಲೋಕ ಸುಂದರಿಯಂತೆ ಕಂಡ ನಟಿ ನಮ್ರತಾ ಗೌಡ!

ಸ್ವರೋಸ್ಕಿ ಹಾಗೂ ರೈನ್‌ಸ್ಟೋನ್‌ಗಳಿಂದ ಡಿಸೈನ್‌ ಮಾಡಿದ ಮಿರ ಮಿನುಗುವ ಡಿಸೈನರ್‌ ವಾಟರ್‌ ಫಾಲ್‌ ಸ್ಲೀವ್‌ನ ಕೇಪ್‌ ಗೌನ್‌ನಲ್ಲಿ (Star Gown Fashion) ನಟಿ ನಮ್ರತಾ ಗೌಡ ತ್ರಿಲೋಕ ಸುಂದರಿಯಂತೆ ಕಾಣಿಸಿಕೊಂಡಿದ್ದಾರೆ. ಏನಿದು ಕೇಪ್‌ ಗೌನ್‌? ಇದರ ವಿಶೇಷತೆಯೇನು? ಎಂಬುದರ ಬಗ್ಗೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ವಿವರಿಸಿದ್ದಾರೆ.

VISTARANEWS.COM


on

Star Gown Fashion
ಚಿತ್ರಗಳು: ನಮ್ರತಾ ಗೌಡ, ನಟಿ, ಬಿಗ್‌ಬಾಸ್‌ ಸ್ಪರ್ಧಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವರೋಸ್ಕಿ ಹಾಗೂ ರೈನ್‌ಸ್ಟೋನ್‌ನಿಂದ ಡಿಸೈನ್‌ ಮಾಡಿರುವ ಮಿರ ಮಿರ ಮಿನುಗುವ ವಾಟರ್‌ ಫಾಲ್‌ ಸ್ಲೀವ್‌ ಹೊಂದಿರುವ ಡಿಸೈನರ್‌ ಕೇಪ್‌ ಗೌನ್‌ನಲ್ಲಿ (Star Gown Fashion) ನಟಿ ನಮ್ರತಾ ಗೌಡ ತ್ರಿಲೋಕ ಸುಂದರಿಯಂತೆ ಕಂಡಿದ್ದಾರೆ. “ನಮ್ರತಾ ಗೌಡ ಫ್ಯಾಷೆನಬಲ್‌ ನಟಿ. ಬಿಗ್‌ ಬಾಸ್‌ನಲ್ಲಿರುವಾಗಲೂ ಅಷ್ಟೇ, ಸೀರಿಯಲ್‌ನಲ್ಲಿ ನಟಿಸುವಾಗಲೂ ಅಷ್ಟೇ! ಎಲ್ಲವನ್ನು ಅಚ್ಚುಕಟ್ಟಾಗಿ ಬ್ಯಾಲೆನ್ಸ್ ಮಾಡುತ್ತಿದ್ದರು. ಇನ್ನು, ಡ್ರೆಸ್ಸಿಂಗ್‌ ಸೆನ್ಸ್ ಕೂಡ ನೋಡಲು ಆಕರ್ಷಕವಾಗಿ ಮಾಡುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಸಮಯಕ್ಕೆ ತಕ್ಕಂತೆ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡುವುದು ಹಾಗೂ ಧರಿಸುವುದು ಕೂಡ ಅವರು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಇನ್ನು, ಟ್ರಾವೆಲ್‌ ಟೈಮ್‌ನಲ್ಲಿ ಅವರು ಬಿಕಿನಿಯಲ್ಲಿ ಕಾಣಿಸಿಕೊಂಡದ್ದು, ದೊಡ್ಡ ಸುದ್ದಿಯಾಗಿತ್ತು ಕೂಡ. ಆ ಮಟ್ಟಿಗೆ ಅವರು ಧರಿಸುವ ಒಂದೊಂದು ಔಟ್‌ಫಿಟ್‌ಗಳು, ಸೋಷಿಯಲ್‌ ಮೀಡಿಯಾ ಅಭಿಮಾನಿಗಳನ್ನು ಸೆಳೆಯುತ್ತಿರುತ್ತವೆʼʼ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Star Gown Fashion

ಕೇಪ್‌ ಗೌನ್‌ನಲ್ಲಿ ನಮ್ರತಾ ಲುಕ್‌

ಇನ್ನು, ನಮ್ರತಾ ಗೌಡ ಧರಿಸಿರುವ ಹಾಲಿವುಡ್‌ ಶೈಲಿಯ ಕೇಪ್‌ ಗೌನ್‌ ಡಿಸೈನರ್‌ವೇರ್‌ ಬಗ್ಗೆ ಹೇಳುವುದಾದಲ್ಲಿ, ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿಕೃಷ್ಣ ಅವರನ್ನೇ ಕೇಳಬೇಕು. ಸದಾ ಒಂದಲ್ಲ ಒಂದು ಡಿಸೈನರ್‌ವೇರನ್ನು ನಟಿಯರಿಗಾಗಿ ಆಕರ್ಷಕವಾಗಿ ಸಿದ್ದಪಡಿಸುವ ಅವರು ನಟಿಯರ ಪರ್ಸನಾಲಿಟಿಗೆ ತಕ್ಕಂತೆ ಡಿಸೈನರ್‌ವೇರ್‌ಗಳನ್ನು ರೂಪಿಸುತ್ತಾರಂತೆ. ಅವರ ಅಭಿಲಾಷೆಯನ್ನು ಗಮನದಲ್ಲಿಟ್ಟುಕೊಳ್ಳುತ್ತಾರಂತೆ. ಇದು ನಟಿಯರ ಮತ್ತಷ್ಟು ಸುಂದರವಾಗಿಸುತ್ತದಂತೆ.

