Kiss Proof Lipsticks: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್ಸ್ ! - Vistara News

ಫ್ಯಾಷನ್

Kiss Proof Lipsticks: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್ಸ್ !

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಕಿಸ್‌ ಡೇಯೂ ಒಂದು. ಕಿಸ್‌ ಮಾಡಿದರೂ ಅಚ್ಚೊತ್ತದ ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್‌ಗಳು (Kiss proof lipsticks) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಏನಿದು ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್ಸ್? ಹೇಗೆಲ್ಲಾ ಬಳಸಬಹುದು? ಎಂಬುದರ ಬಗ್ಗೆ ಬ್ಯೂಟಿ ಎಕ್ಸ್‌ಫರ್ಟ್ಸ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Kiss Proof Lipsticks
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುತ್ತಿಟ್ಟರೂ ಅಚ್ಚೊತ್ತದ ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್‌ಗಳು (Kiss proof lipsticks) ಈ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾಗಿವೆ. ಹೌದು, ಪ್ರೇಮಿಗಳ ವಾರದಲ್ಲಿ ಕಿಸ್‌ ಡೇ ಅಂದರೇ ಮುತ್ತಿಡುವ ದಿನವೂ ಒಂದು. ಇದನ್ನು ಖುಷಿಯಾಗಿ ಸೆಲೆಬ್ರೇಟ್‌ ಮಾಡುವ ಹುಡುಗಿಯರಿಗೆಂದೇ, ಪ್ರೇಮಿಗೆ ಮುತ್ತಿಟ್ಟರೂ ಎಲ್ಲಿಯೂ ಅಚ್ಚು ಮೂಡಿಸದ ಲಿಪ್‌ಸ್ಟಿಕ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

What are kiss proof lipsticks

ಏನಿದು ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್ಸ್?

ಲಿಪ್‌ಸ್ಟಿಕ್‌ ಹಚ್ಚಿ ಕೆಲವೇ ಕ್ಷಣಗಳಲ್ಲಿ ಇವು ಡ್ರೈ ಆಗುತ್ತವೆ. ಬಹುತೇಕ ಮ್ಯಾಟ್‌ ಲಿಪ್‌ಸ್ಟಿಕ್ಸ್‌ನಲ್ಲೂ ಲಭ್ಯ. ಹಾಗೆಂದು ಎಲ್ಲಾ ಮ್ಯಾಟ್‌ ಲಿಪ್‌ಸ್ಟಿಕ್‌ಗಳು ಕಿಸ್‌ ಪ್ರೂಫ್‌ ಅಲ್ಲ! ಕೆಲವು ವರ್ಷಗಳ ಹಿಂದೆ ಲಿಪ್‌ಸ್ಟಿಕ್‌ಗಳನ್ನು ಹಚ್ಚಿದ ನಂತರ ಕೊಂಚ ಸಮಯ ಮಾತ್ರ ಉಳಿಯುತ್ತಿದ್ದವು. ಪದೇ ಪದೇ ಹಚ್ಚಿಕೊಳ್ಳಬೇಕಾಗಿತ್ತು. ಅಲ್ಲದೇ, ಏನೇ ಸೇವಿಸಿದರೂ ಅಳಿಸಿಹೋಗುತ್ತಿತ್ತು. ಆದರೆ, ಇದೀಗ ಕಾಲ ಬದಲಾಗಿದೆ. ಲಿಪ್‌ಸ್ಟಿಕ್‌ ತಜ್ಞರು ಇದಕ್ಕೂ ಪರಿಹಾರ ಕಂಡು ಹಿಡಿದಿದ್ದಾರೆ. ಹಚ್ಚಿದ ನಂತರ, ಒಂದಿಷ್ಟು ಗಂಟೆಗಳ ಕಾಲ ಅಳಿಸದೇ ಹೋಗದಂತಹ ಲಿಪ್‌ಸ್ಟಿಕ್‌ಗಳನ್ನು ಅವಿಷ್ಕಾರ ಮಾಡಿ ಈಗಾಗಲೇ ಯಶಸ್ವಿಯೂ ಆಗಿದ್ದಾರೆ. ಇವು ನಾವಾಗಿಯೇ ಅಳಿಸುವ ತನಕ ಮಾಸುವುದಿಲ್ಲ. ಸೋ, ಇಂತಹ ಅನೇಕ ಬಗೆಯ ಲಿಪ್‌ಸ್ಟಿಕ್ಸ್ ಮಾರುಕಟ್ಟೆಯಲ್ಲಿವೆ. ಅವುಗಳಲ್ಲಿ ಕಿಸ್‌ ಪ್ರೂಫ್‌ ಕೂಡ ಒಂದು. ಇನ್ನು ಈ ಸೀಸನ್‌ಗೆ ಪೂರಕ ಎಂಬಂತೆ, ಇವು ಬೇಡಿಕೆಯನ್ನು ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸೌಂದರ್ಯ ತಜ್ಞರು.

Trendy lip shades

ಟ್ರೆಂಡಿಯಾಗಿರುವ ಲಿಪ್‌ ಶೇಡ್‌ಗಳು

ರೆಡ್‌ ಹಾಟ್‌, ವೈನ್‌ ರೆಡ್‌, ರೆಡ್‌ ಐರನ್‌, ಲೋಟಸ್‌ ರೆಡ್‌, ಡಲ್‌ ರೆಡ್‌ ಶೇಡ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇನ್ನು, ಮಿನಿ ಲಿಪ್‌ಸ್ಟಿಕ್‌ಗಳು, ಮಲ್ಟಿ ಪ್ಯಾಕ್‌ ಲಿಪ್‌ಸ್ಟಿಕ್‌ಗಳು ಪ್ರಚಲಿತದಲ್ಲಿವೆ ಎನ್ನುತ್ತಾರೆ ಮಾರಾಟಗಾರರು.

ಕಿಸ್‌ ಡೇಗೆ ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್ಸ್

ಸಂಗಾತಿಗೆ ಗಿಫ್ಟ್‌ ನೀಡಲು ಬಯಸುವವರಿಗೆಂದೇ ಸಾಕಷ್ಟು ಆನ್‌ಲೈನ್‌ ಬ್ಯೂಟಿ ಶಾಪ್‌ಗಳು ಕೂಡ ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್‌ಗಳ ಮೇಲೆ ಸಾಕಷ್ಟು ಡಿಸ್ಕೌಂಟ್ಸ್‌ ನೀಡಿವೆ. 3 ಮಿನಿ ಪ್ಯಾಕ್‌, ಬೈ ವನ್‌ ಗೆಟ್‌ ವನ್‌ ಹೀಗೆ ನಾನಾ ಬಗೆಯ ಆಫರ್‌ಗಳ ಮಹಾಪೂರವನ್ನು ಸೋಷಿಯಲ್‌ ಮೀಡಿಯಾ ಜಾಹೀರಾತುಗಳಲ್ಲಿ ನೋಡಬಹುದು.

