ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಿಸುವುದರೊಂದಿಗೆ ಟ್ರೆಡಿಷನಲ್ ಲುಕ್ ನೀಡುವಂತಹ ನಾನಾ ಬಗೆಯ ರೆಡಿಮೇಡ್ ಫ್ಲೋರಲ್ ಡಿಸೈನ್‌ನ ಕೃತಕ ಜಡೆಗಳು (Sankranti Hairstyle) ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ. ಇವು ನೋಡಲು ಒಂದಕ್ಕಿಂತ ಒಂದು ಮನಮೋಹಕವಾಗಿವೆ.
ಹಬ್ಬಕ್ಕಿರಲಿ ಟ್ರೆಡಿಷನಲ್ ಜಡೆ ಕೇಶವಿನ್ಯಾಸ
ಸಂಕ್ರಾಂತಿ ಹಬ್ಬಕ್ಕೆ ಈ ಬಾರಿ ಕಂಪ್ಲೀಟ್ ಟ್ರೆಡಿಷನಲ್ ಕೇಶ ವಿನ್ಯಾಸ ಮಾಡಿಕೊಳ್ಳಿ. ಸೀರೆಯೊಂದಿಗೆ ಜಡೆ ಹೆಣೆಯಿರಿ. ನಿಮ್ಮ ಕೂದಲು ಗಿಡ್ಡವಾಗಿದ್ದಲ್ಲಿ ಇದಕ್ಕೂ ಯೋಚನೆ ಬೇಡ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿಮೇಡ್ ಫ್ಲೋರಲ್ ಜಡೆಯನ್ನು ಖರೀದಿಸಿ. ನಿಮ್ಮ ಗಿಡ್ಡ ಜಡೆಯೊಂದಿಗೆ ಹೆಣೆದು ಸಿಂಗರಿಸಿಕೊಳ್ಳಿ. ಇದು ನಿಮಗೆ ಹೊಸ ಲುಕ್ ನೀಡುತ್ತದೆ ಎನ್ನುತ್ತಾರೆ ಮಾಡೆಲ್ ಪೃಥ್ವಿ ಶೇಖರ್. ಅವರ ಪ್ರಕಾರ, ಹಬ್ಬದಂದು ವೆಸ್ಟರ್ನ್ ಹೇರ್‌ಸ್ಟೈಲ್‌ಗೆ ಕೊಂಚ ವಿರಾಮ ನೀಡುವುದು ಉತ್ತಮ. ಸಮಯವಿಲ್ಲದಿದ್ದವರು ಕೂಡ ಇನ್‌ಸ್ಟಂಟ್ ಜಡೆಗೆ ಮೊರೆ ಹೋಗಿ ಕೇಶ ವಿನ್ಯಾಸ ಮಾಡಿಕೊಳ್ಳಬಹುದು.
ಫ್ಲೋರಲ್ ಜಡೆ ಸಿಂಗಾರ
ರೆಡಿಮೇಡ್ ಜಡೆಯಲ್ಲಿ ನಾನಾ ಬಗೆಯ ಪ್ಲೋರಲ್ ವಿನ್ಯಾಸದವು ದೊರೆಯುತ್ತವೆ. ಆಯಾ ಡಿಸೈನ್‌ಗೆ ತಕ್ಕಂತೆ ದರ ನಿಗಧಿಯಾಗಿರುತ್ತದೆ. ಬಿಗ್ ಸೈಝ್, ಮೀಡಿಯಂ ಹಾಗೂ ಚಿಕ್ಕ ಮಕ್ಕಳಿಗೆ ಹಾಕಬಹುದಾದಂತವು ದೊರೆಯುತ್ತವೆ. ಇನ್ನು ಕೆಲವು ಬ್ಯೂಟಿಶಿಯನ್‌ಗಳು ಇನ್ಸ್ಟಂಟ್ ಫ್ಲೋರಲ್ ಜಡೆಯನ್ನು ನಿಮ್ಮ ಆಯ್ಕೆಗೆ ತಕ್ಕಂತೆ ರೆಡಿ ಮಾಡಿಕೊಡುತ್ತಾರೆ. ಯಾವ ಶೈಲಿ ಬೇಕು ಆ ರೀತಿ ನಿಮ್ಮ ಇಚ್ಛೆಯನುಸಾರ ಕಸ್ಟಮೈಸ್ ಮಾಡಿಸಿಕೊಳ್ಳಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಇದನ್ನೂ ಓದಿ | Star holiday Fashion | ಬಾಲಿ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟಿ ಹರ್ಷಿಕಾ ಪೊಣಚ್ಚ
ಕೃತಕ ದುಂಡು ಮಲ್ಲಿಗೆ ಜಡೆ ಸಿಂಗಾರ
ಕೃತಕ ದುಂಡು ಮಲ್ಲಿಗೆ ಹೂಗಳಿಂದ ಅಲಂಕೃತವಾದ ಜಡೆಯಿದು. ನೋಡಲು ಆಕರ್ಷಕವಾಗಿ ಕಾಣುತ್ತದೆ. ನ್ಯಾಚುರಲ್ ಆಗಿಯೂ ಕಾಣುತ್ತದೆ. ಎಲ್ಲಾ ಬಗೆಯ ಜಡೆಗೂ ಇದು ಮ್ಯಾಚ್ ಆಗುತ್ತದೆ.
ಕೃತಕ ಸೇವಂತಿ ಹೂವಿನ ಜಡೆ
ಕೃತಕ ಸೇವಂತಿ ಹೂವುಗಳ ಮಧ್ಯೆ ಕ್ರಿಸ್ಟಲ್ ಹೇರ್ ಜುವೆಲ್‌ಗಳಿರುವ ಅಥವಾ ನೈಜವಾಗಿ ಕಾಣುವಂತಹ ಹಳದಿ, ಬಿಳಿ ಹಾಗೂ ಗುಲಾಬಿ ವರ್ಣದ ಫ್ಲೋರಲ್ ಜಡೆಗಳೂ ಲಭ್ಯ. ಇವು ಕೂಡ ಆಕರ್ಷಕವಾಗಿ ಕಾಣುತ್ತವೆ.
ಬಿಗ್ ಫ್ಲವರ್ ಜಡೆ
ದೊಡ್ಡ ಆಕಾರದ ಹೂವುಗಳಿಂದ ಸಿದ್ಧಪಡಿಸಲಾದ ಸ್ಟೆಪ್ ಬೈ ಸ್ಟೆಪ್ ಕಾಣುವಂತಹ ಫ್ಲೋರಲ್ ಜಡೆಯು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ನಿಮ್ಮ ಮುಖ ಅಗಲವಾಗಿದ್ದಲ್ಲಿ ಈ ಜಡೆ ಸಿಂಗಾರ ಸೂಟ್ ಆಗುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Weekend Style | ಫ್ಯಾಷನ್‌ಗೆ ತಕ್ಕಂತೆ ಮೇಕಪ್ ಇರಲಿ ಎನ್ನುತ್ತಾರೆ ಅಹಲ್ಯಾ ರಾಜ್