Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ - Vistara News

ಫ್ಯಾಷನ್

Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ

Shravana shopping 2024: ಶ್ರಾವಣ ಮಾಸ ಆರಂಭಗೊಂಡಿದೆ. ಮುಂಬರುವ ಸಾಲು ಸಾಲು ಹಬ್ಬ-ಹರಿದಿನಗಳನ್ನು ಆಚರಿಸುವವರು ಈಗಾಗಲೇ ಶಾಪಿಂಗ್‌ನಲ್ಲಿ ತೊಡಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಎಲ್ಲೆಡೆ ಮಾರುಕಟ್ಟೆಗಳು ಗ್ರಾಹಕರನ್ನು ಸ್ವಾಗತಿಸುತ್ತಿವೆ. ಒಟ್ಟಾರೆ ಮಾರುಕಟ್ಟೆಯ ಚಿತ್ರಣ ಹೇಗಿದೆ? ಇಲ್ಲಿದೆ ವರದಿ.

VISTARANEWS.COM


on

Shravana shopping 2024
ಚಿತ್ರಗಳು: ಮಿಂಚು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶ್ರಾವಣ ಮಾಸದ ಶಾಪಿಂಗ್‌ (Shravana shopping 2024) ಎಲ್ಲೆಡೆ ಆರಂಭಗೊಂಡಿದೆ. ಹೌದು, ಈ ವರ್ಷದ ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಜೊತೆಗೆ ಒಂದರ ಹಿಂದೊಂದರಂತೆ ಸಾಲು ಸಾಲು ಹಬ್ಬ-ಹರಿದಿನಗಳು ಆಗಮಿಸಲಾರಂಭಿಸುತ್ತವೆ. ಇದಕ್ಕೆ ಪೂರಕ ಎಂಬಂತೆ, ಹಬ್ಬಗಳನ್ನು ಆಚರಿಸುವವರು ಈಗಾಗಲೇ ಶಾಪಿಂಗ್‌ ಆರಂಭಿಸಿದ್ದಾರೆ. ಪರಿಣಾಮ, ಈ ಫೆಸ್ಟೀವ್‌ ಸೀಸನ್‌ಗೆ ತಕ್ಕಂತೆ, ಎಲ್ಲೆಡೆ ಮಾರುಕಟ್ಟೆಗಳು ಕೂಡ ಸಜ್ಜಾಗಿವೆ. ಹಾಗಾದಲ್ಲಿ, ಹಬ್ಬದ ಸೀಸನ್‌ನಲ್ಲಿ ಏನೇನೆಲ್ಲಾ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವುದಕ್ಕೆ ಬೇಡಿಕೆ ಹೆಚ್ಚಾಗಿದೆ ಎಂಬುದರ ಬಗ್ಗೆ ಇಲ್ಲಿದೆ ವರದಿ.

Shravana shopping 2024

ಪೂಜಾಲಂಕಾರ/ಗೃಹಾಲಂಕಾರ ಸಾಮಗ್ರಿಗಳು

ಗೃಹಾಲಂಕಾರ ಹಾಗೂ ಪೂಜಾಲಂಕಾರಕ್ಕೆ ಬಳಸುವ ನಾನಾ ಬಗೆಬಗೆಯ ಕೃತಕ ಹೂ ತೋರಣಗಳು, ಮಾವಿನ ಎಲೆಗಳು, ಬಾಳೆಯ ಕಂಬಗಳು, ದೀಪಗಳು, ಕೊಡುಗೆ ನೀಡುವಂತಹ ಅತ್ಯಾಕರ್ಷಕ ವಸ್ತುಗಳು ಸೇರಿದಂತೆ ನಾನಾ ಬಗೆಯವು ಮಾರುಕಟ್ಟೆಯಲ್ಲಿ ಬಿಕರಿಗೊಳ್ಳುತ್ತಿವೆ.

Shravana shopping 2024

ಸೀರೆ ಅಂಗಡಿಗಳಲ್ಲಿ ಜನಜಂಗುಳಿ

ಸೀರೆ ಅಂಗಡಿಗಳಲ್ಲಂತೂ ಜನಜಂಗುಳಿ ಈ ಮೊದಲಿಗಿಂತ ಹೆಚ್ಚಾಗಿದೆ. ಕೇವಲ ಹೆಂಗಸರು ಮಾತ್ರವಲ್ಲ, ಇಡೀ ಕುಟುಂಬವೇ ಸೀರೆ ಸೆಂಟರ್‌, ಶಾಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹಬ್ಬ ಸಮೀಪಿಸುತ್ತಿರುವಂತೆಯೇ ನಾನಾ ಬಗೆಯ ಸೀರೆಗಳಿಗೆ ಡಿಮ್ಯಾಂಡ್‌ ಹೆಚ್ಚಿದೆ ಎನ್ನುತ್ತಾರೆ ಸೀರೆ ಮಾರಾಟಗಾರರಾದ ರಾಘವ್.

Shravana shopping 2024

ಬಂಗಾರದ ಆಭರಣಗಳ ಖರೀದಿ

ಅಕ್ಷಯ ತೃತೀಯ ಹಾಗೂ ದೀಪಾವಳಿ ಸೀಸನ್‌ ಹೊರತುಪಡಿಸಿದಲ್ಲಿ ಅತಿ ಹೆಚ್ಚು ಬಂಗಾರದ ಜ್ಯುವೆಲರಿ ಕೊಳ್ಳುವುದು ಶ್ರಾವಣ ಮಾಸದಲ್ಲಿ ಎನ್ನುತ್ತದೆ ಸಮೀಕ್ಷೆಯೊಂದು. ಇದಕ್ಕೆ ಸಾಕ್ಷಿ ಎಂಬಂತೆ, ಮುಂಬರುವ ಹಬ್ಬಗಳಿಗೆ, ಈಗಲೇ ಬಂಗಾರ ಖರೀದಿ ಮಾಡುವ ಮಾನಿನಿಯರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಆಭರಣ ಅಂಗಡಿಯೊಂದರ ಮಾಲೀಕರು.

