-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸುಮಾರು ಒಂದು ವಾರಗಳ ಕಾಲ ನಡೆದ ಇಂಡಿಯಾ ಕೌಚರ್ ವೀಕ್ 2024 (ICW 2024)ನಲ್ಲಿ ಪ್ರದರ್ಶನಗೊಂಡ ಒಂದಿಷ್ಟು ಡಿಸೈನರ್‌ವೇರ್‌ಗಳು ಮುಂಬರುವ ಸೀಸನ್‌ನ ಟ್ರೆಂಡ್ ಲಿಸ್ಟ್‌ಗೆ ಸೇರಿದವು. ಹೌದು. ನಿನ್ನೆಯಷ್ಟೇ ಈ ಸಾಲಿನ ಇಂಡಿಯಾ ಕೌಚರ್ ಫ್ಯಾಷನ್ ವೀಕ್‌ಗೆ ತೆರೆ ಬಿದ್ದಿತು. ಇದುವರೆಗೂ ನಡೆದ ಫ್ಯಾಷನ್ ವೀಕ್‌ನಲ್ಲಿ, ಬಾಲಿವುಡ್ ತಾರೆಯರು ಸೇರಿದಂತೆ ಖ್ಯಾತನಾಮರು ಭಾಗವಹಿಸಿ, ಡಿಸೈನರ್‌ಗಳ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದರು. ಅಂದಹಾಗೆ, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಸೆಲೆಬ್ರೆಟಿಗಳಲ್ಲದೇ, ಪಾಲ್ಗೊಂಡಿದ್ದ ಇತರೇ ಮಾಡೆಲ್‌ಗಳು ಧರಿಸಿ ವಾಕ್ ಮಾಡಿ ಪ್ರದರ್ಶಿಸಿದ ಒಂದಿಷ್ಟು ಡಿಸೈನರ್‌ವೇರ್‌ಗಳು, ಈಗಾಗಲೇ ಫ್ಯಾಷನ್‌ಲೋಕದ ಟ್ರೆಂಡ್ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಹಾಗಾದಲ್ಲಿ, ಅವು ಯಾವುವು? ಅವುಗಳ ವಿಶೇಷತೆ ಏನಿತ್ತು? ಎಂಬುದನ್ನು ಇಲ್ಲಿ ಸಂಕ್ಷೀಪ್ತವಾಗಿ ವಿವರಿಸಿದ್ದಾರೆ.
ಗೋಲ್ಡ್ ಡಿಸೈನರ್‌ವೇರ್ಸ್
ತರುಣ್ ತೆಹಿಲಿಯಾನಿ ಹಾಗೂ ಜಯಂತಿ ರೆಡ್ಡಿ ಡಿಸೈನ್‌ನ ಕಂಪ್ಲೀಟ್ ಗೋಲ್ಡ್ ಡಿಸೈನರ್ ಸೀರೆಗಳು, ಗೋಲ್ಡ್ ಗೌನ್, ಲೆಹೆಂಗಾ, ಶರಾರ, ಗರಾರ ಸೇರಿದಂತೆ ನಾನಾ ಸ್ಟೈಲ್‌ನ ಉಡುಗೆಗಳು, ಈ ಫ್ಯಾಷನ್ ವೀಕ್ ಮುಖಾಂತರ ಬಂಗಾರ ವರ್ಣದ ವ್ಯಾಲ್ಯೂವನ್ನು ಮತ್ತಷ್ಟು ಹೆಚ್ಚಿಸಿದವು. ವೆಡ್ಡಿಂಗ್ ಸೀಸನ್‌ನ ಟ್ರೆಂಡ್‌ನಲ್ಲಿ ಇವು ಮುಂದುವರೆಯಲಿವೆ ಎಂಬುದನ್ನು ಸಾಬೀತುಪಡಿಸಿದವು.
