Actress Saree Fashion: ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ ಕನ್ನಡದ ನಟಿ - Vistara News

ಫ್ಯಾಷನ್

Actress Saree Fashion: ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಸೀರೆಯಲ್ಲಿ ಮಿಂಚಿದ ಕನ್ನಡದ ನಟಿ

ಅಂತಾರಾಷ್ಟ್ರೀಯ ಮಟ್ಟದ ಗ್ರ್ಯಾಮಿ ಅವಾರ್ಡ್ ರೆಡ್‌ಕಾರ್ಪೆಟ್ ಮೇಲೆ ಕನ್ನಡದ ನಟಿ ಯಮುನಾ ಶ್ರೀ ನಿಧಿಯವರು ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸೀರೆಯುಟ್ಟು (Actress Saree Fashion) ಎಲ್ಲರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಅವರು ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.

VISTARANEWS.COM


on

Actress Saree Fashion
ಚಿತ್ರಗಳು: ಯಮುನಾ ಶ್ರೀನಿಧಿ, ಸ್ಯಾಂಡಲ್‌ವುಡ್‌ ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂದರ್ಶನ : ಶೀಲಾ ಸಿ. ಶೆಟ್ಟಿ
ಈ ಸಾಲಿನ 66ನೇ ಗ್ರ್ಯಾಮಿ ಅವಾರ್ಡ್ ರೆಡ್‌ಕಾರ್ಪೆಟ್ ನಲ್ಲಿ ಕನ್ನಡದ ನಟಿ ಯಮುನಾ ಶ್ರೀನಿಧಿಯವರು ಸೀರೆಯಲ್ಲಿ (Actress Saree Fashion) ಹೆಜ್ಜೆ ಹಾಕಿ, ಕನ್ನಡಿಗರ ಗಮನ ಸೆಳೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಈ ವರ್ಣರಂಜಿತ ಸಮಾರಂಭದಲ್ಲಿ ಪಾಲ್ಗೊಳ್ಳುವುದೇ ಹೆಮ್ಮೆಯ ವಿಚಾರ. ಇನ್ನು, ಇಲ್ಲಿ ಭಾಗವಹಿಸುವ ಸೆಲೆಬ್ರೆಟಿಗಳು ಗ್ಲಾಮರಸ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಆದರೆ, ಯಮುನಾ ಅವರು ಮಾತ್ರ, ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತಂತೆ ವಿಸ್ತಾರ ನ್ಯೂಸ್‌ಗೆ ಸಂದರ್ಶನ ನೀಡಿರುವ ಅವರು, ತಮ್ಮ ಸೀರೆ ಫ್ಯಾಷನ್‌ ಹಾಗೂ ಅಲ್ಲಿನ ಅನುಭವವನ್ನು ಹಂಚಿಕೊಂಡಿದ್ದಾರೆ.

Yamuna Srinidhi, Sandalwood actress

ವಿಸ್ತಾರ ನ್ಯೂಸ್‌

ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಸೀರೆ ಧರಿಸುವ ಬಗ್ಗೆ ನೀವು ಯೋಚಿಸಿದ್ದೇಕೆ?

ಯಮುನಾ ಶ್ರೀ ನಿಧಿ

66ನೇ ಗ್ರ್ಯಾಮಿ ಅವಾರ್ಡ್ಸ್‌ಗೆ ಹಾಜರಾಗುತ್ತಿದ್ದೇನೆ ಎಂಬ ಸುದ್ದಿಯನ್ನು ನಾನು ಮೊದಲು ಬಹಿರಂಗಪಡಿಸಿದಾಗ, ನನಗೆ ಹೆಚ್ಚು ಮಂದಿ ಕೇಳಿದ ಮೊದಲ ಪ್ರಶ್ನೆಯೆಂದರೆ, “ನೀವು ಏನು ಧರಿಸಲಿದ್ದೀರಿ?” ಎಂಬುದಾಗಿತ್ತು. ಕಾರಣ, ವೆಸ್ಟರ್ನ್ ಗೌನ್‌ ಎಂದು ಹಲವರು ಭಾವಿಸಿದ್ದರು. ಆದರೆ, ನಾನು ಸಂಸ್ಕೃತಿ, ನಂಬಿಕೆ ಹಾಗೂ ಆಚರಣೆಗಳಿಗೆ ಪೂರಕವಾಗಿ ನಮ್ಮ ಮೌಲ್ಯಗಳನ್ನು ಹಾಗೂ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಸೀರೆಯನ್ನು ಆಯ್ಕೆ ಮಾಡಿದೆ.

ವಿಸ್ತಾರ ನ್ಯೂಸ್‌

ಅಂತಾರಾಷ್ಟ್ರೀಯ ಮಟ್ಟದ ಈ ಸಮಾರಂಭದಲ್ಲಿ ಸೀರೆಗೆ ಆದ್ಯತೆ ನೀಡಿದ ನೀಡಬೇಕೆಂಬ ಭಾವ ನಿಮಗೆ ಅನಿಸಿದ್ದು ಯಾಕೆ?

Sandalwood actress, Yamuna Srinidhi

ಯಮುನಾ ಶ್ರೀ ನಿಧಿ

ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ನಾನು ಏನನ್ನು ಧರಿಸಬೇಕು ಎಂಬುದು ನನಗೆ ಮೊದಲೇ ಸ್ಪಷ್ಟವಾಗಿ ತಿಳಿದಿತ್ತು. ಭಾರತೀಯ ಸಮುದಾಯವನ್ನು ಪ್ರತಿನಿಧಿಸುವ ಅವಕಾಶ ನನಗೆ ದೊರಕಿತ್ತು. ಗುಂಪಲ್ಲಿ ಒಬ್ಬಳಾಗಿ ಕಾಣುವ ಬದಲು, ಸಾಂಪ್ರದಾಯಿಕ ಸೀರೆಯನ್ನು ಉಟ್ಟು ಓಡಾಡಲು ನಿರ್ಧರಿಸಿದೆ. ಅಲ್ಲಿ ಭೇಟಿಯಾದ ಎಲ್ಲಾ ಪ್ರಸಿದ್ಧ ಗಾಯಕರು “ಸ್ಯಾರಿ” ಎಂದು ಗುರುತಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು!

ವಿಸ್ತಾರ ನ್ಯೂಸ್‌

ನೀವು ಧರಿಸಿದ್ದ ಡಿಸೈನರ್‌ ಸೀರೆಯ ಬಗ್ಗೆ ವಿವರಿಸಿ?