Shravana shopping 2024

ಬೆಳ್ಳಿ ಸಾಮಗ್ರಿಗಳ ಖರೀದಿ ಭರಾಟೆ

ಇನ್ನು ಬಂಗಾರ ಮಾತ್ರವಲ್ಲ, ಬೆಳ್ಳಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆಯೂ ಸಾಗಿದೆ. ಬೆಳ್ಳಿ ತಟ್ಟೆ, ಬಟ್ಟಲು, ದೇವಿಯ ಮುಖವಾಡ, ದೀಪ, ಮಂಗಳಾರತಿ ತಟ್ಟೆ ಹೀಗೆ ನಾನಾ ಸಾಮಗ್ರಿಗಳ ಮಾರಾಟದಲ್ಲಿ ಹೆಚ್ಚಳ ಕಂಡುಬರುತ್ತಿದೆ.

Friendshipday Fashion: ಮಾನ್ಸೂನ್‌‌‌ನಲ್ಲಿ ಟ್ರೆಂಡಿಯಾದ ಫ್ರೆಂಡ್‌‌‌ಶಿಪ್‌ ಡೇ ಫ್ಯಾಷನ್‌ ಥೀಮ್‌ಇದನ್ನೂ ಓದಿ:

ಗೃಹೋಪಯೋಗಿ ವಸ್ತುಗಳ ಖರೀದಿ

ಶ್ರಾವಣ ಮಾಸದಲ್ಲಿ ಶುಭ ದಿನಗಳು ಹೆಚ್ಚಾಗಿರುವುದರಿಂದ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವವರು ಕೂಡ ಜಾಸ್ತಿಯಾಗಿದ್ದಾರೆ. ಅದರಲ್ಲೂ, ಅಡುಗೆ ಮನೆಯ ಎಲೆಕ್ಟ್ರಾನಿಕ್‌ ಐಟಂಗಳನ್ನು ಖರೀದಿಸುವವರು ಅಧಿಕಗೊಂಡಿದ್ದಾರೆ ಎನ್ನುತ್ತಾರೆ ಎಲಾಕ್ಟ್ರಾನಿಕ್ಸ್ ಶಾಪ್‌ವೊಂದರ ಮ್ಯಾನೇಜರ್‌ ಜಯಂತ್‌.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Paris Olympics Saree Fashion: ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ವೈವಿಧ್ಯಮಯ ಇಂಡೋ-ವೆಸ್ಟರ್ನ್‌ ಸೀರೆಗಳಲ್ಲಿ ಕಾಣಿಸಿಕೊಂಡ ತಾಪ್ಸಿ ಪನ್ನು!

Paris Olympics saree fashion: ಪತಿ ಬ್ಯಾಡ್ಮಿಟನ್‌ ಕೋಚ್‌ ಮಥಾಯಿಸ್‌ಗೆ ಬೆಂಬಲ ನೀಡುವ ಸಲುವಾಗಿ ಪ್ಯಾರಿಸ್‌ ಒಲಂಪಿಕ್ಸ್‌ಗೆ ಆಗಮಿಸಿದ್ದ ಬಾಲಿವುಡ್‌ ನಟಿ ತಾಪ್ಸಿ ಪನ್ನು ಬಗೆಬಗೆಯ ಸೀರೆಗಳಲ್ಲಿ, ಪ್ರಯೋಗಾತ್ಮಕ ಡ್ರೇಪಿಂಗ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಸೀರೆ ಪ್ರೇಮಿಗಳ ಗಮನ ಸೆಳೆದರು. ಅವರು ಹೇಗೆಲ್ಲ ಕಾಣಿಸಿಕೊಂಡರು? ಅವರ ಸೀರೆ ಲವ್‌ ಬಗ್ಗೆ ಫ್ಯಾಷನಿಸ್ಟ್‌ಗಳು ಹೇಳಿರುವುದೇನು? ಇಲ್ಲಿದೆ ವಿವರ.

VISTARANEWS.COM


on

Paris Olympics saree fashion
ಚಿತ್ರಗಳು: ತಾಪ್ಸಿ ಪನ್ನು, ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ (Paris Olympics saree fashion) ಬಾಲಿವುಡ್‌ ನಟಿ ತಾಪ್ಸಿ ಪನ್ನು (Taapsee Pannu) ನಾನಾ ಬಗೆಯ ಸೀರೆಗಳಲ್ಲಿ, ಪ್ರಯೋಗಾತ್ಮಕ ಡ್ರೇಪಿಂಗ್‌ನಲ್ಲಿ ಕಾಣಿಸಿಕೊಂಡು ಸೀರೆ ಪ್ರಿಯರ ಗಮನ ಸೆಳೆದರು.
ಪತಿ ಬ್ಯಾಡ್ಮಿಟನ್‌ ಕೋಚ್‌ ಮಾಥಾಯಿಸ್‌ಗೆ ಬೆಂಬಲ ನೀಡುವ ಸಲುವಾಗಿ ಪ್ಯಾರಿಸ್‌ ಒಲಂಪಿಕ್ಸ್‌ಗೆ ಆಗಮಿಸಿರುವ ನಟಿ ತಾಪ್ಸಿ ಪನ್ನು ಒಂದಲ್ಲ, ಎರಡಲ್ಲ ನಾಲ್ಕೈದು ಬಗೆಯ ಸೀರೆಗಳಲ್ಲಿ ಪ್ರಯೋಗಾತ್ಮಕ ಡ್ರೇಪಿಂಗ್‌ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡು, ಅಲ್ಲಿನ ಬೀದಿ ಬೀದಿಗಳಲ್ಲಿ ಓಡಾಡಿ, ಎಲ್ಲರ ಗಮನಸೆಳೆದರು.

