ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಿಲ್ಲಾ ಮಟ್ಟದಲ್ಲಿ ನಡೆದ ಮಿಸ್, ಮಿಸ್ಟರ್, ಮಿಸೆಸ್ ಹಾಗೂ ಟೀನ್ ಶಿವಮೊಗ್ಗ ಸೇರಿದಂತೆ ಸಾಕಷ್ಟು ಟೈಟಲ್‌ಗಳ ಹೆಸರಿನಲ್ಲಿ ನಡೆದ ಫ್ಯಾಷನ್ ಪೇಜೆಂಟ್ (Fashion pageant), ನೋಡುಗರ ಗಮನ ಸೆಳೆಯುವುದರೊಂದಿಗೆ ಸ್ಥಳೀಯ ಫ್ಯಾಷನ್ ಪ್ರಿಯರನ್ನು ಆಕರ್ಷಿಸಿತು. ಇದರಲ್ಲಿ ಪಾಲ್ಗೊಂಡು ವಿಜೇತರಾದವರ ಪಟ್ಟಿ ಹಾಗೂ ಪೇಜೆಂಟ್ ವರದಿ ಇಲ್ಲಿದೆ. ನಾನಾ ಕೆಟಗರಿಯಲ್ಲಿ ತೆರೆಕ್ಸ್ ವೆಂಚರ್ ಪ್ರಸ್ತುತಿಯಲ್ಲಿ ನಡೆದ ಈ ಫ್ಯಾಷನ್ ಪೇಜೆಂಟ್‌ನಲ್ಲಿ ಭಾಗವಹಿಸಿದ್ದವರ ಟ್ಯಾಲೆಂಟ್ ಅನಾವರಣಕ್ಕೆ ಈ ವೇದಿಕೆ ಸಹಕಾರಿಯಾಯಿತು. ಫ್ಯಾಷನ್ ಕೊರಿಯಾಗ್ರಾಫರ್ ಆದರ್ಶ್ ಜೈನ್ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಅಕ್ಷರ್ ಜೈನ್ ಹಾಗೂ ಸಿಂಚನಾ ಸಾಥ್ ನೀಡಿದ್ದರು.
ಪ್ರಿನ್ಸ್ ಕೆಟಗರಿಯ ವಿಜೇತರು
ಪ್ರಿನ್ಸ್ ಕೆಟಗರಿಯಲ್ಲಿ ಸುಭಾಶ್ ವಿಜೇತರಾದರೇ, ಆಯುಷ್ ಹಾಗೂ ಇಕ್ಶಾಕು ಕ್ರಮವಾಗಿ ಮೊದಲನೇ ಹಾಗೂ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ಪ್ರಿನ್ಸೆಸ್ ಕೆಟಗರಿಯಲ್ಲಿ ಪಾಲ್ಗೊಂಡಿದ್ದ ಸಾನ್ವಿ ಕಿರೀಟ ಮುಡಿಗೇರಿಸಿಕೊಂಡರೇ, ಲೈರಾ ಬಿಪಿನ್ ಹಾಗೂ ಅರ್ವಿ ಮಂಜುನಾಥ್ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಅಪ್ ಸ್ಥಾನ ಗಳಿಸಿದರು.
ಟೀನ್ ಕೆಟಗರಿಯ ವಿಜೇತರು
ಹರ್ಷಿತಾ, ಪ್ರೀತಿ ಹಾಗೂ ಸಿಂಚನಾ ಕ್ರಮವಾಗಿ ವಿನ್ನರ್, 1, 2 ನೇ ರನ್ನರ್ ಅಪ್ ಸ್ಥಾನ ಗಳಿಸಿದರು. ಇನ್ನು ಹುಡುಗರಲ್ಲಿ ನಗ್ಗಾನೇಶ್, ತೇಜೇಶ್ ಹಾಗೂ ಸಾತ್ವಿಕ್ ವಿನ್ನರ್, 1, 2 ನೇ ಸ್ಥಾನ ಗಳಿಸಿದರು.
ಮಿಸ್ ಮತ್ತು ಮಿಸ್ಟರ್ ಶಿವಮೊಗ್ಗ ಗ್ಲಿಟ್ಟರ್
ಜಾನ್ಹವಿ ಮಿಸ್ ಶಿವಮೊಗ್ಗ ಕಿರೀಟ ಧರಿಸಿದರೇ, ಭೂಮಿ ಹಾಗೂ ಸಿಂಚನಾ ಕ್ರಮವಾಗಿ ಮೊದಲನೇ ಹಾಗೂ ಎರಡನೇ ಸ್ಥಾನ ಗಳಿಸಿದರು. ಲೋಹಿತ್, ಮಿಸ್ಟರ್ ಶಿವಮೊಗ್ಗ ಟೈಟಲ್ ಗೆದ್ದರೇ, ರಿಶಿಕೇಷ್ ಹಾಗೂ ತರುಣ್ ಗೌಡ 1, 2 ನೇ ಸ್ಥಾನ ಗಳಿಸಿದರು.
ರೆಡಿಯಂಟ್ ಮಿಸೆಸ್ ಶಿವಮೊಗ್ಗ
ಭೂಮಿಕಾ ಸುನೀಲ್ ಮಿಸೆಸ್ ಶಿವಮೊಗ್ಗ ಟೈಟಲ್ ವಿಜೇತರಾದರು. ಸಹನಾ ರಾಯನ್, ದಿವ್ಯಾ ವಿನಯ್ ಕ್ರಮವಾಗಿ ವಿಜೇತರಾದರು.
ಜ್ಯೂರಿ ಪ್ಯಾನೆಲ್
ಜ್ಯೂರಿ ಪ್ಯಾನೆಲ್‌ನಲ್ಲಿ, ಮಿಸೆಸ್ ಕ್ರಿಸ್ಟಲ್ ಕ್ವೀನ್ ರಷ್ಯಾ- ಅರ್ಪಿತಾ ದೇವ್, ಮಿಸ್ ಕ್ವೀನ್ ಆಫ್ ಕರ್ನಾಟಕ ಕಾವ್ಯಾ, ಹಂಸಿಕಾ ಇನ್‌ಸ್ಟಿಟ್ಯೂಟ್ ಸಂಸ್ಥಾಪಕರಾದ ಅಖಿಲಾ ಪಾಲ್ಗೊಂಡಿದ್ದರು. ಹಂಸಿಕಾ ಫ್ಯಾಷನ್ ಡಿಸೈನಿಂಗ್, ಟ್ರಯಲ್ ಔಟ್ ಎಂಟರ್‌ಟೈನ್‌ಮೆಂಟ್ಸ್, ಬ್ರಾಂಡ್ ಕ್ರ್ಯೂ ಅಕಾಡೆಮಿ, ಜಾಗರ್ ಇವೆಂಟ್ಸ್ ಸೇರಿದಂತೆ ನಾನಾ ಬ್ರಾಂಡ್‌ಗಳು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದವು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Actress Saree Fashion: ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ ಕನ್ನಡದ ನಟಿ