ಯಮುನಾ ಶ್ರೀನಿಧಿ

ನಾನು ಧರಿಸಿದ ಕಾಟನ್‌ ಮಿಶ್ರಣದ ಹಾರ್ಡ್‌ಸಿಲ್ಕ್‌ ಸೀರೆಯು ಲಾಸ್ ಏಂಜಲೀಸ್ನ ವಿಂಟರ್‌ ಸೀಸನ್‌ನಲ್ಲೂ ಬೆಚ್ಚಗಿರಿಸಿತ್ತು. ಇನ್ನು ಸೀರೆಯ ಬಣ್ಣ ಬಿಳಿಯಾಗಿತ್ತು. ಇದು ವಿಶ್ವ ಶಾಂತಿಯ ಧ್ಯೋತಕವಾಗಿತ್ತು. ಸೀರೆ ಮೇಲಿನ ನವಿಲು ಗರಿ ಮತ್ತು ಕೊಳಲಿನ ಕಸೂತಿ ಭಗವಾನ್ ಕೃಷ್ಣ ಮತ್ತು ದೈವಿಕ ಸಂಗೀತವನ್ನು ಪ್ರತಿನಿಧಿಸುತ್ತಿತ್ತು.

ವಿಸ್ತಾರ ನ್ಯೂಸ್‌

ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನು?

According to comfort level and style

ಯಮುನಾ ಶ್ರೀನಿಧಿ

ನನ್ನ ವ್ಯಕ್ತಿತ್ವಕ್ಕೆ ಅನುಗುಣವಾದ ಫ್ಯಾಷನ್‌ ಸ್ಟೇಟ್‌ಮೆಂಟ್‌ ನನ್ನದು. ಕಂಫರ್ಟ್ ಲೆವೆಲ್ ಮತ್ತು ಸ್ಟೈಲ್‌ಗೆ ಅನುಸಾರವಾಗಿ ಡ್ರೆಸ್ಸಿಂಗ್ ಮಾಡುವುದು ನನ್ನ ಸ್ಟೈಲಿಂಗ್‌ನಲ್ಲಿದೆ.

ವಿಸ್ತಾರ ನ್ಯೂಸ್‌

ನಿಮ್ಮ ಪ್ರಕಾರ, ಭಾರತೀಯ ಸಂಸ್ಕೃತಿಯ ಬಗ್ಗೆ ವಿದೇಶಿಗರಿಗೆ ಇರುವ ಅಭಿಪ್ರಾಯವೇನು ?

Yamuna Srinidhi, Sandalwood actress

ಯಮುನಾ ಶ್ರೀನಿಧಿ

ಕಳೆದ ಕೆಲವು ವರ್ಷದಿಂದ ಸಾಕಷ್ಟು ಬದಲಾವಣೆಯಾಗಿದ್ದು, ಕೇವಲ ನಾವು ಧರಿಸುವ ಧಿರಿಸುಗಳನ್ನು ಇಷ್ಟಪಡುವುದು ಮಾತ್ರವಲ್ಲ, ಅದರೊಂದಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯ, ಆಹಾರ- ಉಡುಗೆ, ಪ್ರವಾಸೋದ್ಯಮ, ಇತಿಹಾಸ, ತಂತ್ರಜ್ಞಾನ ಮತ್ತು ಬೆಳವಣಿಗೆಯ ತಿಳಿದುಕೊಳ್ಳಲು ವಿದೇಶಿಗರು ಆಸಕ್ತಿ ತೋರಿಸುತ್ತಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Galentine’s day Partywears: ಗ್ಯಾಲೆಂಟೈನ್ಸ್ ಡೇಯಂದು ಟ್ರೆಂಡಿಯಾದ 3 ಶೈಲಿಯ ಬಿಂದಾಸ್‌ ಪಾರ್ಟಿವೇರ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Dog Ethnicwear: ನಾಯಿಗಳಿಗೂ ಬಂತು ಎಥ್ನಿಕ್‌ ವೇರ್ಸ್! ಎಷ್ಟು ಮುದ್ದಾಗಿ ಕಾಣಿಸುತ್ತಿವೆ!

Dog Ethnicwear: ಇದೀಗ ಮುದ್ದು ಶ್ವಾನಗಳು ಕೂಡ ಗ್ರ್ಯಾಂಡ್‌ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಇವಕ್ಕೆ ಪೂರಕ ಎಂಬಂತೆ ನಾನಾ ಪೆಟ್‌ ಶಾಪ್‌ಗಳು ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಅವುಗಳಲ್ಲಿ ಯಾವ್ಯಾವ ಬಗೆಯವು ಬೇಡಿಕೆ ಪಡೆದುಕೊಂಡಿವೆ ಎಂಬುದರ ಕುರಿತಂತೆ ಡಾಗ್‌ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

By

Dog Ethnicwear
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಶ್ವಾನಗಳು ಇತ್ತೀಚೆಗೆ (Dog Ethnicwear) ಎಥ್ನಿಕ್‌ವೇರ್‌ಗಳಲ್ಲಿ ಮಿಂಚುತ್ತಿವೆ. ಅಂಬಾನಿ ಫ್ಯಾಮಿಲಿಯ (ambani family) ಮುದ್ದು ಶ್ವಾನಗಳಾದ (dog) ಹ್ಯಾಪಿ ಹಾಗೂ ಪಾಪ್‌ಕಾರ್ನ್‌ ವೆಡ್ಡಿಂಗ್‌ ಔಟ್‌ಫಿಟ್‌ನಲ್ಲಿ (Wedding outfit) ಕಾಣಿಸಿಕೊಂಡು ಸುದ್ದಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಮುದ್ದು ಶ್ವಾನಗಳು ಕೂಡ ಗ್ರ್ಯಾಂಡ್‌ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಮನುಷ್ಯರಂತೆ ಉಡುಪನ್ನು ಧರಿಸಿ ಮೆರೆಯುತ್ತಿವೆ.

ಪೆಟ್‌ ಶಾಪ್‌ಗಳಲ್ಲೂ ಲಭ್ಯ

ಪೆಟ್‌ ಶಾಪ್‌ಗಳು ಡಾಗ್ಗಿಗಳ ನಾನಾ ಬಗೆಯ ವೈವಿಧ್ಯಮಯ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಪುಟ್ಟ ನಾಯಿಮರಿಯಿಂಡಿದು ದೊಡ್ಡ ಗೋಲ್ಡನ್‌ ರಿಟ್ರಿವರ್‌ನಂತಹ ನಾಯಿ ಕೂಡ ಧರಿಸಬಹುದಾದ ಎಥ್ನಿಕ್‌ವೇರ್‌ಗಳನ್ನು ಲಾಂಚ್‌ ಮಾಡಿವೆ.