saree fashion

ಅಂದಹಾಗೆ, ತಾಪ್ಸಿ ಪನ್ನು (Taapsee Pannu) ಎಲ್ಲರಂತೆ ಸಾಮಾನ್ಯ ಉಡುಗೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಎಲ್ಲರೂ ಒಮ್ಮೆ ತಿರುಗಿ ನೋಡುವಂತಹ ಸೀರೆಗಳನ್ನು ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌ನಲ್ಲಿ ಉಟ್ಟು ಹೈಲೈಟಾದರು. ಪ್ರತಿ ಸೀರೆಯಲ್ಲೂ ಡಿಫರೆಂಟಾಗಿ ಕಾಣಿಸಿಕೊಂಡರು. ತಾಪ್ಸಿಯ ಈ ಸೀರೆಗಳ ಸ್ಟೈಲಿಂಗ್‌, ಅವರಿಗಿರುವ ಸೀರೆ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಇತರೇ ಸಿನಿಮಾ ತಾರೆಯರು ಕೂಡ ಇವರಂತೆಯೇ ಸೀರೆಯನ್ನು ಉಡಲಾರಂಭಿಸಿದಲ್ಲಿ, ಜಾಗತೀಕ ಮಟ್ಟದಲ್ಲಿ ಭಾರತೀಯರ ಈ ಸೀರೆಗಳಿಗೆ ಪ್ರಾಮುಖ್ಯತೆ ಹೆಚ್ಚುತ್ತದೆ ಎಂದಿದ್ದಾರೆ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ. ಇನ್ನು, ಫ್ಯಾಷನಿಸ್ಟ್‌ ರಾಕಿ ಹಾಗೂ ಜಾನ್‌ ಕೂಡ ಇದನ್ನೇ ಸಮರ್ಥಿಸಿಕೊಳ್ಳುತ್ತಾರೆ.

ತಾಪ್ಸಿ ಪನ್ನು ಸೀರೆಗಳ ಡ್ರೇಪಿಂಗ್‌ ಸ್ಟೈಲಿಂಗ್‌ ಹೇಗಿತ್ತು?

  • ಪ್ಯಾರಿಸ್‌ ಒಲಂಪಿಕ್ಸ್‌ನ ಮೊದಲ ದಿನ ತಾಪ್ಸಿ ಚಿಕ್ಕ ಪಿಂಕ್‌ ಬಾರ್ಡರ್‌ನ ವೈಬ್ರೆಂಟ್‌ ಹಸಿರು ಕಾಟನ್‌ ಸೀರೆಯನ್ನು ಸ್ಕಾರ್ಫ್‌ನಂತೆ ಕುತ್ತಿಗೆ ಸುತ್ತಿ ಸ್ಲಿವ್‌ಲೆಸ್‌ ವೇಸ್ಟ್ಕೋಟ್‌ನೊಳಗೆ ತೂರಿ, ಪ್ರಿಂಟೆಡ್‌ ಸೆರಗನ್ನು ವೇಸ್ಟ್‌ಲೈನ್‌ನ ಮುಂಬರುವಂತೆ ಡ್ರೇಪ್‌ ಮಾಡಿದ್ದರು. ಇದರೊಂದಿಗೆ ಸ್ನೀಕರ್‌ ಧರಿಸಿದ್ದರು.
  • ಎರಡನೇ ದಿನ ಬ್ಲ್ಯಾಕ್‌ ಟ್ಯಾಂಕ್‌ ಟಾಪ್‌ ಜೊತೆಗೆ ಕಪ್ಪು ವರ್ಣದ ಚಿಕ್ಕ ಬಾರ್ಡರ್‌ನ ಪಿಂಕ್‌ ಕಾಟನ್‌ ಸೀರೆಯನ್ನು ಧೋತಿ ಸ್ಟೈಲ್‌ನಲ್ಲಿ ಉಟ್ಟಿದ್ದರು. ಸ್ಟ್ರಾಪ್‌ ಸ್ಯಾಂಡಲ್‌ ಧರಿಸಿದ್ದರು.
  • ಬರ್ತ್‌ಡೇ ದಿನ ತಾಪ್ಸಿ, ಡೆನಿಮ್‌ ಶರ್ಟ್ ಜೊತೆಗೆ ಪಿಂಕ್‌ ಚಿಕ್ಕ ಬಾರ್ಡರ್‌ ಇರುವ ಹಳದಿ ಬಣ್ಣದ, ಗರ್ಲ್ಸ್ ಮುಖಗಳಿರುವಂತಹ ಕ್ವಿರ್ಕಿ ಪ್ರಿಂಟ್ಸ್‌ನ ಸೀರೆಯನ್ನು ಉಟ್ಟಿದ್ದರು. ಅವರ ಎರಡು ಪುಟ್ಟ ಜುಟ್ಟು ಹಾಗೂ ಬ್ಲ್ಯಾಕ್‌ ಶೂ ಅವರಿಗೆ ಕ್ವಿರ್ಕಿ ಲುಕ್‌ ನೀಡಿತ್ತು.
  • ಮತ್ತೊಂದು ದಿನ ವೆಸ್ಟರ್ನ್‌ ಲುಕ್‌ ನೀಡುವ ಕಾಲರ್‌ ನೆಕ್‌ನ ಫುಲ್ ಸ್ಲೀವ್‌ನ ಕಾರ್ಸೆಟ್‌ ಟಾಪ್‌ ಜೊತೆಗೆ ಬ್ಲ್ಯೂ & ವೈಟ್‌ ಕಾಟನ್‌ ಸೀರೆಯನ್ನು ಉಟ್ಟಿದ್ದ ತಾಪ್ಸಿ, ಸೀರೆ ಸೆರಗನ್ನು ಬಲಕ್ಕೆ ತಿರುಗಿಸಿ, ಒಟ್ಟೊಟ್ಟಾಗಿ ಪಿನ್‌ ಮಾಡಿದ್ದರು. ಇದರೊಂದಿಗೆ ಸ್ಕೂಲ್‌ ಶೂನಂತೆ ಬಿಂಬಿಸುವ ಹಾಫ್‌ ಶೂ ಅವರಿಗೆ ಡಿಫರೆಂಟ್‌ ಲುಕ್‌ ನೀಡಿತ್ತು.