Kiss Proof Lipsticks Tips

ಕಿಸ್‌ ಪ್ರೂಫ್‌ ಲಿಪ್‌ಸ್ಟಿಕ್ಸ್ ಟಿಪ್ಸ್

  • ಇಡೀ ದಿನ ಈ ಲಿಪ್‌ಸ್ಟಿಕ್ಸ್ ಹಚ್ಚುವುದರಿಂದ ತುಟಿ ಒಣಗಬಹುದು.
  • ರಾತ್ರಿಯಿಡಿ ಲಿಪ್‌ ಬಾಮ್‌ ಹಚ್ಚಿ ನಂತರ ಹಚ್ಚಿದಲ್ಲಿ, ಅದರ ಸಾಫ್ಟ್ ಆಗಿ ಕಾಣಬಹುದು.
  • ಪದೇ ಪದೇ ಹಚ್ಚಿದ ಲಿಪ್‌ಸ್ಟಿಕ್ಸ್ ಹಚ್ಚಿದ ಮೇಲೆ ಮತ್ತೊಮ್ಮೆ ಅದರ ಮೇಲೆ ಹಚ್ಚಕೂಡದು.
  • ಮಲಗುವ ಮುನ್ನ ಮೇಕಪ್‌ ರಿಮೂವರ್‌ನಿಂದ ತೆಗೆಯುವುದು ಅಗತ್ಯ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Newyork Fashion Week 2024: ನ್ಯೂಯಾರ್ಕ್ ಫ್ಯಾಷನ್‌ ವೀಕ್‌ನಲ್ಲಿ ಪ್ರೆಗ್ನೆಂಟ್‌, ತಾಯಿ ಮತ್ತು ವಿಶೇಷಚೇತನ ಮಾಡೆಲ್‌ಗಳ ರ‍್ಯಾಂಪ್‌ ವಾಕ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Summer Shopping 2024: ಮಾಲ್‌ಗಳಲ್ಲಿ ಸಮ್ಮರ್‌ಗೂ ಮುನ್ನವೇ ಶುರುವಾಯ್ತು ಸೀಸನ್‌ ಶಾಪಿಂಗ್‌

ಸಮ್ಮರ್‌ ಇನ್ನೂ ಶುರುವಾಗಿಲ್ಲ! ಈಗಾಗಲೇ ಮಾಲ್‌ಗಳಲ್ಲಿ ಸಮ್ಮರ್‌ ಶಾಪಿಂಗ್‌ (Summer Shopping 2024) ಶುರುವಾಗಿದೆ. ಸೀಸನ್‌ ಆರಂಭವಾಗುವ ಮುನ್ನವೇ ಈ ಸೀಸನ್‌ನ ಡ್ರೆಸ್‌ಗಳು, ಔಟ್‌ಫಿಟ್‌ಗಳು ಹಾಗೂ ಕೂಲ್‌ ಆಕ್ಸೆಸರೀಸ್‌ಗಳು ಲಗ್ಗೆ ಇಟ್ಟಿವೆ. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Summer Shopping 2024
ಚಿತ್ರಗಳು: ಮಿಂಚು
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ ಸೀಸನ್‌ ಇನ್ನೂ ಶುರುವಾಗಿಲ್ಲ! ಈಗಾಗಲೇ ಸಮ್ಮರ್‌ ಶಾಪಿಂಗ್‌ (Summer Shopping 2024) ಶುರುವಾಗಿದೆ. 2024 ಸಮ್ಮರ್‌ ಸೀಸನ್‌ ಆರಂಭವಾಗುವ ಮುನ್ನವೇ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ. ಅದರಲ್ಲೂ ಉದ್ಯಾನನಗರಿಯ ನಾನಾ ಮಾಲ್‌ಗಳು ನ್ಯೂ ಅರೈವಲ್‌ ಹೆಸರಲ್ಲಿ ಹಿರಿಯರು, ಉದ್ಯೋಗಸ್ಥರು, ಮಹಿಳೆಯರು, ಯುವಕ-ಯುವತಿಯರು, ಮಧ್ಯವಯಸ್ಕರು, ಮಕ್ಕಳು ಸೇರಿದಂತೆ ನಾನಾ ಕೆಟಗರಿಯಲ್ಲಿ ಬಗೆಬಗೆಯ ಸೀಸನ್ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಇನ್ನು ಬಿಸಿಲಿಗೆ ಧರಿಸಬಹುದಾದ ಹ್ಯಾಟ್‌, ಕ್ಯಾಪ್‌, ಸ್ಕಾರ್ಫ್‌ನಂತಹ ಆಕ್ಸೆಸರೀಸ್‌ಗಳನ್ನು ಅನಾವರಣಗೊಳಿಸಿವೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