ಮಿರ ಮಿನುಗುವ ಸ್ವರೋಸ್ಕಿ ಡಿಸೈನರ್‌ವೇರ್‌

“ಸ್ವರೋಸ್ಕಿ ಸ್ಟೋನ್ಸ್‌ನಿಂದ ಈ ಕೇಪ್‌ ಗೌನ್‌ ಸಿದ್ಧಪಡಿಸಲು, ಸರಿಸುಮಾರು 150 ಗಂಟೆಗಳ ಕಾಲ ಹಿಡಿಯಿತಂತೆ. ಬಾಲಿವುಡ್‌ ನಟಿ ನೋರಾ ಪತೇಹಿ ಕೂಡ ಈ ರೀತಿಯ ಶೈಲಿಯ ಗೌನ್‌ ಹೆಚ್ಚಾಗಿ ಧರಿಸುವುದನ್ನು ನಾವು ಕಾಣಬಹುದುʼʼ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ. ಅವರು ಹೇಳುವಂತೆ, ಸ್ಕಿನ್‌ ಡೀಪ್‌ ಕಲರ್‌ನ ಸ್ಟಾಕಿನ್ಸ್ ಫ್ಯಾಬ್ರಿಕ್‌ ಶೈಲಿಯ ಈ ಮೆಟಿರೀಯಲ್‌ನಿಂದ ಈ ಬಾಡಿಕಾನ್‌ ಕೇಪ್‌ ಗೌನ್‌ ಡಿಸೈನ್‌ ಮಾಡಲಾಗಿದೆ. ಇದನ್ನು ಸೀ ಥ್ರೂ ಗೌನ್‌ ಕೂಡ ಎನ್ನಲಾಗುತ್ತದೆ. ಇನ್ನರ್‌ ಸ್ಕರ್ಟ್ ಹಾಗೂ ಮೇಲ್ಭಾಗದಲ್ಲಿ ಮಾತ್ರ ಕವರ್‌ ಮಾಡಲಾಗಿದೆ. ಇನ್ನುಳಿದಂತೆ ಎಲ್ಲವೂ ಟ್ರಾನ್ಸಪರೆಂಟ್‌ ಆಗಿದೆ ಎಂದು ವಿವರಿಸುತ್ತಾರೆ.

Star Gown Fashion

ವಾಟರ್‌ ಫಾಲ್‌ ಸ್ಲೀವ್ಸ್

ಇದೀಗ ಟ್ರೆಂಡ್‌ನಲ್ಲಿರುವ ವಾಟರ್ ಫಾಲ್‌ ಸ್ಲೀವ್‌ಗಳನ್ನು ಈ ಕೇಪ್‌ ಗೌನ್‌ಗೆ ವಿನ್ಯಾಸ ಮಾಡಲಾಗಿದೆ. ಈ ಶೈಲಿಯ ಡಿಸೈನ್ಸ್ ನಟಿಯರನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Continue Reading

ಫ್ಯಾಷನ್

Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ (Star Holiday Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಅವಳಿ-ಜವಳಿ ಮಕ್ಕಳ ಆರೈಕೆಯಲ್ಲೆ ಮುಳುಗಿ ಹೋಗಿದ್ದ, ಅಮೂಲ್ಯ ಇದೀಗ ಒಂದಿಷ್ಟು ವೆಸ್ಟರ್ನ್ ಡ್ರೆಸ್‌ಗಳಲ್ಲಿ ಫ್ಯಾಷೆನಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫ್ಯಾಷನ್‌ ಸ್ಟೇಟ್‌ಮೆಂಟ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Holiday Fashion
ಚಿತ್ರಗಳು: ಅಮೂಲ್ಯ, ಸ್ಯಾಂಡಲ್‌ವುಡ್‌ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ, ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ (Star Holiday Fashion) ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ತಮ್ಮ ಅವಳಿ-ಜವಳಿ ಮಕ್ಕಳ ಆರೈಕೆಯಲ್ಲೆ ಮುಳುಗಿ ಹೋಗಿದ್ದ ಅಮೂಲ್ಯ, ಸಾಕಷ್ಟು ಗ್ಯಾಪ್‌ ನಂತರ ಒಂದಿಷ್ಟು ವೆಸ್ಟರ್ನ್ ಡ್ರೆಸ್‌ಗಳಲ್ಲಿ ಫ್ಯಾಷೆನಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ, ಪತಿ ಜಗದೀಶ್‌ರೊಂದಿಗೆ ಕಳೆದ ಹಾಲಿ ಡೇ ಲುಕ್‌ನ ಫೋಟೋಗಳಲ್ಲಿ ಬಿಂದಾಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಅಮೂಲ್ಯ ಫ್ಯಾಷನ್‌ ಸೆನ್ಸ್

