Sharara Fashion: ಲಾಂಗ್‌ ಸ್ಕರ್ಟ್‌‌ನಂತೆ ರೂಪ ಬದಲಿಸಿದ ಶರಾರ! - Vistara News

ಫ್ಯಾಷನ್

Sharara Fashion: ಲಾಂಗ್‌ ಸ್ಕರ್ಟ್‌‌ನಂತೆ ರೂಪ ಬದಲಿಸಿದ ಶರಾರ!

Sharara Fashion: ಇದೀಗ ಸೆಲೆಬ್ರೆಟಿಗಳ ಎಥ್ನಿಕ್‌ ಡಿಸೈನರ್‌ವೇರ್‌ಗಳಲ್ಲಿ ಸೇರಿರುವ ಶರಾರ ನಾನಾ ರೂಪ ಪಡೆದಿದೆ. ಕೆಲವು ಲಾಂಗ್‌ ಸ್ಕರ್ಟ್‌ನಂತೆ ಕಂಡರೇ, ಇನ್ನು, ಕೆಲವು ಇಂಡೋ-ವೆಸ್ಟರ್ನ್‌ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಏನಿದು ಶರಾರ ? ಆಯ್ಕೆ ಹೇಗೆ? ಈ ಕುರಿತಂತೆ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Sharara Fashion
ಚಿತ್ರಗಳು: ದಿವ್ಯಾ ಕೋಸ್ಲಾ, ನಟಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಟ್ರೆಂಡಿಯಾಗಿರುವ (Sharara Fashion) ಶರಾರ ಲಾಂಗ್‌ ಸ್ಕರ್ಟ್‌ನಂತೆ ಬದಲಾಗಿದೆ. ಧರಿಸಿದಾಗ ತಕ್ಷಣಕ್ಕೆ ನೋಡಲು ಶರಾರ ಎಂದೆನಿಸಿದರೂ, ನಿಂತಾಗ ಥೇಟ್‌ ಲಾಂಗ್‌ ಸ್ಕರ್ಟ್ ಅಥವಾ ಡಿವೈಡೆಡ್‌ ಸ್ಕರ್ಟ್‌ನಂತೆ ಕಾಣಿಸುತ್ತವೆ. ಇತ್ತೀಚೆಗೆ ಸೆಲೆಬ್ರೆಟಿಗಳು ಧರಿಸುವುದು ಹೆಚ್ಚಾಗುತ್ತಿದ್ದಂತೆ, ಈ ಎಥ್ನಿಕ್‌ ಔಟ್‌ಫಿಟ್‌ ಯುವತಿಯರನ್ನು ಹೆಚ್ಚು ಸೆಳೆಯುತ್ತಿದೆ.

ಸೆಲೆಬ್ರೆಟಿಗಳ ಚಾಯ್ಸ್‌‌ನಲ್ಲಿ ಶರಾರ

ಹೌದು. ಇದಕ್ಕೆ ಪೂರಕ ಎಂಬಂತೆ, ನಟಿ ದಿವ್ಯಾ ಕೋಸ್ಲಾ ಕುಮಾರ್‌ ಇವೆಂಟ್‌ವೊಂದರಲ್ಲಿ ಧರಿಸಿದ್ದ ಶರಾರ, ಲಾಂಗ್‌ ಸ್ಕರ್ಟ್‌ನಂತೆ ಕಾಣಿಸಿತ್ತು. ಅಲ್ಲದೇ, ಅವರಿಗೆ ಸೆಮಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡಿತ್ತು. ಡಿಸೈನರ್‌ಗಳು ಹೇಳುವಂತೆ, ಶರಾರಗಳು, ಬಾಲಿವುಡ್‌ ಸೆಲೆಬ್ರೆಟಿಗಳ ಚಾಯ್ಸ್ನಲ್ಲಿ ಸೇರಿದ ನಂತರ, ಲೆಕ್ಕವಿಲ್ಲದಷ್ಟು ಪ್ರಯೋಗಾತ್ಮಕ ಡಿಸೈನ್‌ಗಳಲ್ಲಿ ಬಿಡುಗಡೆಗೊಳ್ಳಲಾರಂಭಿಸಿವೆಯಂತೆ.

ಏನಿದು ಶರಾರ?

ಮೊಗಲರ ಕಾಲದ ಎಥ್ನಿಕ್‌ ಡಿಸೈನರ್‌ವೇರ್‌ ಇದಾಗಿದೆ. ಉತ್ತರ ಭಾರತದಲ್ಲಿ ಈ ಶರಾರ ಅತಿ ಹೆಚ್ಚು ಚಾಲ್ತಿಯಲ್ಲಿದೆ. ಪ್ಯಾಂಟ್‌ ಶೈಲಿಯ ಡಿಸೈನರ್‌ವೇರ್‌ ಎನ್ನಬಹುದು. ನೋಡಲು ಪಲ್ಹಾಜೊನಂತೆ ಕಂಡರೂ ಅದಲ್ಲ! ಪ್ಯಾರಲೆಲ್‌ ಪ್ಯಾಂಟೂ ಕೂಡ ಅಲ್ಲ. ಶರಾರ ವಿಶೇಷತೆ ಎಂದರೇ, ಪ್ಯಾಂಟ್‌ ಕೆಳಗೆ ಅಗಲವಾದ ಫ್ಲೇರ್‌ ಇರುತ್ತದೆ. ಮೇಲಿನಿಂದ ಒಂದೇ ಹೊಲಿಗೆಯಲ್ಲಿ ವಿನ್ಯಾಸಗೊಂಡಿದ್ದರೂ, ಕೆಳಗೆ ಅಂಬ್ರೆಲ್ಲಾದಂತೆ ಹರಡಿಕೊಂಡಿರುತ್ತವೆ. ಶರಾರ ಮೂಲ ಲೆಬನಾನ್‌ ಎಂದೂ ಕೂಡ ಹೇಳಲಾಗುತ್ತದೆ ಎನ್ನುತ್ತಾರೆ ಡಿಸೈನರ್‌ ರೀಟಾ.