ಆಯಾ ಜಾತಿಯ ಶ್ವಾನಗಳಿಗೆ ಅನುಗುಣವಾಗಿ ಎಥ್ನಿಕ್‌ವೇರ್‌ಗಳ ಆಯ್ಕೆ ಮಾಡಬಹುದು ಎನ್ನುವ ಡಾಗ್‌ ಸ್ಟೈಲಿಸ್ಟ್ ರಾಕೇಶ್‌, ಈ ಕುರಿತಂತೆ ಒಂದಿಷ್ಟು ಮಾಹಿತಿ ನೀಡಿದ್ದಾರೆ.

Dog Ethnicwear
ಚಿತ್ರಕೃಪೆ: ಇನ್ ಸ್ಟಾಗ್ರಾಮ್


ಟ್ರೆಂಡಿಯಾಗಿರುವ ಡಾಗ್‌ ಎಥ್ನಿಕ್‌ವೇರ್ಸ್

ಸ್ಯಾಟಿನ್‌, ವೆಲ್ವೆಟ್‌, ಕಾಟನ್‌, ಕಾಟನ್‌ ಸಿಲ್ಕ್‌ ಹೀಗೆ ನಾನಾ ಫ್ಯಾಬ್ರಿಕ್‌ನ ಫ್ರಾಕ್‌ ಶೈಲಿಯ ಡ್ರೆಸ್‌ಗಳು, ಹೆಣ್ಣು ನಾಯಿಮರಿಗಳಿಗೆ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದರೇ, ಗಂಡು ನಾಯಿಮರಿಗಳಿಗೆ ನೋಡಲು ಕೋಟ್‌ ಎಂದೆನಿಸುವ ವೇಸ್ಟ್ಕೋಟ್‌ ಶೈಲಿಯಂತವು ಬಂದಿವೆ ಎನ್ನುತ್ತಾರೆ ಪೆಟ್‌ ಶಾಪ್‌ವೊಂದರ ಮಾಲೀಕರು.

Dog Ethnicwear
ಚಿತ್ರಕೃಪೆ: ಇನ್ ಸ್ಟಾಗ್ರಾಮ್


ಕಸ್ಟಮೈಸ್ಡ್ ಡಾಗ್‌ ಎಥ್ನಿಕ್‌ವೇರ್ಸ್

ಇನ್ನು ಸಾಕಷ್ಟು ಬೋಟಿಕ್‌ಗಳು ಮುದ್ದು ನಾಯಿಮರಿಗಳಿಗೂ ಎಥ್ನಿಕ್‌ವೇರ್‌ಗಳನ್ನು ಹೊಲಿದು ಡಿಸೈನ್‌ ಮಾಡಿಕೊಡುತ್ತಿವೆ. ಆಯಾ ಕುಟುಂಬದವರ ಸಮಾರಂಭಗಳಿಗೆ ಅನುಗುಣವಾಗಿ ಡಿಸೈನ್‌ ಮಾಡಿ, ರೆಡಿ ಮಾಡಿಕೊಡುತ್ತವೆ.

Dog Ethnicwear
ಚಿತ್ರಕೃಪೆ: ಇನ್ ಸ್ಟಾಗ್ರಾಮ್


ಆನ್‌ಲೈನ್‌ನಲ್ಲಿ ಡಾಗ್‌ ಡಿಸೈನರ್‌ವೇರ್ಸ್

ಇನ್ನು, ಆನ್‌ಲೈನ್‌ಗಳಲ್ಲಂತೂ ಲೆಕ್ಕವಿಲ್ಲದಷ್ಟೂ ಬಗೆಯ ಡಾಗ್‌ ಎಥ್ನಿಕ್‌ವೇರ್‌ಗಳು ದೊರೆಯುತ್ತಿವೆ. ಅದರಲ್ಲೂ ವೆಡ್ಡಿಂಗ್‌, ಬರ್ತ್ ಡೇ ಸೆಲೆಬ್ರೇಷನ್‌ ಹೀಗೆ ನಾನಾ ಸಮಾರಂಭಗಳಿಗೆ ಮ್ಯಾಚ್‌ ಆಗುವಂತಹ ಕ್ಯೂಟ್‌ ಡಿಸೈನರ್‌ವೇರ್‌ಗಳು ಇಲ್ಲಿ ಲಭ್ಯ ಎನ್ನುತ್ತಾರೆ ಡಾಗ್‌ ಪ್ರೇಮಿ ಜೀವಿತಾ ಹಾಗೂ ದೀಕ್ಷಾ.

ಇದನ್ನೂ ಓದಿ: Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

· ಆನ್‌ಲೈನ್‌ನಲ್ಲಿ ಕೆಲವೊಮ್ಮೆ ಆಫರ್‌ಗಳಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.
· ನಿಮ್ಮ ಶ್ವಾನದ ಸೈಜ್‌ಗೆ ತಕ್ಕಂತೆ ಖರೀದಿಸಿ. ದೊಗಲೆಯಾದಲ್ಲಿ ಚೆನ್ನಾಗಿ ಕಾಣಿಸುವುದಿಲ್ಲ.
· ಗ್ರ್ಯಾಂಡ್‌ ಆಗಿರುವಂಥವು ಚೆನ್ನಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)
Continue Reading

ಫ್ಯಾಷನ್

Ananth Ambani Fashion: ಅನಂತ್‌ ಅಂಬಾನಿ ಬಳಿ ಇದೆ ಡೈಮಂಡ್‌ ಬ್ರೂಚ್‌ಗಳ ಕಲೆಕ್ಷನ್‌! ಇವುಗಳ ಮೌಲ್ಯ ಎಷ್ಟಿರಬಹುದು?

Ananth Ambani Fashion: ಅನಂತ್‌ ಅಂಬಾನಿಯವರಿಗೆ ಡೈಮಂಡ್‌ ಹಾಗೂ ಎಮರಾಲ್ಡ್‌ನ ಬ್ರೂಚ್‌ ಕಲೆಕ್ಷನ್‌ ಕ್ರೇಜ್‌ ಇದೆ! ಇದಕ್ಕೆ ಸಾಕ್ಷಿ ಎಂಬಂತೆ ಅವರ ಬಳಿ ನೂರಾರು ಕೋಟಿ ರೂ. ಬೆಲೆಬಾಳುವ ಹಲವಾರು ಬ್ರೂಚ್‌ಗಳಿವೆ. ಅವುಗಳಲ್ಲಿ ಒಂದಿಷ್ಟು ಬ್ರೂಚ್‌ಗಳ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

By

Ananth Ambani Fashion
Koo
ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅನಂತ್‌ ಅಂಬಾನಿಯವರ (Ananth Ambani Fashion) ಬ್ರೂಚ್‌ (Brooch) ಜ್ಯುವೆಲರಿಗಳು ಇದೀಗ ಮೆನ್ಸ್ ವೆಡ್ಡಿಂಗ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ (Mens Wedding Jewelery Fashion) ಟಾಪ್‌ ಲಿಸ್ಟ್‌ಗೆ ಸೇರಿವೆ.

