-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲದಲ್ಲಿ (Monsoon Fashion) ಟೀನೇಜ್ ಹುಡುಗಿಯರ ಸ್ಟೈಲಿಂಗ್ ಬದಲಾಗಿದೆ. ಡಿಫರೆಂಟ್ ಲುಕ್‌ಗಳ ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ 3 ಶೈಲಿಯ ಮಾನ್ಸೂನ್ ಫ್ಯಾಷನ್‌ವೇರ್‌ಗಳು ಸಾಥ್ ನೀಡುತ್ತಿವೆ. “ಈ ಜನರೇಷನ್‌ನ ಟೀನೇಜ್ ಹುಡುಗಿಯರ ಫ್ಯಾಷನ್ ಕಂಪ್ಲೀಟ್ ಡಿಫರೆಂಟ್. ಪ್ರತಿಯೊಂದರಲ್ಲೂ ನಯಾ ಲುಕ್ ಎದ್ದು ಕಾಣಿಸುತ್ತದೆ. ಮೊದಲೇ ಯಂಗ್ ಆಗಿರುವ ಇವರನ್ನು ಮತ್ತಷ್ಟು ಫಂಕಿಯಾಗಿ ಬಿಂಬಿಸುತ್ತವೆ. ಇನ್ನು ಮಾನ್ಸೂನ್ ಸೀಸನ್‌ಗೆ ತಕ್ಕಂತೆ ನಾನಾ ಫ್ಯಾಷನ್‌ವೇರ್‌ಗಳು ಆಗಮಿಸಿದ್ದರೂ, ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ ಇದೀಗ ಹೆಚ್ಚು ಮಾನ್ಯತೆ ದೊರಕಿದೆ. ಹುಡುಗಿರಲ್ಲಿ ಒಬ್ಬೊಬ್ಬರದ್ದು ಒಂದೊಂದು ಬಗೆಯ ಸ್ಟೈಲಿಂಗ್! ಆಯಾ ಔಟ್‌ಫಿಟ್‌ಗೆ ತಕ್ಕಂತೆ ಕೊಂಚ ಬದಲಾವಣೆ ಕಾಣಬಹುದಷ್ಟೇ!” ಎನ್ನುತ್ತಾರೆ ಸ್ಟೈಲಿಸ್ಟ್ ಜಯ್ ಹಾಗೂ ರಾಣಾ. ಅವರ ಪ್ರಕಾರ, ಪ್ರತಿ ಹುಡುಗಿಯ ಫ್ಯಾಷನ್ ಅವರ ಪ್ರತಿ ದಿನಚರಿಯ ಮೇಲೆ ಹಾಗೂ ಅವರ ಪರಿಸರದ ಮೇಲೆ ನಿರ್ಧರಿತವಾಗಿರುತ್ತದೆ ಎನ್ನುತ್ತಾರೆ. ಸದ್ಯ ಟೀನೇಜ್ ಹುಡುಗಿಯರ ಕ್ರೇಝಿ ಲಿಸ್ಟ್‌ನಲ್ಲಿರುವ 3 ಫ್ಯಾಷನ್‌ವೇರ್‌ಗಳ ಬಗ್ಗೆ ತಿಳಿಸಿದ್ದಾರೆ.
ಕಲರ್‌ಫುಲ್ ಫಂಕಿ ಲೇಯರ್ ಲುಕ್
ಈ ಫ್ಯಾಷನ್ ಈ ಜನರೇಷನ್‌ನ ಟೀನೇಜ್ ಹುಡುಗಿಯರ ವ್ಯಕ್ತಿತ್ವ ಹಾಗೂ ಅವರ ಪ್ರತಿನಿತ್ಯದ ಪರಿಸರಕ್ಕೆ ತಕ್ಕಂತೆ ಹಾಗೂ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿದೆ. ಉದಾಹರಣೆಗೆ., ಪ್ಯಾಂಟ್ ಪ್ರಿಂಟ್ಸ್‌ನದ್ದಾದಲ್ಲಿ, ಇದಕ್ಕೆ ಧರಿಸುವ ಟಾಪ್ ಒಂದು ಬಣ್ಣದ್ದು, ಇನ್ನು ಅದರ ಮೇಲೆ ಧರಿಸುವ ಕಾರ್ಡಿಗಾನ್, ಜಾಕೆಟ್ ಅಥವಾ ಕೇಪ್ ಮತ್ತೊಂದು ವರ್ಣದ್ದು. ಹೀಗೆ ಒಂದಕ್ಕೊಂದು ಯಾವುದು ಮ್ಯಾಚ್ ಆಗುವುದಿಲ್ಲ! ಬದಲಿಗೆ ಎಲ್ಲವೂ ಮಿಸ್ ಮ್ಯಾಚ್ ಆಗಿ ಎದ್ದು ಕಾಣುತ್ತವೆ. ಇವು ಈ ಬಾರಿ ಟೀನೇಜ್ ಹುಡುಗಿಯರ ಫಂಕಿ ಲುಕ್‌ಗೆ ಸಾಥ್ ನೀಡಿವೆ.
ಫುಲ್ ಸ್ಲೀವ್ ಕಟೌಟ್ ಕ್ರಾಪ್ ಟಾಪ್ ಸ್ಟೈಲಿಂಗ್
ಪ್ಯಾಂಟ್‌ಗೆ ಸೊಂಟ ಕಾಣಿಸುವಂತಹ ಕ್ರಾಪ್ ಟಾಪ್, ಅಲ್ಲಲ್ಲಿ ಕಟೌಟ್ ಆದ ಫುಲ್ ಸ್ಲೀವ್ ಟಾಪ್, ಹೆಸರಿಗೆ ಮಾತ್ರ ಈ ಔಟ್‌ಫಿಟ್ ಫುಲ್ ಸ್ಲೀವ್. ಈ ಟಾಪ್ ಈ ಮಾನ್ಸೂನ್ ಸೀಸನ್‌ನಲ್ಲಿ ಟೀನೇಜ್ ಹುಡುಗಿಯರ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿದೆ.
ಇದನ್ನೂ ಓದಿ: Star Saree Fashion: ಪ್ರಯೋಗಾತ್ಮಕ ರೆಟ್ರೋ ಫ್ಯಾಷನ್‌ಗೆ ಸೇರಿದೆ ನಟಿ ಕಂಗನಾರ ಚೆಕ್ಸ್ ಶರ್ಟ್ ಬ್ಲೌಸ್ ಸೀರೆ!
ಬಿಲೋ ವೇಸ್ಟ್ ಟೊರ್ನ್ ಪ್ಯಾಂಟ್ ಸ್ಟೈಲಿಂಗ್
ಇದುವರೆಗೂ ಹೈ ವೇಸ್ಟ್ ಫ್ಯಾಷನ್‌ನಲ್ಲಿದ್ದ ಟೋರ್ನ್ ಪ್ಯಾಂಟ್ ಇದೀಗ ಸೊಂಟದ ಕೆಳಗೆ ಕೂರುವಂತಹ ಡಿಸೈನ್‌ನಲ್ಲಿ ಈ ಮಾನ್ಸೂನ್ ಫ್ಯಾಷನ್‌ಗೆ ಎಂಟ್ರಿ ನೀಡಿವೆ. ಟೀನೇಜ್ ಹುಡುಗಿಯರ ಬಿಂದಾಸ್ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿವೆ. ಪ್ರಯೋಗಾತ್ಮಕ ಸ್ಟೈಲಿಂಗ್‌ನಲ್ಲಿ ಮಿಕ್ಸ್ ಮ್ಯಾಚ್ ಆಗುತ್ತಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)