Site icon Vistara News

Pearl Necklace Fashion: ಜ್ಯುವೆಲರಿ ಲೋಕದಲ್ಲಿ ಟ್ರೆಂಡಿಯಾದ 3 ಶೈಲಿಯ ಪರ್ಲ್ ನೆಕ್ಲೇಸ್‌

Pearl Necklace Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಶ್ರಾವಣ ಮಾಸದ ಈ ಫೆಸ್ಟಿವ್‌ ಸೀಸನ್‌ನಲ್ಲಿ ನಾನಾ ಬಗೆಯ ಮುತ್ತಿನ ಆಭರಣಗಳು ಕಾಲಿಟ್ಟಿವೆ. ಅವುಗಳಲ್ಲಿ ಮೂರು ಬಗೆಯ ಮುತ್ತಿನ ನೆಕ್ಲೇಸ್‌ಗಳು (Pearl Necklace Fashion) ಫ್ಯಾಷನ್‌ ಪ್ರಿಯರ ಮನ ಗೆದ್ದಿವೆ. ಇವು ಧರಿಸಿದಾಗ ನೋಡಲು ಅತ್ಯಾಕರ್ಷಕವಾಗಿ ಕಾಣುವುದಲ್ಲದೇ ಎಥ್ನಿಕ್‌ ಔಟ್‌ಫಿಟ್‌ ಹೊರತಾಗಿಯೂ ಧರಿಸುವ ಆಪ್ಷನ್‌ ಇದ್ದು, ಈ ಕಾರಣದಿಂದಾಗಿ ಯುವತಿಯರು ಈ ಜ್ಯುವೆಲರಿಗಳಿಗೆ ಮನಸೋತಿದ್ದಾರೆ.

ಕ್ವೀನ್‌ ಪರ್ಲ್ ಲೇಯರ್‌ ಹಾರ

ಪರ್ಲ್ ಕ್ವೀನ್‌ ಲೇಯರ್‌ ಹಾರ ಮೊದಲಿನಿಂದಲೂ ಟ್ರೆಂಡಿಯಾಗಿರುವ ಜ್ಯುವೆಲರಿಗಳಲ್ಲೊಂದು. ರಾಯಲ್‌ ಫ್ಯಾಮಿಲಿಯ ರಾಯಲ್‌ ಡಿಸೈನ್‌ ಇದು ಎಂದರೂ ಅತಿಶಯೋಕ್ತಿಯಾಗದು. ಯಾಕೆಂದರೆ, ಲಂಡನ್‌ ಕ್ವೀನ್‌ ಎಲಿಜಬೆತ್‌ ಆಲ್‌ ಟೈಮ್‌ ಫೇವರೇಟ್‌ ಪರ್ಲ್ ಹಾರ ಇದಾಗಿತ್ತು. ಈ ವಿನ್ಯಾಸ ಎವರ್‌ಗ್ರೀನ್‌ ಪರ್ಲ್ ಜ್ಯುವೆಲರಿಯ ಲಿಸ್ಟ್‌ನಲ್ಲಿ ಇಂದಿಗೂ ಇದೆ. ಇವುಗಳಲ್ಲಿ, ಕುತ್ತಿಗೆಗೆ ಟೈಟಾಗಿ ಕೂರುವಂತಹ ಪರ್ಲ್ ಹಾರಗಳು ಹೆಚ್ಚು ಟ್ರೆಂಡಿಯಾಗಿವೆ. ಇನ್ನು, ಇಂಡೋ-ವೆಸ್ಟರ್ನ್ ಲುಕ್‌ಗೆ ಸಾಥ್‌ ನೀಡುವ ಸ್ವರೋಸ್ಕಿ ಹಾಗೂ ಹೈದ್ರಾಬಾದ್‌ನ ನಾನಾ ಬಗೆಯ ಮುತ್ತಿನ ಹಾರಗಳು ಇವುಗಳಲ್ಲಿ ಸೇರಿವೆ. ಎಲ್ಲಾ ಬಗೆಯ ಔಟ್‌ಫಿಟ್‌ ಹಾಗೂ ಸೀರೆಗಳಿಗೂ ಇವು ಮ್ಯಾಚ್‌ ಆಗುತ್ತವೆ ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ಸ್.

ಪರ್ಲ್ ಚೋಕರ್‌

ಕುತ್ತಿಗೆಗೆ ಟೈಟಾಗಿ ಫಿಟ್‌ ಆಗಿರುವಂತೆ ಕಾಣುವ ಈ ಪರ್ಲ್ ಚೋಕರ್ಸ್ ಎಲ್ಲಾ ಬಗೆಯ ಎಥ್ನಿಕ್‌ ಔಟ್‌ಫಿಟ್‌ಗಳಿಗೆ ಹೇಳಿ ಮಾಡಿಸಿದಂತೆ ಕಾಣುತ್ತವೆ. ಮಧ್ಯ ಪೆಂಡೆಂಟ್‌ ಗಳಿರುತ್ತವೆ. ಅದರಲ್ಲೂ ಫೆಸ್ಟಿವ್‌ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಟ್ರೆಡಿಷನಲ್‌ ಪೆಂಡೆಂಟ್‌ ಜೊತೆ ಇವು ದೊರೆಯುತ್ತಿವೆ. ಬಂಗಾರ ಮಾತ್ರವಲ್ಲ, ವನ್‌ ಗ್ರಾಮ್‌ ಗೋಲ್ಡ್ನಲ್ಲೂ ಇವು ಬೇಡಿಕೆ ಹೆಚ್ಚಿಸಿಕೊಂಡಿವೆ.

ಬಿಗ್‌ ಪರ್ಲ್ಸ್ ಲಾಂಗ್‌ ಹಾರ

ಇನ್ನು ಕಂಪ್ಲೀಟ್‌ ಎಥ್ನಿಕ್‌ ಲುಕ್‌ ನೀಡುವ ಬಿಗ್‌ ಪರ್ಲ್ಸ್‌ಗಳಿರುವಂಥ ಮುತ್ತಿನ ಹಾರಗಳು ಇಂದು ವಿವಾಹಿತ ಮಹಿಳೆಯರ ಜ್ಯುವೆಲರಿ ಫ್ಯಾಷನ್‌ನಲ್ಲಿ ಸೇರಿವೆ. ಸೀರೆ ಹಾಗೂ ಎಥ್ನಿಕ್‌ ಉಡುಪುಗಳಿಗೆ ಮ್ಯಾಚ್‌ ಆಗುವ ಇವು ಭಾರಿ ಗಾತ್ರದ ಪೆಂಡೆಂಟ್‌ನೊಂದಿಗೆ ಧರಿಸುವುದು ಕಾಮನ್‌ ಆಗಿದೆ.

ಪರ್ಲ್ ಜ್ಯುವೆಲರಿ ಪ್ರಿಯರು ಗಮನಿಸಬೇಕಾದ್ದು

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Onam Fashion: ಕೇರಳದಲ್ಲಿ ನಟಿ ಸಂಜನಾ ಗರ್ಲಾನಿ ಓಣಂ ಸೀರೆ ಸಂಭ್ರಮ !

Exit mobile version