ಮೆನ್ಸ್ ಜ್ಯುವೆಲರಿ ಲಿಸ್ಟ್‌ಗೆ ಬ್ರೂಚ್‌

ಕೇವಲ ರಾಯಲ್‌ ವೆಡ್ಡಿಂಗ್‌ ಜ್ಯುವೆಲರಿ ಕಲೆಕ್ಷನ್‌ನಲ್ಲಿ ಮಾತ್ರವಲ್ಲ, ಸಾಮಾನ್ಯ ಮೆನ್ಸ್ ಆಭರಣಗಳ ಲಿಸ್ಟ್‌ಗೂ ಇವು ಸೇರಿಕೊಂಡಿವೆ.

Ananth Ambani Fashion


ಹೌದು, ಅಂಬಾನಿ ಫ್ಯಾಮಿಲಿಯ ಮದುವೆಗಳಲ್ಲಿ ಜ್ಯುವೆಲರಿಗಳಲ್ಲಿ ಅತಿ ಹೆಚ್ಚು ಹೈಲೈಟಾಗಿದ್ದು, ಮಹಿಳೆಯರ ನೆಕ್ಲೇಸ್‌ ಹಾಗೂ ಆಭರಣದ ಸೆಟ್‌ಗಳು. ಆದನ್ನು ಹೊರತುಪಡಿಸಿದಲ್ಲಿ ಮೆನ್ಸ್ ಲುಕ್‌ಗೆ ಸಾಥ್‌ ನೀಡುವಂತಹ ಶೆರ್ವಾನಿ ಹಾಗೂ ಬಂದ್ಗಾಲ ಡಿಸೈನ್‌ಗಳು ಕೊಂಚ ಫ್ಯಾಷನ್‌ ಲೋಕದಲ್ಲಿ ಹೈಲೈಟ್‌ ಆಯಿತಾದರೂ, ಬಂಗಾರದ ಡಿಸೈನರ್‌ವೇರ್‌ಗಳನ್ನು ಯಾರೂ ವಿನ್ಯಾಸ ಮಾಡಿಸಲು ಸಾಧ್ಯವಿಲ್ಲದ್ದರಿಂದ ಇವುಗಳು ಕೇವಲ ಫ್ಯಾಷನ್‌ ಹಿಸ್ಟರಿ ಪುಸ್ತಕದಲ್ಲಿಯೇ ಉಳಿದವು.

ಇನ್ನು ಅಂಬಾನಿ ಮನೆಯ ಮೆನ್ಸ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಅತಿ ಹೆಚ್ಚು ಹೈಲೈಟ್‌ ಆಗಿದ್ದು, ಅನಂತ್‌ ಧರಿಸಿದ್ದ ಬ್ರೂಚ್‌ಗಳು. ಅಂದಹಾಗೆ, ಯಾವ್ಯಾವ ಬಗೆಯ ಬ್ರೂಚ್‌ ಅತಿ ಹೆಚ್ಚು ಆಕರ್ಷಿಸಿದವು? ಅವುಗಳ ವಿಶೇಷತೆಯೇನು? ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

Ananth Ambani Fashion


14 ಕೋಟಿ ರೂ.ಗಳ ಗಣೇಶನ ಆಕೃತಿಯ ಬ್ರೂಚ್‌

ಮದುವೆಯ ಹಿಂದಿನ ದಿನ ಅನಂತ್‌ ಅಂಬಾನಿಯವರು 214 ಕೋಟಿಯ ಗೋಲ್ಡನ್‌ ಶೆರ್ವಾನಿಯೊಂದಿಗೆ 14 ಕೋಟಿ ರೂ. ಬೆಲೆ ಬಾಳುವ ವಂತರಾ ಡ್ರೀಮ್‌ ಪ್ರಾಜೆಕ್ಟ್ ಪ್ರತಿನಿಧಿಸುವ ಗಣೇಶನ ಮುಖ ಹೊಂದಿರುವ ಆನೆಯ ಆಕೃತಿಯ ಮುಖವನ್ನು ಹೋಲುವ ಅತ್ಯಾಕರ್ಷಕ ಬ್ರೂಚ್‌ ಮೆನ್ಸ್ ಜ್ಯುವೆಲರಿ ಫ್ಯಾಷನ್‌ನಲ್ಲಿ ಹಿಟ್‌ ಲಿಸ್ಟ್ ಸೇರಿತು.

ಎಮರಾಲ್ಡ್ ಚಿರತೆಯ ಬ್ರೂಚ್‌

ಎಮರಾಲ್ಡ್ ಸ್ಟೋನ್‌ ಮೇಲೆ ಚಿರತೆ ಕುಳಿತಿರುವಂತಹ ಅಪರೂಪದ ಬ್ರೂಚ್‌ ಅನಂತ್‌ ಮದುವೆಯ ಸಮಾರಂಭಗಳಲ್ಲಿ ಎಲ್ಲರನ್ನು ಸೆಳೆದಿತ್ತು. ಇನ್ನು, ಇದೇ ಸಂದರ್ಭದಲ್ಲಿ ಪೇಟಾಗೆ ಧರಿಸಿದ್ದ ಡೈಮಂಡ್‌ನ ಸರ್ಪೆಚ್‌ ಕೂಡ ರಾಜ-ಮಹಾರಾಜರ ಜ್ಯುವೆಲರಿ ಕಲೆಕ್ಷನನ್ನು ಪ್ರತಿನಿಧಿಸಿತ್ತು. ಇದಕ್ಕೂ ಬಹಳ ಹಿಂದೆ
ರೋಕಾ ಕಾರ್ಯಕ್ರಮದಲ್ಲೂ ಪ್ಲಾಟಿನಂ ಹಾಗೂ ಚಿನ್ನದಿಂದ ತಯಾರಾದ ಚಿರತೆಯ ಆಕೃತಿಯ ಡೈಮಂಡ್‌ ಬ್ರೂಚನ್ನು ಅನಂತ್‌ ಧರಿಸಿದ್ದರು.

ಶ್ರೀನಾಥ್‌ ದೇವರ ಬ್ರೂಚ್‌

ಶುಭ್‌ ಆಶಿರ್ವಾದ್‌ ಕಾರ್ಯಕ್ರಮದಲ್ಲಿ ಕುಟುಂಬದ ದೈವ ಶ್ರೀನಾಥ್‌ ಭಗವಾನ್‌ ಆಕೃತಿ ಬ್ರೂಚ್‌, ಅನಂತ್‌ರ ಮರೂನ್‌ ಶೆರ್ವಾನಿಯ ಸೌಂದರ್ಯ ಹೆಚ್ಚಿಸಿತ್ತು.