ಇದನ್ನೂ ಓದಿ: Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Friendshipday Fashion: ಮಾನ್ಸೂನ್‌‌‌ನಲ್ಲಿ ಟ್ರೆಂಡಿಯಾದ ಫ್ರೆಂಡ್‌‌‌ಶಿಪ್‌ ಡೇ ಫ್ಯಾಷನ್‌ ಥೀಮ್‌

Friendshipday Fashion: ಪ್ರತಿ ವರ್ಷವೂ ಅಗಸ್ಟ್ ಮೊದಲ ಭಾನುವಾರ ಸೆಲೆಬ್ರೇಟ್‌ ಮಾಡುವ ಫ್ರೆಂಡ್‌ ಶಿಪ್‌ ಡೇಯಂದು ಒಮ್ಮೆ ಕಾಣಿಸಿಕೊಂಡ ಫ್ಯಾಷನ್‌ ಮತ್ತೊಮ್ಮೆ ಕಾಣಿಸುವುದಿಲ್ಲ! ಬದಲಾಗುತ್ತಿರುತ್ತದೆ. ಹಾಗಾದಲ್ಲಿ, ಈ ಬಾರಿ ಯಾವ ರೀತಿಯ ಫ್ಯಾಷನ್‌ ಜಾರಿ ಬರುತ್ತಿದೆ. ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಫ್ರೆಂಡ್‌ಶಿಪ್‌ ಸ್ಟೈಲಿಂಗ್‌ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

VISTARANEWS.COM


on

friendshipday fashion
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಫ್ರೆಂಡ್‌ಶಿಪ್‌ ಡೇ ಫ್ಯಾಷನ್‌ (Friendshipday Fashion) ಥೀಮ್‌ ಟ್ರೆಂಡಿಯಾಗಿದೆ. ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಅಗಸ್ಟ್ ನ ಮೊದಲ ಭಾನುವಾರ ಸೆಲೆಬ್ರೇಟ್‌ ಫ್ರೆಂಡ್‌ ಶಿಪ್‌ ಡೇ ಫ್ಯಾಷನ್‌ನ ಕಾನ್ಸೆಪ್ಟ್ ಒಂದೇ ಎಂದೆನಿಸಿದರೂ ಥೀಮ್‌ ಹಾಗೂ ಸ್ಟೈಲಿಂಗ್‌ ಪ್ರತಿ ವರ್ಷ ಬದಲಾಗುತ್ತದೆ. ಫ್ರೆಂಡ್ಸ್ ಗ್ರೂಪ್‌ನಲ್ಲಿ ಒಮ್ಮೆ ಕಾಣಿಸಿಕೊಂಡ ಫ್ಯಾಷನ್‌ ಮುಂಬರುವ ವರ್ಷ ಕಾಣಿಸುವುದಿಲ್ಲ! ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಹಾಗಾದಲ್ಲಿ ಈ ಬಾರಿಯ ಫ್ರೆಂಡ್‌ಶಿಪ್‌ ಡೇ ಫ್ಯಾಷನ್‌ ಏನು? ಹೇಗೆಲ್ಲಾ ಕಾಣಿಸಿಕೊಳ್ಳಬಹುದು? ಮಾನ್ಸೂನ್‌ ಫ್ರೆಂಡ್‌ಶಿಪ್‌ ಡೇ ಲುಕ್‌ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

Friendshipday Fashion

ಫ್ರೆಂಡ್‌ಶಿಪ್‌ ಡೇಗೂ ಬಂತು ಫ್ಯಾಷನ್‌ ಥೀಮ್‌

ಫ್ರೆಂಡ್‌ಶಿಪ್‌ ಡೇ ಆಚರಿಸುವ ಸ್ನೇಹಿತರು ಹಾಗೂ ಅವರ ಗ್ರೂಪ್‌ಗಳು, ತಮ್ಮದೇ ಆದ ಥೀಮ್‌ ಫ್ಯಾಷನ್‌ ಫಾಲೋ ಮಾಡಲಾರಂಭಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಮಾಲ್‌-ಶಾಪ್‌ಗಳಲ್ಲಿ ಬಲ್ಕ್‌ ಆರ್ಡರ್ನಲ್ಲಿ ಫ್ಯಾಷನ್‌ವೇರ್‌ಗಳೂ ದೊರೆಯುತ್ತಿವೆ. ಕಾರ್ಪೋರೇಟ್‌ ಕಚೇರಿಯ ಉದ್ಯೋಗಿಗಳಾಗಿರಬಹುದು ಅಥವಾ ಕಾಲೇಜು ಹುಡುಗ-ಹುಡುಗಿಯರಾಗಿರಬಹುದು. ಅವರವರ ಗ್ರೂಪ್‌ನ ಅಭಿರುಚಿಗೆ ತಕ್ಕಂತೆ ಫ್ಯಾಷನ್‌ ಥೀಮ್‌ಗಳನ್ನು ರೂಪಿಸಿಕೊಂಡು ಫ್ಯಾಷನ್‌ವೇರ್‌ಗಳನ್ನು ಧರಿಸುವುದು ಟ್ರೆಂಡಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇನ್ನು, ಥೀಮ್‌ ಎಂದಾಕ್ಷಣಾ ಗುಂಪಿನ ಎಲ್ಲರ ಔಟ್‌ಫಿಟ್‌ಗಳು ಒಂದೇ ಆಗಿರಬೇಕೆಂದಿಲ್ಲ! ಒಟ್ಟಿನಲ್ಲಿ ಅವರೆಲ್ಲರೂ ಧರಿಸುವ ಯಾವುದೇ ಉಡುಪು ಅಥವಾ ಆಕ್ಸೆಸರೀಸ್‌ ಇಲ್ಲವೇ ಸ್ಟೈಲಿಂಗ್‌ ಒಂದೇ ಬಗೆಯದ್ದಾಗಿರಬಹುದು. ಅದು ಔಟಿಂಗ್‌ನದ್ದಾಗಿರಬಹುದು, ಪಾರ್ಟಿವೇರ್‌ನದ್ದಾಗಿರಬಹುದು ಅಥವಾ ಕೆಫೆ ಅಥವಾ ರೆಸ್ಟೋರೆಂಟ್‌ನಲ್ಲಿ ಕಾಲ ಕಳೆಯುವಂತದ್ದಾಗಿರಬಹುದು. ಆಯಾ ಗ್ರೂಪ್‌ನ ಐಡೆಂಟಿಟಿಗೆ ತಕ್ಕಂತೆ ಥೀಮ್‌ ಫ್ಯಾಷನ್‌ ಬದಲಿಸಿಕೊಳ್ಳಬಹುದು ಎನ್ನುತ್ತಾರೆ ಡಿಸೈನರ್‌ ರಿಯಾಜ್‌ ಹಾಗೂ ರಕ್ಷ್.

