Site icon Vistara News

Sharara Fashion: ಲಾಂಗ್‌ ಸ್ಕರ್ಟ್‌‌ನಂತೆ ರೂಪ ಬದಲಿಸಿದ ಶರಾರ!

Sharara Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಟ್ರೆಂಡಿಯಾಗಿರುವ (Sharara Fashion) ಶರಾರ ಲಾಂಗ್‌ ಸ್ಕರ್ಟ್‌ನಂತೆ ಬದಲಾಗಿದೆ. ಧರಿಸಿದಾಗ ತಕ್ಷಣಕ್ಕೆ ನೋಡಲು ಶರಾರ ಎಂದೆನಿಸಿದರೂ, ನಿಂತಾಗ ಥೇಟ್‌ ಲಾಂಗ್‌ ಸ್ಕರ್ಟ್ ಅಥವಾ ಡಿವೈಡೆಡ್‌ ಸ್ಕರ್ಟ್‌ನಂತೆ ಕಾಣಿಸುತ್ತವೆ. ಇತ್ತೀಚೆಗೆ ಸೆಲೆಬ್ರೆಟಿಗಳು ಧರಿಸುವುದು ಹೆಚ್ಚಾಗುತ್ತಿದ್ದಂತೆ, ಈ ಎಥ್ನಿಕ್‌ ಔಟ್‌ಫಿಟ್‌ ಯುವತಿಯರನ್ನು ಹೆಚ್ಚು ಸೆಳೆಯುತ್ತಿದೆ.

ಸೆಲೆಬ್ರೆಟಿಗಳ ಚಾಯ್ಸ್‌‌ನಲ್ಲಿ ಶರಾರ

ಹೌದು. ಇದಕ್ಕೆ ಪೂರಕ ಎಂಬಂತೆ, ನಟಿ ದಿವ್ಯಾ ಕೋಸ್ಲಾ ಕುಮಾರ್‌ ಇವೆಂಟ್‌ವೊಂದರಲ್ಲಿ ಧರಿಸಿದ್ದ ಶರಾರ, ಲಾಂಗ್‌ ಸ್ಕರ್ಟ್‌ನಂತೆ ಕಾಣಿಸಿತ್ತು. ಅಲ್ಲದೇ, ಅವರಿಗೆ ಸೆಮಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡಿತ್ತು. ಡಿಸೈನರ್‌ಗಳು ಹೇಳುವಂತೆ, ಶರಾರಗಳು, ಬಾಲಿವುಡ್‌ ಸೆಲೆಬ್ರೆಟಿಗಳ ಚಾಯ್ಸ್ನಲ್ಲಿ ಸೇರಿದ ನಂತರ, ಲೆಕ್ಕವಿಲ್ಲದಷ್ಟು ಪ್ರಯೋಗಾತ್ಮಕ ಡಿಸೈನ್‌ಗಳಲ್ಲಿ ಬಿಡುಗಡೆಗೊಳ್ಳಲಾರಂಭಿಸಿವೆಯಂತೆ.

ಏನಿದು ಶರಾರ?

ಮೊಗಲರ ಕಾಲದ ಎಥ್ನಿಕ್‌ ಡಿಸೈನರ್‌ವೇರ್‌ ಇದಾಗಿದೆ. ಉತ್ತರ ಭಾರತದಲ್ಲಿ ಈ ಶರಾರ ಅತಿ ಹೆಚ್ಚು ಚಾಲ್ತಿಯಲ್ಲಿದೆ. ಪ್ಯಾಂಟ್‌ ಶೈಲಿಯ ಡಿಸೈನರ್‌ವೇರ್‌ ಎನ್ನಬಹುದು. ನೋಡಲು ಪಲ್ಹಾಜೊನಂತೆ ಕಂಡರೂ ಅದಲ್ಲ! ಪ್ಯಾರಲೆಲ್‌ ಪ್ಯಾಂಟೂ ಕೂಡ ಅಲ್ಲ. ಶರಾರ ವಿಶೇಷತೆ ಎಂದರೇ, ಪ್ಯಾಂಟ್‌ ಕೆಳಗೆ ಅಗಲವಾದ ಫ್ಲೇರ್‌ ಇರುತ್ತದೆ. ಮೇಲಿನಿಂದ ಒಂದೇ ಹೊಲಿಗೆಯಲ್ಲಿ ವಿನ್ಯಾಸಗೊಂಡಿದ್ದರೂ, ಕೆಳಗೆ ಅಂಬ್ರೆಲ್ಲಾದಂತೆ ಹರಡಿಕೊಂಡಿರುತ್ತವೆ. ಶರಾರ ಮೂಲ ಲೆಬನಾನ್‌ ಎಂದೂ ಕೂಡ ಹೇಳಲಾಗುತ್ತದೆ ಎನ್ನುತ್ತಾರೆ ಡಿಸೈನರ್‌ ರೀಟಾ.

ಟ್ರೆಂಡ್‌ನಲ್ಲಿರುವ ಶರಾರ ಎಥ್ನಿಕ್‌ವೇರ್ಸ್

ಸದ್ಯ ಸ್ಕರ್ಟ್‌ನಂತೆ ಕಾಣುವ ಡಿಸೈನ್‌ ಶರಾರಗಳು ಇದೀಗ ಅತಿ ಹೆಚ್ಚು ಟ್ರೆಂಡಿಯಾಗಿವೆ. ಲಾಂಗ್‌ ಸ್ಕರ್ಟ್‌ನಂತೆ ಬಿಂಬಿಸುವ ಜಾರ್ಜೆಟ್ ಫ್ಯಾಬ್ರಿಕ್‌ನ ಶರಾರಗಳು ಸಾಲಿಡ್‌ ಹಾಗೂ ಬ್ರೈಟ್‌ ಶೇಡ್‌ನವಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಇನ್ನು, ಸೆಮಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡುವ ಶರಾರದ ಟಾಪ್‌ಗಳು ಹಾಗೂ ಸೆಟ್‌ಗಳು ಕೂಡ ಈ ಜನರೇಷನ್‌ ಹುಡುಗಿಯರಿಗೆ ಪ್ರಿಯವಾಗಿವೆ.

ಇದನ್ನೂ ಓದಿ: Kids Raincoats: ಮಾನ್ಸೂನ್‌‌‌ಗೆ ಲಗ್ಗೆ ಇಟ್ಟಿದೆ ಚಿಣ್ಣರ ಕಲರ್‌ ಫುಲ್‌ ರೈನ್‌ ಕೋಟ್ಸ್

ಶರಾರ ಪ್ರಿಯರಿಗೆ ತಿಳಿದಿರಬೇಕಾದ ಸಂಗತಿಗಳು

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version