–ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ (Paris Olympics saree fashion) ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu) ನಾನಾ ಬಗೆಯ ಸೀರೆಗಳಲ್ಲಿ, ಪ್ರಯೋಗಾತ್ಮಕ ಡ್ರೇಪಿಂಗ್‌ನಲ್ಲಿ ಕಾಣಿಸಿಕೊಂಡು ಸೀರೆ ಪ್ರಿಯರ ಗಮನ ಸೆಳೆದರು.
ಪತಿ ಬ್ಯಾಡ್ಮಿಟನ್ ಕೋಚ್ ಮಾಥಾಯಿಸ್‌ಗೆ ಬೆಂಬಲ ನೀಡುವ ಸಲುವಾಗಿ ಪ್ಯಾರಿಸ್ ಒಲಂಪಿಕ್ಸ್‌ಗೆ ಆಗಮಿಸಿರುವ ನಟಿ ತಾಪ್ಸಿ ಪನ್ನು ಒಂದಲ್ಲ, ಎರಡಲ್ಲ ನಾಲ್ಕೈದು ಬಗೆಯ ಸೀರೆಗಳಲ್ಲಿ ಪ್ರಯೋಗಾತ್ಮಕ ಡ್ರೇಪಿಂಗ್ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡು, ಅಲ್ಲಿನ ಬೀದಿ ಬೀದಿಗಳಲ್ಲಿ ಓಡಾಡಿ, ಎಲ್ಲರ ಗಮನಸೆಳೆದರು.
ಅಂದಹಾಗೆ, ತಾಪ್ಸಿ ಪನ್ನು (Taapsee Pannu) ಎಲ್ಲರಂತೆ ಸಾಮಾನ್ಯ ಉಡುಗೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಎಲ್ಲರೂ ಒಮ್ಮೆ ತಿರುಗಿ ನೋಡುವಂತಹ ಸೀರೆಗಳನ್ನು ಇಂಡೋ-ವೆಸ್ಟರ್ನ್ ಸ್ಟೈಲಿಂಗ್‌ನಲ್ಲಿ ಉಟ್ಟು ಹೈಲೈಟಾದರು. ಪ್ರತಿ ಸೀರೆಯಲ್ಲೂ ಡಿಫರೆಂಟಾಗಿ ಕಾಣಿಸಿಕೊಂಡರು. ತಾಪ್ಸಿಯ ಈ ಸೀರೆಗಳ ಸ್ಟೈಲಿಂಗ್, ಅವರಿಗಿರುವ ಸೀರೆ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಇತರೇ ಸಿನಿಮಾ ತಾರೆಯರು ಕೂಡ ಇವರಂತೆಯೇ ಸೀರೆಯನ್ನು ಉಡಲಾರಂಭಿಸಿದಲ್ಲಿ, ಜಾಗತೀಕ ಮಟ್ಟದಲ್ಲಿ ಭಾರತೀಯರ ಈ ಸೀರೆಗಳಿಗೆ ಪ್ರಾಮುಖ್ಯತೆ ಹೆಚ್ಚುತ್ತದೆ ಎಂದಿದ್ದಾರೆ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ. ಇನ್ನು, ಫ್ಯಾಷನಿಸ್ಟ್ ರಾಕಿ ಹಾಗೂ ಜಾನ್ ಕೂಡ ಇದನ್ನೇ ಸಮರ್ಥಿಸಿಕೊಳ್ಳುತ್ತಾರೆ.
ತಾಪ್ಸಿ ಪನ್ನು ಸೀರೆಗಳ ಡ್ರೇಪಿಂಗ್ ಸ್ಟೈಲಿಂಗ್ ಹೇಗಿತ್ತು?