Friendshipday Fashion

ಗ್ರೂಪ್‌ನ ಚಟುವಟಿಕೆಗಳಿಗೆ ತಕ್ಕಂತೆ ಸ್ಟೈಲಿಂಗ್‌

ಸ್ನೇಹಿತರ ಗ್ರೂಪ್‌ಗಳು ಕೇವಲ ಜೆನ್‌ ಜಿ, ಮಿಲೆನಿಯಲ್‌ ಜನರಿಂದ ಕೂಡಿರಬೇಕೆಂದಿಲ್ಲ, ಗ್ರೂಪ್‌ಗಳು ವಯಸ್ಸಾಗಿರುವ ಹಿರಿಯರದ್ದು ಆಗಿರಬಹುದು ಅಥವಾ ಸಮಾನ ಮನಸ್ಕರ ವಿಭಿನ್ನ ಗ್ರೂಪ್‌ಗಳಾಗಬಹುದು. ಆಯಾ ಗ್ರೂಪ್‌ನ ಚಟುವಟಿಕೆಗಳಿಗೆ ತಕ್ಕಂತೆ ಡ್ರೆಸ್ಸಿಂಗ್‌ ಹಾಗೂ ಸ್ಟೈಲಿಂಗ್‌ ಬದಲಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Friendship Band Trend: ಹೊಸ ಜನರೇಷನ್‌‌ಗೆ ಪ್ರಿಯವಾದ 4 ವಿನ್ಯಾಸದ ಫ್ರೆಂಡ್‌ ಶಿಪ್‌ ಬ್ಯಾಂಡ್‌‌ಗಳಿವು

ಫ್ರೆಂಡ್‌ಶಿಪ್‌ ಡೇ ಸ್ಟೈಲಿಂಗ್‌ಗೆ ಸಿಂಪಲ್‌ ಟಿಪ್ಸ್

  • ಫ್ರೆಂಡ್ಸ್ ಗ್ರೂಪ್‌ಗೆ ತಕ್ಕಂತೆ ಸ್ಟೈಲಿಂಗ್‌ ಮಾಡಿ.
  • ಎಥ್ನಿಕ್‌, ವೆಸ್ಟರ್ನ್‌, ಸೆಮಿ ಎಥ್ನಿಕ್‌, ಬಿಂದಾಸ್‌ ಯಾವುದಾದರೂ ಸರಿಯೇ ಕಂಫರ್ಟಬಲ್‌ ಸ್ಟೈಲಿಂಗ್‌ ಚೂಸ್‌ ಮಾಡಿ.
  • ಔಟಿಂಗ್‌ ಆದಲ್ಲಿ ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ಸ್ಟೈಲಿಂಗ್‌ ಮಾಡಿ.
  • ಆದಷ್ಟೂ ಯಂಗ್‌ ಲುಕ್‌ ನೀಡುವ ಸ್ಟೈಲಿಂಗ್‌ ಅಳವಡಿಸಿಕೊಳ್ಳಿ

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Friendship Band Trend: ಹೊಸ ಜನರೇಷನ್‌‌ಗೆ ಪ್ರಿಯವಾದ 4 ವಿನ್ಯಾಸದ ಫ್ರೆಂಡ್‌ ಶಿಪ್‌ ಬ್ಯಾಂಡ್‌‌ಗಳಿವು

Friendship Band Trend: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹೊಸ ಬಗೆಯ ಫ್ರೆಂಡ್‌ ಶಿಪ್‌ ಬ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ 4 ಬಗೆಯವು ಜೆನ್‌ ಜಿ ಜನರೇಷನ್‌ ಹುಡುಗ-ಹುಡುಗಿಯರಿಗೆ ಹೆಚ್ಚು ಪ್ರಿಯವಾಗಿವೆ. ಹಾಗಾದಲ್ಲಿ, ಅವು ಯಾವುವು? ಅವುಗಳ ವಿಶೇಷತೆಯೇನು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Friendship Band Trend
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್‌ ಜಿ ಜನರೇಷನ್‌ನ ಹುಡುಗ-ಹುಡುಗಿಯರಿಗೆ ಪ್ರಿಯವಾಗುವಂತಹ ಬಗೆಬಗೆಯ ಡಿಸೈನ್‌ನ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು (Friendship Band Trend) ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅವುಗಳಲ್ಲಿ 4 ಬಗೆಯವು ಹೆಚ್ಚು ಟ್ರೆಂಡಿಯಾಗಿವೆ. ಹೌದು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲೆಕ್ಕವಿಲ್ಲದಷ್ಟು ನಾನಾ ಬಗೆಯ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಅವುಗಳಲ್ಲಿ ನಾಲ್ಕು ಬಗೆಯವು ಮಾತ್ರ ಜೆನ್‌ ಜಿ ಜನರೇಷನ್‌ನ ಹುಡುಗ-ಹುಡುಗಿಯರನ್ನು ಆಕರ್ಷಿಸಿವೆ. ಹಾಗಾದಲ್ಲಿ, ಅವು ಯಾವುವು? ಅವುಗಳ ವಿಶೇಷತೆಯೇನು? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