ಟ್ರೆಂಡ್‌ನಲ್ಲಿರುವ ಶರಾರ ಎಥ್ನಿಕ್‌ವೇರ್ಸ್

ಸದ್ಯ ಸ್ಕರ್ಟ್‌ನಂತೆ ಕಾಣುವ ಡಿಸೈನ್‌ ಶರಾರಗಳು ಇದೀಗ ಅತಿ ಹೆಚ್ಚು ಟ್ರೆಂಡಿಯಾಗಿವೆ. ಲಾಂಗ್‌ ಸ್ಕರ್ಟ್‌ನಂತೆ ಬಿಂಬಿಸುವ ಜಾರ್ಜೆಟ್ ಫ್ಯಾಬ್ರಿಕ್‌ನ ಶರಾರಗಳು ಸಾಲಿಡ್‌ ಹಾಗೂ ಬ್ರೈಟ್‌ ಶೇಡ್‌ನವಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಇನ್ನು, ಸೆಮಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡುವ ಶರಾರದ ಟಾಪ್‌ಗಳು ಹಾಗೂ ಸೆಟ್‌ಗಳು ಕೂಡ ಈ ಜನರೇಷನ್‌ ಹುಡುಗಿಯರಿಗೆ ಪ್ರಿಯವಾಗಿವೆ.

ಇದನ್ನೂ ಓದಿ: Kids Raincoats: ಮಾನ್ಸೂನ್‌‌‌ಗೆ ಲಗ್ಗೆ ಇಟ್ಟಿದೆ ಚಿಣ್ಣರ ಕಲರ್‌ ಫುಲ್‌ ರೈನ್‌ ಕೋಟ್ಸ್

ಶರಾರ ಪ್ರಿಯರಿಗೆ ತಿಳಿದಿರಬೇಕಾದ ಸಂಗತಿಗಳು

  • ಉದ್ದನಾಗಿರುವವರಿಗೆ ಮಾತ್ರ ಶರಾರ ಚೆನ್ನಾಗಿ ಕಾಣಿಸುತ್ತದೆ.
  • ರೆಡಿಮೇಡ್‌ ಶರಾರಗಳನ್ನು ಟ್ರಯಲ್‌ ನೋಡಿಯೇ ಕೊಳ್ಳಿ. ಇಲ್ಲವಾದಲ್ಲಿ ಪಾದದಿಂದ ಕೆಳಗೆ ಇಳಿದು ನಡೆಯಲು ಆಗದಿರಬಹುದು.
  • ಕಾಲಿಗೆ ಸಿಲುಕಿ ಹಾಕಿಕೊಳ್ಳುವಂತಹ ಶರಾರ ಪ್ಯಾಂಟ್‌ ಆಯ್ಕೆ ಬೇಡ, ಮುಗ್ಗರಿಸಿ ಬೀಳುವ ಸಾಧ್ಯತೆ ಹೆಚ್ಚು.
  • ಇಂಡೋ-ವೆಸ್ಟರ್ನ್‌ ಶೈಲಿಯ ಎಥ್ನಿಕ್‌ ಡಿಸೈನ್‌ನವು ಚಾಲ್ತಿಯಲ್ಲಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Kids Raincoats: ಮಾನ್ಸೂನ್‌‌‌ಗೆ ಲಗ್ಗೆ ಇಟ್ಟಿದೆ ಚಿಣ್ಣರ ಕಲರ್‌ ಫುಲ್‌ ರೈನ್‌ ಕೋಟ್ಸ್

Kids Raincoats: ಮಾನ್ಸೂನ್‌ ಸೀಸನ್‌ನಲ್ಲಿ ಮಕ್ಕಳಿಗೆ ಇಷ್ಟವಾಗುವಂತಹ ಕಾರ್ಟೂನ್‌ ಚಿತ್ತಾರವಿರುವಂತಹ ನಾನಾ ಬಗೆಯ ಆಕರ್ಷಕ ಬಣ್ಣ ಬಣ್ಣದ ರೈನ್‌ ಕೋಟ್‌ಗಳು ಬಿಡುಗಡೆಗೊಂಡಿವೆ. ಯಾವ್ಯಾವ ಬಗೆಯವು ಮಾರುಕಟ್ಟೆಯಲ್ಲಿ ಲಭ್ಯ? ಆಯ್ಕೆ ಹೇಗೆ? ಈ ಕುರಿತಂತೆ ಕಿಡ್ಸ್ ಸ್ಟೈಲಿಸ್ಟ್‌‌ಗಳು ವಿವರಿಸಿದ್ದಾರೆ.

VISTARANEWS.COM


on

Kids Raincoats
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಫ್ಯಾಷನ್‌ನಲ್ಲಿ ಆಕರ್ಷಕವಾದ ಕಿಡ್ಸ್ ರೈನ್‌ಕೋಟ್‌ಗಳು (Kids Raincoats) ಲಗ್ಗೆ ಇಟ್ಟಿವೆ. ಹೌದು, ಮಾನ್ಸೂನ್‌ ಸೀಸನ್‌ನಲ್ಲಿ ಎಲ್ಲಾ ವಯಸ್ಸಿನ ಮಕ್ಕಳಿಗೆ ಇಷ್ಟವಾಗುವಂತಹ ಬಗೆಬಗೆಯ ಕಾರ್ಟೂನ್‌ ಚಿತ್ತಾರವಿರುವಂತಹ ನಾನಾ ಬಗೆಯ ಆಕರ್ಷಕ ಬಣ್ಣ ಬಣ್ಣದ ರೈನ್‌ಕೋಟ್‌ಗಳು ಬಿಡುಗಡೆಗೊಂಡಿವೆ.

