ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುತ್ತಿಟ್ಟರೂ ಅಚ್ಚೊತ್ತದ ಕಿಸ್ ಪ್ರೂಫ್ ಲಿಪ್‌ಸ್ಟಿಕ್‌ಗಳು (Kiss proof lipsticks) ಈ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾಗಿವೆ. ಹೌದು, ಪ್ರೇಮಿಗಳ ವಾರದಲ್ಲಿ ಕಿಸ್ ಡೇ ಅಂದರೇ ಮುತ್ತಿಡುವ ದಿನವೂ ಒಂದು. ಇದನ್ನು ಖುಷಿಯಾಗಿ ಸೆಲೆಬ್ರೇಟ್ ಮಾಡುವ ಹುಡುಗಿಯರಿಗೆಂದೇ, ಪ್ರೇಮಿಗೆ ಮುತ್ತಿಟ್ಟರೂ ಎಲ್ಲಿಯೂ ಅಚ್ಚು ಮೂಡಿಸದ ಲಿಪ್‌ಸ್ಟಿಕ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
ಏನಿದು ಕಿಸ್ ಪ್ರೂಫ್ ಲಿಪ್‌ಸ್ಟಿಕ್ಸ್?
ಲಿಪ್‌ಸ್ಟಿಕ್ ಹಚ್ಚಿ ಕೆಲವೇ ಕ್ಷಣಗಳಲ್ಲಿ ಇವು ಡ್ರೈ ಆಗುತ್ತವೆ. ಬಹುತೇಕ ಮ್ಯಾಟ್ ಲಿಪ್‌ಸ್ಟಿಕ್ಸ್‌ನಲ್ಲೂ ಲಭ್ಯ. ಹಾಗೆಂದು ಎಲ್ಲಾ ಮ್ಯಾಟ್ ಲಿಪ್‌ಸ್ಟಿಕ್‌ಗಳು ಕಿಸ್ ಪ್ರೂಫ್ ಅಲ್ಲ! ಕೆಲವು ವರ್ಷಗಳ ಹಿಂದೆ ಲಿಪ್‌ಸ್ಟಿಕ್‌ಗಳನ್ನು ಹಚ್ಚಿದ ನಂತರ ಕೊಂಚ ಸಮಯ ಮಾತ್ರ ಉಳಿಯುತ್ತಿದ್ದವು. ಪದೇ ಪದೇ ಹಚ್ಚಿಕೊಳ್ಳಬೇಕಾಗಿತ್ತು. ಅಲ್ಲದೇ, ಏನೇ ಸೇವಿಸಿದರೂ ಅಳಿಸಿಹೋಗುತ್ತಿತ್ತು. ಆದರೆ, ಇದೀಗ ಕಾಲ ಬದಲಾಗಿದೆ. ಲಿಪ್‌ಸ್ಟಿಕ್ ತಜ್ಞರು ಇದಕ್ಕೂ ಪರಿಹಾರ ಕಂಡು ಹಿಡಿದಿದ್ದಾರೆ. ಹಚ್ಚಿದ ನಂತರ, ಒಂದಿಷ್ಟು ಗಂಟೆಗಳ ಕಾಲ ಅಳಿಸದೇ ಹೋಗದಂತಹ ಲಿಪ್‌ಸ್ಟಿಕ್‌ಗಳನ್ನು ಅವಿಷ್ಕಾರ ಮಾಡಿ ಈಗಾಗಲೇ ಯಶಸ್ವಿಯೂ ಆಗಿದ್ದಾರೆ. ಇವು ನಾವಾಗಿಯೇ ಅಳಿಸುವ ತನಕ ಮಾಸುವುದಿಲ್ಲ. ಸೋ, ಇಂತಹ ಅನೇಕ ಬಗೆಯ ಲಿಪ್‌ಸ್ಟಿಕ್ಸ್ ಮಾರುಕಟ್ಟೆಯಲ್ಲಿವೆ. ಅವುಗಳಲ್ಲಿ ಕಿಸ್ ಪ್ರೂಫ್ ಕೂಡ ಒಂದು. ಇನ್ನು ಈ ಸೀಸನ್‌ಗೆ ಪೂರಕ ಎಂಬಂತೆ, ಇವು ಬೇಡಿಕೆಯನ್ನು ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸೌಂದರ್ಯ ತಜ್ಞರು.