Ananth Ambani Fashion

ಇದನ್ನೂ ಓದಿ: Model Fashion: ಸೀಸನ್‌ ಗೆ ತಕ್ಕಂತೆ ಫ್ಯಾಷನ್‌ ಬದಲಿಸುವ ಮಿಸೆಸ್‌ ಬೆಂಗಳೂರು ಟೈಟಲ್‌ ವಿಜೇತೆ ಪ್ರತಿಭಾ ನಟರಾಜ್‌

ಸಿಂಹದ ಬ್ರೂಚ್‌

ಈ ಮೇಲಿನವುಗಳಲ್ಲದೇ 50 ಕ್ಯಾರೆಟ್‌ ಡೈಮಂಡ್‌ನ ಲೊರೈನ್‌ ಸ್ಕಾವರ್ಟ್ಞ್ ಡಿಸೈನ್‌ ಮಾಡಿದ ಸಿಂಹದ ಆಕೃತಿಯ ಬ್ರೂಚ್‌ ಈ ಹಿಂದೆ ಜಾಮ್‌ನಗರದಲ್ಲಿ ನಡೆದ ಪ್ರಿ-ವೆಡ್ಡಿಂಗ್‌ನಲ್ಲಿ ಸಖತ್‌ ಹೈಲೈಟ್‌ ಆಗಿತ್ತು.
ಈ ಎಲ್ಲಾ ಮೇಲಿನ ಬ್ರೂಚ್‌ ವಿವರಣೆಗಳು ಕೇವಲ ಸ್ಯಾಂಪಲ್‌ ಅಷ್ಟೇ! ಇದೇ ರೀತಿ ಅನಂತ್‌ ಅವರ ಬಳಿ ನೂರಾರು ಡೈಮಂಡ್‌ ಹಾಗೂ ಎಮರಾಲ್ಡ್ನ ಬ್ರೂಚ್‌ಗಳಿವೆಯಂತೆ. ಕಡಿಮೆಯೆಂದರೂ ನೂರಾರು ಕೋಟಿ ರೂ.ಗಳು ಬೆಲೆಬಾಳುತ್ತವಂತೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )
Continue Reading

ಫ್ಯಾಷನ್

Aparna Fashion Connection: ಫ್ಯಾಷನ್‌ ಪೇಜೆಂಟ್‌ ಕನ್ನಡದಲ್ಲಿ ನಿರೂಪಿಸಿ ಟ್ರೆಂಡ್‌ ಸೆಟ್‌ ಮಾಡಿದ್ದ ಅಪರ್ಣಾ!

Aparna Fashion Connection: ನಟಿ, ನಿರೂಪಕಿ ಅಪರ್ಣಾ ಅವರು ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಕನ್ನಡ ಭಾಷೆಯಲ್ಲೆ ನಿರೂಪಣೆ ಮಾಡುವ ಮೂಲಕ ಇಂಗ್ಲೀಷ್‌ಮಯವಾಗಿದ್ದ ಫ್ಯಾಷನ್‌ ಲೋಕದಲ್ಲಿ ಕನ್ನಡದ ಕಂಪನ್ನು ಹುಟ್ಟುಹಾಕಿ, ಟ್ರೆಂಡ್‌ ಸೆಟ್‌ ಮಾಡಿದ್ದರು. ಈ ಅವಕಾಶ ನೀಡಿದ್ದ ಪೇಜೆಂಟ್‌ ಡೈರೆಕ್ಟರ್‌ ಪ್ರತಿಭಾ ಸಂಶಿಮಠ್ ಈ ಅನುಭವವನ್ನು ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Aparna fashion connection
ಚಿತ್ರಗಳು: ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ 2018ರ ಚಿತ್ರಗಳು
Koo

ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ
ಫ್ಯಾಷನ್‌ಗೂ ಅಪರ್ಣಾಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ! ಸಾಕಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ, ಅಪರ್ಣಾ ಅವರು ಕೇವಲ ಸಾಹಿತ್ಯ ಹಾಗೂ ಕನ್ನಡ ಭಾಷೆಯ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ! ಬದಲಿಗೆ ಮಿಸೆಸ್‌ ಇಂಡಿಯಾ ಕರ್ನಾಟಕದಂತಹ ಬ್ಯೂಟಿ ಪೇಜೆಂಟ್‌ಗೂ ಕಂಪ್ಲೀಟ್‌ ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡಿ, ಫ್ಯಾಷನ್‌ ಲೋಕದಲ್ಲೂ ಕಂಪ್ಲೀಟ್‌ ಕನ್ನಡ ಬಳಸಬಹುದು ಎಂಬ ಹೊಸ ಟ್ರೆಂಡ್‌ ಹುಟ್ಟುಹಾಕಿದ್ದರು.
ಹೌದು, ಫ್ಯಾಷನ್‌ ಲೋಕದಲ್ಲೂ ಅಪರ್ಣಾ ಅವರ ಈ ಕನ್ನಡ ಕಂಪು ಹರಡಿದ್ದ ಅಪರ್ಣಾ ಅವರ ಕುರಿತಂತೆ ರಿಜಿನಲ್‌ ಡೈರೆಕ್ಟರ್‌ ಹಾಗೂ ಮಿಸೆಸ್‌ ಏಷಿಯಾ ಪೆಸಿಫಿಕ್‌ ಪ್ರತಿಭಾ ಸಂಶಿಮಠ್ ಖುದ್ದು ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ. ಪೇಜೆಂಟ್‌ನ ಆರಂಭಿಕ ವರ್ಷಗಳಲ್ಲಿ, ನಿರೂಪಣೆಯ ಜವಾಬ್ದಾರಿ ಹೊತ್ತು, ಕರ್ನಾಟಕದಲ್ಲೂ ಇಂಗ್ಲೀಷ್‌ ಮಯವಾಗಿರುವ ಫ್ಯಾಷನ್‌ ಲೋಕದಲ್ಲೂ, ಕನ್ನಡವನ್ನು ಬಳಸಿ ಅಂದವಾಗಿ ನಿರೂಪಣೆ ಮಾಡಬಹುದು ಎಂಬುದನ್ನು ಅಪರ್ಣಾ ತೋರಿಸಿಕೊಟ್ಟಿದ್ದರು ಎಂದಿದ್ದಾರೆ. ಪೇಜೆಂಟ್‌ ಸಮಯದಲ್ಲಿ ಅವರೊಂದಿಗಿನ ಒಡನಾಟದ ಅನುಭವದ ಒಂದಿಷ್ಟು ವಿಷಯಗಳನ್ನು ಹಾಗೂ ಒಂದಿಷ್ಟು ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Aparna fashion connection

ವಿಸ್ತಾರ ನ್ಯೂಸ್‌

ಇಂಗ್ಲೀಷ್‌ಮಯವಾಗಿದ್ದ ಫ್ಯಾಷನ್‌ ಲೋಕದಲ್ಲೂ ಕನ್ನಡದಲ್ಲಿ ನಿರೂಪಣೆ ಮಾಡಿ ಟ್ರೆಂಡ್‌ ಸೆಟ್‌ ಮಾಡಿದ್ದ ಅಪರ್ಣಾ ಅವರ ಬಗ್ಗೆ ಹೇಳಿ?