Kids Raincoats

ಮಕ್ಕಳನ್ನು ಉಲ್ಲಾಸಿತಗೊಳಿಸುವ ರೈನ್‌ಕೋಟ್ಸ್

“ ಪ್ರತಿ ಬಾರಿಯೂ ಮಾನ್ಸೂನ್‌ನಲ್ಲಿ ಮಕ್ಕಳಿಗೆ ನಾನಾ ವೆರೈಟಿ ವಿನ್ಯಾಸದ ರೈನ್‌ಕೋಟ್‌ಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಮಕ್ಕಳು ಇಷ್ಟಪಟ್ಟು ಧರಿಸುವಂತಹ ಕಲರ್‌ ಹಾಗೂ ಚಿತ್ತಾರಗಳಿರುವಂತವು ಹೆಚ್ಚಾಗಿ ಬಿಕರಿಯಾಗುತ್ತವೆ. ಇದಕ್ಕೆ ಪೂರಕ ಎಂಬಂತೆ, ಮಳೆಗಾಲದಲ್ಲಿ ಔಟಿಂಗ್‌ ಅಥವಾ ಹೊರಗಡೆ ಹೋದಾಗ ಆಕರ್ಷಕವಾಗಿ ಕಾಣಿಸುವಂತಹ ಕಲರ್‌ಫುಲ್‌ ಡಿಸೈನ್‌ನ ರೈನ್‌ಕೋಟ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಆಗಮಿಸಿವೆ. ಉತ್ತಮ ಗುಣ ಮಟ್ಟದ ಬ್ರಾಂಡ್‌ಗಳಿಂದಿಡಿದು, ರಸ್ತೆ ಬದಿ ಮಾರುವಂತಹ ಲೋಕಲ್‌ ಡಿಸೈನ್‌ನಲ್ಲೂ ದೊರೆಯುತ್ತಿವೆ. ಆದರೆ, ಇವನ್ನು ಕೊಳ್ಳುವಾಗ ಮೆಟಿರಿಯಲ್‌ ಪರಿಶೀಲಿಸಿ ಕೊಳ್ಳುವುದು ಮುಖ್ಯ “ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌‌ಗಳು.

Kids Raincoats

ಟ್ರೆಂಡ್‌ನಲ್ಲಿರುವ ಚಿಣ್ಣರ ರೈನ್‌ಕೋಟ್ಸ್

ವಾಟರ್‌ ಪ್ರೂಫ್‌ನ ಹೂಡಿ ರೈನ್‌ಕೋಟ್ಸ್, ಯೂನಿಸೆಕ್ಸ್ ರೈನ್‌ಕೋಟ್ಸ್, ಅನಿಮಲ್‌ ಪ್ರಿಂಟ್‌, ಕಾರ್ಟೂನ್‌ ಪ್ರಿಂಟ್, ಗ್ರಾಫಿಕ್ ಪ್ರಿಂಟ್‌, ಪಾಲಿಸ್ಟರ್‌, ತ್ರಿ ಡಿ ಕಲರ್‌, ಹೆಣ್ಣುಮಕ್ಕಳ ಬಾರ್ಬಿ ಪ್ರಿಂಟ್ಸ್, ಕೊರಿಯನ್‌ ಸ್ಟೈಲ್‌, ಕೇಪ್‌ ಸ್ಟೈಲ್‌, ಟ್ರೆಂಚ್‌ ಕೋಟ್‌ ಸ್ಟೈಲ್‌, ಬ್ಯಾಕ್‌ಪ್ಯಾಕ್‌ ಕವರ್‌ ರೈನ್‌ಕೋಟ್‌ಗಳು ಈ ಸೀಸನ್‌ನಲ್ಲಿ ಸಾಕಷ್ಟು ಟ್ರೆಂಡಿಯಾಗಿವೆ. ಎಲ್ಲರೂ ಅವರವರ ಮಕ್ಕಳಿಗೆ ಮ್ಯಾಚ್‌ ಆಗುವಂತಹ ರೈನ್‌ಕೋಟ್‌ಗಳನ್ನು ಪೋಷಕರು ಖರೀದಿಸುವುದು ಕೂಡ ಇಂದು ಹೆಚ್ಚಾಗಿದೆ ಎನ್ನುತ್ತಾರೆ ರೈನ್‌ಕೋಟ್‌ ವ್ಯಾಪಾರಿಗಳು.

Kids Raincoats
Kids Raincoats

ಆನ್‌ಲೈನ್‌ನಲ್ಲಿ ರೈನ್‌ಕೋಟ್‌ ಅಬ್ಬರ

ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆಂದೇ ಈಗಾಗಲೇ ಕಿಡ್ಸ್ ಕೆಟಗರಿಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ರೈನ್‌ಕೋಟ್‌ಗಳು ಲಗ್ಗೆ ಇಟ್ಟಿವೆ. ಕೆಲವು ಆನ್‌ಲೈನ್‌ ಶಾಪ್‌ಗಳು ಮಾನ್ಸೂನ್‌ ಆಫರ್‌ನಲ್ಲಿ ಕಡಿಮೆ ಬೆಲೆ ನಿಗಧಿಪಡಿಸಿದ್ದರೇ, ಇನ್ನು ಕೆಲವು ನ್ಯೂ ಅರೈವಲ್‌ ಕೆಟಗರಿಯಲ್ಲಿ ದರ ಹೆಚ್ಚಿಸಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

ಹೀಗಿರಲಿ ಮಕ್ಕಳ ರೈನ್‌ಕೋಟ್‌ ಆಯ್ಕೆ

  • ವಾಟರ್‌ಪ್ರೂಫ್‌ ರೈನ್‌ಕೋಟ್‌ಗೆ ಆದ್ಯತೆ ನೀಡಿ.
  • ಆದಷ್ಟೂ ಮಂಡಿ ಕೆಳಗಿನ ತನಕ ಉದ್ದವಿರುವ ರೈನ್‌ಕೋಟ್‌ ಖರೀದಿಸಿ.
  • ಮನೆಯಲ್ಲಿ ಇಬ್ಬರಿಗಿಂತ ಮಕ್ಕಳು ಹೆಚ್ಚಿದ್ದಲ್ಲಿ ಯೂನಿಸೆಕ್ಸ್ ರೈನ್‌ಕೋಟ್‌ ಬಳಸಬಹುದು.
  • ಟ್ರೆಂಡ್‌ಗೆ ತಕ್ಕಂತೆ ಬಿಡುಗಡೆಗೊಂಡಿರುವ ರೈನ್‌ಕೋಟ್‌ ಕೊಳ್ಳಿ.
  • ಮಕ್ಕಳನ್ನು ಉಲ್ಲಾಸಿತಗೊಳಿಸುವಂತಹ ಪ್ರಿಂಟ್ಸ್ ಇರುವಂತಹ ಕಲರ್‌ಫುಲ್‌ ರೈನ್‌ಕೋಟ್‌ ಚೂಸ್‌ ಮಾಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Monsoon Fashion Do’s & Don’ts: ಹುಡುಗಿಯರ ಮಾನ್ಸೂನ್‌ ಡ್ರೆಸ್‌ ಹೇಗಿರಬೇಕು? ಹೇಗಿರಬಾರದು?

