Site icon Vistara News

Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ

Shravana shopping 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶ್ರಾವಣ ಮಾಸದ ಶಾಪಿಂಗ್‌ (Shravana shopping 2024) ಎಲ್ಲೆಡೆ ಆರಂಭಗೊಂಡಿದೆ. ಹೌದು, ಈ ವರ್ಷದ ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಜೊತೆಗೆ ಒಂದರ ಹಿಂದೊಂದರಂತೆ ಸಾಲು ಸಾಲು ಹಬ್ಬ-ಹರಿದಿನಗಳು ಆಗಮಿಸಲಾರಂಭಿಸುತ್ತವೆ. ಇದಕ್ಕೆ ಪೂರಕ ಎಂಬಂತೆ, ಹಬ್ಬಗಳನ್ನು ಆಚರಿಸುವವರು ಈಗಾಗಲೇ ಶಾಪಿಂಗ್‌ ಆರಂಭಿಸಿದ್ದಾರೆ. ಪರಿಣಾಮ, ಈ ಫೆಸ್ಟೀವ್‌ ಸೀಸನ್‌ಗೆ ತಕ್ಕಂತೆ, ಎಲ್ಲೆಡೆ ಮಾರುಕಟ್ಟೆಗಳು ಕೂಡ ಸಜ್ಜಾಗಿವೆ. ಹಾಗಾದಲ್ಲಿ, ಹಬ್ಬದ ಸೀಸನ್‌ನಲ್ಲಿ ಏನೇನೆಲ್ಲಾ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವುದಕ್ಕೆ ಬೇಡಿಕೆ ಹೆಚ್ಚಾಗಿದೆ ಎಂಬುದರ ಬಗ್ಗೆ ಇಲ್ಲಿದೆ ವರದಿ.

ಪೂಜಾಲಂಕಾರ/ಗೃಹಾಲಂಕಾರ ಸಾಮಗ್ರಿಗಳು

ಗೃಹಾಲಂಕಾರ ಹಾಗೂ ಪೂಜಾಲಂಕಾರಕ್ಕೆ ಬಳಸುವ ನಾನಾ ಬಗೆಬಗೆಯ ಕೃತಕ ಹೂ ತೋರಣಗಳು, ಮಾವಿನ ಎಲೆಗಳು, ಬಾಳೆಯ ಕಂಬಗಳು, ದೀಪಗಳು, ಕೊಡುಗೆ ನೀಡುವಂತಹ ಅತ್ಯಾಕರ್ಷಕ ವಸ್ತುಗಳು ಸೇರಿದಂತೆ ನಾನಾ ಬಗೆಯವು ಮಾರುಕಟ್ಟೆಯಲ್ಲಿ ಬಿಕರಿಗೊಳ್ಳುತ್ತಿವೆ.

ಸೀರೆ ಅಂಗಡಿಗಳಲ್ಲಿ ಜನಜಂಗುಳಿ

ಸೀರೆ ಅಂಗಡಿಗಳಲ್ಲಂತೂ ಜನಜಂಗುಳಿ ಈ ಮೊದಲಿಗಿಂತ ಹೆಚ್ಚಾಗಿದೆ. ಕೇವಲ ಹೆಂಗಸರು ಮಾತ್ರವಲ್ಲ, ಇಡೀ ಕುಟುಂಬವೇ ಸೀರೆ ಸೆಂಟರ್‌, ಶಾಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಹಬ್ಬ ಸಮೀಪಿಸುತ್ತಿರುವಂತೆಯೇ ನಾನಾ ಬಗೆಯ ಸೀರೆಗಳಿಗೆ ಡಿಮ್ಯಾಂಡ್‌ ಹೆಚ್ಚಿದೆ ಎನ್ನುತ್ತಾರೆ ಸೀರೆ ಮಾರಾಟಗಾರರಾದ ರಾಘವ್.

ಬಂಗಾರದ ಆಭರಣಗಳ ಖರೀದಿ

ಅಕ್ಷಯ ತೃತೀಯ ಹಾಗೂ ದೀಪಾವಳಿ ಸೀಸನ್‌ ಹೊರತುಪಡಿಸಿದಲ್ಲಿ ಅತಿ ಹೆಚ್ಚು ಬಂಗಾರದ ಜ್ಯುವೆಲರಿ ಕೊಳ್ಳುವುದು ಶ್ರಾವಣ ಮಾಸದಲ್ಲಿ ಎನ್ನುತ್ತದೆ ಸಮೀಕ್ಷೆಯೊಂದು. ಇದಕ್ಕೆ ಸಾಕ್ಷಿ ಎಂಬಂತೆ, ಮುಂಬರುವ ಹಬ್ಬಗಳಿಗೆ, ಈಗಲೇ ಬಂಗಾರ ಖರೀದಿ ಮಾಡುವ ಮಾನಿನಿಯರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಆಭರಣ ಅಂಗಡಿಯೊಂದರ ಮಾಲೀಕರು.

ಬೆಳ್ಳಿ ಸಾಮಗ್ರಿಗಳ ಖರೀದಿ ಭರಾಟೆ

ಇನ್ನು ಬಂಗಾರ ಮಾತ್ರವಲ್ಲ, ಬೆಳ್ಳಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆಯೂ ಸಾಗಿದೆ. ಬೆಳ್ಳಿ ತಟ್ಟೆ, ಬಟ್ಟಲು, ದೇವಿಯ ಮುಖವಾಡ, ದೀಪ, ಮಂಗಳಾರತಿ ತಟ್ಟೆ ಹೀಗೆ ನಾನಾ ಸಾಮಗ್ರಿಗಳ ಮಾರಾಟದಲ್ಲಿ ಹೆಚ್ಚಳ ಕಂಡುಬರುತ್ತಿದೆ.

Friendshipday Fashion: ಮಾನ್ಸೂನ್‌‌‌ನಲ್ಲಿ ಟ್ರೆಂಡಿಯಾದ ಫ್ರೆಂಡ್‌‌‌ಶಿಪ್‌ ಡೇ ಫ್ಯಾಷನ್‌ ಥೀಮ್‌ಇದನ್ನೂ ಓದಿ:

ಗೃಹೋಪಯೋಗಿ ವಸ್ತುಗಳ ಖರೀದಿ

ಶ್ರಾವಣ ಮಾಸದಲ್ಲಿ ಶುಭ ದಿನಗಳು ಹೆಚ್ಚಾಗಿರುವುದರಿಂದ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವವರು ಕೂಡ ಜಾಸ್ತಿಯಾಗಿದ್ದಾರೆ. ಅದರಲ್ಲೂ, ಅಡುಗೆ ಮನೆಯ ಎಲೆಕ್ಟ್ರಾನಿಕ್‌ ಐಟಂಗಳನ್ನು ಖರೀದಿಸುವವರು ಅಧಿಕಗೊಂಡಿದ್ದಾರೆ ಎನ್ನುತ್ತಾರೆ ಎಲಾಕ್ಟ್ರಾನಿಕ್ಸ್ ಶಾಪ್‌ವೊಂದರ ಮ್ಯಾನೇಜರ್‌ ಜಯಂತ್‌.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version