-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಂಟೆಂಪರರಿ ಪ್ರಿಂಟೆಡ್ ವಿನ್ಯಾಸದ (Saree Fashion) ಆರ್ಗನ್ಜಾ ಸೀರೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಹೌದು, ಈ ಮೊದಲು ಕೇವಲ ಸಾದಾ ಡಿಸೈನ್‌ನಲ್ಲಿ ಟ್ರೆಂಡಿಯಾಗಿದ್ದ, ಈ ಆರ್ಗನ್ಜಾ ಸೀರೆಗಳು, ಇದೀಗ ಯುವತಿಯರಿಗೆ ಪ್ರಿಯವಾಗುವಂತಹ ಡಿಜಿಟಲ್ ಪ್ರಿಂಟ್ಸ್‌ನಲ್ಲಿ ಸೀರೆ ಲೋಕಕ್ಕೆ ಲಗ್ಗೆ ಇಟ್ಟಿವೆ.
ಲಕ್ಷುರಿ ಸೀರೆಗಳಂತೆ ಬಿಂಬಿಸುವ ಆರ್ಗನ್ಜಾ
“ಆರ್ಗನ್ಜಾ ಸೀರೆಗಳು ಉಟ್ಟಾಗ ನೋಡಲು ಲಕ್ಷುರಿ ಸೀರೆಗಳಂತೆ ಬಿಂಬಿಸುತ್ತವೆ. ಇತ್ತೀಚೆಗೆ ನಟಿ ರಾಧಿಕಾ ಮದನ್ ಉಟ್ಟು ಕಾಣಿಸಿಕೊಂಡಿದ್ದ, ಈ ಸೀರೆ ಸಾಕಷ್ಟು ಮಹಿಳೆಯರನ್ನು ಆಕರ್ಷಿಸಿತ್ತು. ಈ ಸೀರೆಗಳು ಕೊಂಚ ಪಾರದರ್ಶಕವಾಗಿರುವುದರಿಂದ ಬಹುತೇಕ ಮಹಿಳೆಯರು ಪ್ರಿಫರ್ ಮಾಡುತ್ತಿರಲಿಲ್ಲ! ಹಾಗಾಗಿ ಇವು ಕೆಲಕಾಲ ಕೇವಲ ಸೆಲೆಬ್ರೆಟಿಗಳ ಹಾಗೂ ಪಾರ್ಟಿಪ್ರಿಯ ಮಹಿಳೆಯರಿಗೆ ಸೀಮಿತವಾಗಿತ್ತು. ಆದರೆ, ಇದೀಗ ಈ ಸೀರೆಗಳ ಲುಕ್ ಬದಲಾಗಿದೆ. ಸೀರೆಯ ಪ್ರಿಂಟೆಡ್ ವಿನ್ಯಾಸವು ಎಲ್ಲಾ ವರ್ಗದ ಸೀರೆ ಪ್ರಿಯ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ” ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ರಿಯಾ.
ಆರ್ಗನ್ಜಾ ಸೀರೆಯ ಕಂಟೆಂಪರರಿ ವಿನ್ಯಾಸ
ಶ್ವೇತ ವರ್ಣ, ತಿಳಿ ಗುಲಾಬಿ, ಪೀಚ್, ಪಿಸ್ತಾ ಕಲರ್ ಸೇರಿದಂತೆ ನಾನಾ ಪಾಸ್ಟೆಲ್ ಶೇಡ್‌ನ ಸೀರೆಗಳ ಮೇಲೆ ಫ್ಲೋರಲ್, ಟ್ರಾಪಿಕಲ್ ಮತ್ತು ಗಾರ್ಡನ್ ಚಿತ್ತಾರದ ಡಿಜಿಟಲ್ ಪ್ರಿಂಟ್ಸ್ ಅರ್ಗನ್ಜಾ ಸೀರೆಯ ರಂಗನ್ನು ಹೆಚ್ಚಿಸಿದೆ. ಪರಿಣಾಮ, ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಸೀರೆ ಮಾರಾಟಗಾರರು.
ಆರ್ಟಿಸ್ಟಿಕ್ ಆರ್ಗನ್ಜಾ ಸೀರೆ
ಹೂವಿನ ಚಿತ್ತಾರದವನ್ನು ಹೊರತುಪಡಿಸಿದರೆ ಇಂದು ಅತಿ ಹೆಚ್ಚು ಟ್ರೆಂಡಿಯಾಗಿರುವುದು ಲೈಟ್ ಶೇಡ್ ಸೀರೆಗಳ ಮೇಲಿನ ಆರ್ಟಿಸ್ಟಿಕ್ ಪ್ರಿಂಟ್ಸ್ ಎನ್ನುತ್ತಾರೆ ಡಿಸೈನರ್ಸ್.
ಡಿಜಿಟಲ್ ಪ್ರಿಂಟೆಡ್ ಆರ್ಗನ್ಜಾ ಸೀರೆಯ ಸ್ಟೈಲಿಂಗ್
- ಸೆಲೆಬ್ರೆಟಿ ಲುಕ್ಗಾಗಿ ಅರ್ಗನ್ಜಾ ಸೀರೆ ಉಡಬಹುದು.
- ಪಿಯರ್ ಶೇಪ್ ಬಾಡಿ ಇರುವ ಮಹಿಳೆಯರಿಗೆ ಇದು ಪರ್ಫೆಕ್ಟ್ ಹೊಂದುತ್ತದೆ.
- ಸ್ಲಿಮ್ ಇರುವವರು ಯಾರೂ ಬೇಕಾದರೂ ಉಡಬಹುದು.
- ಬಹುತೇಕ ಪಾರದರ್ಶಕವಾಗಿರುವುದರಿಂದ ಕಚೇರಿಗಳಿಗೆ ಉಡುವುದು ಬೇಡ!
- ಲಂಚ್-ಬ್ರಾಂಚ್ ಪಾರ್ಟಿಗಳಿಗೆ ಹೇಳಿ ಮಾಡಿಸಿದ ಸೀರೆ.
- ಸೀರೆಯನ್ನು ಐರನಿಂಗ್ ಮಾಡುವ ಅಗತ್ಯವಿರುವುದಿಲ್ಲ!
- ಬ್ಲೌಸ್ಗೆ ಹೆವ್ವಿ ಡಿಸೈನ್ ಬೇಕಾಗಿಲ್ಲ!
( ಲೇಖಕಿ ಫ್ಯಾಷನ್ ಪತ್ರಕರ್ತೆ )