Warm designerwear moved to the side

ಸೈಡಿಗೆ ಸರಿದ ಬೆಚ್ಚಗಿನ ಡಿಸೈನರ್‌ವೇರ್ಸ್

ಯಾವುದೇ ಶಾಪಿಂಗ್‌ ಮಾಲ್‌ಗಳಲ್ಲಿ ಇಣುಕಿ ನೋಡಿ. ಬಿಸಿಲು ಕಾಲ ಮುಗಿಯುವ ಮುನ್ನವೇ, ಓವರ್‌ಕೋಟ್‌, ಶ್ರಗ್ಸ್‌ನಂತಹ ಮೇಲುಡುಗೆಯಂತಹ ಬೆಚ್ಚಗಿಡುವಂತಹ ಉಡುಪುಗಳು ಮಾಯವಾಗಿವೆ, ಇಲ್ಲವಾದಲ್ಲಿ, ಸೈಡಿಗೆ ಸರಿದಿವೆ. ಡಬ್ಬಲ್‌ ಲೇಯರ್‌ನ ಟಾಪ್‌ಗಳು, ಲೈನಿಂಗ್‌ ಇರುವಂತಹ ಔಟ್‌ಫಿಟ್‌ಗಳು, ದಪ್ಪನೆಯ ಫ್ಯಾಬ್ರಿಕ್‌ ಇರುವಂತಹ ಸೆಕೆಯಾಗುವಂತಹ ಉಡುಗೆಗಳು ಸೈಡ್‌ ಕಾಲಂಗೆ ಹೋಗಿವೆ. ಫುಲ್‌ ನೆಕ್‌, ಫುಲ್‌ ಸ್ಲೀವ್‌, ಹೈ ನೆಕ್‌, ಲಾಂಗ್‌ ಟಾಪ್‌, ಫುಲ್‌ ಕವರ್ಡ್ ಜಂಪ್‌ಸೂಟ್‌, ಲಾಂಗ್‌ ಸ್ಕಟ್ರ್ಸ್ನಂತಹ ಬೆಚ್ಚಗಿಡುವ ಡಿಸೈನರ್‌ವೇರ್‌ಗಳು ಕೂಡ ಮೈನ್‌ ಶೋಕೆಸ್‌ನಿಂದ ಒಳಗೆ ಸೇರಿವೆ. ಇದಕ್ಕೆ ಕಾರಣ, ಈಗಾಗಲೇ ಹವಾಮಾನದಲ್ಲಿ ಉಷ್ಣಾಂಶದಲ್ಲಿ ಏರಿಕೆಯಾಗಿರುವುದು ಹಾಗೂ ಚಳಿಮಾಯವಾಗಿರುವುದು. ಗಾಳಿ ಹೆಚ್ಚಗಿಯೇ ಇದ್ದರೂ ಸೆಕೆ ಆರಂಭವಾಗಿರುವುದು. ಹಾಗಾಗಿ ಧರಿಸುವ ಔಟ್‌ಫಿಟ್‌ಗಳಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಹಾಗಾಗಿ ಸಮ್ಮರ್‌ ಸೀಸನ್‌ ಬರುವ ಮುನ್ನವೇ ಮಾಲ್‌ಗಳಲ್ಲಿ ಗ್ರಾಹಕರ ಮನೋಭಿಲಾಷೆಗೆ ಹೊಂದುವಂತಹ ಸಮ್ಮರ್‌ ಸೀಸನ್‌ ಟ್ರೆಂಡಿ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Demand for breathable outfits

ಗಾಳಿಯಾಡುವ ಔಟ್‌ಫಿಟ್‌ಗಳಿಗೆ ಬೇಡಿಕೆ

ಯುವತಿಯರು ಸ್ಲೀವ್‌ಲೆಸ್‌, ನೆಟ್ಟೆಡ್‌, ಕಾಟನ್‌, ಲೆನಿನ್‌, ಶೀರ್‌ ಫ್ಯಾಬ್ರಿಕ್‌ನ ಡಿಸೈನರ್‌ವೇರ್‌ಗಳ ಚಾಯ್ಸ್‌ ಮಾಡತೊಡಗಿದ್ದರೆ, ಮೆನ್ಸ್ ಫ್ಯಾಷನ್‌ನಲ್ಲಿ ಕಾಟನ್‌ ಹಾಗೂ ಲೆನಿನ್‌, ರಾಯನ್‌ ಫ್ಯಾಬ್ರಿಕ್‌ನ ಶರ್ಟ್‌ಗಳು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಶಾಪ್‌ವೊಂದರ ಮಾರಾಟಗಾರರು.

Cole Accessories

ಕೋಲ್‌ ಆಕ್ಸೆಸರೀಸ್‌

ಬಿಸಿಲ ಝಳಕ್ಕೆ ಬಳಸುವ ಕ್ಯಾಪ್‌, ಹ್ಯಾಟ್‌, ಹೆಡ್‌ಬ್ಯಾಂಡ್‌ ಶೈಲಿಯ ತೆಳುವಾದ ಸ್ಕಾರ್ಫ್‌ಗಳು ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ.
ಒಟ್ಟಾರೆ, ಅಧಿಕೃತವಾಗಿ ಸೀಸನ್‌ ಆರಂಭಕ್ಕೂ ಮುನ್ನವೇ, ಮಾಲ್‌ಗಳಲ್ಲಿ ಸಮ್ಮರ್‌ ಔಟ್‌ಫಿಟ್‌ಗಳು ಆವರಿಸಿಕೊಂಡಿವೆ. ಇದಕ್ಕೆ ಪೂರಕ ಎಂಬಂತೆ ಶಾಪಿಂಗ್‌ ಮಾಡುವವರು ಹೆಚ್ಚಾಗಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Alia Cut Kurta Set Fashion: ಪಾಪ್ಯುಲರ್‌ ಆಯ್ತು, ಅಲಿಯಾ ಕಟ್‌ ಕುರ್ತಾ ಸೂಟ್‌ ಸೆಟ್!

Continue Reading

ಫ್ಯಾಷನ್

Alia Cut Kurta Set Fashion: ಪಾಪ್ಯುಲರ್‌ ಆಯ್ತು, ಅಲಿಯಾ ಕಟ್‌ ಕುರ್ತಾ ಸೂಟ್‌ ಸೆಟ್!

ಅಲಿಯಾ ಕಟ್‌ ಕುರ್ತಾ ಹಾಗೂ ಲಾಂಗ್‌ ಸೂಟ್‌ ಸೆಟ್‌ಗಳು (Alia Cut Kurta Set Fashion) ಇದೀಗ ಸಖತ್‌ ಪಾಪ್ಯುಲರ್‌ ಆಗಿವೆ. ಇದಕ್ಕೆ ಕಾರಣ, ನಟಿ ಅಲಿಯಾ ಭಟ್‌ ಎಂದರೇ ಅಚ್ಚರಿಯಾಗಬಹುದು. ಸಿನಿಮಾವೊಂದರಲ್ಲಿ ಧರಿಸಿದ್ದ ಈ ಶೈಲಿಯ ಕುರ್ತಾ, ಸೂಟ್‌ಗಳು ಬಹಳ ದಿನಗಳ ನಂತರ ಟ್ರೆಂಡಿಯಾಗಿದೆ. ಏನಿದು ಅಲಿಯಾ ಕಟ್ ಕುರ್ತಾ? ಸೂಟ್‌? ಗೌನ್‌ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Alia Cut Kurta Set Fashion
ಚಿತ್ರಗಳು: ಐಶ್ವರ್ಯ ಲಕ್ಷ್ಮಿ, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಲಿಯಾ ಕಟ್‌ ಸೂಟ್‌, ಕುರ್ತಾ ಹಾಗೂ ಗೌನ್‌ ಸೆಟ್‌ಗಳು (Alia Cut Kurta Set Fashion) ಸಖತ್‌ ಟ್ರೆಂಡ್‌ನಲ್ಲಿವೆ. ಹೌದು, ಹೆಚ್ಚು ಪಾಪ್ಯುಲರ್‌ ಆಗಿವೆ. ಅದರಲ್ಲೂ ಫ್ಲೋರಲ್‌ ಪ್ರಿಂಟ್‌ನವು ಹೆಚ್ಚು ಚಾಲ್ತಿಯಲ್ಲಿವೆ. ಎಥ್ನಿಕ್‌ ಲುಕ್‌ ನೀಡುವ ಇವು ಈ ಸೀಸನ್‌ನ ಇಂಡಿಯನ್‌ ಔಟ್‌ಫಿಟ್‌ಗಳ ಟಾಪ್ ಲಿಸ್ಟ್‌ನಲ್ಲಿ ಸೇರಿವೆ.

