-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಸೀಸನ್‌ಗೆ (Monsoon fashion) ಪ್ರಿಂಟೆಡ್ ಕಾಲರ್ ಕುರ್ತಾಗಳು ರೀ ಎಂಟ್ರಿ ನೀಡಿದ್ದು, ಉದ್ಯೋಗಸ್ಥ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ಸಾಕಷ್ಟು ವರ್ಷಗಳ ಕಾಲ ಸಾದಾ ಸಾಲಿಡ್ ಕಲರ್‌ಗಳಲ್ಲಿ ಮಾತ್ರ ಚಾಲ್ತಿಯಲ್ಲಿದ್ದ ಬಗೆಬಗೆಯ ಕಾಲರ್ ನೆಕ್ ಕುರ್ತಾಗಳು, ಇದೀಗ ವೆರೈಟಿ ಪ್ರಿಂಟೆಡ್ ವಿನ್ಯಾಸದಲ್ಲಿ ಪ್ರಚಲಿತಕ್ಕೆ ಬಂದಿವೆ.
ಮಳೆಗಾಲಕ್ಕೆ ರೀ ಎಂಟ್ರಿ
“ಮಳೆಗಾಲ ಕಾಲಿಡುತ್ತಿದ್ದಂತೆ ಕುರ್ತಾಗಳು ರೀ ಎಂಟ್ರಿ ನೀಡಿವೆ. ಅದು ಪ್ರಿಂಟೆಡ್ ಸೆಟ್ ರೂಪದಲ್ಲಿ ಕಾಲರ್ ನೆಕ್‌ಲೈನ್ ಇರುವಂತವು ಮಹಿಳೆಯರನ್ನು ಆಕರ್ಷಿಸಿವೆ. ಮೊದಲೆಲ್ಲಾ ಸಮ್ಮರ್‌ಗೆ ಮಾತ್ರ ಮೀಸಲಾಗಿದ್ದ ಪ್ರಿಂಟೆಡ್ ವಿನ್ಯಾಸದ ಫ್ಯಾಬ್ರಿಕ್ ಇದೀಗ ಈ ಸೀಸನ್‌ಗೂ ಮುಂದುವರೆದಿದ್ದು, ಮಳೆ-ಗಾಳಿಗೆ ಬೆಚ್ಚಗಿಡುವಂತಹ ಕಾಲರ್ ನೆಕ್‌ಲೈನ್ ವಿನ್ಯಾಸದಲ್ಲಿ ಮೂಡಿಬಂದಿವೆ” ಎನ್ನುತ್ತಾರೆ ಡಿಸೈನರ್ ರಾಣಿ, ಅವರ ಪ್ರಕಾರ, ಬೇಸಿಗೆಯಲ್ಲಿ ಕಾಲರ್ ಇಲ್ಲದ ಕುರ್ತಾಗಳು ಇದ್ದವು. ಸೀಸನ್ ಬದಲಾದಂತೆ ಕಾಲರ್ ಸಮೇತ ಇರುವಂತವು ಎಂಟ್ರಿ ಕೊಟ್ಟವು ” ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ವೆರೈಟಿ ಕಾಲರ್ ಪ್ರಿಂಟೆಡ್ ಕುರ್ತಾಗಳು
ಶರ್ಟ್ ಕಾಲರ್ ಕುರ್ತಾ, ಮ್ಯಾಂಡರೀನ್ ಕಾಲರ್, ಚೈನಾ ಕಾಲರ್, ರೌಂಡ್ ಕಾಲರ್, ಕಾಲರ್ ವಿತ್ ಬಟನ್, ಫುಲ್ ಕಾಲರ್, ಸ್ಟ್ಯಾಂಡ್ ಕಾಲರ್, ಚೈನೀಸ್ ಕಾಲರ್, ಸ್ಟಾಪ್ ಸ್ಟೈಲ್ ಕಾಲರ್, ಫ್ಲವರ್ ಸ್ಟೈಲ್ ಕಾಲರ್ ಸೇರಿದಂತೆ ನಾನಾ ಕಾಲರ್ ನೆಕ್‌ಲೈನ್ ಇರುವಂತವು ಪ್ರಿಂಟೆಡ್ ವಿನ್ಯಾಸದಲ್ಲಿ ಬಂದಿವೆ. ಫ್ಲೋರಲ್, ಟ್ರಾಪಿಕಲ್, ಜಾಮಿಟ್ರಿಕಲ್, ಸ್ಟ್ರೈಪ್ಸ್, ಪೋಲ್ಕಾ, ಅನಿಮಲ್ ಪ್ರಿಂಟ್ಸ್, ಕೌ ಪ್ರಿಂಟ್ಸ್, ಪೀಕಾಕ್ ಪ್ರಿಂಟ್ಸ್, ಡೈಮಂಡ್ , ಸ್ಟಾರ್, ಬ್ರಶ್ ಸ್ಟ್ರೋಕ್ಸ್, ಅಬ್‌ಸ್ಟ್ರಾಕ್ಟ್ ಹೀಗೆ ಊಹೆಗೂ ಮೀರಿದ ಡಿಜಿಟಲ್ ಪ್ರಿಂಟ್ಸ್‌ಗಳವು ಕೂಡ ಮಾರುಕಟ್ಟೆಗೆ ಕಾಲಿಟ್ಟಿವೆ. ಕಳೆದ ಸೀಸನ್‌ನಲ್ಲಿ ಕಾಟನ್ ಫ್ಯಾಬ್ರಿಕ್‌ನಲ್ಲಿ ಮಾತ್ರ ಲಭ್ಯವಿದ್ದ, ಇವು ಇದೀಗ ಕಾಟನ್ ಸಿಲ್ಕ್, ಸಿಲ್ಕ್, ಸಾಟೀನ್, ರಯಾನ್, ವೂಲ್, ನಿಟ್ಟೆಡ್ ಸೇರಿದಂತೆ ನಾನಾ ಫ್ಯಾಬ್ರಿಕ್‌ಗಳಲ್ಲಿ ಕಾಣಿಸತೊಡಗಿವೆ. ವೆರೈಟಿ ಡಿಸೈನ್‌ಗಳಿಗೆ ನಾಂದಿ ಹಾಡಿವೆ ಎನ್ನುತ್ತಾರೆ ಡಿಸೈನರ್ ರಾಜಿ.
ಇದನ್ನೂ ಓದಿ: Zircon Jewellery Fashion: ಹೈ ಫ್ಯಾಷನ್ ಜ್ಯುವೆಲರಿ ಲಿಸ್ಟ್‌ಗೆ ಸೇರಿದ ವೈವಿಧ್ಯಯಮಯ ಜಿರ್ಕೊನ್ ಆಭರಣಗಳ ಹಂಗಾಮಾ!
ಯಾರಿಗೆ ಯಾವುದು ಸೂಕ್ತ?
- ಸ್ಲಿಮ್ ಬಾಡಿ ಮಾಸ್ ಇಂಡೆಕ್ಸ್ ಹೊಂದಿರುವವರಿಗೆ ಯಾವುದೇ ಬಗೆಯ ಕುರ್ತಾ ಧರಿಸಿದರೂ ಓಕೆ.
- ಪ್ಲಂಪಿಯಾಗಿರುವವರು ಆದಷ್ಟೂ ಸ್ಟ್ರೆಟ್ ಕಟ್, ಎ ಲೈನ್ ಕಾಲರ್ ಕುರ್ತಾ ಧರಿಸುವುದು ಸೂಕ್ತ.
- ಕತ್ತನ್ನು ಹಿಡಿದಿಡುವಂತಹ ಕಾಲರ್ ಪ್ರಿಂಟೆಡ್ ಕುರ್ತಾಗಳ ಆಯ್ಕೆ ಬೇಡ.
- ಹೈ ಕಾಲರ್ ಕುರ್ತಾ ಧರಿಸುವವರು ಮಿನಿಮಲ್ ಆಕ್ಸೆಸರೀಸ್ ಧರಿಸಿದರೇ ಸಾಕು.
- ತ್ರೀ ಫೋರ್ತ್ ಸ್ಲೀವ್ನವು ಈ ಸೀಸನ್‌ನಲ್ಲಿ ಚಾಲ್ತಿಯಲ್ಲಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)