ಟ್ರೆಂಡಿಯಾಗಿರುವ ಲಿಪ್ ಶೇಡ್‌ಗಳು
ರೆಡ್ ಹಾಟ್, ವೈನ್ ರೆಡ್, ರೆಡ್ ಐರನ್, ಲೋಟಸ್ ರೆಡ್, ಡಲ್ ರೆಡ್ ಶೇಡ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇನ್ನು, ಮಿನಿ ಲಿಪ್‌ಸ್ಟಿಕ್‌ಗಳು, ಮಲ್ಟಿ ಪ್ಯಾಕ್ ಲಿಪ್‌ಸ್ಟಿಕ್‌ಗಳು ಪ್ರಚಲಿತದಲ್ಲಿವೆ ಎನ್ನುತ್ತಾರೆ ಮಾರಾಟಗಾರರು.
ಕಿಸ್ ಡೇಗೆ ಕಿಸ್ ಪ್ರೂಫ್ ಲಿಪ್‌ಸ್ಟಿಕ್ಸ್
ಸಂಗಾತಿಗೆ ಗಿಫ್ಟ್ ನೀಡಲು ಬಯಸುವವರಿಗೆಂದೇ ಸಾಕಷ್ಟು ಆನ್‌ಲೈನ್ ಬ್ಯೂಟಿ ಶಾಪ್‌ಗಳು ಕೂಡ ಕಿಸ್ ಪ್ರೂಫ್ ಲಿಪ್‌ಸ್ಟಿಕ್‌ಗಳ ಮೇಲೆ ಸಾಕಷ್ಟು ಡಿಸ್ಕೌಂಟ್ಸ್ ನೀಡಿವೆ. 3 ಮಿನಿ ಪ್ಯಾಕ್, ಬೈ ವನ್ ಗೆಟ್ ವನ್ ಹೀಗೆ ನಾನಾ ಬಗೆಯ ಆಫರ್‌ಗಳ ಮಹಾಪೂರವನ್ನು ಸೋಷಿಯಲ್ ಮೀಡಿಯಾ ಜಾಹೀರಾತುಗಳಲ್ಲಿ ನೋಡಬಹುದು.
ಕಿಸ್ ಪ್ರೂಫ್ ಲಿಪ್‌ಸ್ಟಿಕ್ಸ್ ಟಿಪ್ಸ್
- ಇಡೀ ದಿನ ಈ ಲಿಪ್‌ಸ್ಟಿಕ್ಸ್ ಹಚ್ಚುವುದರಿಂದ ತುಟಿ ಒಣಗಬಹುದು.
- ರಾತ್ರಿಯಿಡಿ ಲಿಪ್ ಬಾಮ್ ಹಚ್ಚಿ ನಂತರ ಹಚ್ಚಿದಲ್ಲಿ, ಅದರ ಸಾಫ್ಟ್ ಆಗಿ ಕಾಣಬಹುದು.
- ಪದೇ ಪದೇ ಹಚ್ಚಿದ ಲಿಪ್‌ಸ್ಟಿಕ್ಸ್ ಹಚ್ಚಿದ ಮೇಲೆ ಮತ್ತೊಮ್ಮೆ ಅದರ ಮೇಲೆ ಹಚ್ಚಕೂಡದು.
- ಮಲಗುವ ಮುನ್ನ ಮೇಕಪ್ ರಿಮೂವರ್ನಿಂದ ತೆಗೆಯುವುದು ಅಗತ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)