-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಾಷ್ಟ್ರದಾದ್ಯಂತ ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿಯನ್ನು (krishna janmashtami 2024) ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಾಮಾನ್ಯ ಜನರಿಂದಿಡಿದು, ಸೆಲೆಬ್ರೆಟಿಗಳು ಕೂಡ ಗೋಕುಲಾಷ್ಟಮಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಕೆಲವರು, ತಮ್ಮ ಮಕ್ಕಳನ್ನು ಕೃಷ್ಣ-ರಾಧೆಯಂತೆ ಸಿಂಗರಿಸಿ, ಸೆಲೆಬ್ರೇಟ್ ಮಾಡಿದ್ದಾರೆ. ಇನ್ನು, ಕೆಲವರು ತಮ್ಮ ಬಾಲ್ಯದಲ್ಲಿನ ಕೃಷ್ಣನ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರೇ, ಮತ್ತೇ ಕೆಲವರು ಗೋಪಾಲಕನ ಹಾಡುಗಳಿಗೆ ಕುಣಿದು ಕುಪ್ಪಳಿಸಿ ವಿಡಿಯೋ ಮಾಡಿ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ಈ ಎಲ್ಲದರ ಈ ಕುರಿತಂತೆ ಇಲ್ಲಿದೆ ವರದಿ.
ಸೆಲೆಬ್ರೆಟಿಗಳ ಕೃಷ್ಣ ಜನ್ಮಾಷ್ಟಮಿ
ಸಾಕಷ್ಟು ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ತಾರೆಯರು ತಮ್ಮದೇ ಆದ ರೀತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದ್ದಾರೆ. ಹಿರಿಯ-ಕಿರಿಯ ತಾರೆಯರು ಕೃಷ್ಣನ ಪೂಜೆಯನ್ನು ಮಾಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವು ನಟ-ನಟಿಯರು, ಕೃಷ್ಣನ ಮಂದಿರಗಳಿಗೆ ಭೇಟಿ ಇತ್ತ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್‌ನ ಹಿರಿಯ ನಟಿ ಹೇಮಾ ಮಾಲಿನಿ, ತಮ್ಮ ನೃತ್ಯ ರೂಪಕದ ವಿಡಿಯೋ ಹಂಚಿಕೊಂಡಿದ್ದು, ನಟ ರಾಜ್ ಗ್ರೋವರ್ ಕೃಷ್ಣನನ್ನು ಎತ್ತಿ ಹಿಡಿದು ಆಚರಿಸಿದ್ದಾರೆ. ನಟಿ ದೀಪಿಕಾ ದಾಸ್ ಸೇರಿದಂತೆ ಹಲವು ನಟಿಯರು ಕೃಷ್ಣನ ತೊಟ್ಟಿಲು ತೂಗುವ, ಆರಾಧಿಸುವ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಸೆಲೆಬ್ರೆಟಿಗಳ ಮುದ್ದು ಮಕ್ಕಳ ಸೆಲೆಬ್ರೇಷನ್
ನಟಿ ಪ್ರಣೀತಾ, ತಮ್ಮ ಮೊದಲ ಮಗುವಿನ ಕೃಷ್ಣನ ಅವತಾರದ ತುಂಟಾಟದ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ. ಇನ್ನು ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಮಗಳನ್ನು ರಾಧೆಯಂತೆ ಸಿಂಗರಿಸಿದ್ದಾರೆ. ನಟಿ ಮಮತಾ ರಾವುತ್ ಕಂದಮ್ಮನನ್ನು ಕೃಷ್ಣನಂತೆ ಅಲಂಕರಿಸಿದ್ದಾರೆ. ಇದೇ ರೀತಿ ನಟಿ ರಾಧಿಕಾ ಪಂಡಿತ್‌ರಿಂದ ಹಿಡಿದು, ಟೆಲಿಲೋಕದ ತಾರೆಯರು ಕೂಡ ಮಕ್ಕಳನ್ನು ಘನಶ್ಯಾಮನಂತೆ ಸಿಂಗರಿಸಿ ಸಂತಸ ಪಟ್ಟಿದ್ದಾರೆ.
ಇದನ್ನೂ ಓದಿ: Krishna Janmashtami Fancy Dress Tips: ಕೃಷ್ಣನ ಫ್ಯಾನ್ಸಿ ಡ್ರೆಸ್ ಮಾಡುವವರಿಗೆ ಇಲ್ಲಿದೆ 5 ಟಿಪ್ಸ್!
ಮಾಡೆಲ್‌ಗಳ ಕೃಷ್ಣನ ಆರಾಧನೆ
ಇತರೇ ಕ್ಷೇತ್ರದವರಂತೆ ಫ್ಯಾಷನ್ ಕ್ಷೇತ್ರದ ಸೆಲೆಬ್ರೆಟಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಈ ಗೋಕುಲಾಷ್ಟಮಿಯನ್ನು ಮಾಡರ್ನ್ ಶೈಲಿಯಲ್ಲಿ ಆಚರಿಸಿ, ಸಂಭ್ರಮಿಸಿದ್ದಾರೆ. ಕೃಷ್ಣನ ಹಾಡುಗಳಿಗೆ ವಿಡಿಯೋ ರೀಲ್ಸ್ ಮಾಡಿ, ಖುಷಿ ಪಟ್ಟಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)