Friendship Band Trend

ಬ್ರೆಸ್‌ಲೆಟ್‌ ಬ್ಯಾಂಡ್‌

ನೋಡಲು ಥೇಟ್‌ ಬ್ರೇಸ್‌ಲೆಟ್‌ನಂತೆಯೇ ಕಾಣುವ ಇವು ವೈಟ್‌ ಹಾಗೂ ಬ್ಲಾಕ್‌ ಇಲ್ಲವೇ ಅಕ್ಸಿಡೈಸ್ಡ್ ಮೆಟಲ್‌ನಿಂದ ಸಿದ್ಧಗೊಂಡಿರುತ್ತವೆ. ಹರಿದು ಹೋಗದ ಫಂಕಿ ಹಾಗೂ ಜಂಕ್‌ ಬ್ರೆಸ್‌ಲೆಟ್‌ಗಳಿವು. ಈ ಜನರೇಷನ್‌ನ ಅಭಿರುಚಿಗೆ ತಕ್ಕಂತೆ ಚಿತ್ರ-ವಿಚಿತ್ರ ಡಿಸೈನ್‌ನಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.

Friendship Band Trend

ಇವಿಲ್‌ ಐ ಫ್ರೆಂಡ್‌ಶಿಪ್‌ ಬ್ಯಾಂಡ್‌

ಇವಿಲ್‌ ಐ ಡಿಸೈನ್‌ ಹೊಂದಿದ ಈ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು ಹುಡುಗ ಹುಡುಗಿಯರು ಎನ್ನುವ ಭೇದ-ಭಾವವಿಲ್ಲದೇ ಡಿಮ್ಯಾಂಡ್‌ ಹೆಚ್ಚಿಸಿಕೊಂಡಿವೆ. ಹಾಗೆಂದು ಈ ಬ್ಯಾಂಡ್‌ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಲ್ಲ! ಈ ಬಾರಿ ಫ್ರೆಂಡ್ಸ್ ನಡುವೆ ಬಾಂಧವ್ಯ ಹೆಚ್ಚಿಸಲು ಬ್ಯಾಂಡ್‌ ರೂಪದಲ್ಲಿ ಎಂಟ್ರಿ ನೀಡಿವೆ.

ಉಲ್ಲನ್‌ ಥ್ರೆಡ್‌ ಫ್ರೆಂಡ್‌ಶಿಪ್‌ ಬ್ಯಾಂಡ್‌

ಉಲ್ಲನ್‌ ದಾರವನ್ನು ಬಳಸಿ ಕೈಗಳಿಂದ ಹೆಣೆದಿರುವಂತಹ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳಿವು. ಹೆಸರು, ಅಕ್ಷರ ಅಥವಾ ಯಾವುದೇ ಪುಟ್ಟ ಚಿತ್ರವನ್ನು ಮಧ್ಯೆ ಹೆಣೆದು ಬ್ಯಾಂಡ್‌ ಮಾಡಲಾಗಿರುತ್ತದೆ. ಕೈಗೆ ಬೇಕಾದಾಗ ಸುಲಭವಾಗಿ ಕಟ್ಟಿಕೊಂಡು ಎತ್ತಿಡಬಹುದಾಗಿದೆ. ಕಡಿಮೆ ಬೆಲೆಗೆ ದೊರಕುವ ಇವು ಕೂಡ ಇಂದಿಗೂ ಟ್ರೆಂಡ್‌ನಲ್ಲಿವೆ.

ಇದನ್ನೂ ಓದಿ: Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್!

ಕ್ರಿಸ್ಟಲ್‌ ಬೀಡ್ಸ್ ಫ್ರೆಂಡ್‌ಶಿಪ್‌ ಬ್ಯಾಂಡ್‌

ನಾನಾ ಬಣ್ಣದಲ್ಲಿ ಲಭ್ಯವಿರುವ ಈ ಕ್ರಿಸ್ಟಲ್‌ ಬೀಡ್ಸ್ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು ಕಸ್ಟಮೈಸ್ಡ್ ಡಿಸೈನ್‌ನಲ್ಲಿ ದೊರೆಯುತ್ತಿವೆ. ಇವು ಕೂಡ ಹೆಸರು, ಇನಿಶಿಯಲ್‌ನಿಂದ ಸಿದ್ಧಪಡಿಸಬಹುದು. ಹಾಗಾಗಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಡಾರ್ಕ್‌ ಶೇಡ್‌ನವನ್ನು ಹುಡುಗರು ಇಷ್ಟಪಟ್ಟರೇ, ಹುಡುಗಿಯರು ಲೈಟ್‌ ಶೇಡ್‌ನವನ್ನು ಆಯ್ಕೆ ಮಾಡುತ್ತಿದ್ದಾರೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Fashion Workshop: ಬೆಂಗಳೂರಲ್ಲಿ ಜಪಾನಿನ ಖ್ಯಾತ ಡಿಸೈನರ್‌ ಶಿಂಗೊ ಸಾಟೊ ಫ್ಯಾಷನ್‌ ಕ್ಲಾಸ್‌!