- ಪ್ಯಾರಿಸ್ ಒಲಂಪಿಕ್ಸ್ನ ಮೊದಲ ದಿನ ತಾಪ್ಸಿ ಚಿಕ್ಕ ಪಿಂಕ್ ಬಾರ್ಡರ್ನ ವೈಬ್ರೆಂಟ್ ಹಸಿರು ಕಾಟನ್ ಸೀರೆಯನ್ನು ಸ್ಕಾರ್ಫ್ನಂತೆ ಕುತ್ತಿಗೆ ಸುತ್ತಿ ಸ್ಲಿವ್ಲೆಸ್ ವೇಸ್ಟ್ಕೋಟ್ನೊಳಗೆ ತೂರಿ, ಪ್ರಿಂಟೆಡ್ ಸೆರಗನ್ನು ವೇಸ್ಟ್ಲೈನ್ನ ಮುಂಬರುವಂತೆ ಡ್ರೇಪ್ ಮಾಡಿದ್ದರು. ಇದರೊಂದಿಗೆ ಸ್ನೀಕರ್ ಧರಿಸಿದ್ದರು.
- ಎರಡನೇ ದಿನ ಬ್ಲ್ಯಾಕ್ ಟ್ಯಾಂಕ್ ಟಾಪ್ ಜೊತೆಗೆ ಕಪ್ಪು ವರ್ಣದ ಚಿಕ್ಕ ಬಾರ್ಡರ್ನ ಪಿಂಕ್ ಕಾಟನ್ ಸೀರೆಯನ್ನು ಧೋತಿ ಸ್ಟೈಲ್ನಲ್ಲಿ ಉಟ್ಟಿದ್ದರು. ಸ್ಟ್ರಾಪ್ ಸ್ಯಾಂಡಲ್ ಧರಿಸಿದ್ದರು.
- ಬರ್ತ್ಡೇ ದಿನ ತಾಪ್ಸಿ, ಡೆನಿಮ್ ಶರ್ಟ್ ಜೊತೆಗೆ ಪಿಂಕ್ ಚಿಕ್ಕ ಬಾರ್ಡರ್ ಇರುವ ಹಳದಿ ಬಣ್ಣದ, ಗರ್ಲ್ಸ್ ಮುಖಗಳಿರುವಂತಹ ಕ್ವಿರ್ಕಿ ಪ್ರಿಂಟ್ಸ್ನ ಸೀರೆಯನ್ನು ಉಟ್ಟಿದ್ದರು. ಅವರ ಎರಡು ಪುಟ್ಟ ಜುಟ್ಟು ಹಾಗೂ ಬ್ಲ್ಯಾಕ್ ಶೂ ಅವರಿಗೆ ಕ್ವಿರ್ಕಿ ಲುಕ್ ನೀಡಿತ್ತು.
- ಮತ್ತೊಂದು ದಿನ ವೆಸ್ಟರ್ನ್ ಲುಕ್ ನೀಡುವ ಕಾಲರ್ ನೆಕ್ನ ಫುಲ್ ಸ್ಲೀವ್ನ ಕಾರ್ಸೆಟ್ ಟಾಪ್ ಜೊತೆಗೆ ಬ್ಲ್ಯೂ & ವೈಟ್ ಕಾಟನ್ ಸೀರೆಯನ್ನು ಉಟ್ಟಿದ್ದ ತಾಪ್ಸಿ, ಸೀರೆ ಸೆರಗನ್ನು ಬಲಕ್ಕೆ ತಿರುಗಿಸಿ, ಒಟ್ಟೊಟ್ಟಾಗಿ ಪಿನ್ ಮಾಡಿದ್ದರು. ಇದರೊಂದಿಗೆ ಸ್ಕೂಲ್ ಶೂನಂತೆ ಬಿಂಬಿಸುವ ಹಾಫ್ ಶೂ ಅವರಿಗೆ ಡಿಫರೆಂಟ್ ಲುಕ್ ನೀಡಿತ್ತು.
ಇದನ್ನೂ ಓದಿ: Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್; ಶುರುವಾಗಿದೆ ಶಾಪಿಂಗ್ ಭರಾಟೆ
(ಲೇಖಕಿ ಫ್ಯಾಷನ್ ಪತ್ರಕರ್ತೆ)