Aparna fashion connection

ಪ್ರತಿಭಾ ಸಂಶಿಮಠ್

ಖಂಡಿತ. ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಫ್ಯಾಷನ್‌ ಶೋಗಳು ಪೇಜೆಂಟ್‌ಗಳು ಎಲ್ಲವೂ ಇಂಗ್ಲೀಷ್‌ಮಯವಾಗಿರುತ್ತಿದ್ದವು. ನಮ್ಮ ಪೇಜೆಂಟ್‌ ಸಾಕಷ್ಟು ಬಾರಿ ಕನ್ನಡವನ್ನು ಬಳಸುವುದರ ಮೂಲಕ ಟ್ರೆಂಡ್‌ ಹುಟ್ಟುಹಾಕಿದ್ದೆವು. ಇದಕ್ಕೆ ಪ್ರಮುಖವಾಗಿ ಸಹಕರಿಸಿದ್ದು ಅಪರ್ಣಾ. ಅವರ ಸುಂದರ ನಿರೂಪಣೆ ಟ್ರೆಂಡ್‌ ಹುಟ್ಟುಹಾಕಿತು.

ವಿಸ್ತಾರ ನ್ಯೂಸ್‌

ಅಪರ್ಣಾ ಅವರ ಕನ್ನಡದಲ್ಲಿನ ನಿರೂಪಣೆ ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದಾದರೂ ಹೇಗೆ?

Aparna fashion connection

ಪ್ರತಿಭಾ ಸಂಶಿಮಠ್

ಅವರ ಶುದ್ಧ ಕನ್ನಡ ಭಾಷೆ ಹಾಗೂ ನಿರೂಪಣೆಯ ಶೈಲಿ, ಭಾಷೆ ಅರ್ಥವಾಗದಿದ್ದವರಿಗೂ ಮನ ಮುಟ್ಟುವಂತಹ ಭಾವನೆ ಹೊಂದಿದ ಪದಗಳು ಎಲ್ಲರನ್ನೂ ಆಕರ್ಷಿಸಿತ್ತು.

ವಿಸ್ತಾರ ನ್ಯೂಸ್‌

ಫ್ಯಾಷನ್‌ ಪೇಜೆಂಟ್‌ನಲ್ಲಿ ನಿರೂಪಣೆ ಮಾಡುವಾಗ ಅವರೊಂದಿಗೆ ಕಳೆದ ಕ್ಷಣಗಳು ಹೇಗಿದ್ದವು?

Aparna fashion connection

ಪ್ರತಿಭಾ ಸಂಶಿಮಠ್

ಅಪರ್ಣಾ ಅವರು ಕನ್ನಡ ಭಾಷೆಯ ಖಜಾನೆ. ಅವರಿಂದಲೇ ಸಾಕಷ್ಟು ನಾವು ಕಲಿತಿದ್ದಿದೆ. ಅಷ್ಟು ಮಾತ್ರವಲ್ಲದೇ, ಇಂಗ್ಲೀಷ್‌ ಕೂಡ ಅಷ್ಟೇ ಚೆನ್ನಾಗಿ ಬಲ್ಲವರಾಗಿದ್ದರು. ಅವರ ಭಾಷಾ ಪ್ರೇಮ, ಮುಂದೆಯೂ ನಾವು ರ‍್ಯಾಂಪ್‌ ಮೇಲೆ ಕನ್ನಡ ಬಳಕೆ ಮಾಡಲು ಪ್ರೋತ್ಸಾಹ ನೀಡಿತ್ತು.

Aparna fashion connection

ವಿಸ್ತಾರ ನ್ಯೂಸ್‌

ಸದಾ ಎಥ್ನಿಕ್‌ ಲುಕ್‌ನಲ್ಲಿ ಇರುತ್ತಿದ್ದ ಅಪರ್ಣಾ ಅವರು ಫ್ಯಾಷನ್‌ ಪೇಜೆಂಟ್‌ಗೆ ಹೊಂದಿಕೊಂಡದ್ದು ಹೇಗೆ?

ಪ್ರತಿಭಾ ಸಂಶಿಮಠ್

ಫ್ಯಾಷನ್‌ ಪೇಜೆಂಟ್‌ಗೆ ತಕ್ಕಂತೆ ಅವರು ಕೂಡ ಡಿಸೈನರ್‌ ಗೌನ್‌ ಡಿಸೈನ್‌ ಮಾಡಿಸಿ ಧರಿಸಿದ್ದರು. ಮಾಡೆಲ್‌ನಂತೆ ಕಾಣಿಸಿಕೊಂಡಿದ್ದರು.

Aparna fashion connection

ವಿಸ್ತಾರ ನ್ಯೂಸ್‌

ಫ್ಯಾಷನ್‌ ಜಗತ್ತಿನಲ್ಲಿ ಅಪರ್ಣಾ ಅವರು ಕನ್ನಡ ಬಳಸಿದ ನಂತರ ಆದ ಬದಲಾವಣೆಗಳೇನು?

ಇದನ್ನೂ ಓದಿ: Kim Kardashian Saree Fashion: ರೆಡಿ ರೆಡ್‌ ಸೀರೆಯಲ್ಲಿ ಸೆಕ್ಸಿಯಾಗಿ ಕಂಡ ಕಿಮ್‌ ಕಾರ್ಡಶಿಯಾನ್‌! ವಿಡಿಯೊ ನೋಡಿ

ಪ್ರತಿಭಾ ಸಂಶಿಮಠ್

ನಮ್ಮ ಪೇಜೆಂಟ್‌ನಲ್ಲಿ ಅಪರ್ಣಾ ಅವರು ಕನ್ನಡದಲ್ಲಿ ನಿರೂಪಣೆ ಮಾಡಿದ ನಂತರ, ಇತರೇ ಫ್ಯಾಷನ್‌ ಇವೆಂಟ್‌ಗಳಲ್ಲೂ ಕನ್ನಡ ಇಣುಕತೊಡಗಿತು. ಕನ್ನಡ ಭಾಷೆ ಬಗ್ಗೆ ಪ್ರೀತಿ ಹುಟ್ಟಿಕೊಂಡಿತು. ಇದೇ ಅವರು ಟ್ರೆಂಡ್‌ ಸೆಟ್‌ ಮಾಡಿದ್ದಕ್ಕೆ ಸಾಕ್ಷಿ ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Ambani Wedding Fashion: ನೀತಾ ಅಂಬಾನಿಯ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ ಮೇಲೆ ಬಂಗಾರದಲ್ಲಿ ಮೂಡಿದ ಕುಟುಂಬದವರ ಹೆಸರು!