Monsoon Fashion do’s & don’ts: ಮಾನ್ಸೂನ್‌ ಸೀಸನ್‌ನಲ್ಲಿ ಹುಡುಗಿಯರು ಧರಿಸುವ ಸ್ಟೈಲಿಶ್‌ ಡ್ರೆಸ್‌ಗಳು ಹೇಗಿರಬೇಕು? ಹೇಗಿರಬಾರದು ? ಎಂಬುದನ್ನು ತಿಳಿಸಿರುವ ಫ್ಯಾಷನಿಸ್ಟಾಗಳು ಈ ಕುರಿತಂತೆ ಹುಡುಗಿಯರಿಗೆ ಒಂದಿಷ್ಟು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Fashion Do’s & Don’ts
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಹುಡುಗಿಯರು ಧರಿಸುವ (Monsoon Fashion do’s & don’ts) ಉಡುಪುಗಳು ನೋಡಲು ಆಕರ್ಷಕವಾಗಿದ್ದರಷ್ಟೇ ಸಾಲದು, ಧರಿಸಿದಾಗ ಕಂಫರ್ಟಬಲ್‌ ಆಗಿರಬೇಕು, ಎಲ್ಲದಕ್ಕಿಂತ ಹೆಚ್ಚಾಗಿ ಸೀಸನ್‌ಗೆ ತಕ್ಕಂತಿರಬೇಕು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಸಮೀಕ್ಷೆಯೊಂದರ ಪ್ರಕಾರ, ಸಾಕಷ್ಟು ಹುಡುಗಿಯರು ಸ್ಟೈಲಿಶ್‌ ಆಗಿ ಕಾಣಿಸಲು ಮಾನ್ಸೂನ್‌ನಲ್ಲೂ ಸಮ್ಮರ್‌ ಫ್ಯಾಷನ್‌ವೇರ್‌ಗಳನ್ನು ಧರಿಸುತ್ತಾರಂತೆ. ಇನ್ನು, ಕೆಲವು ಯುವತಿಯರು ಮಾನ್ಸೂನ್‌ ಸೀಸನ್‌ನಲ್ಲಿ ಹೊದ್ದುಕೊಂಡಂತಿರುವ ಉಡುಪುಗಳನ್ನು ಧರಿಸುತ್ತಾರಂತೆ. ಆದರೆ, ಫ್ಯಾಷನಿಸ್ಟ್‌ಗಳ ಪ್ರಕಾರ, ಆಯಾ ವರ್ಗದ ಅನುಗುಣವಾಗಿ ಹುಡುಗಿಯರು ಧರಿಸುವ ಉಡುಪುಗಳು ಬದಲಾಗುತ್ತವಂತೆ. ಅದರಲ್ಲೂ, ಜೆನ್‌ ಜಿ ಹುಡುಗಿಯರು, ಯಾವುದೇ ಸೀಸನ್‌ ಟ್ರೆಂಡ್‌ ಫಾಲೋ ಮಾಡುವುದಿಲ್ಲ, ಬದಲಾಗಿ ತಮ್ಮದೇ ಆದ ಸ್ಟೈಲಿಶ್‌ ಮಾರ್ಗವನ್ನು ಹಿಡಿಯುತ್ತಾರಂತೆ. ಅಂದ ಹಾಗೆ, ಇದೆಲ್ಲಾ ಓಕೆ, ಹಾಗೆಂದು ಸೀಸನ್‌ಗೆ ವಿರುದ್ಧವಾಗಿ ಕಾಣಿಸುವುದು ದಿನಚರಿಯಾಗಬಾರದು! ಇದು ಆರೋಗ್ಯಕ್ಕೂ ಮಾರಕ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾದಲ್ಲಿ, ಈ ಸೀಸನ್‌ನಲ್ಲಿ ಯಾವ ರೀತಿಯ ಡ್ರೆಸ್‌ಗಳು ಬೆಸ್ಟ್? ಯಾವುದು ನಾಟ್‌ ಓಕೆ ! ಎಂಬುದನ್ನು ಫ್ಯಾಷನಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

Monsoon Fashion

ಮಾನ್ಸೂನ್‌ ಡ್ರೆಸ್‌ಗಳು

ಮಳೆಗಾಲದಲ್ಲಿ ಟ್ರೆಂಡಿಯಾಗುವ ಜಾಕೆಟ್‌ ಡ್ರೆಸ್‌, ಕೋಟ್‌ ಡ್ರೆಸ್‌-ಫ್ರಾಕ್ಸ್, ಸ್ಕೆಟರ್‌ ಡ್ರೆಸ್, ಮಿಡಿ ಡ್ರೆಸ್‌, ಹೈ ವೇಸ್ಟ್ ಶಾಟ್ಸ್ ಆಯ್ಕೆ ಮಾಡಬಹುದು. ಇವು ಸ್ಟೈಲಿಶ್‌ ಆಗಿ ಕಾಣಿಸುವುದರ ಜೊತೆಗೆ ಟ್ರೆಂಡಿಯಾಗಿಯೂ ಬಿಂಬಿಸುತ್ತವೆ.