What is Alia Cut Dress?

ಏನಿದು ಅಲಿಯಾ ಕಟ್‌ ಡ್ರೆಸ್?

ಎಥ್ನಿಕ್‌ ಲುಕ್‌ ನೀಡುವ ಟ್ರೆಡಿಷನಲ್‌ ಕುರ್ತಾ, ಸೂಟ್‌ಗಳಿವು. ವೇಸ್ಟ್‌ಸ್ಟೈಲ್‌ನಿಂದ ಮೇಲಿನ ಭಾಗ ಎರಡ್ಮೂರು ಕಟ್ಟಿಂಗ್‌ ಒಳಗೊಂಡಿರುತ್ತದೆ. ಬಟಲ್‌ಲೆಸ್‌ ಆಗಿದ್ದರೂ ಲೇಸ್‌ ವರ್ಕ್‌ನಿಂದ ಪ್ರತ್ಯೇಕವಾಗಿರುವಂತೆ ಕಾಣುತ್ತದೆ. ಧರಿಸಿದಾಗ ಮಂಡಿಯಿಂದ ಕೆಳಗಿನ ತನಕ ನಿಲ್ಲುತ್ತದೆ. ಕೊಂಚ ದೊಗಲೆಯಾಗಿರುತ್ತದೆ.

ಅಲಿಯಾ ಕಟ್‌ ಹೆಸರು ಯಾಕೆ ಬಂತು!

ಹಿಂದಿ ಸಿನಿಮಾವೊಂದರಲ್ಲಿ ನಟಿ ಅಲಿಯಾ ಭಟ್‌ ಧರಿಸಿದ್ದ ಕುರ್ತಾವಿದು. ಆಕೆ ಧರಿಸಿದ ನಂತರ ಈ ಕುರ್ತಾ ಹೊಸ ಹೆಸರನ್ನು ಪಡೆಯುವುದರೊಂದಿಗೆ ನಾನಾ ಶೈಲಿಯಲ್ಲಿ ಮಾನಿನಿಯರನ್ನು ಸವಾರಿ ಮಾಡತೊಡಗಿತು. ಸಾಮಾನ್ಯ ಮಹಿಳೆಯರು ಇದಕ್ಕೆ ಅಲಿಯಾ ಕಟ್‌ ಕುರ್ತಾ ಅಥವಾ ಸೂಟ್‌ ಎಂದು ನಾಮಕರಣ ಮಾಡಿದರು. ಮೊಬೈಲ್‌ನಲ್ಲಿ ಆಕೆ ಧರಿಸಿರುವ ಈ ಕುರ್ತಾ ಇಲ್ಲವೇ ಸೂಟ್‌ ಫೋಟೋ ತೋರಿಸಿ, ಅಂಗಡಿಗಳಲ್ಲಿ ಕೇಳುವ ಪರಿಪಾಟ ಹೆಚ್ಚಾಗಿ, ಇದೇ ಹೆಸರು ಚಾಲ್ತಿಗೆ ಬಂದಿತು ಎನ್ನುತ್ತಾರೆ ಡಿಸೈನರ್‌ಗಳು. ಅವರ ಪ್ರಕಾರ, ಈ ಉಡುಪು ಯಾವ ಮಟ್ಟಿಗೆ, ಟ್ರೆಂಡಿಯಾಯಿತೆಂದರೇ, ನಾರ್ತ್ ಇಂಡಿಯಾ ಮಾತ್ರವಲ್ಲ, ದಕ್ಷಿಣ ಭಾರತದ ಮಹಿಳೆಯರು ಕೂಡ ಈ ಬಗೆಯ ಕುರ್ತಾ, ಸೂಟ್‌ ಇಲ್ಲವೇ ಗೌನ್‌ ಶೈಲಿಯವನ್ನು ಹೆಚ್ಚೆಚ್ಚು ಧರಿಸಲಾರಂಭಿಸಿದರು. ಹಾಗೆಂದು ಈ ಶೈಲಿಯ ಕುರ್ತಾ-ಸೂಟ್‌ಗಳು ಹೊಸ ಅವಿಷ್ಕಾರವೇನಲ್ಲ! ಎನ್ನುತ್ತಾರೆ. ಇನ್ನು, ಟ್ರೆಡಿಷನಲ್‌ ಲುಕ್‌ ಇರುವ ಈ ಉಡುಪು ಎಂತಹ ಪರ್ಸನಾಲಿಟಿಯವರಿಗೂ ಹೊಂದುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Trending Alia Cut Gown Designs

ಟ್ರೆಂಡ್‌ನಲ್ಲಿರುವ ಅಲಿಯಾ ಕಟ್‌ ಸೂಟ್‌/ಕುರ್ತಾ/ಗೌನ್‌ ಡಿಸೈನ್ಸ್

ಟ್ರಾಪಿಕಲ್‌ ಪ್ರಿಂಟ್ಸ್, ಪ್ಲಾಂಟ್ಸ್, ಗಾರ್ಡನ್‌ ಪ್ರಿಂಟ್‌ನವು ಪ್ರಚಲಿತದಲ್ಲಿವೆ. ಆದರೆ, ಇವೆಲ್ಲಕ್ಕಿಂತ ಹೆಚ್ಚಾಗಿ ಆಕರ್ಷಕವಾಗಿ ಕಾಣುವ ಲೈಟ್‌ ಶೇಡ್‌ನ ಫ್ಲೋರಲ್‌ ಪ್ರಿಂಟೆಡ್‌ನವು ಹೆಚ್ಚು ಟ್ರೆಂಡ್‌ನಲ್ಲಿವೆ. ಕಾಟನ್‌, ಕಾಟನ್‌ ಸಿಲ್ಕ್‌, ಲೆನಿನ್‌, ರಯಾನ್‌ ಫ್ಯಾಬ್ರಿಕ್‌ನವಲ್ಲೂ ಇವನ್ನು ಕಾಣಬಹುದು. ಇನ್ನು, ನಾನಾ ಪ್ರಯೋಗಾತ್ಮಕ ವಿನ್ಯಾಸದವು ಎಂಟ್ರಿ ನೀಡಿವೆ. ಆದರೆ, ಮೂಲ ಡಿಸೈನ್‌ನ ಲಾಂಗ್‌ ಅಲಿಯಾ ಕಟ್‌ ಕುರ್ತಾ ಸೆಟ್‌ ಬೇಡಿಕೆ ಮಾತ್ರ ಮೊದಲಿಗಿಂತ ಹೆಚ್ಚಿದೆ ಎನ್ನುತ್ತಾರೆ ಮಾರಾಟಗಾರರು.

