Site icon Vistara News

Prime Fashion week: ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಸಂಜಯ್‌ ಚೊಲಾರಿಯಾ ಡಿಸೈನರ್‌ ವೇರ್ಸ್ ಅನಾವರಣ

Prime fashion week

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ತಲೆಮಾರಿನ ಯುವತಿಯರನ್ನು (Prime fashion week) ಗಮನದಲ್ಲಿಟ್ಟುಕೊಂಡು ಡಿಸೈನ್‌ ಮಾಡಲಾದ ಅತ್ಯಾಕರ್ಷಕವಾದ ಡಿಸೈನರ್‌ವೇರ್‌ಗಳು ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿ ನಡೆಯುತ್ತಿದ್ದರೆ ನೆರೆದಿದ್ದ ಫ್ಯಾಷನ್‌ ಪ್ರಿಯರು ಕಣ್ಣರಳಿಸಿ ನೋಡುತ್ತಿದ್ದರು. ಹೌದು. ಉದ್ಯಾನನಗರಿಯಲ್ಲಿ ಎರಡು ದಿನಗಳ ಕಾಲ ನಡೆದ ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಸೆಲೆಬ್ರೆಟಿ ಡಿಸೈನರ್‌ ಸಂಜಯ್‌ ಚೊಲಾರಿಯಾ ವಿನ್ಯಾಸಗೊಳಿಸಿದ ನಾನಾ ಬಗೆಯ ಡಿಸೈನರ್‌ವೇರ್‌ಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು.

ಜೆನ್‌ ಜಿ ಜನರೇಷನ್‌ ಡಿಸೈನರ್‌ವೇರ್ಸ್

ಇಂದಿನ ಜನರೇಷನ್‌ನ ಯುವತಿಯರನ್ನು ಹಾಗೂ ಮಹಿಳೆಯರನ್ನು ಮನದಲ್ಲಿರಿಸಿಕೊಂಡು ಈ ಡಿಸೈನರ್‌ವೇರ್‌ಗಳನ್ನು ʼಇವರಾʼ ಕಾನ್ಸೆಪ್ಟ್ ಹೆಸರಿನಲ್ಲಿ ಮೊದಲ ದಿನದ ರ‍್ಯಾಂಪ್‌ ಶೋಗಾಗಿ ಡಿಸೈನ್‌ ಮಾಡಲಾಗಿದೆ. ವಿಶೇಷವೆಂದರೆ ಈ ಉಡುಗೆಗಳು ಮಹಿಳೆಯ ಆತ್ಮವಿಶ್ವಾಸ ಹಾಗೂ ಬಲದ ಸಂಕೇತವಾಗಿದೆ ಎಂದು ಡಿಸೈನರ್‌ ಸಂಜಯ್‌ ಚೊಲಾರಿಯಾ ಹೇಳಿದರು.

ಡಿಸೈನರ್‌ವೇರ್‌ಗಳ ಯಶಸ್ವಿ ಪ್ರದರ್ಶನ

ಎರಡನೇ ದಿನದ ರ‍್ಯಾಂಪ್‌ ಶೋನಲ್ಲಿ ಜಪಾನ್‌ ಟೆಂಪಲ್‌ ಹೆಸರನ್ನು ಬಿಂಬಿಸುವ ʼಮಿಯಾನಾʼ ಕಾನ್ಸೆಪ್ಟ್‌ನಲ್ಲಿ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಡಿಸೈನರ್‌ವೇರ್‌ಗಳು ಕೂಡ ಮಹಿಳೆಯರ ಶಕ್ತಿ, ಸ್ಥೈರ್ಯ ಹಾಗೂ ಬಲದ ದ್ಯೋತಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಸಂಜಯ್‌ ಹೇಳಿದ್ದಾರೆ. ಒಬ್ಬ ಡಿಸೈನರ್‌ ಫ್ಯಾಷನ್‌ ವೀಕ್‌ನಲ್ಲಿ ಎರಡೂ ದಿನವೂ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸುವುದು ಕಷ್ಟ. ಅದನ್ನು ಯಶಸ್ವಿಯಾಗಿ ಪೂರೈಸಿದ್ದೇನೆ. ಇದು ನನಗೆ ಸಂತಸ ತಂದಿದೆ ಎಂದು ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ನಟಿ ಶುಭಾ ರಕ್ಷಾ & ಪ್ರಿಯಾಂಕಾ ಅರೋರಾ ಶೋ ಸ್ಟಾಪರ್‌

ಫ್ಯಾಷನ್‌ ವೀಕ್‌ನ ಮೊದಲ ದಿನ ನಟಿ ಹಾಗೂ ಮಾಡೆಲ್‌ ಶುಭಾ ರಕ್ಷಾ ಗೋಲ್ಡನ್‌ ಗೌನ್‌ನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ರ‍್ಯಾಂಪ್‌ ವಾಕ್‌ ಮಾಡಿದರು. ಈ ಸಂದರ್ಭದಲ್ಲಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂಜಯ್‌ ಚೊಲಾರಿಯಾ ಡಿಸೈನರ್‌ವೇರ್‌ಗಳು ನವೋಲ್ಲಾಸ ಹೆಚ್ಚಿಸುತ್ತವೆ ಎಂದು ಹೇಳಿದರು. ಎರಡನೇ ದಿನ ರ‍್ಯಾಂಪ್‌ ಶೋನಲ್ಲಿ ಮಾಡೆಲ್‌ ಪ್ರಿಯಾಂಕಾ ಅರೋರಾ ತ್ರೀ ಪೀಸ್‌ ಗ್ರ್ಯಾಂಡ್‌ ಡಿಸೈನರ್‌ವೇರ್‌ನಲ್ಲಿ ವಾಕ್‌ ಮಾಡಿದರು. ಇವರುಗಳೊಂದಿಗೆ ಡಿಸೈನರ್‌ಗಳಾದ ಸಂಜಯ್‌ ಚೊಲಾರಿಯಾ ಮತ್ತು ಡಿಸೈನರ್‌ ಶ್ಯಾಮಿ ಚೊಲಾರಿಯಾ ಕೂಡ ವಾಕ್‌ ಮಾಡಿದರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version