ನಟಿ ಅಮೂಲ್ಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಮದುವೆಯಾದ ನಂತರ ಕೆಲಕಾಲ ಮನೆ-ಪತಿ-ಮಕ್ಕಳು ಎಂಬುದರಲ್ಲೆ ಬ್ಯುಸಿಯಾಗಿದ್ದರು. ಈ ಮಧ್ಯೆ ಕೇವಲ ಎಥ್ನಿಕ್‌ ಫೋಟೋಗಳಲ್ಲೆ ಕಾಣಿಸಿಕೊಳ್ಳುತ್ತಿದ್ದರು. ಹಬ್ಬದ ಸಮಯದಲ್ಲಿ ರೇಷ್ಮೆ ಸೀರೆಗಳನ್ನು ಧರಿಸಿ, ಪತಿ ಇಲ್ಲವೇ ಮಕ್ಕಳೊಂದಿಗೆ ಫೋಟೋಶೂಟ್‌ನಲ್ಲಿ ಪಾಲ್ಗೊಳ್ಳುತ್ತಿದ್ದರು. ಇದೀಗ ಪತಿಯೊಂದಿಗೆ ಹಾಲಿ ಡೇ ಯಲ್ಲಿ ಸಮ್ಮರ್‌ ಸೀಸನ್‌ನ ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಫ್ಯಾಷನ್‌ ಸ್ಟೇಟ್‌ಮೆಂಟ್‌ ಅವರನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುವ ಫ್ಯಾಷನ್‌ ವಿಶ್ಲೇಷಕರು ಹೇಳುವಂತೆ, ಅಮೂಲ್ಯಗೆ ಎಲ್ಲಾ ಶೈಲಿಯ ಉಡುಗೆಗಳು ಹೊಂದುತ್ತವೆ. ಹಾಗಾಗಿ ಅವರು ಸೀರೆಯಲ್ಲೂ ಅಂದವಾಗಿ ಕಾಣಿಸುತ್ತಾರೆ. ವೆಸ್ಟರ್ನ್ ಔಟ್‌ಫಿಟ್‌ನಲ್ಲೂ ಸುಂದರವಾಗಿ ಕಾಣಿಸುತ್ತಾರೆ. ಇದು ಅವರ ಪ್ಲಸ್‌ ಪಾಯಿಂಟ್‌ ಎಂದು ಹೇಳುತ್ತಾರೆ.

Star Holiday Fashion

ಅಮೂಲ್ಯ ಹಾಲಿ ಡೇ ಪ್ರಿಂಟ್‌ ಮ್ಯಾಕ್ಸಿ ಡ್ರೆಸ್ ಡ್ರೆಸ್‌

ಕೆಲವು ದಿನಗಳ ಹಿಂದೆ ಅಮೂಲ್ಯ ಧರಿಸಿದ್ದ ಹಾಲಿ ಡೇ ಪ್ರಿಂಟ್ಸ್ ಇರುವಂತಹ ಲೆನಿನ್‌ ಬ್ಲೆಂಟ್‌ ಆಗಿರುವಂತಹ ಫ್ಯಾಬ್ರಿಕ್‌ನ ಸ್ವಿಂಗ್‌ ಸ್ಪೆಗೆಟಿ ಮ್ಯಾಕ್ಸಿ ಸ್ಟ್ರಾಪ್‌ ಡ್ರೆಸ್‌ ಕೂಡ ಅವರನ್ನು ಆಕರ್ಷಕವಾಗಿ ಬಿಂಬಿಸಿತ್ತು. ಇಡೀ ಡ್ರೆಸ್‌ನಲ್ಲಿದ್ದ ನಾನಾ ಬೀಚ್‌ನ ಚಿತ್ರಗಳು ಸಮ್ಮರ್‌ ಸೀಸನನ್ನು ಹೈಲೈಟ್‌ ಮಾಡಿತ್ತು.

ಕ್ರ್ಯೂಸ್‌ನಲ್ಲಿ ವೈಟ್‌ ಟೀ ಶರ್ಟ್ ಡ್ರೆಸ್‌

ಇನ್ನೊಂದು ಚಿತ್ರದಲ್ಲಿ ಕಾಣಿಸಿಕೊಂಡಿರುವ ಅಮೂಲ್ಯ, ಮಧ್ಯೆ ಮಧ್ಯೆ ಮಿನುಗುವ ವೈಟ್‌ ಸ್ಟೋನ್‌ ಇರುವಂತಹ ಶ್ವೇತ ವರ್ಣದ ಟೀ ಶರ್ಟ್ ಡ್ರೆಸ್‌ ಧರಿಸಿದ್ದಾರೆ. ಮಂಡಿಯಿಂದ ಮೇಲಿರುವ ಈ ಉಡುಪಿಗೆ, ಲೆದರ್‌ ಸ್ಲಿಂಗ್‌ ಬ್ಯಾಗ್‌ ಮ್ಯಾಚ್‌ ಮಾಡಿರುವುದು ಅವರಿಗೆ ಕಂಪ್ಲೀಟ್‌ ಹಾಲಿ ಡೇ ಲುಕ್‌ ನೀಡಿದೆ.