Monsoon Fashion

ಗಿಡ್ಡ ಪ್ಯಾಂಟ್‌ಗೆ ಓಕೆ ಹೇಳಿ

ಆಂಕೆಲ್‌ ಲೆಂಥ್‌, ಕ್ರಾಪ್ಡ್ ಪ್ಯಾಂಟ್‌, ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಪುಶ್‌ ಬ್ಯಾಕ್‌ನಂತಹ ಪ್ಯಾಂಟ್‌ಗಳನ್ನು ಧರಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಪಲ್ಹಾಜೋ, ಪ್ಯಾರಲಲ್‌, ಬೂಟ್‌ ಕಟ್‌, ಶರರಾ, ಘರಾರದಂತಹ ಅಗಲವಾದ ನೆಲಹಾಸುವಂತಹ ಪ್ಯಾಂಟ್‌ಗಳನ್ನು ಧರಿಸಬೇಡಿ.

Monsoon Fashion

ನೆಲ ಮುಟ್ಟುವ ಗೌನ್‌ಗಳನ್ನು ದೂರವಿಡಿ

ನಡೆಯುವಾಗ ನೆಲವನ್ನು ಮುಟ್ಟುವಂತಹ ಉದ್ದುದ್ದ ಮ್ಯಾಕ್ಸಿ, ಗೌನ್‌ಗಳಿಗೆ ಸದ್ಯಕ್ಕೆ ಬೈ ಹೇಳಿ. ಇವು ನೋಡಲು ಮಾತ್ರ ಆಕರ್ಷಕವಾಗಿ ಕಾಣಿಸುತ್ತವೆ. ಇವನ್ನು ನಿರ್ವಹಣೆ ಮಾಡುವುದು ಕಷ್ಟ.

Monsoon Fashion

ಭಾರವಿಲ್ಲದ ಲೈಟ್‌ವೈಟ್‌ ಉಡುಗೆ ಧರಿಸಿ

ಲೇಯರಿಂಗ್‌ ಹೆಸರಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಉಡುಗೆಗಳು ಉಸಿರುಕಟ್ಟಿಸಬಹುದು. ಮಳೆಯಲ್ಲಿ ಒದ್ದೆಯಾದರಂತೂ ಕಿರಿಕಿರಿ ಎನಿಸಬಹುದು. ಇದನ್ನು ಅವಾಯ್ಡ್ ಮಾಡಲು, ಬೇಗನೇ ಒಣಗುವ ಲೈಟ್‌ವೈಟ್‌ ಡ್ರೆಸ್‌ಗಳಿಗೆ ಸೈ ಎನ್ನಿ.

ಇದನ್ನೂ ಓದಿ: Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್!

ಹೆವಿ ಎಥ್ನಿಕ್‌ ಡಿಸೈನರ್‌ವೇರ್‌ ಅವಾಯ್ಡ್ ಮಾಡಿ

ಹೆವಿ ಎಥ್ನಿಕ್‌ವೇರ್‌ಗಳನ್ನು ಆವಾಯ್ಡ್ ಮಾಡಿ. ಎಥ್ನಿಕ್‌ವೇರ್‌ ಧರಿಸಲೇ ಬೇಕಿದ್ದಲ್ಲಿ ಆದಷ್ಟೂ ಆಂಕೆಲ್‌ ಲೆಂಥ್‌ ಡಿಸೈನರ್‌ವೇರ್ಸ್ ಸೆಲೆಕ್ಟ್ ಮಾಡಿ. ಶಾರ್ಟ್ ಕುರ್ತಾ, ಆಂಕೆಲ್‌ ಲೆಂಥ್‌ ಚೂಡಿದಾರ್‌, ಸಲ್ವಾರ್‌ಗಳನ್ನು ಧರಿಸಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Varamahalakshmi Festival 2024: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾದ ವೈವಿಧ್ಯಮಯ ಬಾರ್ಡರ್‌ ಸೀರೆಗಳು

Varamahalakshmi Festival 2024: ಈ ಸಾಲಿನ ವರಮಹಾಲಕ್ಷ್ಮಿ ಹಬ್ಬಕ್ಕೆ ವೈವಿಧ್ಯಮಯ ಬಾರ್ಡರ್‌ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ರೇಷ್ಮೆ ಮಾತ್ರವಲ್ಲ, ನಾನಾ ಬಗೆಯ ಬಾರ್ಡರ್‌ ಹೊಂದಿದ ಸೀರೆಗಳು ಟ್ರೆಂಡಿಯಾಗಿವೆ. ಇದಕ್ಕೆ ಕಾರಣವೇನು? ಸದ್ಯ ಚಾಲ್ತಿಯಲ್ಲಿರುವ ಬಾರ್ಡರ್ ಸೀರೆಗಳ್ಯಾವುವು? ಇಲ್ಲಿದೆ ವರದಿ.

VISTARANEWS.COM


on

Varamahalakshmi Festival 2024
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ವರಮಹಾಲಕ್ಷ್ಮಿ (Varamahalakshmi Festival 2024) ಹಬ್ಬದ ಸಂಭ್ರಮ ಹೆಚ್ಚಿಸಲು ಈ ಬಾರಿ ನಾನಾ ಬಗೆಯ ಬಾರ್ಡರ್ ಸೀರೆಗಳು ಫೆಸ್ಟಿವ್‌ ಸೀಸನ್‌ಗೆ ಲಗ್ಗೆ ಇಟ್ಟಿವೆ.