Ambani Wedding Fashion: ಅಂಬಾನಿ ಫ್ಯಾಮಿಲಿಯ ಮದುವೆ ಸಮಾರಂಭದಲ್ಲಿ ನೀತಾ ಅಂಬಾನಿ ಧರಿಸಿದ್ದ ಗ್ರ್ಯಾಂಡ್‌ ಡಿಸೈನರ್‌ ಬ್ಲೌಸ್‌ ಮೇಲೆ ಬಂಗಾರದಲ್ಲಿ ಕುಟುಂಬದವರ ಹೆಸರು ಮೂಡಿಸಲಾಗಿದೆ. ಹಾಗಾದಲ್ಲಿ ಇದ್ಯಾವ ಬಗೆಯ ಹೊಸ ಡಿಸೈನ್‌? ದುಬಾರಿ ಘಾಗ್ರದ ವಿಶೇಷತೆಯೇನು? ಈ ಕುರಿತಂತೆ ಫ್ಯಾಷನ್‌ ಪರಿಣತರು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Ambani Wedding Fashion
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀತಾ ಅಂಬಾನಿಯವರ (Ambani Wedding Fashion) ದುಬಾರಿ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ ಮೇಲೆ ಕುಟುಂಬದವರ ಹೆಸರು ಬಂಗಾರದಲ್ಲಿ ಮೂಡಿಸಿರುವುದು, ಬ್ಲೌಸ್‌ ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದೆ. ಹೌದು, ಸೆಲೆಬ್ರೆಟಿ ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ ಅವರ ಕೈಚಳಕದಲ್ಲಿ ಎಂದಿನಂತೆ ಬಂಗಾರ-ವಜ್ರ ವೈಢೂರ್ಯದಿಂದಲೇ ಸಿದ್ಧಗೊಂಡ ಗ್ರ್ಯಾಂಡ್‌ ಘಾಗ್ರ ಬ್ಲೌಸ್‌ನ ಬ್ಯಾಕ್‌ ಡಿಸೈನ್‌ನಲ್ಲಿ, ನೀತಾ ಅವರ ಪ್ರೀತಿ ಪಾತ್ರರಾದ ಇಡೀ ಕುಟುಂಬದವರ ಹೆಸರು ದಾಖಲಿಸಲಾಗಿದೆ. ಕೋಟಿಗಟ್ಟಲೇ ಬೆಲೆ ಬಾಳುವ ಈ ಡಿಸೈನರ್‌ ಘಾಗ್ರದಲ್ಲಿ ಆಂಟಿಕ್‌ ವಿನ್ಯಾಸವನ್ನುಕೂಡ ಚಿತ್ರಿಸಲಾಗಿದೆ.

Ambani Wedding Fashion

ಡಿಸೈನರ್‌ ಘಾಗ್ರ ವಿಶೇಷತೆ ಏನು?

ಭಾರತೀಯ ಸಂಸ್ಕೃತಿ ಬಿಂಬಿಸುವ ಕಲಾತ್ಮಕ ಹ್ಯಾಂಡ್‌ಮೇಡ್‌ ಚಿನ್ನ-ಬೆಳ್ಳಿ ಸೂಕ್ಷ್ಮ ಕುಸುರಿ ಚಿತ್ತಾರ ಹೊಂದಿರುವ ಈ ಡಿಸೈನರ್‌ವೇರ್‌ ಅಬು ಜಾನಿ ಸಂದೀಪ್‌ ಅವರ ಸ್ಪೆಷಲ್‌ ಡಿಸೈನ್‌ದ್ದಾಗಿದ್ದು, ನೀತಾ ಅವರ ಅಭಿಲಾಷೆಗೆ ತಕ್ಕಂತೆ, ವಿನ್ಯಾಸಗೊಳಿಸಲಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನೀತಾ ಅವರ ಆಧ್ಯಾತ್ಮಿಕ ಪ್ರೀತಿಯನ್ನು ವಿವರಿಸುವ ವಾರಣಾಸಿ ಅಂದರೇ, ಕಾಶಿಯ ಪ್ರೇಮ ಕುರಿತಾದ ಚಿತ್ರಣವನ್ನು ಡಿಸೈನ್‌ ಮೂಲಕ ಮೂಡಿಸಲಾಗಿದೆ. ಉತ್ತರ ಭಾರತದ ಟೆಂಪಲ್‌ ಡಿಸೈನ್ಸ್ ಈ ಘಾಗ್ರಾದಲ್ಲಿ, ಮನಮೋಹಕವಾಗಿ ಬೆಳ್ಳಿ-ಬಂಗಾರದ ದಾರದಿಂದ ಹ್ಯಾಂಡ್‌ವರ್ಕ್ ಮೂಲಕ ಡಿಸೈನ್‌ ಮಾಡಲಾಗಿದೆ.

Ambani Wedding Fashion

ಅಪರೂಪದ ಘಾಗ್ರ ವಿನ್ಯಾಸ

ಕಲಾಕಾರರ ಜರ್ದೋಸಿ ಹ್ಯಾಂಡ್‌ ಮೇಡ್‌ ಡಿಸೈನ್‌ ಹೊಂದಿರುವ ಈ ಘಾಗ್ರ ಸಾಮಾನ್ಯವಾದ ಘಾಗ್ರವಲ್ಲ! ಉತ್ತರ ಭಾರತದ ಟೆಂಪಲ್‌ ಡಿಸೈನ್ಸ್ ಭಕ್ತಿ ಪೂರ್ವಕವಾಗಿ ಪ್ರತಿನಿಧಿಸಿದೆ. ಇದುವರೆಗೂ ಜ್ಯುವೆಲರಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಟೆಂಪಲ್‌ ಡಿಸೈನ್‌ಗೆ ಸಂಬಂಧಿಸಿದ ವಿನ್ಯಾಸಗಳು, ಇದೀಗ ಈ ವಿಶೇಷ ಘಾಗ್ರದ ಕುಸುರಿ ಕಲೆಯಲ್ಲಿ ಕಂಡು ಬಂದಿರುವುದು ಇದೇ ಮೊದಲು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Ambani Wedding Fashion