ಇದನ್ನೂ ಓದಿ: Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

ನೋ ಮೇಕಪ್‌ ಮಂತ್ರ

ಈ ಹಾಲಿ ಡೇ ಲುಕ್‌ಗೆ ಅಮೂಲ್ಯ ಮಿನಿಮಲ್‌ ಮೇಕಪ್‌ ಮಾಡಿದ್ದು, ಮತ್ತೊಂದು ಔಟ್‌ಫಿಟ್‌ನಲ್ಲಿ ಮಾತ್ರ ನೋ ಮೇಕಪ್‌ಗೆ ಸೈ ಎಂದಿದ್ದಾರೆ. ಇದು ಅವರನ್ನು ನ್ಯಾಚುರಲ್‌ ಆಗಿ ಬಿಂಬಿಸಿದೆ. ಆಕ್ಸೆಸರೀಸ್‌ ಕೂಡ ಧರಿಸಿಲ್ಲ, ಇದು ಅವರಿಗೆ ವೆಸ್ಟರ್ನ್ ಟಚ್‌ ನೀಡಿದೆ. ಬೀಚ್‌ ಹಾಗೂ ಕ್ರ್ಯೂಸ್‌ ಟೂರ್‌ನ ಸಂದರ್ಭಕ್ಕೆ ಹೊಂದುವ ಅಮೂಲ್ಯ ಅವರ ಈ ಲುಕ್‌, ಹಾಲಿ ಡೇಯ ಪರ್ಫೆಕ್ಟ್ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Back Button Saree Blouse: ಮತ್ತೆ ಬಂದಿದೆ ರೆಟ್ರೊ ಸ್ಟೈಲ್‌ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌!

ಒಂದೆರೆಡು ದಶಕಗಳ ಹಿಂದೆ ಟ್ರೆಂಡಿಯಾಗಿದ್ದ ರೆಟ್ರೋ ಸ್ಟೈಲ್‌ನ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳು (Back Button Saree Blouse) ಇದೀಗ ಮತ್ತೊಮ್ಮೆ ಫ್ಯಾಷನ್‌ನಲ್ಲಿ ವೆರೈಟಿ ಡಿಸೈನ್‌ನಲ್ಲಿ ಮರಳಿವೆ. ಸೀರೆಪ್ರಿಯ ಮಹಿಳೆಯರನ್ನು ಸಿಂಗರಿಸಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ? ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ ಬ್ಲೌಸ್‌ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Back button saree blouse
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಂದೆರೆಡು ದಶಕಗಳ ಹಿಂದೆ ಸಖತ್‌ ಟ್ರೆಂಡಿಯಾಗಿದ್ದ, ರೆಟ್ರೋ ಸ್ಟೈಲ್‌ನ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳು (Back Button Saree Blouse) ಇದೀಗ ಮತ್ತೊಮ್ಮೆ ವೆರೈಟಿ ಡಿಸೈನ್‌ನಲ್ಲಿ ತಮ್ಮ ಜಾದೂ ಮಾಡಿವೆ. ಸೀರೆ ಪ್ರಿಯ ಮಾನಿನಿಯರನ್ನು ಸಿಂಗರಿಸಲಾರಂಭಿಸಿವೆ.

Back button saree blouse

ಬ್ಯಾಕ್‌ ಬಟನ್ ಬ್ಲೌಸ್‌ ಪುರಾಣ

“ಬಹುತೇಕ ಸೀರೆ ಬ್ಲೌಸ್‌ಗಳಿಗೆ ಫ್ರಂಟ್‌ ಬಟನ್‌ ಡಿಸೈನ್‌ ಇರುವುದು ಸಾಮಾನ್ಯ. ಎಲ್ಲರಿಗೂ ತಿಳಿದಿರುವಂತೆ ಈ ಡಿಸೈನ್‌ ಮೊದಲಿನಿಂದಲೂ ಎವರ್‌ಗ್ರೀನ್‌ ವಿನ್ಯಾಸದಲ್ಲಿ ಸೇರಿ ಹೋಗಿದೆ. ವಯಸ್ಸಿನ ಪರಿಮಿತಿಯಿಲ್ಲದೇ ಎಲ್ಲರೂ ಈ ಡಿಸೈನ್‌ನ ಸೀರೆಯನ್ನು ಉಡುವುದು ಸಾಮಾನ್ಯವಾಗಿದೆ. ಇನ್ನು, ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ ವಿಷಯಕ್ಕೆ ಬಂದಲ್ಲಿ, ಒಂದೆರೆಡು ದಶಕಗಳ ಹಿಂದೆ ಈ ಫ್ಯಾಷನ್‌ ಬಂತು. ಈ ಫ್ಯಾಷನ್‌ ಯಾವ ಮಟ್ಟಿಗೆ ಹಿಟ್‌ ಆಯಿತೆಂದರೇ, ಅಂದು ಈ ಶೈಲಿಯ ಸೀರೆ ಬ್ಲೌಸ್‌ ಧರಿಸಿದವರನ್ನು ಮಾಡರ್ನ್ ಹುಡುಗಿಯರು ಎಂದು ಗುರುತಿಸಲಾಗುತ್ತಿತ್ತು. ಆ ಮಟ್ಟಿಗೆ ಈ ರೀತಿಯ ಬ್ಲೌಸ್‌ಗಳು ಜನಪ್ರಿಯಗೊಂಡಿದ್ದವು” ಎನ್ನುತ್ತಾರೆ ಬ್ಲೌಸ್‌ ಡಿಸೈನರ್ಸ್ ರಾಘವ್‌.