Varamahalakshmi Festival 2024

ಹಬ್ಬಕ್ಕೆ ವೈವಿಧ್ಯಮಯ ಬಾರ್ಡರ್ ಸೀರೆಗಳು

ಸಡಗರ ಸಂಭ್ರಮದಿಂದ ಆಚರಿಸುವ ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ನೆಚ್ಚಿನ ಹಬ್ಬ. ಈ ಹಬ್ಬಕ್ಕೆ ದೇವಿ ಲಕ್ಷ್ಮಿಗೆ ಸೀರೆ ಉಡಿಸಿ ಸಿಂಗರಿಸುವುದು ಮಾತ್ರವಲ್ಲ, ತಾವು ಕೂಡ ಸೀರೆಗಳನ್ನು ಉಟ್ಟು ಸಂತಸ ಪಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ, ಮಾನಿನಿಯರ ಬೇಡಿಕೆಗೆ ತಕ್ಕಂತೆ, ಸೀರೆ ಲೋಕವು ಲೆಕ್ಕವಿಲ್ಲದಷ್ಟು ಸೀರೆಗಳನ್ನು ಬಿಡುಗಡೆಗೊಳಿಸಿದೆ. ಅವುಗಳಲ್ಲಿ ರೇಷ್ಮೆ ಸೀರೆಗಳು ಮಾತ್ರವಲ್ಲ, ನಾನಾ ಬಗೆಯ ವೈವಿಧ್ಯಮಯ ಸೀರೆಗಳು ಸೇರಿವೆ. ಇದಕ್ಕೆ ಪೂರಕ ಎಂಬಂತೆ, ಈ ಬಾರಿ ಅತಿ ಹೆಚ್ಚು ಬಾರ್ಡರ್‌ ಸೀರೆಗಳು, ಅತಿ ಹೆಚ್ಚು ಕಾಂಬಿನೇಷನ್‌ ಹಾಗೂ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಪರಿಣಾಮ, ಲೆಕ್ಕವಿಲ್ಲದಷ್ಟು ಬಗೆಯ ವೈವಿಧ್ಯಮಯ ಫ್ಯಾಬ್ರಿಕ್‌ನಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ಎನ್ನುತ್ತಾರೆ ಡಿಸೈನರ್ಸ್ ಜಾನಕಿ ಹಾಗೂ ದೀಪ್‌ವೀರ್‌.

Varamahalakshmi Festival 2024

ಟ್ರೆಂಡಿ ಬಾರ್ಡರ್‌ ಸೀರೆಗಳು

ರೇಷ್ಮೆ ಬಾರ್ಡರ್ ಸೀರೆಗಳಲ್ಲಿ ಇದೀಗ ಸಿಂಗಲ್‌, ಡಬ್ಬಲ್‌, ಬಿಗ್‌ ಬಾರ್ಡರ್‌ನವು ಮೊದಲಿನಿಂದಲೂ ಎವರ್‌ಗ್ರೀನ್‌ ಟ್ರೆಂಡ್‌ ಲಿಸ್ಟ್‌ನಲ್ಲಿವೆ. ಇನ್ನು, ಇತರೇ ಫ್ಯಾಬ್ರಿಕ್‌ನ ಸೀರೆಗಳಲ್ಲಿ ಇದೀಗ ಗೋಲ್ಡ್‌ ಜರಿ ಬಾರ್ಡರ್‌, ಕಾಂಟ್ರಾಸ್ಟ್ ಬಾರ್ಡರ್‌, ಸಿಲ್ವರ್‌ ವರ್ಕ್‌ ಬಾರ್ಡರ್‌, ಎಂಬ್ರಾಯ್ಡರಿ ಡಿಸೈನ್‌ ಬಾರ್ಡರ್‌, ಲೇಸ್‌ ಡಿಸೈನ್‌ ಬಾರ್ಡರ್‌, ಫ್ಲೋರಲ್‌ ಬಾರ್ಡರ್‌, ಬುಟ್ಟಾ ವರ್ಕ್‌, ಟೆಂಪಲ್‌ ಡಿಸೈನ್‌ ಬಾರ್ಡರ್‌ನವು ಟ್ರೆಂಡಿಯಾಗಿವೆ. ಇನ್ನು, ಪ್ಯಾಚ್‌ ಬಾರ್ಡರ್‌, ಟ್ಯಾಸೆಲ್ಸ್ , ಮಿರರ್‌ ವರ್ಕ್‌, ಕಟ್‌ ವರ್ಕ್ ಬಾರ್ಡರ್‌ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಬಾರ್ಡರ್‌ ಸೀರೆಗಳು ಊಹೆಗೂ ಮೀರಿದ ಡಿಫರೆಂಟ್‌ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಕೆಲವಂತೂ ಯೂನಿಕ್‌ ಡಿಸೈನ್‌ ಇರುವಂತಹ ಡಿಸೈನರ್‌ ಬಾರ್ಡರ್‌ ಸೀರೆಗಳು, ಬೆರಳೆಣಿಕೆ ಲೆಕ್ಕದಲ್ಲಿ ಲಭ್ಯ. ಹಾಗಾಗಿ ಅವುಗಳ ಡಿಸೈನ್‌ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತವೆ ಎನ್ನುತ್ತಾರೆ ಸೀರೆ ಶಾಪ್‌ವೊಂದರ ಸೇಲ್ಸ್ ಮ್ಯಾನೇಜರ್‌ ವರದರಾಜು.

ಬಾರ್ಡರ್‌ ಸೀರೆ ಟ್ರೆಂಡಿಯಾಗಿರುವುದು ಯಾಕೆ?

ಅಂದಹಾಗೆ, ಹಬ್ಬಗಳ ಸೀಸನ್‌ನಲ್ಲಿ ಅತಿ ಹೆಚ್ಚು ವಿನ್ಯಾಸದ ಬಾರ್ಡರ್‌ ಸೀರೆಗಳು ಟ್ರೆಂಡಿಯಾಗುತ್ತವೆ. ಇದಕ್ಕೆ ಕಾರಣವೂ ಇದೆ. ರೇಷ್ಮೆ ಸೀರೆಯಾಗಲಿ ಅಥವಾ ಯಾವುದೇ ಸೀರೆಯಾಗಲಿ ಬಾರ್ಡರ್‌ ಇದ್ದಾಗ ಅವು ಟ್ರೆಡಿಷನಲ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ ರಾಮಕೃಷ್ಣ.