5 Tips for Alia Cut Kurta Lovers

ಅಲಿಯಾ ಕಟ್‌ ಕುರ್ತಾ/ಸೂಟ್‌/ಗೌನ್‌ ಪ್ರಿಯರಿಗೆ 5 ಟಿಪ್ಸ್

  • ಸೀಸನ್‌ ಶೇಡ್‌ನದ್ದನ್ನು ಆಯ್ಕೆ ಮಾಡಿ.
  • ಈ ಔಟ್‌ಫಿಟ್‌ ಎಥ್ನಿಕ್‌ ಲುಕ್‌ ನೀಡುವುದು ಗ್ಯಾರಂಟಿ.
  • ಈ ಉಡುಪಿಗೆ ಲೈಟ್‌ ಮೇಕಪ್‌ ಕೂಡ ಅಂದವಾಗಿ ಕಾಣುತ್ತದೆ.
  • ದುಪಟ್ಟಾ ಇಲ್ಲದೆಯೂ ಧರಿಸಬಹುದು.
  • ತೀರಾ ದೊಗಲೆಯಾಗಿರುವುದನ್ನು ಆಯ್ಕೆ ಮಾಡಬೇಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Anant Ambani Radhika Merchant: ಹೀಗಿದೆ ನೋಡಿ! ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ನಿವಲ್‌ನ ರಾಯಲ್ ಡ್ರೆಸ್‌ಕೋಡ್ಸ್!

Continue Reading

ಫ್ಯಾಷನ್

Anant Ambani Radhika Merchant: ಹೀಗಿದೆ ನೋಡಿ! ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ನಿವಲ್‌ನ ರಾಯಲ್ ಡ್ರೆಸ್‌ಕೋಡ್ಸ್!

ಜಾಮ್‌ನಗರದಲ್ಲಿ 3 ದಿನಗಳ ಕಾಲ ನಡೆಯಲಿರುವ, ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ರ (Anant Ambani Radhika Merchant) ಗ್ರ್ಯಾಂಡ್‌ ಪ್ರಿ- ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಗಣ್ಯರು ಹಾಗೂ ಸೆಲೆಬ್ರೆಟಿಗಳಿಗೆ ಈಗಾಗಲೇ ಡ್ರೆಸ್‌ಕೋಡ್‌ ಪಾಲಿಸುವ ಬಗ್ಗೆ ಆಹ್ವಾನ ಪತ್ರಿಕೆಯಲ್ಲೇ ಸೂಚಿಸಲಾಗಿದೆ. ಹಾಗಾದಲ್ಲಿ, ಯಾವ್ಯಾವ ಉಡುಗೆ-ತೊಡುಗೆಗಳಿಗೆ ಆದ್ಯತೆ ನೀಡಲಾಗಿದೆ? ಅವು ಯಾವುವು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Anant Ambani Radhika Merchant
ಚಿತ್ರಗಳು: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಫ್ಯಾಮಿಲಿಯ ಸಂಭ್ರಮ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಪೂರ್ವದ 3 ದಿನಗಳ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರು ಹಾಗೂ ಸೆಲೆಬ್ರೆಟಿಗಳಿಗೆ ರಾಯಲ್‌ ಡ್ರೆಸ್‌ಕೋಟ್‌ ಪಾಲಿಸುವ ಬಗ್ಗೆ ಈಗಾಗಲೇ ಆಹ್ವಾನ ಪತ್ರಿಕೆಯಲ್ಲಿ ಸೂಚಿಸಲಾಗಿದೆ. ಹೌದು, ಈಗಾಗಲೇ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮಗಳಿಗೆ ತಕ್ಕಂತೆ ಧರಿಸಬೇಕಾದ ಡ್ರೆಸ್‌ಕೋಡ್‌ ಬಗ್ಗೆ ನಮೂದಿಸಲಾಗಿದೆ. ಯಾವ್ಯಾವ ಬಗೆಯ ಉಡುಗೆ-ತೊಡುಗೆಗಳು ಈ ಲಿಸ್ಟ್‌ನಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್. ಗುಜರಾತ್‌ನ ಜಾಮ್ ನಗರದ ಮೊಟಿಖ್ ವಾಡಿಯಲ್ಲಿನಡೆಯಲಿರುವ ಈ ಗ್ರ್ಯಾಂಡ್‌ ಕಾರ್ಯಕ್ರಮಗಳಲ್ಲಿ ಒಂದೊಂದು ದಿನವೂ ಒಂದೊಂದು ಬಗೆಯ ಡ್ರೆಸ್‌ಕೋಡ್‌ ನಿಗಧಿಪಡಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೂ ಹೊಂದುವಂತೆ ಡ್ರೆಸ್‌ಕೋಡ್‌ ರೂಪಿಸಲಾಗಿದೆ. ಅಷ್ಟೇಕೆ! ಭಾಗವಹಿಸುವ ಸೆಲೆಬ್ರೆಟಿಗಳಿಗೆ ಸಹಾಯವಾಗುವಂತೆ ಮೇಕಪ್‌ ಆರ್ಟಿಸ್ಟ್‌ನಿಂದಿಡಿದು ಎಲ್ಲಾ ಸೌಲಭ್ಯಗಳನ್ನು ಅಲ್ಲಿಯೇ ಕಲ್ಪಿಸಲಾಗಿದೆ ಎನ್ನುತ್ತವೆ ಮೂಲಗಳು.

Anant Ambani Radhika Merchant Cocktail dress code

ಮಾರ್ಚ್ 1: ಇವನಿಂಗ್‌ ಎವರ್‌ಲ್ಯಾಂಡ್‌ ಕಾಕ್‌ಟೈಲ್‌ ಡ್ರೆಸ್ ಕೋಡ್‌

ಇವನಿಂಗ್‌ ಎವರ್‌ಲ್ಯಾಂಡ್‌ ಹೆಸರಿನಲ್ಲಿ ನಡೆಯುವ ಮೊದಲ ದಿನದ ಸಂಜೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಕಾಕ್‌ಟೈಲ್‌ ಡ್ರೆಸ್‌ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಅಂದು ನಡೆಯುವ ಮ್ಯಾಜಿಕಲ್‌ ಮ್ಯೂಸಿಕ್‌, ಡ್ಯಾನ್ಸ್‌ಗೆ ಹೊಂದುವಂತೆ ರಸಮಯ ಸಂಜೆಗೆ ಹೊಂದುವಂತಹ ವೆಸ್ಟರ್ನ್ ಗೌನ್ಸ್, ಪ್ಯಾಂಟ್‌ ಸೂಟ್‌, ಶಿಮ್ಮರ್‌ ಫ್ಲೂಯಿಂಗ್‌ಗೌನ್ಸ್, ಮಿನುಗುವ ಆಕ್ಸೆಸರೀಸ್ ಸೇರಿದಂತೆ ನಾನಾ ಕಾಕ್‌ಟೈಲ್‌ ಉಡುಪುಗಳು ಈ ಲಿಸ್ಟ್‌ನಲ್ಲಿ ಸೇರಿವೆ.