Back button saree blouse

ಟ್ರೆಂಡ್‌ನಲ್ಲಿರುವ ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌

ಅಂದಹಾಗೆ, ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ಗಳಲ್ಲಿ ನಾನಾ ಬಗೆಯವು ಟ್ರೆಂಡ್‌ನಲ್ಲಿವೆ. ಅವುಗಳಲ್ಲಿ ಡೀಪ್‌ ಹಾರ್ಟ್ ಶೇಪ್‌ ಕಟ್‌ ಇರುವಂತಹ ಡಿಸೈನ್‌ನವು, ಹೈ ನೆಕ್‌ ಬಟನ್‌ ಬ್ಲೌಸ್‌, ಡೀಪ್‌ ನೆಕ್‌ ಬ್ಯಾಕ್‌ ಬಟನ್‌ ಬ್ಲೌಸ್‌, ಟ್ಯಾಸೆಲ್ಸ್ & ಬಟನ್‌ ಬ್ಯಾಕ್‌ ಲೆಸ್‌ ಬ್ಲೌಸ್, ವೈಡ್‌ ಕಟ್ ಬಟನ್‌ ಬ್ಲೌಸ್‌, ಟೈಯಿಂಗ್‌ ಬ್ಯಾಕ್‌ ಬಟನ್‌ ಬ್ಲೌಸ್‌, ಕ್ರಾಪ್‌ ಟಾಪ್‌ ಶೈಲಿಯ ಬ್ಯಾಕ್‌ ಬಟನ್‌ ಬ್ಲೌಸ್‌ ಸೇರಿದಂತೆ ನಾನಾ ವಿನ್ಯಾಸದವು ಮಾನಿನಿಯರನ್ನು ಸಿಂಗರಿಸಿವೆ. ಆಯಾ, ಸೀರೆಯ ಫ್ಯಾಬ್ರಿಕ್‌ನ ಆಧಾರದ ಮೇಲೆ ಬ್ಲೌಸ್‌ ಡಿಸೈನರ್‌ಗಳು ಇಂತಹ ವಿನ್ಯಾಸವನ್ನು ನಿರ್ಧರಿಸುತ್ತಿದ್ದಾರೆ. ಅದರಲ್ಲೂ ಯಂಗ್‌ ಹೆಣ್ಣುಮಕ್ಕಳು ಈ ವಿನ್ಯಾಸದ ಸೀರೆ ಬ್ಲೌಸ್‌ಗಳನ್ನು ಅತಿ ಹೆಚ್ಚು ಧರಿಸುತ್ತಿದ್ದಾರೆ ಎನ್ನುತ್ತಾರೆ ಬ್ಲೌಸ್‌ ಡಿಸೈನರ್‌ ದಿಯಾ ಹಾಗೂ ರಕ್ಷಾ. ಅವರ ಪ್ರಕಾರ, ಬ್ಯಾಕ್‌ ಬಟನ್‌ ಬ್ಲೌಸ್‌ಗಳು ಮಾಡರ್ನ್ ಲುಕ್‌ ನೀಡುವುದರೊಂದಿಗೆ ಯಂಗ್‌ ಲುಕ್‌ ನೀಡುತ್ತವಂತೆ.

Back button saree blouse

ಸೀರೆಗೆ ತಕ್ಕ ಡಿಸೈನ್‌ ಆಯ್ಕೆ

ಉಡುವ ಸೀರೆಗೆ ತಕ್ಕಂತೆ ಈ ಬ್ಯಾಕ್‌ ಬಟನ್‌ ಬ್ಲೌಸ್‌ ಡಿಸೈನ್‌ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಸ್‌. ಡಿಸೈನರ್‌ ಸೀರೆಗೆ ಕಾಕ್‌ಟೈಲ್‌ ಡಿಸೈನ್ಸ್, ರೇಷ್ಮೆ ಸೀರೆಗೆ ಡೀಪ್‌ ನೆಕ್‌ ಹಾಗೂ ಟಾಸೆಲ್ಸ್ ಇರುವಂತವು, ಎಂಬ್ರಾಯ್ಡರಿ ಹ್ಯಾಂಡ್‌ ವರ್ಕ್ ಇರುವಂತವು, ಸಾದಾ ಸೀರೆಗೆ ಹೈ ನೆಕ್‌ ಶೈಲಿಯವು ಮ್ಯಾಚ್‌ ಆಗುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ ರೆಟ್ರೋ ಲುಕ್‌ಗೆ 3 ಟಿಪ್ಸ್