  • ಸೀರೆಯು ಫ್ಯಾಬ್ರಿಕ್‌ಗೆ ತಕ್ಕಂತೆ ಬಾರ್ಡರ್ ಡಿಸೈನ್‌ ಅನ್ನು ಒಳಗೊಂಡಿರುತ್ತವೆ.
  • ರೇಷ್ಮೆಯ ಬಾರ್ಡರ್ ಸೀರೆ ಕೊಳ್ಳುವಾಗ ಸಿಲ್ಕ್ ಮಾರ್ಕ್‌ ಗಮನಿಸಿ.
  • ಕಂಟೆಂಪರರಿ ಬಾರ್ಡರ್‌ ಡಿಸೈನ್‌ನವು ಟ್ರೆಂಡ್‌ನಲ್ಲಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

Continue Reading

ಫ್ಯಾಷನ್

Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

Blazer Saree Fashion: ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಲೇಯರ್‌ ಲುಕ್ ನೀಡುವ ಆಕರ್ಷಕ ಬ್ಲೇಜರ್‌ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ ಏನಿದು ಬ್ಲೇಜರ್‌ ಸೀರೆ ? ಈ ಬಗ್ಗೆ ಅವರೇನು ಹೇಳಿದ್ದಾರೆ? ಮಾನ್ಸೂನ್‌ಗೆ ಅವರು ನೀಡಿರುವ ಟಿಪ್ಸ್ ಏನು? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Blazer Saree Fashion
ಚಿತ್ರಗಳು: ಶ್ವೇತಾ ಚೆಂಗಪ್ಪ , ನಟಿ, ನಿರೂಪಕಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಸೀಸನ್‌ನಲ್ಲಿ ಬ್ಲೇಜರ್‌ ಸೀರೆ ನಟಿ ಶ್ವೇತಾ ಚೆಂಗಪ್ಪ (Blazer Saree Fashion) ಅವರನ್ನು ಸಿಂಗರಿಸಿದೆ. ಹೌದು, ಮಾನ್ಸೂನ್‌ ಸೀಸನ್‌ಗೆ ತಕ್ಕಂತೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಲೇಯರ್‌ ಲುಕ್ ನೀಡುವ ಆಕರ್ಷಕ ಬ್ಲ್ಯಾಕ್‌ ಬ್ಲೇಜರ್‌ ಸೀರೆಯಲ್ಲಿ ಕಾಣಿಸಿಕೊಂಡಿದ್ದು, ಇದು ಅವರಿಗೆ ಕ್ಲಾಸಿ ಲುಕ್‌ ನೀಡಿದೆ. ಅಂದಹಾಗೆ, ಶ್ವೇತಾ ಚೆಂಗಪ್ಪ ಮೊದಲಿನಿಂದಲೂ ಫ್ಯಾಷೆನಬಲ್‌ ಲೇಡಿ. ರಿಯಾಲಿಟಿ ಶೋಗಳಲ್ಲಿ ನಾನಾ ಬಗೆಯ ಪ್ರಯೋಗಾತ್ಮಕ ಡಿಸೈನರ್‌ವೇರ್‌ ಹಾಗೂ ಸೀರೆಗಳಲ್ಲಿ ಅಂದವಾಗಿ ಕಾಣಿಸಿಕೊಳ್ಳುವ ಇವರು ನಟಿ ಕೂಡ. ಇನ್ನು, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಈ ಫ್ಯಾಷನೆಬಲ್‌ ಲುಕ್‌ಗಾಗಿ ಫಾಲೋವರ್ಸ್ ಕೂಡ ಹೊಂದಿದ್ದಾರೆ.

ಏನಿದು ಬ್ಲೇಜರ್‌ ಸೀರೆ ಫ್ಯಾಷನ್‌?

ಎಥ್ನಿಕ್‌ ಡಿಸೈನ್‌ ಹೊಂದಿದ ಬ್ಲೇಜರ್‌ ಮೇಲೆ ಧರಿಸುವ ಸೀರೆಯಿದು. ಬ್ಲೇಜರ್‌ ಡಿಸೈನ್‌ನಿಂದ ಸ್ಪೂರ್ತಿಗೊಂಡ ಸೀರೆ ಮೇಲೆ ಧರಿಸುವ ಡಿಸೈನರ್‌ ಮೇಲುಡುಗೆಯಿದು. ಸೀರೆಗೆ ಲೇಯರ್‌ ಲುಕ್‌ ಕಲ್ಪಿಸುತ್ತದೆ. ಅಲ್ಲದೇ, ನೋಡಲು ಅತ್ಯಾಕರ್ಷಕವಾಗಿ ಬಿಂಬಿಸುತ್ತದೆ. ಶ್ವೇತಾ ಚಂಗಪ್ಪ ಉಟ್ಟಿರುವ ಈ ಸೀರೆಯನ್ನು ಮಯಾರಾ ಕೌಚರ್‌ ವಿನ್ಯಾಸಗೊಳಿಸಿದೆ. ಸಾಲಿಡ್‌ ಬ್ಲ್ಯಾಕ್‌ ಶೇಡ್‌ನ ಈ ಸೀರೆಯ ಬ್ಲೇಜರ್‌ ಕಂಪ್ಲೀಟ್‌ ಎಂಬ್ರಾಯ್ಡರಿ ಒಳಗೊಂಡಿದೆ. ಸಾದಾ ಸೀರೆಯೊಳಗಿನ ಪಲ್ಲು ಕೂಡ ಬಾರ್ಡರ್‌ ಡಿಸೈನ್‌ನಿಂದ ಅಲಂಕಾರಗೊಂಡಿದೆ. ಇನ್ನು, ಈ ಬ್ಲೇಜರ್‌ನ ಸ್ಲೀವ್‌ ಡಿಫರೆಂಟ್‌ ಎಂಬ್ರಾಯ್ಡರಿ ಹೊಂದಿದ್ದು, ಬಟನ್‌ ಇಲ್ಲದ ಈ ಬ್ಲೇಜರ್‌, ಸೀರೆಯ ಅಂದ ಹೆಚ್ಚಿಸಿದೆ.