Fashion workshop: ಫ್ಯಾಷನ್‌ ಕ್ಷೇತ್ರದ ಹೊಸ ಎಜುಕೇಷನ್ ಪಾಲಿಸಿಗೆ ಸಂಬಂಧಿಸಿದಂತೆ ಸರಕಾರ ಜಾರಿ ತಂದಿರುವ ಹೊಸ ನಿಯಮಗಳಿಗೆ ಅನ್ವಯವಾಗುವಂತೆ ಉದ್ಯಾನನಗರಿಯ ವಿದ್ಯಾ ಫ್ಯಾಷನ್‌ ಅಕಾಡೆಮಿ ನಡೆಸಿದ ಫ್ಯಾಷನ್‌ ಕಾರ್ಯಾಗಾರದಲ್ಲಿ ಜಪಾನ್‌ನ ಖ್ಯಾತ ಫ್ಯಾಷನ್‌ ಡಿಸೈನರ್‌ ಶಿಂಗೋಸಾಟೊ ಭಾಗವಹಿಸಿ, ಫ್ಯಾಷನ್‌ನ ಮಾಸ್ಟರ್‌ ಕ್ಲಾಸ್‌ ಕಾರ್ಯಾಗಾರ ನಡೆಸಿದರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Fashion workshop
ಚಿತ್ರಗಳು: ವಿದ್ಯಾ ಫ್ಯಾಷನ್‌ ಅಕಾಡೆಮಿಯಲ್ಲಿ ನಡೆದ ಫ್ಯಾಷನ್‌ ಕಾರ್ಯಾಗಾರದ ಚಿತ್ರಗಳು
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಗೆ ಆಗಮಿಸಿದ್ದ (Fashion workshop) ಜಪಾನ್‌ನ ಖ್ಯಾತ ವಿನ್ಯಾಸಕ ಶಿಂಗೊ ಸಾಟೊ, ಭಾವಿ ಫ್ಯಾಷನ್‌ ಡಿಸೈನರ್‌ಗಳಿಗೆ ತ್ರಿ ಡಿ ಕಟ್ಟಿಂಗ್‌ ಫ್ಯಾಷನ್‌ ಕುರಿತಂತೆ ಮಾಸ್ಟರ್‌ ಕ್ಲಾಸ್‌ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಭಾರತದಲ್ಲಿ ಫ್ಯಾಷನ್‌ ಕ್ಷೇತ್ರದ ಹೊಸ ಎಜುಕೇಷನ್ ಪಾಲಿಸಿಗೆ ಸಂಬಂಧಿಸಿದಂತೆ, ಈ ಸಾಲಿನಲ್ಲಿ ಕೇಂದ್ರ ಸರಕಾರ ಜಾರಿ ತಂದಿರುವ ಹೊಸ ನಿಯಮಗಳಿಗೆ ಅನ್ವಯವಾಗುವಂತೆ ಸಹಕಾರಿಯಾಗುವ ಫ್ಯಾಷನ್‌ ಮಾಸ್ಟರ್‌ ಕ್ಲಾಸನ್ನು ಉದ್ಯಾನನಗರಿಯ ವಿದ್ಯಾ ಫ್ಯಾಷನ್‌ ಅಕಾಡೆಮಿಯು ಜಪಾನಿನ ಖ್ಯಾತ ತ್ರಿ ಡಿ ಕಟ್ಟಿಂಗ್‌ ಡಿಸೈನರ್‌ ಶಿಂಗೊಸಾಟೋ ಅವರ ಸಹಯೋಗದೊಂದಿಗೆ ನಡೆಸಿತು. 3 ದಿನಗಳ ಕಾಲ ನಡೆದ ಈ ಫ್ಯಾಷನ್‌ ಕಾರ್ಯಗಾರದಲ್ಲಿ ವಿದ್ಯಾ ಫ್ಯಾಷನ್‌ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕಿ ವಿದ್ಯಾ ವಿವೇಕ್‌ ಭಾಗವಹಿಸಿದ್ದರು. ಅಲ್ಲದೇ, ಫ್ಯಾಷನ್‌ ಡಿಸೈನರ್‌ಗಳು ಹಾಗೂ ಆಸಕ್ತ ಮಹಿಳೆಯರು ಪಾಲ್ಗೊಂಡಿದ್ದರು.

ವಿದ್ಯಾ ವಿವೇಕ್‌ ಪ್ರಾಯೋಗಿಕ ಕಾರ್ಯಾಗಾರ

ಇಂದು ಕಂಪ್ಯೂಟರೈಸ್ಡ್ ಡಿಸೈನಿಂಗ್‌ ಕೋರ್ಸ್‌ಗಳು ಬಂದ ನಂತರ ವಿದ್ಯಾರ್ಥಿಗಳ ಕಲಿಯುವ ಹಾಗೂ ಯೋಚಿಸಿ ಡಿಸೈನ್‌ ಮಾಡುವ ಸ್ಕಿಲ್‌ ಕಡಿಮೆಯಾಗುತ್ತಿದೆ. ಡಿಸೈನಿಂಗ್‌ ಹಾಗೂ ಸ್ಕೆಚ್ಚಿಂಗ್‌ಗಷ್ಟೇ ಭಾವಿ ಡಿಸೈನರ್‌ಗಳು ಸೀಮಿತವಾಗುತ್ತಿದ್ದಾರೆ. ಇದನ್ನು ಮನಗೊಂಡ ಅಪರೆಲ್‌ ಕ್ಷೇತ್ರದ ಎಕ್ಸ್‌ಪರ್ಟ್‌ಗಳು ಪ್ರಾಯೋಗಿಕವಾಗಿ ತ್ರಿಡಿ ಕಟ್ಟಿಂಗ್‌ ಕ್ಲಾಸ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉತ್ತೇಜಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಇತ್ತೀಚಿನ ಉತ್ತಮ ಬೆಳವಣಿಗೆ. ಪರಿಣಾಮ, ಫ್ಯಾಷನ್‌ ಕೋರ್ಸ್‌ಗಳಲ್ಲಿ ತ್ರಿ ಡಿ ಕಟ್ಟಿಂಗ್‌ ಕುರಿತ ಪ್ರಾಯೋಗಿಕ ತರಗತಿಗಳನ್ನು ನಡೆಸಲಾಗುತ್ತಿದೆ ಎನ್ನುತ್ತಾರೆ ಅಕಾಡೆಮಿಯ ಸಂಸ್ಥಾಪಕಿ ವಿದ್ಯಾ ವಿವೇಕ್‌.