  • ಬ್ಯಾಕ್‌ ಬಟನ್‌ ಸೀರೆ ಬ್ಲೌಸ್‌ನಲ್ಲಿ ರೆಟ್ರೋ ಲುಕ್‌ ಪಡೆಯಲು ವಿಂಟೇಜ್‌ ಲುಕ್‌ ನೀಡುವ ಮೇಕಪ್‌ ಮಾಡಬೇಕು.
  • ಹೇರ್‌ಸ್ಟೈಲ್‌ ಕೂಡ ಆದಷ್ಟೂ ಈ ಲುಕ್‌ಗೆ ಮ್ಯಾಚ್‌ ಆಗಬೇಕು.
  • ಸೀರೆ ಡ್ರೇಪಿಂಗ್‌, ರೆಟ್ರೋ ಲುಕ್‌ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Cricket Theme Fashion: ಕ್ರಿಕೆಟ್‌ ಥೀಮ್‌ನಲ್ಲಿ ಬೆರಗುಗೊಳಿಸಿದ ನಟಿ ಜಾಹ್ನವಿ ಕಪೂರ್ ಫ್ಯಾಷನ್‌!

ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಹಾಗಾದಲ್ಲಿ, ಅವರು ಧರಿಸಿರುವ ಔಟ್‌ಫಿಟ್‌ಗಳ್ಯಾವುವು? ಅವುಗಳಲ್ಲಿ ಹೇಗೆಲ್ಲಾ ಕಾಣಿಸಿಕೊಂಡರು? ಎಂಬುದರ ಕುರಿತಾಗಿ (Star Cricket Theme Fashion) ಇಲ್ಲಿದೆ ಡಿಟೇಲ್ಸ್.

VISTARANEWS.COM


on

Star Cricket Theam Fashion
ಚಿತ್ರಗಳು: ನಟಿ ಜಾಹ್ನವಿ ಕಪೂರ್, ಬಾಲಿವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇತ್ತೀಚೆಗೆ ನಟಿ ಜಾಹ್ನವಿ ಕಪೂರ್ ಧರಿಸುತ್ತಿರುವ ಒಂದೊಂದು ಬಗೆಯ ಕ್ರಿಕೆಟ್‌ ಥೀಮ್‌ನ ಫ್ಯಾಷೆನಬಲ್‌ ಔಟ್‌ಫಿಟ್‌ಗಳಿಗೆ ಅಭಿಮಾನಿಗಳು ಫಿದಾ ಆಗತೊಡಗಿದ್ದಾರೆ. ಅಂದಹಾಗೆ, ಇದ್ಯಾಕೆ ಹೀಗೆ? ಎಂದುಕೊಳ್ಳುತ್ತಿದ್ದೀರಾ! ಅವರು ತಮ್ಮ ಮುಂಬರುವ ಕ್ರಿಕೆಟ್‌ ಆಧಾರಿತ ಸಿನಿಮಾ ಮಿಸ್ಟರ್ & ಮಿಸೆಸ್‌ ಮಾಹಿ ಪ್ರಮೋಷನ್‌ಗಾಗಿ ವಿಶೇಷವಾಗಿ ಕ್ರಿಕೆಟ್‌ ಥೀಮ್‌ ಫ್ಯಾಷನ್‌ವೇರ್‌ಗಳನ್ನು ಧರಿಸತೊಡಗಿದ್ದಾರೆ. ಇದು ಅವರ ಕ್ರಿಕೆಟ್‌ ಪ್ರೇಮದ ಜೊತೆಗೆ ಫ್ಯಾಷನ್‌ಗೂ ಸಾಥ್‌ ನೀಡಿದೆ (Star Cricket Theme Fashion) ಎನ್ನುತ್ತಿದ್ದಾರೆ ಫ್ಯಾಷನಿಸ್ಟ್‌ಗಳು.

Star Cricket Theam Fashion

ಕಟೌಟ್‌ ರೆಡ್‌ ಡ್ರೆಸ್‌ ಬ್ಯಾಕ್‌ ವಿನ್ಯಾಸದಲ್ಲಿ ಕ್ರಿಕೆಟ್‌ ಬಾಲ್‌ ಡಿಸೈನ್‌

ಜಾಹ್ನವಿಯ ವೆಸ್ಟರ್ನ್ ಶೈಲಿಯ ಕಟೌಟ್ ರೆಡ್‌ ಡ್ರೆಸ್‌ನ ಬ್ಯಾಕ್‌ ಡಿಸೈನ್‌ ಮಲ್ಟಿ ಕ್ರಿಕೆಟ್‌ ಬಾಲ್‌ಗಳನ್ನು ಜೋಡಿಸಿದಂತಹ ಸ್ಟ್ರಾಪ್‌ನಂತಹ ಡಿಸೈನ್‌ ಫ್ಯಾಷನ್‌ ಪ್ರೇಮಿಗಳನ್ನು ನಿಬ್ಬೆರಗಾಗಿಸಿತು.