ಜ್ಯುವೆಲ್‌ ಬ್ಲೌಸ್‌ ಮೇಲೆ ಬಂಗಾರದ ಹೆಸರು

ಅತಿ ಸೂಕ್ಷ್ಮವಾದ ಸಾಫ್ಟ್ ನೆಟ್ಟೆಡ್‌ ಫ್ಯಾಬ್ರಿಕ್‌ನಿಂದ ಘಾಗ್ರದ ಬ್ಲೌಸ್‌ ವಿನ್ಯಾಸಗೊಳಿಸಲಾಗಿದೆ. ಬ್ಯಾಕ್‌ ಡಿಸೈನ್‌ನ ಮಧ್ಯಭಾಗದಲ್ಲಿ ಜೋಡಿ ಆನೆಯ ಸುತ್ತಾ ಬಂಗಾರದ ದಾರದಲ್ಲಿ ಹ್ಯಾಂಡ್‌ವರ್ಕ್ನಿಂದ ಕುಟುಂಬದವರೆಲ್ಲರ ಹೆಸರನ್ನು ಹಿಂದಿ ಭಾಷೆಯಲ್ಲಿ ಮೂಡಿಸಲಾಗಿದೆ. ಇನ್ನು, ಎರಡು ಸ್ಲೀವ್‌ಗಳ ಮೇಲೆ ವಿನ್ಯಾಸಗೊಳಿಸಿರುವ ಜುಮ್ಕಾ ಡಿಸೈನ್‌ ಈ ಔಟ್‌ಫಿಟ್‌ಗೆ ಕಂಪ್ಲೀಟ್‌ ಟ್ರೆಡಿಷನಲ್‌ ಲುಕ್‌ ನೀಡಿದೆ. ಈ ದುಬಾರಿ ಬ್ಲೌಸ ಅನ್ನು ಬಂಗಾರದ ಟೈನಿ ಬೀಡ್ಸ್ ಹಾಗೂ ಸಿಕ್ವಿನ್ಸ್‌ನಿಂದಲೇ ಸಿದ್ಧಪಡಿಸಿರುವುದು ವಿಶೇಷ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಫರ್ಟ್ಸ್‌ ದಿಯಾ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Ambani Wedding Fashion: ಅನಂತ್ ಅಂಬಾನಿ ಶೆರ್ವಾನಿ ಬೆಲೆಯೇ 214 ಕೋಟಿ ರೂ! ಹೇಗಿತ್ತು ನೋಡಿ ಅಂಬಾನಿ ಜೋಡಿಯ ವೆಡ್ಡಿಂಗ್ ಫ್ಯಾಷನ್!

Continue Reading
Advertisement
Viral Video
ವೈರಲ್ ನ್ಯೂಸ್32 mins ago

Viral Video: ನೋಡ ನೋಡ್ತಿದ್ದಂತೆ ಮೂರನೇ ಮಹಡಿಯಿಂದ ಬಿದ್ದ ಮಹಿಳೆ; ಶಾಕಿಂಗ್‌ ವಿಡಿಯೋ ವೈರಲ್‌

Tauba Tauba
Latest37 mins ago

Tauba Tauba : ಲಂಡನ್‌ ಬೀದಿಯಲ್ಲಿ ‘ತೌಬಾ ತೌಬಾ’ ಹಾಡಿಗೆ ಸಖತ್‌ ಆಗಿ ಸ್ಟೆಪ್ಸ್‌ ಹಾಕಿದ ಬೆಡಗಿಯರು; ವಿಡಿಯೊ ವೈರಲ್

CM Siddaramaiah karnataka jobs reservation
ಪ್ರಮುಖ ಸುದ್ದಿ44 mins ago

Karnataka Jobs Reservation: ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ.75 ಮೀಸಲಾತಿ ಮಾತ್ರ; ಆಡಳಿತ ಹುದ್ದೆಗಳಲ್ಲಿ ಶೇ.50; ಉದ್ಯಮಿಗಳಿಗೆ ಬೆಚ್ಚಿತೇ ಸರ್ಕಾರ?

Kannada New Movie Baila Baila Video Song Hiranya out
ಸ್ಯಾಂಡಲ್ ವುಡ್52 mins ago

Kannada New Movie: ರಾಜವರ್ಧನ್ ‘ಹಿರಣ್ಯ’ ಸಿನಿಮಾದಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್‌ ಮಾಡಿದ ದಿವ್ಯಾ ಸುರೇಶ್!

Usha Chilukuri Vance
ವಿದೇಶ55 mins ago

Usha Chilukuri Vance: ಟ್ರಂಪ್ ಅವರ ಉಪಾಧ್ಯಕ್ಷ ಅಭ್ಯರ್ಥಿಯ ಪತ್ನಿ ಭಾರತೀಯ ಸಂಸ್ಕೃತಿಯ ಪ್ರತಿಪಾದಕಿ!

Viral News
ಪ್ರಮುಖ ಸುದ್ದಿ56 mins ago

Viral News : ಕುವೈಟ್​ನಲ್ಲಿ ಈ ಚಪ್ಪಲಿಗೆ 1 ಲಕ್ಷ ರೂಪಾಯಿಯಂತೆ; ನಮ್ಮಲ್ಲಿ ಇದು ಬಾತ್​ರೂಮ್​ಗೆ ಹೋಗುವ ಚಪ್ಪಲಿ ಎಂದ ನೆಟ್ಟಿಗರು!

Food Poisoning
ದೇಶ1 hour ago

Food Poisoning: ಮೊಹರಂ ಮೆರವಣಿಗೆ ವೇಳೆ ಷರಬತ್ತು ಸೇವಿಸಿ 400 ಮಂದಿ ಅಸ್ವಸ್ಥ

Mohammed Shami
ಕ್ರೀಡೆ1 hour ago

Mohammed Shami: ಎನ್​ಸಿಎಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ ಶಮಿ

gt world mall 3
ಪ್ರಮುಖ ಸುದ್ದಿ1 hour ago

GT World Mall: ರೈತರಿಗೆ ಅವಮಾನ ಮಾಡಿದ ಜಿಟಿ ಮಾಲ್‌ ವಿರುದ್ಧ ಸಚಿವರು ಗರಂ; ʼಪಂಚೆ ಧರಿಸಿಯೇ ಸಿದ್ದರಾಮಯ್ಯ 7 ವರ್ಷ ರಾಜ್ಯ ಆಳ್ಲಿಲ್ವಾ?ʼ

Anant Ambani wedding Shanaya Kapoor trolled for arguing with security
ಬಾಲಿವುಡ್1 hour ago

Anant Ambani: ಅನಂತ್ ಅಂಬಾನಿ ಮದುವೆಯಲ್ಲಿ ಖ್ಯಾತ ಬಾಲಿವುಡ್‌ ನಟನ ಮಗಳ ದರ್ಪ; ಮುನಿಸಿಕೊಂಡಿದ್ದೇಕೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ2 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ3 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ3 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ3 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ4 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