Anant Ambani Radhika Merchant Jungle theme dress code

ಮಾರ್ಚ್ 2: ವಾಕ್‌ ಆನ್‌ ದಿ ವೈಲ್ಡ್ ಸೈಡ್ – ಜಂಗಲ್‌ ಥೀಮ್‌ ಡ್ರೆಸ್‌ಕೋಡ್‌

ಮಾರ್ಚ್ 2ರಂದು ಅಂಬಾನಿ ರೆಸ್ಕ್ಯೂ ಸೆಂಟರ್‌ನಲ್ಲಿ ನಡೆಯಲಿರುವ ವಾಕ್‌ ಆನ್‌ ದಿ ವೈಲ್ಡ್ ಸೈಡ್‌ ಹೆಸರಿನ ಔಟ್‌ಡೋರ್‌ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆಲ್ಲರಿಗೂ ಅನಿಮಲ್‌ ಪ್ರಿಂಟ್ಸ್, ಸಫಾರಿ ಜಂಗಲ್‌ ಥೀಮ್‌ ಡ್ರೆಸ್‌ಕೋಡ್‌ ಫಿಕ್ಸ್ ಮಾಡಲಾಗಿದೆ. ಸುತ್ತಾಡುವ ಕಾರ್ಯಕ್ರಮ ಇದಾಗಿರುವುದರಿಂದ ಕಂಫರ್ಟಬಲ್‌ ಫುಟ್‌ವೇರ್‌ ಧರಿಸಲು ಸೂಚಿಸಲಾಗಿದೆ.

Anant Ambani Radhika Merchant Dazzling desi romance theme dress code

ಮೇಲಾ ರುಜ್‌ (ಜಾತ್ರೆ) – ಡ್ಯಾಜ್ಲಿಂಗ್‌ ದೇಸಿ ರೊಮಾನ್ಸ್ ಥೀಮ್‌ ಡ್ರೆಸ್‌ಕೋಡ್‌

ಇನ್ನು, ಇದೇ ದಿನ ಸಂಜೆ ನಡೆಯಲಿರುವ “ಮೇಲಾ ರುಜ್‌” ಹೆಸರಿನ ದೇಸಿ ಜಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಡ್ಯಾಜ್ಲಿಂಗ್‌ ದೇಸಿ ರೊಮಾನ್ಸ್ ಲುಕ್‌ ನೀಡುವಂತಹ ಗ್ರ್ಯಾಂಡ್‌ ಫ್ಯಾಬ್ರಿಕ್‌ ಹಾಗೂ ಎಂಬ್ರಾಯ್ಡರಿ ವರ್ಕ್ ಇರುವಂತಹ ದೇಸಿ ಉಡುಗೆ-ತೊಡುಗೆ ಧರಿಸುವಂತೆ ಪ್ರಕಟಿಸಲಾಗಿದೆ. ಮಾನಿನಿಯರಿಗೆ ಪಾಸ್ಟೆಲ್‌ ಬೋಲ್ಡ್ ಶೇಡ್‌ನ ಸಿಕ್ವೀನ್ಸ್ ಸೀರೆ, ಗ್ರ್ಯಾಂಡ್‌ ಎಂಬ್ರಾಯ್ಡರಿ ಲೆಹೆಂಗಾ, ಮೆನ್ಸ್ ಕೆಟಗರಿಯವರಿಗೆ ಬಂದಗಾಲ, ಶೆರ್ವಾನಿ ಎಂದು ತಿಳಿಸಲಾಗಿದೆ. ಇದೇ ಸಮಯದಲ್ಲಿ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು, ಡಾನ್ಸ್ ಮಾಡಲು ಸಹಾಯವಾಗುವಂತಹ ಉಡುಗೆಗಳನ್ನು ಧರಿಸಲು ಅವಕಾಶ ಕಲ್ಪಿಸಲಾಗಿದೆ.

Anant Ambani Radhika Merchant Tusker Trails

ಮಾರ್ಚ್ 3 : ಟಸ್ಕರ್‌ ಟ್ರಯಲ್ಸ್ – ಹೇರಿಟೇಜ್‌ ಇಂಡಿಯಾ

ಬೆಳಗ್ಗೆ ಶುರುವಾಗುವ ಟಸ್ಕರ್‌ ಟ್ರಯಲ್‌ ಹೆಸರಿನ ಔಟ್‌ಡೋರ್‌ ಆಕ್ಟಿವಿಟಿಯಲ್ಲಿ, ಅತಿಥಿಗಳು ಕ್ಯಾಶುವಲ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಬೇಕಿದೆ. ಇನ್ನು, ಅದೇ ದಿನ ಸಂಜೆ ವೇಳೆ ನಡೆಯುವ ಹಸ್ತಾಕ್ಷರ್‌ ಕಾರ್ಯಕ್ರಮದಲ್ಲಿ ಹೆರಿಟೇಜ್‌ ಇಂಡಿಯನ್‌ ಡ್ರೆಸ್‌ಕೋಡ್‌ ನೀಡಿದ್ದು, ಇಲ್ಲಿ ನಡೆಯುವ ರಾಯಲ್‌ ಪಾರ್ಟಿಯಲ್ಲಿ ಅತಿಥಿಗಳು, ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ರಾಯಲ್‌ ಲುಕ್ ನೀಡುವ ರೇಷ್ಮೆ ಸೀರೆ, ಲೆಹೆಂಗಾ, ಅನಾರ್ಕಲಿ, ಶೆರ್ವಾನಿ, ಟರ್ಬನ್‌, ಕುರ್ತಾದಂತಹ ದೇಸಿ ಅಟೈರ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ಈ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳು ಹೈ ಸೊಸೈಟಿ ಫ್ಯಾಷನ್‌ನ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sandalwood Star Fashion: ರೈನ್‌ಸ್ಟೋನ್ ಜಂಪ್‌ಸೂಟ್‌ನಲ್ಲಿ ರಾಕ್‌ಸ್ಟಾರ್‌ನಂತೆ ಮಿಂಚಿದ ಸಾನ್ಯಾ ಅಯ್ಯರ್