Star Cricket Theam Fashion

ಸೀರೆಯಲ್ಲಿ ತ್ರಿಡಿ ಕ್ರಿಕೆಟ್‌ ಬಾಲ್‌ ಬಾರ್ಡರ್ ಚಿತ್ತಾರ

ಇನ್ನು, ಇವೆಂಟ್‌ನಲ್ಲಿ ಜಾಹ್ನವಿ ಧರಿಸಿದ್ದ ಎರಡು ಸೀರೆಗಳು ಕೂಡ ಕ್ರಿಕೆಟ್‌ ಕಾನ್ಸೆಪ್ಟ್ ಡಿಸೈನ್‌ ಹೊಂದಿದ್ದವು. ವಾರಾಣಾಸಿಯಲ್ಲಿ ಉಟ್ಟ ಸೀರೆ ಟ್ರೆಡಿಷನಲ್‌ ಆಗಿದ್ದರೂ, ಅದರ ಪಲ್ಲು ಕಂಪ್ಲೀಟ್‌ ಕ್ರಿಕೆಟ್‌ ಕ್ರೀಡಾಂಗಣದ ವರ್ಲಿ ಶೈಲಿಯ ಚಿತ್ತಾರವನ್ನು ಒಳಗೊಂಡಿತ್ತು. ಜಾಹ್ನವಿ ಧರಿಸಿದ್ದ, ಇನ್ನೊಂದು, ಜಾರ್ಜೆಟ್‌ ರೆಡ್‌ & ವೈಟ್‌ ಸ್ಟ್ರೈಪ್ಸ್ ಸೀರೆಯ ಬಾರ್ಡರ್‌, ಕ್ರಿಕೆಟ್‌ ಬಾಲ್‌ನ ತ್ರಿಡಿ ಚಿತ್ತಾರದಿಂದ ಸಿಂಗಾರಗೊಂಡಿತ್ತು. ಬಾಲ್‌ನ ಫ್ಯಾಬ್ರಿಕ್‌ನಂತೆ ಕಾಣಿಸುವ ಮೆಟೀರಿಯಲ್‌ನಿಂದ ಡಿಸೈನ್‌ ಮಾಡಲಾಗಿತ್ತು.

Star Cricket Theam Fashion

ಕ್ರಿಕೆಟ್‌ ಕ್ರಾಪ್ಡ್ ಜೆರ್ಸಿ ಟಾಪ್‌

ಜಾಹ್ನವಿ ಕ್ರೀಡಾಂಗಣಕ್ಕೆ ಭೇಟಿ ನೀಡಿದಾಗ, ಕ್ರಿಕೆಟಿಗರ ಜೆರ್ಸಿಯಂತೆ ಕಾಣುವ ಕ್ರಾಪ್‌ ಟಾಪ್‌ನಲ್ಲಿ ಕಾಣಿಸಿಕೊಂಡರು. ಎಲ್ಲದಕ್ಕಿಂತ ಹೆಚ್ಚಾಗಿ, ಅದರ ಮೇಲೆ ಬರ್ತ್ ಡೇ ನಂಬರ್‌ ಮೂಡಿಸಿದ್ದು, ಅವರ ಖುಷಿಗೆ ಕಾರಣವಾಗಿತ್ತು.

Star Cricket Theam Fashion

ಜೆನ್‌ ಜಿ ಸೆಳೆದ ಕ್ರಾಪ್ಡ್ ಟೀ ಶರ್ಟ್–ಸ್ಕರ್ಟ್

ಕಾಲೇಜ್‌ವೊಂದರ ಇವೆಂಟ್‌ನಲ್ಲಿ ವೈಟ್‌ ಹಾಗೂ ಬ್ಲ್ಯೂ ಮತ್ತು ರೆಡ್‌ ಸ್ಟ್ರೈಪ್ಸ್ ಇರುವ ಕಾಲರ್‌ ಕ್ರಾಪ್ಡ್ ಟೀ ಶರ್ಟ್ ಜೊತೆಗೆ ವೈಟ್‌ ಸ್ಕರ್ಟ್ ಮಿಕ್ಸ್ ಮಾಡಿರುವ ಕ್ರಿಕೆಟ್‌ ಥೀಮ್‌ ಡ್ರೆಸ್‌ ಅಲ್ಲಿನ ಯಂಗ್‌ಸ್ಟರ್ಸ್‌ಗಳನ್ನು ಸೆಳೆಯಿತು.

Star Cricket Theam Fashion

ಬಾಡಿಕಾನ್‌ ಡ್ರೆಸ್‌ ಮೇಲೆ ಬ್ಯಾಟಿಂಗ್‌ ಸಿಕ್ವೀನ್ಸ್

ಜಾಹ್ನವಿಯ ಹೈ ಫ್ಯಾಷನ್‌ ಸ್ಟೈಲಿಂಗ್‌ನ ಶಿಮ್ಮರ್‌ನ ಬಾಡಿಕಾನ್‌ ಡ್ರೆಸ್‌ ಮೇಲೆ ಇದ್ದ ಬ್ಯಾಟಿಂಗ್‌ ಸಿಕ್ವೀನ್ಸ್ ಪ್ರಿಂಟ್ಸ್ ಚಿತ್ತಾರ ಹೈ ಫ್ಯಾಷನ್‌ ಲುಕ್‌ಗೆ ಸಾಥ್‌ ನೀಡಿತ್ತು.