ಶ್ವೇತಾ ಚೆಂಗಪ್ಪ ಮಾನ್ಸೂನ್‌ ಫ್ಯಾಷನ್‌

ತಮ್ಮ ಈ ಲುಕ್‌ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡ ಶ್ವೇತಾ ಚೆಂಗಪ್ಪ, ಮಾನ್ಸೂನ್‌ನಲ್ಲಿ ಆದಷ್ಟೂ ಕಂಫರ್ಟಬಲ್‌ ಫ್ಯಾಷನ್‌ ಅಳವಡಿಸಿಕೊಳ್ಳುತ್ತಾರಂತೆ. ಯಾವುದೇ ಉಡುಗೆಯಾದರೂ ಸೀಸನ್‌ಗೆ ತಕ್ಕಂತೆ ಇರುವುದರೊಂದಿಗೆ ಕ್ಲಾಸಿಯಾಗಿಯೂ ಕಾಣಿಸಬೇಕು ಎನ್ನುತ್ತಾರೆ. ಆನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವಾಗ ಎಥ್ನಿಕ್‌ ಡಿಸೈನರ್‌ವೇರ್‌ ಧರಿಸುವುದು ನನಗಿಷ್ಟ, ಔಟಿಂಗ್‌ನಲ್ಲಿ ಸಿಂಪಲ್‌ ಸ್ಟೈಲ್‌ಸ್ಟೇಟ್‌ಮೆಂಟ್‌ಗಳಿಷ್ಟ ಎನ್ನುತ್ತಾರೆ.

ಮಾನ್ಸೂನ್‌ ಲುಕ್‌ಗೆ ಶ್ವೇತಾ 3 ಸಿಂಪಲ್‌ ಟಿಪ್ಸ್

  1. ಲೇಯರ್‌ ಲುಕ್‌ ಮಾಡುವಾಗ ಕಂಫರ್ಟಬಲ್‌ ಫ್ಯಾಷನ್‌ಗೆ ಆದ್ಯತೆ ನೀಡಬೇಕು.
  2. ಟ್ರಾವೆಲ್‌ ಮಾಡುವಾಗ ಆದಷ್ಟೂ ರಿಂಕಲ್‌ ಫ್ರೀ ಫ್ಯಾಷನ್‌ವೇರ್ಸ್ ಕ್ಯಾರಿ ಮಾಡುವುದು ಉತ್ತಮ.
  3. ಮಾನ್ಸೂನ್‌ನಲ್ಲಿ ಸಿಂಪಲ್‌ ಮೇಕಪ್‌ ಮಾಡಿ.

ಇದನ್ನೂ ಓದಿ: National Handloom day 2024: ಕರ್ನಾಟಕದ ಹೆಮ್ಮೆಯ ವಿಶ್ವ ಪ್ರಸಿದ್ಧ ಹ್ಯಾಂಡ್‌ ಲೂಮ್‌ ಸೀರೆಗಳಿವು

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Aman Sehrawa
ಕ್ರೀಡೆ20 mins ago

Aman Sehrawat: 10 ಗಂಟೆ ಅವಧಿಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚು ಗೆದ್ದ ಅಮನ್​ ಸೆಹ್ರಾವತ್; ಹೇಗಿತ್ತು ಅವರ ಪರಿಶ್ರಮ?

Duniya Vijay Starrer Bheema Movie Collects three and half crore
ಸ್ಯಾಂಡಲ್ ವುಡ್33 mins ago

Duniya Vijay: ಮೊದಲ ದಿನದ ಗಳಿಕೆಯಲ್ಲಿ ʻಬ್ಲಾಕ್‌ ಕೋಬ್ರಾʼ ಭರ್ಜರಿ ಅಬ್ಬರ; ʻಭೀಮʼಗೆ ಬಹುಪರಾಕ್ ಎಂದ ಪ್ರೇಕ್ಷಕರು!

Namma Metro ticket price hike
ಬೆಂಗಳೂರು52 mins ago

Namma Metro Ticket Price Hike: ಮೆಟ್ರೋ ಟಿಕೆಟ್‌ ದರದ ಮೇಲೆ ಕೈ ಇಟ್ರೋ! ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ?

IPL 2025
ಕ್ರೀಡೆ1 hour ago

IPL 2025: ರಾಜಸ್ಥಾನ್​ ರಾಯಲ್ಸ್​ಗೆ ರಾಹುಲ್​ ದ್ರಾವಿಡ್​ ನೂತನ ಕೋಚ್​?

pm narendra modi wayanad landslide
ಪ್ರಮುಖ ಸುದ್ದಿ1 hour ago

PM Narendra Modi: ಭೂಕುಸಿತ ಪೀಡಿತ ವಯನಾಡಿಗೆ ಇಂದು ನರೇಂದ್ರ ಮೋದಿ ಭೇಟಿ

Nikkita Ghag Breaks Internet With Naked Photoshoot
ಬಾಲಿವುಡ್2 hours ago

Nikkita Ghag: ಬೆತ್ತಲೆ ಫೋಟೋಶೂಟ್‌ನೊಂದಿಗೆ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಖ್ಯಾತ ಬಾಲಿವುಡ್‌ ನಟಿ!

Aman Sehrawat
ಕ್ರೀಡೆ2 hours ago

Aman Sehrawat: ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಅಮನ್​ ಇಂದು ದೇಶಕ್ಕಾಗಿ ಕಂಚು ಗೆದ್ದ ಸಾಧಕ

Venu Swamy Prediction On Naga Chaitanya And Sobhita Dhulipala Engagement
ಟಾಲಿವುಡ್2 hours ago

Venu Swamy: ಚೈತು-ಶೋಭಿತಾದು ಜಾತಕ ಮಾತ್ರವಲ್ಲ ನಿಶ್ಚಿತಾರ್ಥ ಮುಹೂರ್ತವೇ ಸರಿಯಿಲ್ಲ ಎಂದ ಜ್ಯೋತಿಷಿ ವೇಣುಸ್ವಾಮಿ!

Bangladesh Unrest hindus protest
ವಿದೇಶ2 hours ago

Bangladesh Unrest: ಶೇಖ್‌ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್

Tharun Sudhir And Sonal Montero Haldi Shastra Photos
ಸ್ಯಾಂಡಲ್ ವುಡ್2 hours ago

Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮ; ಅದ್ಧೂರಿಯಾಗಿ ನಡೆದ ಅರಿಶಿಣ ಶಾಸ್ತ್ರ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ7 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