Continue Reading

ಫ್ಯಾಷನ್

Sandalwood Star Fashion: ರೈನ್‌ಸ್ಟೋನ್ ಜಂಪ್‌ಸೂಟ್‌ನಲ್ಲಿ ರಾಕ್‌ಸ್ಟಾರ್‌ನಂತೆ ಮಿಂಚಿದ ಸಾನ್ಯಾ ಅಯ್ಯರ್

ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರ ಜಗಮಗಿಸುವ ಅತ್ಯಾಕರ್ಷಕ ಡಿಸೈನರ್‌ವೇರ್‌ ರೈನ್‌ಸ್ಟೋನ್‌ ಬಾಡಿಕಾನ್‌ ಜಂಪ್‌ಸೂಟ್‌ನಲ್ಲಿ ಸ್ಯಾಂಡಲ್‌ವುಡ್‌ ಯುವ ನಟಿ ಸಾನ್ಯಾ ಅಯ್ಯರ್ (Sandalwood Star Fashion), ರಾಕ್‌ ಹಾಗೂ ಪಾಪ್‌ ಸ್ಟಾರ್ಸ್ ರಿಹಾನಾ ಹಾಗೂ ಜೆನಿಫರ್‌ ಲೊಪೆಝ್‌ನಂತೆ ಮಿಂಚಿದರು. ಅವರ ಈ ಡಿಸೈನರ್‌ವೇರ್‌ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Sandalwood Star Fashion
ಚಿತ್ರಗಳು: ಸಾನ್ಯಾ ಅಯ್ಯರ್, ಸ್ಯಾಂಡಲ್‌ವುಡ್‌ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರ ಜಗಮಗಿಸುವ ಅತ್ಯಾಕರ್ಷಕ ಡಿಸೈನರ್‌ವೇರ್‌ ರೈನ್‌ಸ್ಟೋನ್‌ ಬಾಡಿಕಾನ್‌ ಜಂಪ್‌ಸೂಟ್‌ನಲ್ಲಿ ಸ್ಯಾಂಡಲ್‌ವುಡ್‌ ಯುವ ನಟಿ ಸಾನ್ಯಾ ಅಯ್ಯರ್ (Sandalwood Star Fashion) ರಾಕ್‌ಸ್ಟಾರ್‌ನಂತೆ ಕಂಗೊಳಿಸಿದ್ದಾರೆ. ನೋಡಲು ರಾಕ್‌ ಹಾಗೂ ಪಾಪ್‌ ಸ್ಟಾರ್‌ಗಳಾದ ರಿಹಾನಾ ಹಾಗೂ ಜೆನಿಫರ್‌ ಲೊಪೆಝ್‌ನಂತೆ ಇತ್ತೀಚಿನ ವೇದಿಕೆಯೊಂದರ ಪರ್ಫಾಮಾನ್ಸ್‌ವೊಂದರಲ್ಲಿ ಮಿಂಚಿದರು. ಅವರ ಈ ಅತ್ಯಾಕರ್ಷಕ ಡಿಸೈನರ್‌ವೇರ್‌ ಕುರಿತಂತೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.

What is a Rhinestone Bodycon Jumpsuit?

ಏನಿದು ರೈನೋಸ್ಟೋನ್ ಬಾಡಿಕಾನ್‌ ಜಂಪ್‌ಸೂಟ್‌?

ಮೆರ್ಮೈಡ್ ಬಾಡಿಕಾನ್‌ ರೈನೋಸ್ಟೋನ್‌ ಜಂಪ್‌ಸೂಟ್‌, ರಾಕ್‌ ಸ್ಟಾರ್ ಹಾಗೂ ಪಾಪ್‌ಸ್ಟಾರ್ ಲುಕ್‌ ನೀಡುವಂತಹ ಡಿಸೈನರ್‌ವೇರ್‌. ಅಂದಹಾಗೆ, ಈ ಔಟ್‌ಫಿಟ್‌ಗೆ ಅತ್ಯುತ್ತಮ ಬಾಡಿ ಮಾಸ್‌ ಇಂಡೆಕ್ಸ್ ಹೊಂದಿರಬೇಕು. ಬಾಡಿ ಫಿಟ್‌ ಇರಬೇಕು. ಲೈಕ್ರಾ ಮೆಟಿರಿಯಲ್‌ನಲ್ಲಿ ಸಿದ್ಧಗೊಂಡಿರುವ ಈ ಔಟ್‌ಫಿಟ್‌ ಬ್ಲಾಕ್‌ ಸಿಕ್ವೀನ್ಸ್ ಪ್ಯಾಚ್‌ ವರ್ಕ್ನ ಫ್ಯಾಬ್ರಿಕ್‌ ಒಳಗೊಂಡಿದೆ. ಗ್ಲ್ಯೂ ಫಿನಿಶಿಂಗ್‌ ನೀಡುವ ಈ ಉಡುಪು ರೆಡ್‌ ಕಾರ್ಪೆಟ್ ಹಾಗೂ ಸ್ಟೇಜ್‌ ಕಾರ್ಯಕ್ರಮಗಳಿಗೆ ಪರ್ಫೆಕ್ಟ್ ಹೊಂದುತ್ತದೆ. ಇಡೀ ಡಿಸೈನರ್‌ವೇರ್‌ ಜ್ಯುವೆಲ್‌ನಂತೆ ಮಿನುಗುವುದರಿಂದ ಜ್ಯುವೆಲರಿಗಳನ್ನು ಧರಿಸುವ ಅಗತ್ಯವಿರುವುದಿಲ್ಲ, ಅಷ್ಟೊಂದು ಆಕರ್ಷಕವಾಗಿದೆ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ.