ಇದನ್ನೂ ಓದಿ: Wedding Fashion: ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ ಈ ಮಿರಮಿರ ಮಿನುಗುವ ಲೆಹೆಂಗಾಗಳು!

ಜಾಹ್ನವಿ ಕ್ರಿಕೆಟ್‌ ಥೀಮ್‌ ಆಕ್ಸೆಸರೀಸ್‌

ಕ್ರಿಕೆಟ್‌ ಬಾಲ್‌ ಆಕಾರದ ಕ್ಲಚ್‌, ಹ್ಯಾಂಡ್‌ ಪರ್ಸ್ ಸೇರಿದಂತೆ ನಾನಾ ಆಕ್ಸೆಸರೀಸ್‌ ಅವರನ್ನು ಮತ್ತಷ್ಟು ಕ್ರಿಕೆಟ್‌ ಪ್ರೇಮಿಯನ್ನಾಗಿಸಿತ್ತು. ಹೀಗೆ ಜಾಹ್ನವಿಯ ನಾನಾ ಬಗೆಯ ಕ್ರಿಕೆಟ್‌ ಥೀಮ್‌ ಔಟ್‌ಫಿಟ್‌ ಹಾಗೂ ಆಕ್ಸೆಸರೀಸ್‌ಗಳು, ಕ್ರಿಕೆಟ್‌ ಪ್ರೇಮಿಗಳನ್ನು ಮಾತ್ರವಲ್ಲ, ಫ್ಯಾಷನ್‌ ಪ್ರಿಯರನ್ನು ಸೆಳೆದವು ಎಂದು ವಿಶ್ಲೇಷಿಸಿದ್ದಾರೆ ಫ್ಯಾಷನ್‌ ವಿಮರ್ಶಕರು.

Continue Reading
Advertisement
Narendra Modi
ದೇಶ4 hours ago

PM Modi: 400 ಸೀಟು, 400 ಸೀಟು ಎಂದು ಪ್ರತಿಪಕ್ಷಗಳನ್ನು ಮಂಗ್ಯಾ ಮಾಡಿದ ಮೋದಿ; ಅವರ ಮಾತಲ್ಲೇ ಕೇಳಿ!

Rajakaluve
ಸಂಪಾದಕೀಯ5 hours ago

ವಿಸ್ತಾರ ಸಂಪಾದಕೀಯ: ಮುಂಗಾರಿಗೆ ಮುನ್ನವೇ ರಾಜಕಾಲುವೆ ಒತ್ತುವರಿ ತೆರವಾಗಲಿ

IPL 2024
ಪ್ರಮುಖ ಸುದ್ದಿ5 hours ago

IPL 2024 : ಅಭಿಮಾನಿಗಳ ದುರಂಹಕಾರವೇ ಆರ್​​ಸಿಬಿ ಸೋಲಿಗೆ ಕಾರಣ ಎಂದ ಮಾಜಿ ಕ್ರಿಕೆಟಿಗ

DCM D K Shivakumar instructed to test drinking water everywhere including Bengaluru
ಕರ್ನಾಟಕ5 hours ago

Bengaluru News: ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

Naxals
ದೇಶ6 hours ago

Naxals: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 7 ನಕ್ಸಲರ ಎನ್‌ಕೌಂಟರ್

IPL 2024
ಪ್ರಮುಖ ಸುದ್ದಿ6 hours ago

IPL 2024 : ಐಪಿಎಲ್​ನಲ್ಲಿ ಕಳಪೆ ದಾಖಲೆಯೊಂದನ್ನು ಸೃಷ್ಟಿಸಿ ನಿರ್ಗಮಿಸಿದ ಆರ್​ಸಿಬಿ

arecanut price
ಕರ್ನಾಟಕ6 hours ago

Arecanut Price: ಮಲೆನಾಡಿನ ರಾಶಿ ಇಡಿ ಅಡಿಕೆ ಧಾರಣೆ ‘ಅಬ್‌ ಕಿ ಬಾರ್ ₹60,000 ಪಾರ್ ಆಗಲಿದೆಯಾ?

Self Harming Husband commits suicide for taking his wife home
ಕರ್ನಾಟಕ7 hours ago

Self Harming: ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ!

WhatsApp AI
ತಂತ್ರಜ್ಞಾನ7 hours ago

WhatsApp AI: WhatsAppಗೂ ಬಂತು ಎಐ; ನಿಮ್ಮ ಪ್ರೊಫೈಲ್‌ ಫೋಟೊ ಇನ್ನು AI ಜನರೇಟೆಡ್!‌

T20 world cup 2024
ಕ್ರೀಡೆ7 hours ago

T20 World Cup 2024 : ಭಾರತ ತಂಡ ವಿಶ್ವ ಕಪ್​ ಗೆಲ್ಲುವುದಿಲ್ಲ; ಇಂಗ್ಲೆಂಡ್​ ಮಾಜಿ ಆಟಗಾರನ ಭವಿಷ್ಯ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ23 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