ಬಾಡಿಕಾನ್ ಟೋರ್ನ್ ಗೌನ್
ಇದುವರೆಗೂ ನಮ್ಮಲ್ಲಿ ಯಾವತ್ತೂ ಟೊರ್ನ್ ರೂಪದಲ್ಲಿ ಗೌನ್ ಕಾಣಿಸಿಕೊಂಡಿರಲಿಲ್ಲ. ಆದರೆ, ಇಂಡಿಯಾ ಕೌಚರ್ ವೀಕ್‌ನಲ್ಲಿ ಇದು ಕಂಡಿತು ಎನ್ನುತ್ತಾರೆ ಡಿಸೈನರ್ ಜಾನ್.
ಮೆನ್ಸ್ ಎಂಬ್ರಾಯ್ಡರಿ & ಪೇಂಟೆಡ್ ಶೆರ್ವಾನಿಗಳು
ಮುಂಬರುವ ವೆಡ್ಡಿಂಗ್ ಸೀಸನ್‌ನ ಟ್ರೆಂಡಿಗೆ ಎಂಟ್ರಿ ನೀಡಿದ ಡಿಸೈನರ್ ರಾಹುಲ್ ಮಿಶ್ರಾ ಅವರ ಮೆನ್ಸ್ ಎಂಬ್ರಾಯ್ಡರಿ & ಪ್ರಿಂಟೆಡ್ ಶೆರ್ವಾನಿಗಳು ಪುರುಷರನ್ನು ಸೆಳೆಯುವಲ್ಲಿ ಯಶಸ್ವಿಯಾದವು. ಇದುವರೆಗೂ ಸಿಕ್ವೀನ್ಸ್ ಡಿಸೈನ್‌ಗಳಿಗೆ ಸೀಮಿತವಾಗಿದ್ದ, ಶೆರ್ವಾನಿ ಇದೀಗ ಪೇಂಟಿಂಗ್ ಹಾಗೂ ಎಂಬ್ರಾಯ್ಡರಿ ಡಿಸೈನ್‌ನಲ್ಲಿ ಕಾಣಿಸಿಕೊಂಡಿರುವುದು ಟ್ರೆಂಡ್ ಲಿಸ್ಟ್‌ಗೆ ಸೇರಲು ಕಾರಣವಾಗಿದೆ.
ಕೇಪ್ ಡಿಸೈನರ್‌ವೇರ್‌ಗಳು
ಇನ್ನು, ಊಹೆಗೂ ಮೀರಿದ ತೆಳುವಾದ ಪಾರದರ್ಶಕ ಕೇಪ್ ಡಿಸೈನರ್‌ವೇರ್‌ಗಳು ಎಥ್ನಿಕ್‌ವೇರ್‌ನೊಂದಿಗೆ ಯುವತಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಇದನ್ನೂ ಓದಿ: ICW 2024: ರ‍್ಯಾಂಪ್ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?!
ಗೌನ್ ರೆಡಿ ಸೀರೆ ಜಾದೂ
ಇದುವರೆಗೂ ಟ್ರೆಂಡಿಯಾಗಿದ್ದ ರೆಡಿ ಸೀರೆಗಳ ಡಿಸೈನ್ಸ್ ಮೀರಿಸಿ, ಹೊಸ ರೂಪದಲ್ಲಿ ಪ್ರದರ್ಶನಗೊಂಡ ಡಿಸೈನರ್ ಡಾಲಿ, ಸುನೀತ್ ವರ್ಮಾ ಹಾಗೂ ರಾಹುಲ್ ಮಿಶ್ರಾ ಅವರ ಗೌನ್ ಸ್ಟೈಲ್ ಹಾಗೂ ಲೆಹೆಂಗಾ ರೆಡಿ ಸೀರೆಗಳು ಈಗಾಗಲೇ ಮಾರುಕಟ್ಟೆ ಪ್ರವೇಶಿಸಿವೆ ಎನ್ನುತ್ತಾರೆ ಡಿಸೈನರ್ ಜಾಕಿ & ರಾಣಾ.
(ಲೇಖಕಿ ಫ್ಯಾಷನ್ ಪತ್ರಕರ್ತೆ)