Fashion workshop

ಯಾರಿದು ಶಿಂಗೊ ಸಾಟೊ

ಶಿಂಗೊ ಸಾಟೊ ತ್ರಿ ಡಿ ವಿನ್ಯಾಸದ ಸಂಶೋಧಕ ಹಾಗೂ ವಿನ್ಯಾಸಕರಾಗಿದ್ದು, ಸುಮಾರು 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ.

ಏನಿದು ತ್ರಿ ಡಿ ಕಟ್ಟಿಂಗ್‌ ಕಾರ್ಯಾಗಾರ

ಡಿಸೈನ್‌ ಮಾಡುವ ಬಟ್ಟೆಯನ್ನು ಹೆಚ್ಚು ಕಟ್ಟಿಂಗ್‌ ಮಾಡದೇ, ವಿನ್ಯಾಸ ಗೊಳಿಸುವ ಟೆಕ್ನಿಕ್‌ ಅನ್ನು ತ್ರಿ ಡಿ ಕಟ್ಟಿಂಗ್‌ ಎನ್ನಲಾಗುತ್ತದೆ. ಈ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶಿಂಗೊ ಸಾಟೊ ಪ್ರಪಂಚದಲ್ಲೆ ಮೊದಲ ಬಾರಿ ಇದಕ್ಕಾಗಿಯೇ ಶಾಲೆಯನ್ನು ತೆರೆದಿದ್ದಾರೆ. ಫ್ಯಾಷನ್‌ ಹಬ್‌ ಮಿಲಾನ್‌ನಲ್ಲಿ ತರಗತಿಗಳನ್ನು ನಡೆಸುತ್ತಾರೆ. ಭಾರತೀಯರು ಅಲ್ಲಿಗೆ ಹೋಗಿ ಕಲಿಯಲಾಗದ ಕಾರಣ, ಸುಮಾರು 11 ವರ್ಷಗಳಿಂದ ಬೆಂಗಳೂರಿಗೆ ಬಂದು ವಿದ್ಯಾ ಅಕಾಡೆಮಿಯ ಸಹಯೋಗದೊಂದಿಗೆ ಹೇಳಿಕೊಡುತ್ತಿದ್ದಾರೆ.
ಇದನ್ನೂ ಓದಿ: Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!
(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Paris Olympics 2024
ಪ್ರಮುಖ ಸುದ್ದಿ9 mins ago

Paris Olympics 2024 : ಕಂಚು ಕಳೆದುಕೊಂಡ ಲಕ್ಷ್ಯ ಸೇನ್​​; 2008ರ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬ್ಯಾಡ್ಮಿಂಟನ್​ನಲ್ಲಿ ಪದಕವಿಲ್ಲ

shravan 2024
Latest39 mins ago

Shravan 2024: ಶ್ರಾವಣ ಮಾಸದಲ್ಲೇಕೆ ಮಾಂಸಾಹಾರ ಮಾಡಬಾರದು? ಇದಕ್ಕಿದೆ ವೈಜ್ಞಾನಿಕ ಕಾರಣ!

Paris Olympics 2024
ಪ್ರಮುಖ ಸುದ್ದಿ42 mins ago

Paris Olympics 2024 : ನೀರಜ್ ಚೋಪ್ರಾ ಜಾವೆಲಿನ್ ಎಸೆತ ಸೇರಿದಂತೆ ಆ.6ರಂದು ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತೀಯ ಸ್ಪರ್ಧಿಗಳು ಇವರು…

Viral Video
Latest45 mins ago

Viral Video: ಮಗನನ್ನೇ ಹೊಡೆದು ಕೊಂದು, ಸುಟ್ಟು ಹಾಕಿ ಕೊಳಕ್ಕೆ ಎಸೆದ ತಂದೆ-ತಾಯಿ; ಹೃದಯ ತಲ್ಲಣಿಸುವ ವಿಡಿಯೊ

Viral Video
Latest56 mins ago

Viral Video: ಎಸ್ಕಲೇಟರ್ ಮೇಲೆ ಮಗುವನ್ನು ನಿಲ್ಲಿಸಲು ತಾಯಿಯ ಕಸತ್ತು; ಮುಂದೇನಾಯ್ತು ನೋಡಿ

Martin Trailer
ಸಿನಿಮಾ1 hour ago

Martin Trailer: ಪ್ಯಾನ್‌ ವರ್ಲ್ಸ್‌ ಮಾರ್ಟಿನ್‌ ಸಿನಿಮಾ ಟ್ರೈಲರ್‌ ಔಟ್;‌ ಪಾಕ್‌ನಲ್ಲಿ ಧ್ರುವ ಸರ್ಜಾ ಆ್ಯಕ್ಷನ್‌ಗೆ ಫ್ಯಾನ್ಸ್‌ ಫಿದಾ!

A R Rahman
ಪ್ರಮುಖ ಸುದ್ದಿ1 hour ago

A R Rahman : ಒಲಿಂಪಿಕ್ಸ್ ನಡುವೆಯೇ ವೈರಲ್ ಆಯ್ತು ಎಆರ್​ ರೆಹಮಾನ್ ಸಂಗೀತದ’ ತಾಲ್​ ಸೆ ತಾಲ್​’ ಹಾಡು; ಪ್ರತಿಕ್ರಿಯೆ ನೀಡಿದ ಚಿತ್ರ ನಿರ್ದೇಶಕ

Rescue the injured national bird Peacock at gangavathi
ಕೊಪ್ಪಳ1 hour ago

Koppala News: ವಿದ್ಯುತ್‌ ತಂತಿಗೆ ತಗುಲಿ ಗಾಯಗೊಂಡಿದ್ದ ನವಿಲಿನ ರಕ್ಷಣೆ

Free eye checkup and surgery camp at Hagaribommanahalli
ವಿಜಯನಗರ1 hour ago

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

KAS prelims exam
ಕರ್ನಾಟಕ1 hour ago

KAS Prelims Exam: ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಮತ್ತೆ ಮುಂದೂಡಿಕೆ; ಆಗಸ್ಟ್‌ 27ಕ್ಕೆ ನಿಗದಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