ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫೆಸ್ಟೀವ್ ಸೀಸನ್ ಆರಂಭವಾಗಿದ್ದೇ ತಡ, ಜರ್ಮನ್ ಸಿಲ್ವರ್ ಅಲಂಕಾರಿಕ ಪೂಜಾ ಪರಿಕರಗಳ (Shravana Festive Season Shopping) ಡಿಮ್ಯಾಂಡ್ ಹೆಚ್ಚಾಗಿದೆ. ಟ್ರೆಡಿಷನಲ್ ವಿನ್ಯಾಸ ಹಾಗೂ ಹಬ್ಬದ ಸಂಭ್ರಮಕ್ಕೆ ಮ್ಯಾಚ್ ಆಗುವಂತಹ ಇನ್ನೋವೇಟಿವ್ ಡಿಸೈನ್‌ಗಳಲ್ಲಿ ಬಿಡುಗಡೆಗೊಂಡಿರುವ ಇವು ಇದೀಗ ಪೂಜಾ ಸೆಟ್ ಹಾಗೂ ಬಿಡಿ ಬಿಡಿಯಾಗಿ ಡೆಕೋರೇಟಿವ್ ಡಿಸೈನ್‌ಗಳಲ್ಲಿಯೂ ದೊರಕುತ್ತಿವೆ.
ಬೆಳ್ಳಿ ಬದಲು ಜರ್ಮನ್ ಸಿಲ್ವರ್
ಬೆಳ್ಳಿಯ ಪೂಜಾ ಪರಿಕರಗಳನ್ನು ಕೊಳ್ಳಲಾಗದಿದ್ದವರು ಮಾತ್ರವಲ್ಲ, ಹೊಸ ಡಿಸೈನ್‌ನ ಡೆಕೋರೇಟಿವ್ ಪೂಜಾ ಪರಿಕರಗಳು ಬೇಕೆನ್ನುವವರು ಕೂಡ ಜರ್ಮನ್ ಸಿಲ್ವರ್ ಡೆಕೋರೇಟಿವ್ ಪೂಜಾ ಐಟಂಗಳಿಗೆ ಮಾರು ಹೋಗುತ್ತಿದ್ದಾರೆ. ಊಹೆಗೂ ಮೀರಿದ ಡಿಸೈನ್‌ಗಳು ದೊರಕುತ್ತಿರುವುದು ಒಂದು ಕಾರಣವಾದರೇ, ಮಧ್ಯಮ ವರ್ಗದವರೂ ಕೊಳ್ಳಬೇಕಾದ ಡಿಸೈನ್‌ಗಳು ಸಿಗುತ್ತಿರುವುದು ಮತ್ತೊಂದು ಕಾರಣ. ಇವನ್ನು ರಫ್ ಆಗಿಯೂ ಬಳಸಬಹುದು. ಕಳ್ಳತನವಾಗುವ ಭಯವಿಲ್ಲ, ನಿರಾತಂಕವಾಗಿ ಜನಸಂದಣಿಯಲ್ಲೂ ಇರಿಸಬಹುದು ಎನ್ನುತ್ತಾರೆ ಮಾರಾಟಗಾರರು. ಅವರ ಪ್ರಕಾರ, ಈ ಬಾರಿ ಕಳೆದ ಬಾರಿಗಿಂತಲೂ ಜನರು ಈ ಶೈಲಿಯ ಪೂಜಾ ಸಾಮಗ್ರಿಗಳನ್ನು ಕೊಳ್ಳುವುದು ಹೆಚ್ಚಾಗಿದೆಯಂತೆ.
ಟ್ರೆಡಿಷನಲ್ ಡಿಸೈನ್‌ನ ಪೂಜಾ ಸಾಮಗ್ರಿಗಳಿಗೆ ಬೇಡಿಕೆ
ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ನಾನಾ ಬಗೆಯ ಟ್ರೆಡಿಷನಲ್ ದೀಪಗಳು, ಟ್ರೇಗಳು, ಪುಟ್ಟ ಪುಟ್ಟ ಬಾಳೆಕಂಬಗಳು, ಕುಂಕುಮದ ಬಟ್ಟಲು, ಅಕ್ಷತೆ ಬಟ್ಟಲು, ಅರಿವಾಣ, ಲಕ್ಷ್ಮಿಯ ಮುಖವಾಡ, ಪೂಜಾ ಸಾಮಗ್ರಿಯ ಸೆಟ್‌ಗಳು ಬಂದಿವೆ. ಅವುಗಳಲ್ಲಿ ಹೆಚ್ಚಾಗಿ ದೇವಿಯ ಸೆಟ್‌ಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ದೇವಿಯ ಅಲಂಕಾರಕ್ಕಾಗಿ ಬಳಸುವ ಐಟಂಗಳು ಆಗಮಿಸಿವೆ. ನೋಡಲು ಆಕರ್ಷಕವಾಗಿ ಕಾಣುವ ಇವು ರಾಯಲ್ ಲುಕ್ ನೀಡುತ್ತವೆ ಎನ್ನುತ್ತಾರೆ ಜ್ಯುವೆಲರಿ ಡಿಸೈನರ್‌ಗಳು. ಜರ್ಮನ್ ಸಿಲ್ವರ್‌ನಲ್ಲೂ ನಾನಾ ಬಗೆಯವು ದೊರಕಬಹುದು. ಹಾಗಾಗಿ ಗ್ಯಾರಂಟಿ ನೀಡುವ ಶಾಪ್‌ಗಳ ಬಗ್ಗೆ ವಿಚಾರಿಸಿಕೊಂಡು, ಖರೀದಿಸುವುದು ಉತ್ತಮ ಎಂಬುದು ಬಳಕೆದಾರರ ಅಭಿಪ್ರಾಯ.
ಸೂಕ್ತ ನಿರ್ವಹಣೆ ಅಗತ್ಯ
- ಜರ್ಮನ್ ಸಿಲ್ವರ್ಗೂ ಸೂಕ್ತ ನಿರ್ವಹಣೆ ಮಾಡುವುದು ಅಗತ್ಯ.
- ಖರೀದಿಸುವ ಮುನ್ನವೇ ನಿರ್ವಹಣೆ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
- ಬಳಸಿದ ನಂತರ ಕವರ್ ಮಾಡಿ ತೆಗೆದಿಡಬೇಕು.
- ಗುಣಮಟ್ಟದ ಕುರಿತಂತೆ ವ್ಯಾಪಾರಿಗಳ ಬಳಿಯೇ ಕೇಳಿ ಕೊಳ್ಳಿ.
- ಎಷ್ಟು ವರ್ಷ ಗ್ಯಾರಂಟಿ ಇದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.
- ಬೀದಿ ಬದಿಯಲ್ಲಿ ಖರೀದಿ ಮಾಡುವ ಜರ್ಮನ್ ಸಿಲ್ವರ್ಗೆ ಗ್ಯಾರಂಟಿ ನೀಡುವುದಿಲ್ಲ ಎಂಬುದು ನೆನಪಿರಲಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Bracelate fashion: ಬ್ರೇಸ್‌ಲೆಟ್ ಆಗಿ ಬದಲಾದ ಮಾಂಗಲ್ಯದ ಕರಿಮಣಿ ಸರ