Love the Sanya rhinestone jumpsuit

ಸಾನ್ಯಾ ರೈನ್ ಸ್ಟೋನ್‌ ಜಂಪ್‌ಸೂಟ್‌ ಲವ್‌

ಈ ಕುರಿತಂತೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ನಟಿ ಸಾನ್ಯಾ, ನನಗಂತೂ ಈ ಡಿಸೈನರ್‌ವೇರ್‌ ಬಹಳ ಇಷ್ಟವಾಯಿತು. ಯಾಕೆಂದರೇ, ವಕೌಟ್‌ ಮಾಡುವ ನಮಗೆ ಫಿಟ್ನೆಸ್‌ ಬಗ್ಗೆ ತುಸು ಪ್ರೀತಿ ಜಾಸ್ತಿ. ಇದಕ್ಕೆ ಪೂರಕ ಎಂಬಂತೆ, ಲಕ್ಷ್ಮಿ ಕೃಷ್ಣ ಅವರ ಈ ಡಿಸೈನರ್‌ವೇರ್‌ ಧರಿಸಿದಾಗ ಆಗಿದ್ದ ಖುಷಿಗೆ ಪಾರವೇ ಇರಲಿಲ್ಲ! ರಾಕ್‌ಸ್ಟಾರ್‌ ಫಿಲೀಂಗ್‌ ನೀಡಿತು. ಇದು ನನ್ನ ಅಲ್ಟಿಮೆಂಟ್‌ ಫ್ಯಾಷನ್‌ವೇರ್‌ ಆಗಿತ್ತು! ಇದುವರೆಗೂ ಈ ರೀತಿಯ ಫ್ಯಾಷನ್‌ವೇರ್‌ ನಾನು ಧರಿಸಿಯೇ ಇರಲಿಲ್ಲ! ಈ ಔಟ್‌ಫಿಟ್‌ ಎಷ್ಟೊಂದು ಕ್ರಿಯೇಟಿವ್‌ ಆಗಿತ್ತೆಂದರೇ ಡಿಸೈನರನ್ನು ಪ್ರಶಂಸಿಸಲೇಬೇಕು ಎನ್ನುತ್ತಾರೆ. ಅವರ ಪ್ರಕಾರ, ಔಟ್‌ಆಫ್‌ ಬಾಕ್ಸ್ ಯೋಚನೆ ಮಾಡಿದಾಗ ಮಾತ್ರ ಡಿಸೈನರ್‌ಗಳಿಗೆ ಇಂತಹ ಕ್ರಿಯೇಟಿವ್‌ ಫ್ಯಾಷನ್‌ ಸೃಷ್ಟಿಸಲು ಸಾಧ್ಯ ಎಂದು ಹೊಗಳುತ್ತಾರೆ.

Sanya Iyer, Sandalwood actress

ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಮಾತು

ಈ ಡಿಸೈನರ್‌ವೇರ್‌ ಸಿದ್ಧಪಡಿಸಲು ಅದರ ಮೇಲಿನ ವರ್ಕ್‌ಗಾಗಿ ಸರಿಸುಮಾರು 3000 ಗಂಟೆಗಳು ಹಿಡಿದಿವೆ. ಇದೊಂದು ಪ್ರಯೋಗಾತ್ಮಕ ಕಾಸ್ಟ್ಯೂಮ್‌. ಸುಮಾರು 5000 ರೈನ್‌ಸ್ಟೋನ್ಸ್ ಈ ಉಡುಪಿನ ಮೇಲಿದೆ. ಸ್ಯಾಂಡಲ್‌ವುಡ್‌ ತಾರೆಯರು ಕೂಡ ಇಂತಹ ಗ್ರ್ಯಾಂಡ್‌ ಡಿಸೈನರ್‌ವೇರ್‌ ಧರಿಸಿ ಪರ್ಫಮಾನ್ಸ್ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ಡಿಜಿಟಲ್‌ ಪ್ರಿಂಟ್‌ ಹಾಗೂ ಹ್ಯಾಂಡ್‌ವರ್ಕ್‌ನಿಂದ ಕೂಡಿರುವ ಈ ಡ್ರೆಸ್, ಸಾನ್ಯಾ ಧರಿಸಿದ್ದು ನನಗೆ ಖುಷಿಯಾಯಿತು ಎಂದು ತಮ್ಮ ಎಕ್ಸ್ ಕ್ಲೂಸೀವ್‌ ಡಿಸೈನರ್‌ವೇರ್‌ ಬಗ್ಗೆ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ವಿಸ್ತಾರ ನ್ಯೂಸ್‌ಗೆ ವಿವರಿಸಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saree Blouse Design: ಗ್ರ್ಯಾಂಡ್‌ ಸೀರೆ ಬ್ಲೌಸ್‌ಗೆ ಅತ್ಯಾಕರ್ಷಕ ಬಾಜುಬಂದ್‌ ಎಂಬ್ರಾಯ್ಡರಿ ಡಿಸೈನ್‌ ಹೇಗಿದೆ ನೋಡಿ!

Continue Reading
Advertisement
R Ashok
ಪ್ರಮುಖ ಸುದ್ದಿ20 mins ago

R Ashok : ರಾಜ್ಯ ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ

Lakshmi Hebbalkar Handicapped
ಬೆಂಗಳೂರು48 mins ago

Lakshmi Hebbalkar : ವಿಕಲಚೇತನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವೆ ಹೆಬ್ಬಾಳ್ಕರ್

FSL Report
ಪ್ರಮುಖ ಸುದ್ದಿ55 mins ago

Sedition Case : ವಿಧಾನಸೌಧದಲ್ಲಿ ಪಾಕ್​ ಜಿಂದಾಬಾದ್​ ಕೇಸ್​​ನ ಎಫ್​ಎಸ್​​ಎಲ್​ ವರದಿ ಸಲ್ಲಿಕೆ

Russia Ukraine War
ವಿದೇಶ1 hour ago

Russia Ukraine War: ರಷ್ಯಾ ಸೇನೆಯಲ್ಲಿರುವ ಭಾರತೀಯರು ಶೀಘ್ರ ತಾಯ್ನಾಡಿಗೆ; ವಿದೇಶಾಂಗ ಸಚಿವಾಲಯದ ಭರವಸೆ

Modi GDP
ಪ್ರಮುಖ ಸುದ್ದಿ2 hours ago

GDP Growth : ಜಿಡಿಪಿಯ ಭರ್ಜರಿ ಏರಿಕೆಗೆ ಮೋದಿ ಸಂತಸ; ಏನಂದ್ರು ಅವರು?

2nd PU Exam from tomorrow what are the conditions
ಶಿಕ್ಷಣ2 hours ago

2nd PU Exam: ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಂಡಿಷನ್!

insurance
ಮನಿ-ಗೈಡ್2 hours ago

Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Budget session Siddaramaiah
ವಿಧಾನಮಂಡಲ ಅಧಿವೇಶನ2 hours ago

Budget Session : ಬಿಜೆಪಿಯ ಜೈ ಶ್ರೀರಾಮ್‌ VS ಸಿದ್ದರಾಮಯ್ಯರ ಜೈ ಸೀತಾರಾಮ್‌!

Nitasha Kaul
ದೇಶ2 hours ago

Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

Siddaramaiah plan behind accepting Caste Census Report Sunil Kumar reveals reason
ರಾಜಕೀಯ3 hours ago

‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ17 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ4 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